Wednesday, September 23, 2020
Home ಅಂತರ್ ರಾಷ್ಟ್ರೀಯ ಪ್ರಧಾನಿ ಮೋದಿ ನನ್ನ ಆತ್ಮೀಯ ಸ್ನೇಹಿತ, ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ: ಟ್ರಂಪ್

ಇದೀಗ ಬಂದ ಸುದ್ದಿ

ಜಮ್ಮು,ಕಾಶ್ಮೀರ : ಮಾತಾ ವೈಷ್ಣೋದೇವಿ ಭಕ್ತರಿಗೊಂದು ಸಿಹಿಸುದ್ದಿ

ಶ್ರೀನಗರ: ಜಮ್ಮುಮತ್ತು ಕಾಶ್ಮೀರದ ರೇಸಿ ಜಿಲ್ಲೆಯ ತ್ರಿಕೂಟ ಬೆಟ್ಟದಲ್ಲಿರುವ ಮಾತಾ ವೈಷ್ಣೋದೇವಿ ಭಕ್ತರಿಗೆ ಒಂದು ಸಿಹಿ ಸುದ್ದಿ. ಶೀಘ್ರವೇ ಭಕ್ತರು ಮೊಬೈಲ್ ಆಯಪ್ ಮೂಲಕ ದೇವಿಯ ನೇರ ದರ್ಶನವನ್ನು ಪಡೆಯಬಹುದು. ಇದಕ್ಕಾಗಿ...

ಡ್ರಗ್ಸ್ ಪ್ರಕರಣ : ಕಿರುತೆರೆ ನಟ-ನಟಿ ವಿಚಾರಣೆ

 ಬೆಂಗಳೂರು: ಡ್ರಗ್ಸ್ ಜಾಲದ ತನಿಖೆ ಆರಂಭಿಸಿರುವ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಪೊಲೀಸರು, ಕಿರುತೆರೆ ನಟ ಅಭಿಷೇಕ್ ಹಾಗೂ ನಟಿ ಗೀತಾ ಭಾರತಿ ಭಟ್ ಅವರನ್ನು ಮಂಗಳವಾರ ವಿಚಾರಣೆಗೆ ಒಳಪಡಿಸಿದರು.

ಐಪಿಎಲ್ 2020 : ಚೆನ್ನೈ ಸೂಪರ್...

ಮಂಗಳವಾರ ನಡೆದ ಐಪಿಎಲ್ ನ ನಾಲ್ಕನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

ದ.ಕ. ಜಿಲ್ಲೆಯ ಹಿರಿಯ ಉದ್ಯಮಿ, ಸಾಮಾಜಿಕ, ಧಾರ್ಮಿಕ...

ಪುತ್ತೂರು : ದ.ಕ. ಜಿಲ್ಲೆಯ ಹೆಸರಾಂತ ಹಿರಿಯ ಉದ್ಯಮಿ, ಸಾಮಾಜಿಕ, ಧಾರ್ಮಿಕ ಧುರೀಣ ಕಮ್ಮಾಡಿ ಇಬ್ರಾಹಿಂ ಹಾಜಿ (72) ಅವರು ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನ ಹೊಂದಿದರು.

ಮಹಾರಾಷ್ಟ್ರಕಟ್ಟಡ ಕುಸಿತ; 33ಕ್ಕೇರಿದ ಸಾವಿನ ಸಂಖ್ಯೆ

 ಮುಂಬೈ (ಸೆ. 23): ನೆರೆಯ ರಾಜ್ಯವಾದ ಮಹಾರಾಷ್ಟ್ರದ ಭಿವಾಂಡಿಯಲ್ಲಿ ಸೋಮವಾರ ನಸುಕಿನ ಜಾವ 3 ಅಂತಸ್ತಿನ ಕಟ್ಟಡವೊಂದು ಕುಸಿದುಬಿದ್ದಿತ್ತು. ಇದರಿಂದ ಕಟ್ಟಡದೊಳಗಿದ್ದ 10 ಜನರು ಸ್ಥಳದಲ್ಲೇ ಸಾವನ್ನಪ್ಪಿ, ಸಾಕಷ್ಟು ಜನರು...

