Monday, September 21, 2020
Home ಕೋವಿಡ್-19 ಕೊರೊನಾ ಅಟ್ಟಹಾಸ : ದೇಶದಲ್ಲಿ ಒಂದೇ ದಿನ 83 ಸಾವಿರ ಹೊಸ ಸೋಂಕು ಪ್ರಕರಣಗಳು ಪತ್ತೆ

ಇದೀಗ ಬಂದ ಸುದ್ದಿ

ತುಂಗಭದ್ರಾ ನದಿಯಲ್ಲಿ ಕೊಚ್ಚಿಹೊದ ಇಬ್ಬರು ಯುವಕರು

ತುಂಗಭದ್ರಾ ನದಿಯಲ್ಲಿ ಇಬ್ಬರು ಯುವಕರು ಹಾಗೂ ಚಕ್ಕಡಿ ಸಮೇತ ಎರಡು ಎತ್ತುಗಳು ಕೊಚ್ಚಿ ಹೋದ ಘಟನೆ ಸೋಮವಾರ ತಾಲೂಕಿನ ಕೋಣನತಂಬಗಿ ಗ್ರಾಮದಲ್ಲಿ ನಡೆದಿದೆ. ಪ್ರಾಥಮಿಕ ವರದಿಯ...

ಭಾರತದಲ್ಲಿ ಮಾತ್ರ ಚಿನ್ನದ ದರ ಇಳಿಕೆ

ಭಾರತದಲ್ಲಂತೂ ಕೊರೊನಾ ಆತಂಕ ಮುಂದುವರಿದಿದ್ದರೂ ಚಿನ್ನದ ಫಿಸಿಕಲ್ ಬೇಡಿಕೆ ಕಡಿಮೆ ಆಗಿದೆ. ಮುಂಬರುವ ನವರಾತ್ರಿ ಹೊತ್ತಿಗೆ ಮತ್ತೆ ಚಿನ್ನಕ್ಕೆ ಬೇಡಿಕೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಆಭರಣ ವರ್ತಕರಿದ್ದಾರೆ. ಗ್ರಾಹಕರನ್ನು ಸೆಳೆಯಬೇಕು...

ಇಂದು ಭಾರತ-ಚೀನಾ ನಡುವೆ ಮಹತ್ವದ ಸಭೆ

ಭಾರತ-ಚೀನಾ ನಡುವಿನ ಗಡಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂದು ಭಾರತ-ಚೀನಾ ಸೇನೆಗಳ ನಡುವೆ ಆರನೇ ಹಂತದ ಮಹತ್ವದ ಮಾತುಕತೆ ನಡೆಯಲಿದೆ. ಗಡಿಯಲ್ಲಿರುವ ಚುಶುಲ್ ಮತ್ತು ಮೊಲ್ವೊ ಮೀಟಿಂಗ್...

ಬಿಜೆಪಿ ಶಾಸಕ ಪಿ. ರಾಜೀವ್ ಹೋಂ ಕ್ವಾರಂಟೈನ್

ಬೆಳಗಾವಿ ಜಿಲ್ಲೆಯ ಕುಡಚಿ ಕ್ಷೇತ್ರದ ಬಿಜೆಪಿ ಶಾಸಕ ಪಿ. ರಾಜೀವ್ ಹೋಂ ಕ್ವಾರಂಟೈನ್‌ ಆಗಿದ್ದಾರೆ. ಶಾಸಕರ ತಂದೆಗೆ ಕೋವಿಡ್ ಸೋಂಕು ತಗುಲಿದ್ದು ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ಲಡಾಖ್‌ ಗಡಿ ಸಂಘರ್ಷ: ಪೂರ್ವ ಗಡಿ ಪ್ರದೇಶಗಳಲ್ಲಿ...

 ನವದೆಹಲಿ: ಪೂರ್ವ ಲಡಾಖ್‌ ಗಡಿ ಪ್ರದೇಶದಲ್ಲಿ ವ್ಯೂಹಾತ್ಮಕವಾಗಿ ಮುಖ್ಯವಾಗಿರುವ 20 ಪರ್ವತ ಪ್ರದೇಶಗಳ ಮೇಲೆ ಭಾರತೀಯ ಸೇನೆ ಪ್ರಾಬಲ್ಯ ಹೆಚ್ಚಿಸಿದೆ. ಪಾಂಗಾಂಗ್ ಸರೋವರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ಇರಿಸಿದೆ...

