Saturday, September 19, 2020
Home ದೇಶ ಚೀನಾದ PUB G ಮೊಬೈಲ್ ಸೇರಿ 118 ಅಪ್ಲಿಕೇಷನ್ ನಿಷೇಧಿಸಿದ ‘ಭಾರತ’

ಇದೀಗ ಬಂದ ಸುದ್ದಿ

ಕುಲಭೂಷಣ್ ಜಾಧವ್‌ ಪರ ಭಾರತೀಯ ವಕೀಲ ನೇಮಕ

ಉಚಿತ ಮತ್ತು ನ್ಯಾಯಯುತ ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಕುಲಭೂಷಣ್ ಜಾಧವ್‌ಗೆ ಭಾರತೀಯ ವಕೀಲ ಅಥವಾ ಕ್ವೀನ್​ ಕೌನ್ಸೆಲ್​​ ನೇಮಿಸಬೇಕು ಎಂಬ ಭಾರತದ ಬೇಡಿಕೆಯನ್ನು ಪಾಕಿಸ್ತಾನ ಶುಕ್ರವಾರ ತಿರಸ್ಕರಿಸಿದೆ.

ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಗೂ ಕೊರೊನಾ ಸೋಂಕು...

ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ರಾಜ್ಯದ ಹಲವೆಡೆ ಪ್ರವಾಸ ಕೈಗೊಂಡಿರುವ ಸಮಯದಲ್ಲಿ ಅವರು ಜ್ಚರದಿಂದ ಬಳಲುತ್ತಿದ್ದರು. ಹೀಗಾಗಿ ಕೋವಿಡ್ ಪರೀಕ್ಷೆಗೆ ಒಳಗಾದಾಗ...

ಅಕುಲ್ ರೆಸಾರ್ಟ್ ನಲ್ಲಿ ನಡೆಯುತ್ತಿತ್ತಾ ಪಾರ್ಟಿ.?

ನಿರೂಪಕ ಅಕುಲ್ ಬಾಲಾಜಿ ಒಡೆತನದ ಸನ್ ಶೈನ್ ರೆಸಾರ್ಟ್ ನಲ್ಲಿ ಡ್ರಗ್ಸ್ ಪಾರ್ಟಿಗಳನ್ನು ಆಯೋಜನೆ ಮಾಡಲಾಗುತ್ತಿತ್ತು. ಸ್ಟಾರ್ ನಟ-ನಟಿಯರು, ನಟರ ಪತ್ನಿಯರು ಈ ಪಾರ್ಟಿಯಲ್ಲಿ ಭಾಗಿಯಾಗುತ್ತಿದ್ದರು ಎಂಬ ಮಾಹಿತಿ ಸಿಸಿಬಿ...

ಸಂಜನಾ ʼರಹಸ್ಯʼ ಬಹಿರಂಗಪಡಿಸಿದ ಸಂಬರಗಿ

ಡ್ರಗ್ಸ್ ದಂಧೆ ಪ್ರಕರಣದಲ್ಲಿ ಈಗಾಗಲೇ ಜೈಲು ಪಾಲಾಗಿರುವ ಸಂಜನಾ ಗಲ್ರಾನಿಯ ಖಾಸಗಿ ವಿಡಿಯೋ ಒಂದನ್ನು ಬಹಿರಂಗಪಡಿಸಿದ್ದ ಪ್ರಶಾಂತ್ ಸಂಬರಗಿ, ಇದೀಗ ಅವರ ಮದುವೆ ಹಾಗೂ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ...

ಡ್ರಗ್ಸ್ ಸಾಗಿಸುತ್ತಿದ್ದ ಬಾಲಿವುಡ್ ಡ್ಯಾನ್ಸರ್ ಕಿಶೋರ್ ಶೆಟ್ಟಿ...

