Monday, September 28, 2020
Home ಸಿನಿಮಾ ಸ್ಯಾಂಡಲ್‌ವುಡ್‌ ಕಲಾವಿದರಿಗೆ ಡ್ರಗ್ಸ್‌ ನಂಟು ಸಾಬೀತಾದರೆ ಕಠಿನ ಕ್ರಮ : ಸಾ.ರಾ ಗೋವಿಂದು

ಇದೀಗ ಬಂದ ಸುದ್ದಿ

ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಗೂ ಕೊರೋನಾ...

ರಾಜ್ಯದಲ್ಲಿ ಕೊರೊನಾ ವೈರಸ್ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಮಾಜಿ ಸಚಿವ, ಕಾಂಗ್ರೆಸ್ ಮುಖಂಡ .ಹೆಚ್.ಕೆ. ಪಾಟೀಲ್ ಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಈ...

ಕಲಬುರಗಿಯಲ್ಲಿ ಪ್ರತಿಭಟನಾ ಮೆರವಣಿಗೆ

ಕೃಷಿ‌ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳ ಸೇರಿ ವಿವಿಧ ತಿದ್ದುಪಡಿ ಕಾಯ್ದೆಗಳ ವಿರೋಧಿಸಿ ಸೋಮವಾರ ನಡೆಯುತ್ತಿರುವ ಕರ್ನಾಟಕ ಬಂದ್ ಗೆ ಕಲಬುರಗಿಯಲ್ಲಿ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸ್ಯಾಂಡಲ್ ವುಡ್​​​ ಡ್ರಗ್ಸ್ ಕೇಸ್: ಇಂದು ನಶೆ...

ಸ್ಯಾಂಡಲ್​​ವುಡ್​​​ ಡ್ರಗ್ಸ್​ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ, ಸಂಜನಾ ಗರ್ಲಾನಿ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಪ್ರಕರಣದ ಕುರಿತು ವಾದ-ಪ್ರತಿವಾದ ಆಲಿಸಲಿರುವ ಎನ್​ಡಿಪಿಎಸ್...

ಕರ್ನಾಟಕ ಬಂದ್; ಏನೇನಿರತ್ತೆ..?ಏನಿರಲ್ಲ ?

 ಬೆಂಗಳೂರು: ಸರ್ಕಾರ ಅಂಗೀಕಾರ ಮಾಡಿರುವ ಭೂ ಸುಧಾರಣಾ ಮತ್ತು ಎಪಿಎಂಸಿ ಕಾಯ್ದೆ ವಿರೋಧಿಸಿ ಇಂದು (ಸೆಪ್ಟೆಂಬರ್​ 28) ರೈತಪರ ಸಂಘಟನೆಗಳು ಬಂದ್​ಗೆ ಕರೆ ನೀಡಿವೆ. ಈ ಕರ್ನಾಟಕ ಬಂದ್​ ನಿಮಿತ್ತ ಇಂದು...

‘ಸುರೇಶ ಅಂಗಡಿ ನಿರ್ಲಕ್ಷ್ಯ ವಹಿಸದಿದ್ದರೆ ಬದುಕುತ್ತಿದ್ದರೇನೋ…’: ಜಗದೀಶ...

   ಬೆಳಗಾವಿ: 'ಸುರೇಶ ಅಂಗಡಿ ಅವರು ಮಾಸ್ಕ್ ಹಾಕುವುದರಲ್ಲಿ ನಿರ್ಲಕ್ಷ್ಯ ವಹಿಸಿದರು. ಯಾವುದೇ ಚಟವಿಲ್ಲದ ನನಗೆ ಏನೂ ಆಗುವುದಿಲ್ಲ ಎಂಬ ಅತಿಯಾದ ಆತ್ಮವಿಶ್ವಾಸ ಅವರಲ್ಲಿತ್ತು....

ಸ್ಯಾಂಡಲ್‌ವುಡ್‌ ಕಲಾವಿದರಿಗೆ ಡ್ರಗ್ಸ್‌ ನಂಟು ಸಾಬೀತಾದರೆ ಕಠಿನ ಕ್ರಮ : ಸಾ.ರಾ ಗೋವಿಂದು

ಬೆಂಗಳೂರು: ಸ್ಯಾಂಡಲ್ವುಡ್ ಕಲಾವಿದರಿಗೆ ಡ್ರಗ್ಸ್ ಮಾಫಿಯಾ ನಂಟು ಇದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ.
ಪ್ರಕರಣ ಇನ್ನೂ ತನಿಖೆಯ ಹಂತದಲ್ಲಿದ್ದು, ಆರೋಪ ಸಾಬೀತಾದರೆ ನ್ಯಾಯ ವ್ಯವಸ್ಥೆಯಲ್ಲಿ ಶಿಕ್ಷೆಯಾಗುತ್ತದೆ.

