Sunday, September 27, 2020
Home ದೆಹಲಿ ಅಧಿಕೃತ ಕ್ಯಾಲೆಂಡರ್, ಡೈರಿ ಪ್ರಕಟಣೆ ಕೈಬಿಟ್ಟ ಕೇಂದ್ರ ಸರ್ಕಾರ

ಇದೀಗ ಬಂದ ಸುದ್ದಿ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್‍ 88ನೇ ಹುಟ್ಟುಹಬ್ಬ,...

ನವದೆಹಲಿ : ಕಾಂಗ್ರೆಸ್ ಮುತ್ಸದ್ದಿ ಮತ್ತು ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರಿಗೆ ಇಂದು 88ನೇ ಜನ್ಮದಿನದ ಸಡಗರ-ಸಂಭ್ರಮ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ...

ಜಮ್ಮು ಮತ್ತು ಕಾಶ್ಮೀರದಲ್ಲಿ 4.5ರಷ್ಟು ತೀವ್ರತೆಯ ಭೂಕಂಪ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಲೇಹ್ ಮತ್ತು ಲಡಾಖ್ ಪ್ರದೇಶಗಳಲ್ಲಿ ಶನಿವಾರ ಭೂ ಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4.5 ರಷ್ಟು ದಾಖಲಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ...

ಚಂಡೀಗಢದಲ್ಲಿ ಆಕ್ಸ್‌ಫರ್ಡ್ ಕೊರೊನಾ ಲಸಿಕೆ ಪ್ರಯೋಗ ಆರಂಭ

 ನವದೆಹಲಿ : ಆಕ್ಸ್‌ಫರ್ಡ್ ಕೊರೊನಾ ಲಸಿಕೆಯ ಎರಡನೇ ಹಂತದ ಪ್ರಯೋಗ ಚಂಡೀಗಢದ ಪೋಸ್ಟ್ ಗ್ರಾಜುವೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಆಂಡ್ ರಿಸರ್ಚ್ ನಲ್ಲಿ ಆರಂಭಗೊಂಡಿದೆ.

ವಿಧಾನಸಭೆಯಲ್ಲಿ ತೀವ್ರ ವಿರೋಧದ ನಡುವೆಯೂ ಕರ್ನಾಟಕ...

ಬೆಂಗಳೂರು, ಸೆ. 26: ತೀವ್ರ ವಿವಾದಕ್ಕೆ ಕಾರಣವಾಗಿದ್ದ ಕರ್ನಾಟಕ ಭೂಸುಧಾರಣೆಗಳ ತಿದ್ದುಪಡಿ ವಿಧೇಯಕ ಅಂಗೀಕಾರವಾಗಿದೆ. ಕಾಂಗ್ರೆಸ್ ಪಕ್ಷದ ಸದಸ್ಯರ ತೀವ್ರ ವಿರೋಧದ ಮಧ್ಯೆಯೇ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರವಾಯಿತು. ಅದಕ್ಕೂ ಮೊದಲು...

ಕೃಷ್ಣ ಜನ್ಮಭೂಮಿ ಮಥುರಾ ಬಳಿ ಮಸೀದಿ ತೆರವು...

ಮಥುರಾ: ಇಲ್ಲಿನ ಕೃಷ್ಣ ಜನ್ಮಭೂಮಿ ಪ್ರದೇಶ ಹಿಂದೂಗಳಿಗೆ ಸೇರಿದ್ದು. ಕೃಷ್ಣನ ಭಕ್ತರು ಮತ್ತು ಹಿಂದೂ ಸಮುದಾಯದವರಿಗೆ ಇದು ಪವಿತ್ರ ಸ್ಥಳ ಎಂದು ವಕೀಲ ವಿಷ್ಣು ಜೈನ್ ಎಂಬುವವರು ಪ್ರತಿಪಾದಿಸಿದ್ದು, ಈ ಕುರಿತು...

