Monday, September 28, 2020
Home ಬೆಂಗಳೂರು Sandalwood Drug Scandal: ಸಿಸಿಬಿ ತನಿಖೆ ಚುರುಕು; ಇಂದ್ರಜಿತ್ ಗೆ ಮತ್ತೆ ನೋಟೀಸ್ ಸಾಧ್ಯತೆ

ಇದೀಗ ಬಂದ ಸುದ್ದಿ

ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಗೂ ಕೊರೋನಾ...

ರಾಜ್ಯದಲ್ಲಿ ಕೊರೊನಾ ವೈರಸ್ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಮಾಜಿ ಸಚಿವ, ಕಾಂಗ್ರೆಸ್ ಮುಖಂಡ .ಹೆಚ್.ಕೆ. ಪಾಟೀಲ್ ಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಈ...

ಕಲಬುರಗಿಯಲ್ಲಿ ಪ್ರತಿಭಟನಾ ಮೆರವಣಿಗೆ

ಕೃಷಿ‌ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳ ಸೇರಿ ವಿವಿಧ ತಿದ್ದುಪಡಿ ಕಾಯ್ದೆಗಳ ವಿರೋಧಿಸಿ ಸೋಮವಾರ ನಡೆಯುತ್ತಿರುವ ಕರ್ನಾಟಕ ಬಂದ್ ಗೆ ಕಲಬುರಗಿಯಲ್ಲಿ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸ್ಯಾಂಡಲ್ ವುಡ್​​​ ಡ್ರಗ್ಸ್ ಕೇಸ್: ಇಂದು ನಶೆ...

ಸ್ಯಾಂಡಲ್​​ವುಡ್​​​ ಡ್ರಗ್ಸ್​ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ, ಸಂಜನಾ ಗರ್ಲಾನಿ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಪ್ರಕರಣದ ಕುರಿತು ವಾದ-ಪ್ರತಿವಾದ ಆಲಿಸಲಿರುವ ಎನ್​ಡಿಪಿಎಸ್...

ಕರ್ನಾಟಕ ಬಂದ್; ಏನೇನಿರತ್ತೆ..?ಏನಿರಲ್ಲ ?

 ಬೆಂಗಳೂರು: ಸರ್ಕಾರ ಅಂಗೀಕಾರ ಮಾಡಿರುವ ಭೂ ಸುಧಾರಣಾ ಮತ್ತು ಎಪಿಎಂಸಿ ಕಾಯ್ದೆ ವಿರೋಧಿಸಿ ಇಂದು (ಸೆಪ್ಟೆಂಬರ್​ 28) ರೈತಪರ ಸಂಘಟನೆಗಳು ಬಂದ್​ಗೆ ಕರೆ ನೀಡಿವೆ. ಈ ಕರ್ನಾಟಕ ಬಂದ್​ ನಿಮಿತ್ತ ಇಂದು...

‘ಸುರೇಶ ಅಂಗಡಿ ನಿರ್ಲಕ್ಷ್ಯ ವಹಿಸದಿದ್ದರೆ ಬದುಕುತ್ತಿದ್ದರೇನೋ…’: ಜಗದೀಶ...

   ಬೆಳಗಾವಿ: 'ಸುರೇಶ ಅಂಗಡಿ ಅವರು ಮಾಸ್ಕ್ ಹಾಕುವುದರಲ್ಲಿ ನಿರ್ಲಕ್ಷ್ಯ ವಹಿಸಿದರು. ಯಾವುದೇ ಚಟವಿಲ್ಲದ ನನಗೆ ಏನೂ ಆಗುವುದಿಲ್ಲ ಎಂಬ ಅತಿಯಾದ ಆತ್ಮವಿಶ್ವಾಸ ಅವರಲ್ಲಿತ್ತು....