ಕೊರೊನಾ ಅಟ್ಟಹಾಸ : ದೇಶದಲ್ಲಿ ಒಂದೇ ದಿನ 83 ಸಾವಿರ ಹೊಸ ಸೋಂಕು ಪ್ರಕರಣಗಳು ಪತ್ತೆ

ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಒಂದೇ ದಿನ 83 ಸಾವಿರಕ್ಕೂ ಅಧಿಕ ಹೊಸ ಪ್ರಕರಣಗಳು ಸೇರ್ಪಡೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಬುಧವಾರ ದೇಶದಲ್ಲಿ 83029 ಹೊಸ ಪ್ರಕರಣಗಳು ವರದಿಯಾಗಿದ್ದು, ದೇಶದಲ್ಲಿ ಕೇವಲ ನಾಲ್ಕು ದಿನಗಳಲ್ಲಿ ಮೂರನೇ ಬಾರಿ 80 ಸಾವಿರಕ್ಕಿಂತ ಅಧಿಕ ಪ್ರಕರಣಗಳು ಒಂದೇ ದಿನ ದೃಢಪಟ್ಟಿರುವುದು, ಸೋಂಕಿನ ತೀವ್ರತೆಗೆ ಹಿಡಿದ ಕನ್ನಡಿಯಾಗಿದೆ.
ವಿಶ್ವದ ಯಾವುದೇ ದೇಶದಲ್ಲಿ ಒಂದೇ ದಿನ 83 ಸಾವಿರ ಪ್ರಕರಣಗಳು ದಾಖಲಾದ ನಿದರ್ಶನ ಇಲ್ಲ. ಅಮೆರಿಕದಲ್ಲಿ ಇದುವರೆಗೆ ಗರಿಷ್ಠ ಅಂದರೆ 77,255 ಪ್ರಕರಣಗಳು ಜುಲೈ 16ರಂದು ದಾಖಲಾಗಿದ್ದವು ಎಂದು ಜಾನ್ ಹಾಕಿನ್ಸ್ ವಿವಿ ಅಂಕಿ ಅಂಶ ತಿಳಿಸಿದೆ. ಆಗಸ್ಟ್ 29ರಂದು ಭಾರತದಲ್ಲಿ 78903 ಪ್ರಕರಣಗಳು ದಾಖಲಾಗಿ ಅಮೆರಿಕದ ಗರಿಷ್ಠ ದಾಖಲೆ ಅಳಿಸಿಹೋಗಿತ್ತು.
ದೇಶದಲ್ಲಿ ಒಂದೇ ದಿನ 17 ಸಾವಿರ ಪ್ರಕರಣಗಳು ದಾಖಲಾದ ಏಕೈಕ ರಾಜ್ಯವಾಗಿ ಮಹಾರಾಷ್ಟ್ರ ಬುಧವಾರ ದಾಖಲೆಗೆ ಸೇರಿದ್ದು, ಒಟ್ಟು 17433 ಪ್ರಕರಣಗಳು ಇಲ್ಲಿ ದೃಢಪಟ್ಟಿವೆ. ಆಗಸ್ಟ್ 29ರಂದು ಮಹಾರಾಷ್ಟ್ರದಲ್ಲಿ ಇದುವರೆಗಿನ ಗರಿಷ್ಠ ಅಂದರೆ 16867 ಪ್ರಕರಣಗಳು ಕಾಣಿಸಿಕೊಂಡಿದ್ದವು. ರಾಜ್ಯದಲ್ಲಿ ಬುಧವಾರ 292 ಮಂದಿ ಸೋಂಕಿಗೆ ಬಲಿಯಾಗಿದ್ದು, ಸೋಂಕಿನ ಕಾರಣದಿಂದ ಮೃತಪಟ್ಟವರ ಸಂಖ್ಯೆ 25,195ಕ್ಕೇರಿದೆ.
ದೇಶದಲ್ಲಿ 1023 ಮಂದಿ ಬುಧವಾರ ಸೋಂಕಿನಿಂದ ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 67415ಕ್ಕೇರಿದೆ. ಈ ಪೈಕಿ ಮಹಾರಾಷ್ಟ್ರದ ಪಾಲು ಶೇಕಡ 37ರಷ್ಟಾಗಿದೆ. ತಮಿಳುನಾಡಿನಲ್ಲಿ ಬುಧವಾರ 98 ಸೋಂಕಿತರು ಮೃತಪಟ್ಟಿದ್ದು, ಒಟ್ಟು ಬಲಿಯಾದವರ ಸಂಖ್ಯೆ 7516ಕ್ಕೇರಿದೆ. ಇದರೊಂದಿಗೆ ದೇಶದಲ್ಲೇ ಅತ್ಯಧಿಕ ಸೋಂಕಿತರು ಮೃತಪಟ್ಟ ಎರಡನೇ ರಾಜ್ಯ ಎನಿಸಿಕೊಂಡಿದೆ. ಕರ್ನಾಟಕದಲ್ಲಿ 113 ಮಂದಿ ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 5950ಕ್ಕೇರಿದೆ.

TRENDING