ಅಂಥ ಕಲಾವಿದರ ವಿರುದ್ಧ ವಾಣಿಜ್ಯ ಮಂಡಳಿಯೂ ಕಠಿನ ಕ್ರಮ ಜರಗಿಸಲಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎಚ್ಚರಿಕೆ ನೀಡಿದೆ.
ಚಿತ್ರರಂಗದ ಕೆಲವು ಕಲಾವಿದರಿಗೆ ಡ್ರಗ್ಸ್ ಮಾಫಿಯಾ ಜತೆ ನಂಟಿದೆ ಎಂಬ ಆರೋಪಗಳ ಬಗ್ಗೆ ಪರ – ವಿರೋಧ ಚರ್ಚೆಗಳು ನಡೆಯುತ್ತಿರುವಾಗಲೇ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬುಧವಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಜೈರಾಜ್, ಸುಮಾರು 6 ತಿಂಗಳುಗಳಿಂದ ಚಿತ್ರರಂಗ ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಈ ವಿಷಯವನ್ನು ಸರಕಾರದ ಗಮನಕ್ಕೂ ತಂದಿದ್ದೇವೆ. ನಾವು ಡ್ರಗ್ಸ್ ವಿಷಯಕ್ಕೆ ತಲೆ ಹಾಕುತ್ತಿಲ್ಲ. ನಮಗೆ ಆ ಅಧಿಕಾರವೂ ಇಲ್ಲ. ಇಂದ್ರಜಿತ್ ಲಂಕೇಶ್ ಮಾಡುತ್ತಿರುವ ಆರೋಪವನ್ನು ನಮ್ಮ ಗಮನಕ್ಕೆ ತಂದಿಲ್ಲ. ಅಲ್ಲದೆ ಬೇರೆ ಯಾವ ನಿರ್ದೇಶಕ, ನಿರ್ಮಾಪಕರು ಈ ಕುರಿತು ಮಾತನಾಡಿಲ್ಲ ಎಂದರು.

ಮಾಜಿ ಅಧ್ಯಕ್ಷ ಸಾ.ರಾ ಗೋವಿಂದು ಮಾತನಾಡಿ, ಹಿರಿಯರು ಶ್ರಮವಹಿಸಿ ಕಟ್ಟಿದ ಉದ್ಯಮವಿದು. ಸದಾ ಜನಪರವಾಗಿಯೇ ಇದೆ. ಈ ಆರೋಪ ನಮಗೆ ಅತೀವ ಬೇಸರ ತರಿಸಿದೆ. ಒಂದೆರಡು ಸಿನೆಮಾ ಮಾಡಿದವರನ್ನು, ಸಿನೆಮಾ ಉದ್ಯಮದವರು ಎಂದು ಒಪ್ಪಿಕೊಳ್ಳಲಾಗದು. ಒಂದಿಬ್ಬರ ತಪ್ಪನ್ನು ಇಡೀ ಚಿತ್ರರಂಗದ ತಪ್ಪು ಎನ್ನಲಾಗದು. ಇಂದ್ರಜಿತ್ ಮಾಡಿರುವ ಆರೋಪವನ್ನು ಸಾಬೀತುಪಡಿಸಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.
ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್, ಪದಾಧಿಕಾರಿಗಳಾದ ಎನ್. ಎಂ. ಸುರೇಶ್, ನರಸಿಂಹಲು, ಎ. ಗಣೇಶ್, ನಾಗಣ್ಣ, ಎಂ.ಜಿ. ರಾಮಮೂರ್ತಿ, ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ಸಫೈರ್ ವೆಂಕಟೇಶ್ ಮೊದಲಾದವರು ಉಪಸ್ಥಿತರಿದ್ದರು.

ಗಾಂಧಿನಗರವನ್ನು ಗಾಂಜಾನಗರ ಎಂದು ಹೇಳಿರುವುದರಿಂದ ತುಂಬಾ ನೋವಾಗಿದೆ. ಕೋವಿಡ್ 19 ಪರಿಸ್ಥಿತಿಯಲ್ಲಿ ಹಲವರು ಕೆಲಸವಿಲ್ಲದೆ ಕೈ ಕಟ್ಟಿ ಕುಳಿತಿದ್ದಾರೆ. ಕೆಲಸಕ್ಕೋಸ್ಕರ ಹಾತೊರೆಯುತ್ತಿದ್ದಾರೆ. ಚಿತ್ರೀಕರಣ ಪ್ರಾರಂಭಿಸಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ಇಡೀ ಚಿತ್ರರಂಗದ ಮೇಲೆ ಆರೋಪ ಹೊರಿಸುತ್ತಿರುವುದರಿಂದ ತುಂಬಾ ದುಃಖವಾಗುತ್ತಿದೆ.

TRENDING