ಪ್ರಧಾನಿ ಮೋದಿ ನನ್ನ ಆತ್ಮೀಯ ಸ್ನೇಹಿತ, ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ: ಟ್ರಂಪ್

ವಾಷಿಂಗ್ಟನ್, ಸೆ 05: ಭಾರತದ ಪ್ರಧಾನಿ ಮೋದಿ ನನಗೆ ಆತ್ಮೀಯ ಸ್ನೇಹಿತ, ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೆರಿಕದಲ್ಲಿರುವ ಭಾರತೀಯರು ನನಗೇ ಮತ ಹಾಕುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಈ ವರ್ಷ ಫೆಬ್ರವರಿಯಲ್ಲಿ ಪತ್ನಿ ಮಲೆನಿಯಾ ಟ್ರಂಪ್ ಜೊತೆಗೆ ಭಾರತಕ್ಕೆ ಭೇಟಿ ನೀಡಿದ್ದರ ಬಗ್ಗೆ ಮಾತನಾಡಿದ ಟ್ರಂಪ್, ಭಾರತವು ಶ್ರೇಷ್ಠ ರಾಷ್ಟ್ರವಾಗಿದೆ, ಅಲ್ಲಿ ನಾವು ಉತ್ತಮ ಸಮಯವನ್ನು ಕಳೆದಿದ್ದೇವೆ ಎಂದು ಹಳೆಯ ನೆನಪು ಮೆಲುಕು ಹಾಕಿದರು. ಅಮೆರಿಕದಲ್ಲಿರುವ ಭಾರತೀಯರು ನನಗೆ ಮತ ಹಾಕುತ್ತಾರೆ ಎನ್ನುವ ಭರವಸೆ ಇದೆ ಎಂದರು.

ಮೋದಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ನೀವು ಓರ್ವ ಸರ್ವಶ್ರೇಷ್ಠ ನಾಯಕ ಮತ್ತು ಶ್ರೇಷ್ಠ ವ್ಯಕ್ತಿಯನ್ನು ಪಡೆದಿದ್ದೀರಿ, ಹೌಡಿ ಮೋದಿ ಸಮಾರಂಭದ ಕುರಿತು ಮಾತನಾಡಿ, ನಾವು ಹ್ಯೂಸ್ಟನ್ ನಗರದಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡಿದ್ದೆವು. ಅದು ಅದ್ಭುತವಾಗಿತ್ತು.

ನಾವು ಭಾರತದಿಂದ ಮತ್ತು ಪ್ರಧಾನಿ ಮೋದಿ ಅವರಿಂದ ದೊಡ್ಡ ಮಟ್ಟದ ಬೆಂಬಲವನ್ನು ಪಡೆದುಕೊಂಡಿದ್ದೇವೆ. ಭಾರತದವರು ಟ್ರಂಪ್‌ಗಾಗಿ ಮತ ಚಲಾಯಿಸಲಿದ್ದಾರೆ ಎನಿಸುತ್ತದೆ ಎಂದು ಭರವಸೆಯ ಮಾತುಗಳನ್ನಾಡಿದರು.

ಅಮೆರಿಕದ ಚುನಾವಣೆಯೆಲ್ಲಿ ಭಾರತೀಯರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಪೆನ್ಸಿಲ್‌ವೇನಿಯಾ, ಓಹಿಯೋದಲ್ಲಿ ಒಂದೊಂದು ಮತ ಪಡೆಯಲು ಸಾಕಷ್ಟು ಸಾಹಸಪಡಬೇಕಿದೆ ಎಂದು ಹೇಳಿದರು.

TRENDING