Saturday, September 19, 2020
Home ಅಂತರ್ ರಾಷ್ಟ್ರೀಯ ಅಮೆರಿಕ-ಬ್ರೆಜಿಲ್‌ನಲ್ಲೇ ಬರೋಬ್ಬರಿ 1 ಕೋಟಿ ಕೊರೊನಾ ಪ್ರಕರಣ

ಇದೀಗ ಬಂದ ಸುದ್ದಿ

ಕಲಬುರ್ಗಿ ಯಲ್ಲಿ ಕೊರೊನಾಗೆ ಮತ್ತೆ 6 ಜನ...

 ಕಲಬುರ್ಗಿ: ಕೋವಿಡ್-19 ಸೋಂಕಿನಿಂದ ಜಿಲ್ಲೆಯಲ್ಲಿ ಮತ್ತೆ 6 ಜನ ನಿಧನರಾಗಿರುವ ಬಗ್ಗೆ ಶುಕ್ರವಾರ ವರದಿಯಾಗಿದ್ದು, ಇದರಿಂದ ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ 254ಕ್ಕೆ ಏರಿಕೆಯಾಗಿದೆ. ತೀವ್ರ...

ನಾಗಪುರ : ಆರೆಸ್ಸೆಸ್ ಮುಖ್ಯಸ್ಥ ಸೇರಿ 9...

 ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್​ಎಸ್​ಎಸ್​)ದ ಶಕ್ತಿ ಕೇಂದ್ರ ನಾಗಪುರದ ಕೇಂದ್ರ ಕಚೇರಿಯಲ್ಲಿ ಕನಿಷ್ಠ 9 ಹಿರಿಯ ನಾಯಕರಿಗೆ ಕೊರೋನಾ ಸೋಂಕು ತಗುಲಿದೆ. ಕೋವಿಡ್ 19 ಟೆಸ್ಟ್ ಪಾಸಿಟಿವ್ ಬಂದ ಕಾರಣ ಅವರನ್ನು...

ದೇಶದಲ್ಲಿ ಸೈಬರ್ ಕ್ರೈಂ ಶೇ 500ರಷ್ಟು ಹೆಚ್ಚಳ:...

ನವದೆಹಲಿ: ಭಾರತದಲ್ಲಿ ಸೈಬರ್ ಕ್ರೈಂ ಪ್ರಮಾಣ ಶೇಕಡ 500 ಹೆಚ್ಚಳ ಕಂಡಿದೆ. ಇದಕ್ಕೆ ಸೀಮಿತ ಜಾಗೃತಿ ಮತ್ತು ಕಳಪೆ ಸೈಬರ್​ ಹೈಜೀನ್ ಕಾರಣ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್​ಎಸ್​ಎ) ಅಜಿತ್...

ಕೆಜಿಎಫ್‌ ನ ಯುವ ಕಾಂಗ್ರೆಸ್ ಅಧ್ಯಕ್ಷ ಅರೆಸ್ಟ್

 ಕೆಜಿಎಫ್‌: ಕಾರ್‌ ಶೆಡ್‌ನಲ್ಲಿ ಶೀಟ್ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ನೆರೆ ಮನೆಯ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಆರೋಪ‍ದ ಮೇರೆಗೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಫ್ರಾನ್ಸಿಸ್‌ ಬೆನೆಟೊ ಸೇರಿದಂತೆ ನಾಲ್ಕು...

14 ಭಾಷೆಗಳಲ್ಲಿ ಬಿತ್ತರವಾಗಲಿದೆ “ಅಯೋಧ್ಯೆ ಕೀ ರಾಮ್‌ಲೀಲಾ”

ಬಿಜೆಪಿ ಸಂಸದರಾದ ಮನೋಜ್‌ ತಿವಾರಿ ಹಾಗೂ ರವಿ ಕಿಶನ್ ಭಾಗಿಯಾಗಲಿರುವ ''ಅಯೋಧ್ಯಾ ಕೀ ರಾಮ್‌ಲೀಲಾ" 14 ವಿವಿಧ ಭಾಷೆಗಳಲ್ಲಿ ಲಭ್ಯವಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಉರ್ದು...

