Sunday, September 20, 2020
Home ಅಂತರ್ ರಾಜ್ಯ ಮಹಾರಾಷ್ಟ್ರದ ಪಾಲ್ಗರ್‌ನಲ್ಲಿ ಲಘು ಭೂಕಂಪ

ಇದೀಗ ಬಂದ ಸುದ್ದಿ

ಡ್ರಗ್ಸ್ ಪ್ರಕರಣ: ಖ್ಯಾತ ನಟ ಮತ್ತು ಡ್ಯಾನ್ಸರ್...

ಡ್ರಗ್ಸ್ ಮಾರಾಟ ಮಾಡುತ್ತಿದ್ದ ಖ್ಯಾತ ಡ್ಯಾನ್ಸರ್ ಮತ್ತು ನಟ ಕಿಶೋರ್ ಶೆಟ್ಟಿ ಸೇರಿದಂತೆ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಮುಂಬೈಯಿಂದ ಡ್ರಗ್ಸ್ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು...

ಚಾಮರಾನಗರ : ಒಂದೇ ದಿನ 72 ಹೊಸ...

 ಚಾಮರಾಜನಗರ: ಗಡಿ ಜಿಲ್ಲೆಯಲ್ಲಿ ಶನಿವಾರ 72 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. 28 ಮಂದಿ ಗುಣಮುಖರಾಗಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌ ಕಾರಣದಿಂದ ಮೃತಪಟ್ಟವರ ಸಂಖ್ಯೆ 53ಕ್ಕೆ...

ಸ್ಯಾಂಡಲ್ ವುಡ್ ಡ್ರಗ್ಸ್ ಲಿಂಕ್ : ಸಿಸಿಬಿ...

ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್ಸ್​ ಲಿಂಕ್ ಆರೋಪದಲ್ಲಿ ನಿರೂಪಕ ಅಕುಲ್ ಬಾಲಾಜಿ, ಮಾಜಿ ಕಾರ್ಪೊರೇಟರ್​​ ಯುವರಾಜ್ ಹಾಗೂ ನಟ ಸಂತೋಷ್​​ಗೆ ಸಿಸಿಬಿ ನೋಟಿಸ್ ನೀಡಿತ್ತು. ಅದರಂತೆ ಮೂವರು ಇಂದು ಸಿಸಿಬಿ ಅಧಿಕಾರಿಗಳ...

ಅರ್ಕೇಶ್ವರ ದೇವಸ್ಥಾನದ ಮೂವರು ಅರ್ಚಕರ ಹತ್ಯೆ ಪ್ರಕರಣ:...

ಮಂಡ್ಯ: ನಗರದ ಅರ್ಕೇಶ್ವರ ದೇವಸ್ಥಾನದ ಮೂವರು ಅರ್ಚಕರ ಹತ್ಯೆ ಮಾಡಿ ಹುಂಡಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ನಾಲ್ವರು ಆರೋಪಿಗಳನ್ನು ಪೂರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಾಸನ...

ಜೆಡಿಎಸ್‌ನವರು ಆರ್‌ಎಸ್‌ಎಸ್ ಜತೆ ಸೇರಿದ್ರೂ ಸೇರಬಹುದು:...

ಬೆಂಗಳೂರು: ಜೆಡಿಎಸ್ ಅವಕಾಶವಾದಿ ಪಕ್ಷ. ಸ್ವಾರ್ಥ, ಅಧಿಕಾರಕ್ಕೆ ಬಿಜೆಪಿ ಜತೆಯೂ ಹೋಗುತ್ತಾರೆ. ಆರ್‌ಎಸ್‌ಎಸ್ ಜತೆ ಸೇರಿದ್ರೂ ಸೇರಬಹುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು. ಕೆಪಿಸಿಸಿ...

ಮಹಾರಾಷ್ಟ್ರದ ಪಾಲ್ಗರ್‌ನಲ್ಲಿ ಲಘು ಭೂಕಂಪ

ಪಾಲ್ಗರ್‌: ಮಹಾರಾಷ್ಟ್ರದ ಪಾಲ್ಗರ್‌ ಜಿಲ್ಲೆಯಲ್ಲಿ ಎರಡು ಬಾರಿ ಲಘು ಭೂಕಂಪ ಸಂಭವಿಸಿದೆ. ಶುಕ್ರವಾರ ತಡರಾತ್ರಿ ಸುಮಾರು ಅರ್ಧ ಗಂಟೆಯ ಅಂತರದಲ್ಲಿ ಈ ಕಂಪನಗಳು ದಾಖಲಾಗಿವೆ.

ರಾತ್ರಿ 11.41ರಲ್ಲಿ ದಹನು ತಹಸಿಲ್‌ನಲ್ಲಿ (ತಾಲ್ಲೂಕು) ಮೊದಲಿಗೆ ಭೂಕಂಪ ಸಂಭವಿಸಿದೆ. ರಿಕ್ಟರ್‌ ಮಾಪನದಲ್ಲಿ ಕಂಪನದ ತೀವ್ರತೆಯು 4.0 ದಾಖಲಾಗಿದೆ. ನಂತರ ಮಧ್ಯರಾತ್ರಿ 12.05 ಗಂಟೆಗೆ ತಲಸಾರಿ ತಹಸಿಲ್‌ನಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್‌ನಲ್ಲಿ ಈ ಕಂಪನದ ತೀವ್ರತೆಯು 3.6ರಷ್ಟ ದಾಖಲಾಗಿದೆ ಎಂದು ಪಾಲ್ಗರ್‌ ಜಿಲ್ಲಾ ವಿಪತ್ತು ನಿಯಂತ್ರಣ ಕೋಶದ ಮುಖ್ಯಸ್ಥ ವಿವೇಕಾನಂದ ಕಡಮ್‌ ತಿಳಿಸಿದ್ದಾರೆ.

ಸದ್ಯದ ಮಟ್ಟಿಗೆ, ಭೂಕಂಪದಿಂದ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ಯಾವುದೇ ವರದಿ ಬಂದಿಲ್ಲ ಎಂದು ಅವರು ಹೇಳಿದ್ದಾರೆ.

‘ಭೂಕಂಪನದಿಂದ ಏನಾದರೂ ಹಾನಿ ಸಂಭವಿಸಿದೆಯೇ ಎಂಬುದರ ಕುರಿತು ದಹನು ಮತ್ತು ತಲಸಾರಿಯ ತಹಶೀಲ್ದಾರರು ಸಮೀಕ್ಷೆ ನಡೆಸಲಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ಭೂಮಿ ಕಂಪಿಸಿದ್ದರಿಂದ ಆತಂಕಗೊಂಡ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದರು ಮತ್ತು ಕೆಲ ಸಮಯದವರೆಗೆ ಹೊರಗೇ ಉಳಿದಿದ್ದರು ಎಂದು ತಲಸಾರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪಾಲ್ಗರ್‌ ಜಿಲ್ಲೆಯಲ್ಲಿ, ಅದರಲ್ಲೂ ವಿಶೇಷವಾಗಿ ದಹನು ಮತ್ತು ತಲಸಾರಿ ತಹಸಿಲ್‌ಗಳಲ್ಲಿ 2018ರಿಂದ ಲಘು ಮತ್ತು ಮಧ್ಯಮ ತೀವ್ರತೆಯ ಭೂಕಂಪನಗಳು ಸಂಭವಿಸುತ್ತಿವೆ.

TRENDING