ಖ್ಯಾತ ಡ್ಯಾನ್ಸರ್, ಬಾಲಿವುಡ್ ಚಿತ್ರದಲ್ಲಿ ನಟಿಸಿದ್ದ ಮಂಗಳೂರಿನ ಕಿಶೋರ್ ಶೆಟ್ಟಿಯನ್ನು ಡ್ರಗ್ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಸಿಸಿಬಿ ಪೊಲೀಸರಿಂದ ಶನಿವಾರ ಬೆಳಿಗ್ಗೆ ಡ್ರಗ್ಸ್ ಸಾಗಿಸುತ್ತಿದ್ದ...

ಚೀನಾದ PUB G ಮೊಬೈಲ್ ಸೇರಿ 118 ಅಪ್ಲಿಕೇಷನ್ ನಿಷೇಧಿಸಿದ ‘ಭಾರತ’

ಪಬ್ ಜಿ ಮೊಬೈಲ್ ಸೇರಿದಂತೆ 118 ಚೀನೀ ಅಪ್ಲಿಕೇಷನ್ ಗಳನ್ನು ಭಾರತ ಸರ್ಕಾರ ಹೊಸದಾಗಿ ನಿಷೇಧ ಮಾಡಿದೆ. ಲಡಾಖ್ ನಲ್ಲಿ ಹೊಸದಾಗಿ ಉದ್ಭವಿಸಿರುವ ಚೀನಾ ಜತೆಗಿನ ಉದ್ವಿಗ್ನ ವಾತಾವರಣದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಪ್ರಕಾರ, ಈ ಮೊಬೈಲ್ ಗೇಮ್ ಅನ್ನು ಇನ್ಫರ್ಮೇಷನ್ ಟೆಕ್ನಾಲಜಿ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ನಿಷೇಧಿಸಲಾಗಿದೆ.
ಭಾರತದ ಸಾರ್ವಭೌಮತೆ ಹಾಗೂ ಸಮಗ್ರತೆಗೆ, ಭಾರತದ ರಕ್ಷಣೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವಂಥ ಚಟುವಟಿಕೆಯಲ್ಲಿ ತೊಡಗಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಲಾಗಿದೆ.
ಭಾರತದ ಹೊರಭಾಗದಲ್ಲಿ ಇದ್ದುಕೊಂಡು, ಅನಧಿಕೃತವಾಗಿ ಮಾಹಿತಿಗಳನ್ನು ಕದಿಯಲಾಗುತ್ತಿತ್ತು. ಇದಕ್ಕಾಗಿ ಆಂಡ್ರಾಯಿಡ್ ಮತ್ತು ಐಒಎಸ್ ಪ್ಲಾಟ್ ಫಾರ್ಮ್ ಗಳನ್ನು ಬಳಸಿಕೊಳ್ಳಲಾಗುತ್ತಿತ್ತು. ಈ ಬಗ್ಗೆ ವಿವಿಧ ಮೂಲಗಳಿಂದ ದೂರುಗಳು ಬಂದಿರುವುದು ಸೇರಿದಂತೆ ವರದಿಗಳು ಕೈ ತಲುಪಿವೆ ಎಂದು ಸಚಿವಾಲಯ ತಿಳಿಸಿದೆ.
ಮಾಹಿತಿಗಳನ್ನು ಸಂಗ್ರಹಿಸಿ, ಅದರ ದತ್ತಾಂಶ ಸಿದ್ಧ ಪಡಿಸಿಕೊಳ್ಳುವುದು ಭಾರತದ ರಕ್ಷಣೆ ಹಾಗೂ ಸುರಕ್ಷತೆಗೆ ಅಪಾಯಕಾರಿ. ಇದರಿಂದ ಅಂತಿಮವಾಗಿ ಭಾರತದ ಸಾರ್ವಭೌಮತೆ ಹಾಗೂ ಸಮಗ್ರತೆಗೆ ಧಕ್ಕೆ ಆಗುತ್ತದೆ. ಈ ಕುರಿತು ತಕ್ಷಣ ಕ್ರಮ ಕೈಗೊಳ್ಳುವ ಅಗತ್ಯ ಇತ್ತು ಎನ್ನಲಾಗಿದೆ.

TRENDING