Sandalwood Drug Scandal: ಸಿಸಿಬಿ ತನಿಖೆ ಚುರುಕು; ಇಂದ್ರಜಿತ್ ಗೆ ಮತ್ತೆ ನೋಟೀಸ್ ಸಾಧ್ಯತೆ

ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ಕೆಲ ನಟ ನಟಿಯರು ಡ್ರಗ್ಸ್ ಸೇವನೆ ಆರೋಪದ ಹಿನ್ನಲೆ ಸಿಸಿಬಿ ಅಧಿಕಾರಿಗಳು ತನಿಖೆಯನ್ನ ಚುರುಕುಗೊಳಿಸಿದ್ದಾರೆ.. ಈ ನಡುವೆ ಇಂದ್ರಜಿತ್ ವಿಚಾರಣೆ ವೇಳೆ ಕೊಟ್ಟ ದಾಖಲೆಗಳು ಮತ್ತು 15 ಮಂದಿ ನಟ ನಟಿಯರ ಪೂರ್ವಾಪರ ಪರಿಶೀಲನೆಯಲ್ಲಿ ನಿರತರಾಗಿದ್ದಾರೆ. ಸಿಸಿಬಿಯಿಂದ ಆ 15 ಮಂದಿ ನಟನಟಿಯರಿಗೆ ನೋಟೀಸ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗೆಯೇ, ಸ್ಪಷ್ಟ ಪುರಾವೆಗಳನ್ನ ಒದಗಿಸುವಂತೆ ಕೋರಿ ಇಂದ್ರಜಿತ್ ಲೋಕೇಶ್ ಅವರಿಗೂ ಸಿಸಿಬಿ ಪೊಲೀಸರು ಮತ್ತೊಮ್ಮೆ ನೋಟೀಸ್ ನೀಡಲು ನಿರ್ಧರಿಸಿದ್ದಾರೆನ್ನಲಾಗಿದೆ.

ಮೊನ್ನೆ ವಿಚಾರಣೆಗೆ ಹಾಜರಾಗಿ 15 ಮಂದಿಯ ಹೆಸರು ದಾಖಲಿಸಿದ್ದ ನಿರ್ದೇಶಕ ಇಂದ್ರಜಿತ್, ಚಂದನವನದ ಡ್ರಗ್ಸ್ ಜಾಲದ ಬಗ್ಗೆ ಕೆಲ ದಾಖಲೆ ನೀಡಿ ಹೆಸರು ಹೇಳಿದ್ದರು. ಇಂದ್ರಜಿತ್ ಲಂಕೇಶ್ ನೀಡಿರುವ ಕೆಲ ದಾಖಲೆಗಳನ್ನು ಇಟ್ಟುಕೊಂಡು ತನಿಖೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ. ಮೊನ್ನೆಯಷ್ಟೇ ಇಂದ್ರಜಿತ್ ವಿಚಾರಣೆ ಬಳಿಕ, ಡಿಸಿಪಿ, ಎಸಿಪಿ, ಇನ್ಸ್ ಪೆಕ್ಟರ್ಗಳ ಜೊತೆ ಸಭೆ ನಡೆಸಿದ್ದ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಮತ್ತೆ ಚರ್ಚೆ ನಡೆಸಿದ್ದಾರೆ. ಡಿಸಿಪಿ ರವಿಕುಮಾರ್, ಎಸಿಪಿ ಗೌತಮ್ ಮತ್ತು ಪ್ರಕರಣದ ತನಿಖಾಧಿಕಾರಿ ಬೊಳೇತ್ತಿನ್ ಸಭೆಯಲ್ಲಿ ಭಾಗಿಯಾಗಿದ್ದು, ತನಿಖೆ ಆಯಾಮದ ಬಗ್ಗೆ ಚರ್ಚಿಸಲಾಗಿದೆ. ಇಂದ್ರಜಿತ್ ಲಂಕೇಶ್ ನೀಡಿರುವ ಆ ಹದಿನೈದು ಮಂದಿ ನಟ ನಟಿಯರಿಗೆ ಸಂಬಂಧಿಸಿದ ಸಾಕ್ಷಿ ಪ್ರಮುಖವಾಗಿರುತ್ತದೆ. ಜೊತೆಗೆ ಹದಿನೈದು ಮಂದಿಗೂ ನೊಟೀಸ್ ನೀಡುವ ಬಗ್ಗೆ ಮೀಟಿಂಗ್ ನಲ್ಲಿ ಚರ್ಚೆಯಾಗಿದೆ. ಪ್ರಕರಣ ತನಿಖೆಯ ಆಯಾಮ ಮತ್ತು ಎನ್ಸಿಬಿ ಬಳಿ ಮಾಹಿತಿ ಪಡೆಯುವ ಕುರಿತು ಚರ್ಚಿಸಿದ್ದು, ಪ್ರಕರಣ ಸಂಬಂಧ ವಿಶೇಷ ತಂಡ ರಚಿಸಿ, ಸಾಕ್ಷಿಗಳನ್ನ ಪರಿಶೀಲನೆ ತನಿಖೆ ಮುಂದುವರೆಸುವ ಕುರಿತಾಗಿ ಮಾತುಕತೆ ನಡೆಸಿದ್ದಾರೆ.