ಅಧಿಕೃತ ಕ್ಯಾಲೆಂಡರ್, ಡೈರಿ ಪ್ರಕಟಣೆ ಕೈಬಿಟ್ಟ ಕೇಂದ್ರ ಸರ್ಕಾರ

ನವದೆಹಲಿ: 2021ರಿಂದ ಅಧಿಕೃತ ಕ್ಯಾಲೆಂಡರ್, ಡೈರಿ, ಗ್ರೀಟಿಂಗ್ ಕಾರ್ಡ್ಗಳು, ಟೇಬಲ್ ಟಾಪ್ ಪುಸ್ತಕಗಳ ಮುದ್ರಣವನ್ನು ಕೈಬಿಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಇವೆಲ್ಲವುಗಳ ಮುದ್ರಣಕ್ಕೆ ಕೇಂದ್ರವು ‘ಕೆಲವು ಕೋಟಿಗಳಷ್ಟು’ ಹಣವನ್ನು ಖರ್ಚು ಮಾಡುತ್ತಿತ್ತು. ‘ಕಾಗದರಹಿತ ಆಗಿ’ ಎಂಬ ಸೂಚನೆಯನ್ನು ಕೇಂದ್ರವು ತನ್ನೆಲ್ಲ ಸಚಿವಾಲಯಗಳಿಗೆ, ಇಲಾಖೆಗಳಿಗೆ ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ರವಾನಿಸಿದೆ.
‘ಗೋಡೆ ಕ್ಯಾಲೆಂಡರ್ಗಳು, ಟೇಬಲ್ ಕ್ಯಾಲೆಂಡರ್ಗಳು, ಡೈರಿಗಳು, ಹಬ್ಬಗಳ ಸಂದರ್ಭದಲ್ಲಿ ಹೊರತರುತ್ತಿದ್ದ ಗ್ರೀಟಿಂಗ್ ಕಾರ್ಡ್ಗಳು ಹಾಗೂ ಈ ರೀತಿಯ ಇತರ ಪ್ರಕಟಣೆಗಳು ಇನ್ನು ಮುಂದೆ ಇರುವುದಿಲ್ಲ’ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.
‘ಕಾಫಿ ಟೇಬಲ್ ಪುಸ್ತಕಗಳ ಪ್ರಕಟಣೆ ಕೂಡ ಇನ್ನು ಮುಂದೆ ಇರುವುದಿಲ್ಲ. ಅವುಗಳ ಬದಲು ಇ-ಪುಸ್ತಕ ಪ್ರಕಟಿಸುವುದನ್ನು ಪ್ರೋತ್ಸಾಹಿಸಲಾಗುತ್ತದೆ. ಹಾಗಾಗಿ, ಸಂಬಂಧಪಟ್ಟ ಎಲ್ಲರೂ ಇ-ಪುಸ್ತಕಗಳ ಪ್ರಕಟಣೆಗೆ ಯತ್ನಿಸಬೇಕು’ ಎಂದು ಸಚಿವಾಲಯವು ಸೂಚಿಸಿದೆ.
ಉತ್ಪಾದಕತೆಯನ್ನು ಹೆಚ್ಚು ಮಾಡಲು ಇಡೀ ಜಗತ್ತು ವೇಗವಾಗಿ ಡಿಜಿಟಲ್ ಸಲಕರಣೆಗಳ ಕಡೆ ಮುಖ ಮಾಡುತ್ತಿದೆ. ಕೆಲಸಗಳನ್ನು ಯೋಜಿಸಲು, ಕೆಲಸಗಳು ಆಗಬೇಕಾದ ಸಮಯವನ್ನು ನಿಗದಿ ಮಾಡಲು ತಾಂತ್ರಿಕ ಆವಿಷ್ಕಾರಗಳನ್ನು ಬಳಸಿಕೊಳ್ಳುವುದು ಕಡಿಮೆ ಖರ್ಚಿನದ್ದು, ಹೆಚ್ಚು ದಕ್ಷ, ಹೆಚ್ಚು ಪರಿಣಾಮಕಾರಿ ಎಂದು ಸಚಿವಾಲಯ ಹೇಳಿದೆ.
ಇವುಗಳ ಮುದ್ರಣವನ್ನು ಸಂಪೂರ್ಣವಾಗಿ ನಿರ್ಬಂಧಿಸುವ ಮೊದಲು ಕೇಂದ್ರ ಸರ್ಕಾರವು ಇನ್ನೊಂದು ಕ್ರಮವನ್ನು ತೆಗೆದುಕೊಂಡಿತ್ತು. ಎಲ್ಲ ಸಚಿವಾಲಯಗಳು ತಮ್ಮವೇ ಆದ ಕ್ಯಾಲೆಂಡರ್ಗಳನ್ನು ಹಾಗೂ ಡೈರಿಗಳನ್ನು ಮುದ್ರಿಸುವ ಬದಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಪ್ರಕಟಿಸುವ ಕ್ಯಾಲೆಂಡರ್ ಹಾಗೂ ಡೈರಿಗಳನ್ನು ಬಳಸಲು ಸೂಚಿಸಿತ್ತು.
ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಹಾಗೂ ಸ್ವಾಯತ್ತ ಸಂಸ್ಥೆಗಳಿಗೆ ಶುಲ್ಕ ಪಡೆದು ಡೈರಿಗಳು ಮತ್ತು ಕ್ಯಾಲೆಂಡರ್ಗಳನ್ನು ಪೂರೈಸಲಾಗುತ್ತದೆ ಎಂದು ಕೇಂದ್ರ ಹೇಳಿತ್ತು.

TRENDING