ಅಮೆರಿಕ-ಬ್ರೆಜಿಲ್‌ನಲ್ಲೇ ಬರೋಬ್ಬರಿ 1 ಕೋಟಿ ಕೊರೊನಾ ಪ್ರಕರಣ

ನ್ಯೂಯಾರ್ಕ್‌: ಅಮೆರಿಕ ಹಾಗೂ ಬ್ರೆಜಿಲ್‌ನಲ್ಲಿಯೇ ಬರೋಬ್ಬರಿ 1.02 ಕೋಟಿ ಕೋವಿಡ್-19 ಸೋಂಕು ಪ್ರಕರಣಗಳು ದೃಢಪಟ್ಟಿವೆ ಎಂದು ಜಾನ್ಸ್‌ ಹಾಪ್‌ಕಿನ್ಸ್‌ ಕೋವಿಡ್-19 ರಿಸೋರ್ಸ್‌ ಸೆಂಟರ್ ಮಾಹಿತಿ ನೀಡಿದೆ.

ಅಮೆರಿಕದಲ್ಲಿ ಈವರೆಗೆ ಒಟ್ಟು 61,99,998 ಲಕ್ಷ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 1,87,750 ಸೋಂಕಿತರು ಮೃತಪಟ್ಟಿದ್ದು, 22,83,454 ಮಂದಿ ಗುಣಮುಖರಾಗಿದ್ದಾರೆ. ಬ್ರೆಜಿಲ್‌ನಲ್ಲಿ 40,91,801 ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ 125,502 ಮಂದಿ ಸಾವಿಗೀಡಾಗಿದ್ದಾರೆ. ಉಳಿದಂತೆ 34,64,278 ಸೋಂಕಿತರು ಗುಣಮುಖರಾಗಿದ್ದಾರೆ.

ವಿವಿಯ ಮಾಹಿತಿ ಪ್ರಕಾರ ಜಗತ್ತಿನಾದ್ಯಂತ ಇದುವರೆಗೆ ಒಟ್ಟು 2,65,22,393 ಪ್ರಕರಣಗಳು ವರದಿಯಾಗಿದ್ದು, 8,73,270 ಮಂದಿ ಮೃತಪಟ್ಟಿದ್ದಾರೆ ಹಾಗೂ 1,76,38,272 ಸೋಂಕಿತರು ಗುಣಮುಖರಾಗಿದ್ದಾರೆ.

ರಷ್ಯಾದಲ್ಲಿ 1,011,987, ಪೆರುವಿನಲ್ಲಿ 6,70,145, ಕೊಲಂಬಿಯಾದಲ್ಲಿ 6,41,574, ದಕ್ಷಿಣ ಆಫ್ರಿಕಾದಲ್ಲಿ 6,35,078 ಮತ್ತು ಮೆಕ್ಸಿಕೊದಲ್ಲಿ 6,23,090 ಪ್ರಕರಣಗಳು ವರದಿಯಾಗಿವೆ.

ಮೆಕ್ಸಿಕೊದಲ್ಲಿ 66,851, ಇಂಗ್ಲೆಂಡ್‌ನಲ್ಲಿ 41,626, ಇಟಲಿಯಲ್ಲಿ 35,518, ಫ್ರಾನ್ಸ್‌ನಲ್ಲಿ 30,730, ಸ್ಪೇನ್‌ನಲ್ಲಿ 29,418, ಪೆರುವಿನಲ್ಲಿ 29,405 ಮತ್ತು ಇರಾನ್‌ನಲ್ಲಿ 21,044 ಸೋಂಕಿತರು ಮೃತಪಟ್ಟಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್-19 ಸೋಂಕನ್ನು ಜಾಗತಿಕ ಪಿಡುಗು ಎಂದು ಮಾರ್ಚ್‌ 11ರಂದು ಘೋಷಿಸಿತ್ತು.

ಭಾರತದಲ್ಲಿ 31,07,223 ಸೋಂಕಿತರು ಗುಣಮುಖ
ದೇಶದಲ್ಲಿ ಇದುವರೆಗೆ ಒಟ್ಟು 40,23,179 ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ 31,07,223 ಸೋಂಕಿತರು ಗುಣಮುಖರಾಗಿದ್ದಾರೆ. 69,561 ಮಂದಿ ಮೃತಪಟ್ಟಿದ್ದು, ಇನ್ನೂ 8,46,395 ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.

TRENDING