ಇದಲ್ಲದೆ ಸಿಸಿಬಿ ಪೊಲೀಸರ ಬಳಿ ದಾಖಲೆ ಸಲ್ಲಿಸುವ ವೇಳೆ ಇಂದ್ರಜಿತ್ ತಮ್ಮನ್ನು ಯಾವುದೇ ರೀತಿಯಲ್ಲಿ ಸಾಕ್ಷಿದಾರನನ್ನಾಗಿಸದಂತೆ ಮನವಿ ಮಾಡಿದ್ದಾರೆನ್ನಲಾಗಿದೆ. ನಾನು ಕೇವಲ ಮಾಹಿತಿ ಹಂಚಿಕೆದಾರ ಅಷ್ಟೆ, ನಾನು ಸಾಕ್ಷಿದಾರನಲ್ಲ. ನನ್ನ ಬಳಿ ಇರುವ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ನೀವು ಈ ಮಾಹಿತಿಯನ್ನಾಧರಿಸಿ ಕಾರ್ಯಾಚರಣೆ ನಡೆಸಬಹುದು. ನನ್ನನ್ನು ಸಾಕ್ಷಿದಾರನನ್ನಾಗಿಸದಿರಿ ಎಂದು ಇಂದ್ರಜಿತ್ ಲಂಕೇಶ್ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಇದರ ಬೆನ್ನಲ್ಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಾಗಿದೆ. ಬೆಂಗಳೂರು ಕಮೀಷನರ್ ಕಮಲ್ ಪಂಥ್ ನೇತೃತ್ವದಲ್ಲಿ ಸಭೆ ನಡೆಸಿದ್ದು, ಸಭೆಯಲ್ಲಿ ಡ್ರಗ್ಸ್ ಕಂಟ್ರೋಲ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಲಾಗಿದೆ. ಈಗಾಗಲೇ ಸರ್ಕಾರದಿಂದ ಡ್ರಗ್ಸ್ ನಿರ್ಮೂಲನೆಗೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ಇದೇ ಪ್ರಮುಖ ವಿಚಾರವಾಗಿ ಚರ್ಚೆ ನಡೆದಿದೆ. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದು, ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

ನಿನ್ನೆ ಸಿಸಿಬಿ ಕಚೇರಿಯಲ್ಲಿ ಇಂದ್ರಜಿತ್ ಲಂಕೇಶ್ ನೀಡಿರುವ ಮಾಹಿತಿಯ ಬಗ್ಗೆಯೂ ಚರ್ಚೆ ನಡೆದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹಿನ್ನೆಲೆಯಲ್ಲಿ ತನಿಖೆಯ ವರದಿಯನ್ನ ಕಮಲ್ ಪಂಥ್ ಅವರಿಗೆ ಸಭೆಯಲ್ಲಿ ನೀಡಿದ್ದಾರೆ. ಒಟ್ಟಿನಲ್ಲಿ ದಿನಕ್ಕೊಂದು ಆಯಾಮ ಪಡೆದುಕೊಳ್ತಿದ್ದು, ತನಿಖೆಯ ಬಳಿಕ ಸ್ಪಷ್ಟತೆ ಸಿಗಲಿದೆ.

TRENDING