Saturday, September 19, 2020
Home ದೆಹಲಿ ‘ಮಾನವ ನಿರ್ಮಿತ ದುರಂತಕ್ಕೆ ದೇವರನ್ನು ದೂಷಿಸಬೇಡಿ’;ನಿರ್ಮಲಾ ಸೀತಾರಾಮನ್ ಗೆ ಚಿದಂಬರಂ ಅಗ್ರಹ

ಇದೀಗ ಬಂದ ಸುದ್ದಿ

ಆಹಾರದಿಂದ ‘ಕೊರೊನಾವೈರಸ್’ ಹರಡಬಹುದೇ?

COVID-19 ಆಹಾರದಿಂದ ಹರಡುವ ಬಗ್ಗೆ ಯಾವುದೇ ನಿರ್ಣಾಯಕ ಪುರಾವೆಗಳಿಲ್ಲ, COVID-19 ಪೀಡಿತ ದೇಶಗಳಿಂದ ಭಾರತಕ್ಕೆ ಆಮದು ಮಾಡಿಕೊಳ್ಳುವ ಆಹಾರವು ಮಾನವ ಬಳಕೆಗೆ ಸುರಕ್ಷಿತವಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ...

ಕೊಡಗಿನಲ್ಲಿ ರೆಡ್ ಅಲರ್ಟ್ ಘೋಷಣೆ

ಭಾರಿ ಮಳೆಯಿಂದ ತತ್ತರಿಸಿದ್ದ ಕೊಡಗಿಗೆ ಮತ್ತೆ ವರುಣಾಘಾತವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ರೆಡ್​ ಆಲರ್ಟ್​ ಘೋಷಣೆ ಮಾಡಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುತ್ತಿದ್ದು,...

ಕಲಬುರ್ಗಿ ಯಲ್ಲಿ ಕೊರೊನಾಗೆ ಮತ್ತೆ 6 ಜನ...

 ಕಲಬುರ್ಗಿ: ಕೋವಿಡ್-19 ಸೋಂಕಿನಿಂದ ಜಿಲ್ಲೆಯಲ್ಲಿ ಮತ್ತೆ 6 ಜನ ನಿಧನರಾಗಿರುವ ಬಗ್ಗೆ ಶುಕ್ರವಾರ ವರದಿಯಾಗಿದ್ದು, ಇದರಿಂದ ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ 254ಕ್ಕೆ ಏರಿಕೆಯಾಗಿದೆ. ತೀವ್ರ...

ನಾಗಪುರ : ಆರೆಸ್ಸೆಸ್ ಮುಖ್ಯಸ್ಥ ಸೇರಿ 9...

 ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್​ಎಸ್​ಎಸ್​)ದ ಶಕ್ತಿ ಕೇಂದ್ರ ನಾಗಪುರದ ಕೇಂದ್ರ ಕಚೇರಿಯಲ್ಲಿ ಕನಿಷ್ಠ 9 ಹಿರಿಯ ನಾಯಕರಿಗೆ ಕೊರೋನಾ ಸೋಂಕು ತಗುಲಿದೆ. ಕೋವಿಡ್ 19 ಟೆಸ್ಟ್ ಪಾಸಿಟಿವ್ ಬಂದ ಕಾರಣ ಅವರನ್ನು...

ದೇಶದಲ್ಲಿ ಸೈಬರ್ ಕ್ರೈಂ ಶೇ 500ರಷ್ಟು ಹೆಚ್ಚಳ:...

ನವದೆಹಲಿ: ಭಾರತದಲ್ಲಿ ಸೈಬರ್ ಕ್ರೈಂ ಪ್ರಮಾಣ ಶೇಕಡ 500 ಹೆಚ್ಚಳ ಕಂಡಿದೆ. ಇದಕ್ಕೆ ಸೀಮಿತ ಜಾಗೃತಿ ಮತ್ತು ಕಳಪೆ ಸೈಬರ್​ ಹೈಜೀನ್ ಕಾರಣ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್​ಎಸ್​ಎ) ಅಜಿತ್...

‘ಮಾನವ ನಿರ್ಮಿತ ದುರಂತಕ್ಕೆ ದೇವರನ್ನು ದೂಷಿಸಬೇಡಿ’;ನಿರ್ಮಲಾ ಸೀತಾರಾಮನ್ ಗೆ ಚಿದಂಬರಂ ಅಗ್ರಹ

ನವ ದೆಹಲಿ: ದೇಶದ ಆರ್ಥಿಕತೆ ಸಂಪೂರ್ಣವಾಗಿ ಕುಸಿತ ಕಂಡಿದೆ. ಭಾರತದ ಜಿಡಿಪಿ ಶೇ.-24ಕ್ಕೆ ತಲುಪಿದೆ. ಆದರೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಹಿಂಜರಿತಕ್ಕೆ ಕೊರೋನಾ ವೈರಸ್‌ ಕಾರಣ, “ಆಕ್ಟ್‌ ಆಫ್‌ ಗಾಡ್‌” ಅಂದರೆ ದೇವರು ಕಾರಣ ಎಂದು ಹೇಳುತ್ತಿದ್ದಾರೆ. ಆದರೆ, “ಮಾನವ ನಿರ್ಮಿತ ದುರಂತಕ್ಕೆ ದೇವರನ್ನು ದೂಷಿಸಬೇಡಿ” ಎಂದು ಚಿದಂಬರಂ ಕಿಡಿಕಾರಿದ್ದಾರೆ.

ದೇಶದ ಜಿಡಿಪಿ ಸರ್ವಕಾಲಿಕ ದಾಖಲೆ ಮಟ್ಟಕ್ಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ನಡೆದ ಜಿಎಸ್‌ಟಿ ಸಭೆಯಲ್ಲಿ ರಾಜ್ಯಗಳಿಗೆ ಹೆಚ್ಚುವರಿ ತೆರಿಗೆಯ ಪಾಲನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳುವ ಸಂದರ್ಭದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್‌ “ದೇಶದ ಆರ್ಥಿಕತೆ ಕುಸಿತಕ್ಕೆ ದೇವರೆ ಕಾರಣ” ಎಂಬ ರೀತಿಯ ಹೇಳಿಕೆ ನೀಡಿದ್ದರು.

ಖಾಸಗಿ ಚಾನಲ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪಿ. ಚಿದಂಬರಂ, “ವಾಸ್ತವವಾಗಿ, ನೀವು ದೇವರಿಗೆ ಕೃತಜ್ಞತೆ ಸಲ್ಲಿಸಬೇಕು. ದೇವರು ದೇಶದ ರೈತರನ್ನು ಆಶೀರ್ವದಿಸಿದ್ದಾನೆ. ಸಾಂಕ್ರಾಮಿಕ ರೋಗವು ಒಂದು ನೈಸರ್ಗಿಕ ವಿಕೋಪ ನಿಜ. ಆದರೆ, ನೀವು ಈ ಸಾಂಕ್ರಾಮಿಕ ರೋಗದಂತಹ ನೈಸರ್ಗಿಕ ವಿಕೋಪವನ್ನೂ ಸಹ ಮಾನವ ನಿರ್ಮಿತ ವಿಪತ್ತಿನೊಂದಿಗೆ ಸಂಯೋಜಿಸುತ್ತಿದ್ದೀರಿ” ಎಂದು ದೂರಿದ್ದಾರೆ.

“2019-20ರ ಅಂತ್ಯದ ವೇಳೆಗೆ ಒಟ್ಟು ದೇಶೀಯ ಉತ್ಪಾದನೆಯು ಶೇ.20 ರಷ್ಟು ಕುಸಿದಿತ್ತು. ಆದರೆ ಕೃಷಿ, ಅರಣ್ಯ ಮತ್ತು ಮೀನುಗಾರಿಕೆು ಕ್ಷೇತ್ರ ಮಾತ್ರ ಶೇ.3.4 ರಷ್ಟು ಏರಿಕೆ ಕಂಡಿತ್ತು. ಆರ್ಥಿಕ ಕುಸಿತಕ್ಕೆ ದೇವರನ್ನು ದೂಷಿಸುವ ನಿರ್ಮಲಾ ಸೀತಾರಾಮನ್, ಕೃಷಿಕರು ಮತ್ತು ಅವರಿಗೆ ಕೃಪೆ ತೋರಿದ ದೇವರನ್ನು ಶ್ಲಾಘಿಸಬೇಕು” ಎಂದು ಚಿದಂಬರಂ ಹೇಳಿದ್ದಾರೆ.

TRENDING