Friday, September 25, 2020
Home ಕೋವಿಡ್-19 ದಾವಣಗೆರೆ : ಜಿಲ್ಲೆಯಲ್ಲಿ 255 ಮಂದಿಗೆ ಸೋಂಕು, ಆರು ಜನ ಬಲಿ

ಇದೀಗ ಬಂದ ಸುದ್ದಿ

ದೆಹಲಿ ಡಿಸಿಎಂ ಸಿಸೋಡಿಯಾರಿಗೆ ಕೊರೊನಾ ಜೊತೆ ಡೆಂಗ್ಯೂ...

ಕೊರೊನಾವೈರಸ್ ಸೋಂಕು ತಗುಲಿರುವ ಹಿನ್ನೆಲೆ ನವದೆಹಲಿಯ ಲೋಕ ನಾಯಕ ಜಯಪ್ರಕಾಶ್ ಆಸ್ಪತ್ರೆಗೆ ದಾಖಲಾಗಿರುವ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಡೆಂಗ್ಯೂ ಸೋಂಕು ಕೂಡಾ ತಗುಲಿರುವ ಬಗ್ಗೆ ತಿಳಿದು ಬಂದಿದೆ.

ರಾಜ್ಯ ಪೊಲೀಸ್‌ ಇಲಾಖೆಯಲ್ಲಿ 20,203 ಹುದ್ದೆ ಖಾಲಿ:...

 ಬೆಂಗಳೂರು: ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ವಿವಿಧ ಶ್ರೇಣಿಯ 20,203 ಹುದ್ದೆಗಳು ಖಾಲಿ ಇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ವಿಧಾನ ಪರಿಷತ್‌ನಲ್ಲಿ ಗುರುವಾರ ಜೆಡಿಎಸ್‌...

ಬ್ಯಾಂಕ್ ಖಾತೆಯಲ್ಲಿ ವಂಚನೆಯಾದ್ರೆ ತಕ್ಷಣ ಏನು ಮಾಡಬೇಕು.?...

 ಕೊರೊನಾ ಮಧ್ಯೆ ವಂಚನೆ ಪ್ರಕರಣಗಳು ಹೆಚ್ಚಾಗ್ತಿವೆ. ಇದನ್ನು ತಪ್ಪಿಸಲು ಆರ್‌ಬಿಐ ಸಾಮಾನ್ಯ ಜನರಿಗೆ ನಿರಂತರವಾಗಿ ಮಾಹಿತಿ ನೀಡುತ್ತಿದೆ. ಇದರ ಹೊರತಾಗಿಯೂ ಖಾತೆಯಲ್ಲಿರುವ ಹಣ ಕಳ್ಳತನವಾದ್ರೆ ಏನು ಮಾಡಬೇಕು ಎಂಬ ಬಗ್ಗೆ...

ಕೋವಿಡ್ 19 ಪರಿಹಾರ ಧನ : ಚಾಲಕರಿಗೆ...

ಬೆಂಗಳೂರು: ಲಾಕ್‌ಡೌನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರಿಗೆ ಘೋಷಿಸಿರುವ 5,000 ರೂ. ನೆರವು ಪಡೆಯಲು ಮತ್ತೂಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ಭರವಸೆಯನ್ನು ಸರಕಾರ ನೀಡಿದೆ.

ಡ್ರಗ್ಸ್ ಪ್ರಕರಣ : ನಟಿ ಸಂಜನಾ ಗಲ್ರಾನಿ...

ಬೆಂಗಳೂರು: ಡ್ರಗ್ಸ್ ಜಾಲ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಸೇರಿರುವ ನಟಿ ಸಂಜನಾ ಗಲ್ರಾನಿ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸೆ. 28ಕ್ಕೆ ಮುಂದೂಡಲಾಗಿದೆ. ಸಂಜನಾ ಪರ ವಕೀಲರು...

ದಾವಣಗೆರೆ : ಜಿಲ್ಲೆಯಲ್ಲಿ 255 ಮಂದಿಗೆ ಸೋಂಕು, ಆರು ಜನ ಬಲಿ

ದಾವಣಗೆರೆ: ಜಿಲ್ಲಾ ಚಿಗಟೇರಿ ಆಸ್ಪತ್ರೆಯ 10 ಸಿಬ್ಬಂದಿ, ಬಡಾವಣೆ ಪೊಲೀಸ್‌ ಠಾಣೆಯ ಐವರು, ಕೆಎಸ್‌ಆರ್‌ಟಿಸಿಯ ಒಬ್ಬರು, ಬಾಪೂಜಿಯ ಒಬ್ಬರು ಸೇರಿ ಜಿಲ್ಲೆಯಲ್ಲಿ 255 ಮಂದಿಗೆ ಕೊರೊನಾ ಇರುವುದು ಸೋಮವಾರ ದೃಢಪಟ್ಟಿದೆ. ಆರು ಮಂದಿ ಮೃತಪಟ್ಟಿದ್ದಾರೆ.

ಹಳೇ ಕುಂದವಾಡದ 69 ವರ್ಷದ ವೃದ್ಧೆ, ಭಗತ್‌ಸಿಂಗ್‌ ನಗರದ 74 ವರ್ಷದ ವೃದ್ಧ, ಚನ್ನಗಿರಿ ಲಕ್ಷ್ಮೀಸಾಗರದ 65 ವರ್ಷದ ವೃದ್ಧ ತೀವ್ರ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ನಿಟುವಳ್ಳಿಯ 53 ವರ್ಷದ ಪುರುಷ ಮತ್ತು ಎಸ್‌ಎಸ್‌ ಬಡಾವಣೆಯ 68 ವರ್ಷದ ವೃದ್ಧೆ ಮಧುಮೇಹ, ರಕ್ತದೊತ್ತಡ, ಮೂತ್ರಪಿಂಡದ ಸಮಸ್ಯೆ, ಉಸಿರಾಟದ ತೊಂದರೆಯಿಂದ ನಿಧನರಾಗಿದ್ದಾರೆ. ರಂಗನಾಥ ಬಡಾವಣೆಯ 79 ವರ್ಷದ ಮಹಿಳೆ ಅಧಿಕ ರಕ್ತದೊತ್ತಡ ಮತ್ತು ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ.

13 ಬಾಲಕರು, 12 ಬಾಲಕಿಯರು, 27 ವೃದ್ಧರು, 27 ವೃದ್ಧೆಯರಿಗೆ ಸೋಂಕು ತಗುಲಿದೆ. 18ರಿಂದ 59 ವರ್ಷದ ವರೆಗಿನ 103 ಪುರುಷರಿಗೆ, 73 ಮಹಿಳೆಯರಿಗೆ ಕೊರೊನಾ ಬಂದಿದೆ.

ದಾವಣಗೆರೆ ತಾಲ್ಲೂಕಿನಲ್ಲಿ 134 ಮಂದಿಗೆ ಸೋಂಕು ಬಂದಿದೆ. ಎಲೆಬೇತೂರಿನ ಏಳು ಮಂದಿ, ಹೊನ್ನೂರಿನ ನಾಲ್ವರು, ಕೆಂಗನಹಳ್ಳಿ, ಕೊಡಗನೂರು, ಸಾಲಕಟ್ಟೆಯ ತಲಾ ಇಬ್ಬರು, ಹೊಸಬಿಸಲೇರಿ, ಕಲಪನಹಳ್ಳಿ, ಕೊಂಡಜ್ಜಿ, ಕುಕ್ಕವಾಡ, ಲೋಕಿಕೆರೆ, ಮಾಗನಹಳ್ಳಿ, ಮಿಟ್ಲಕಟ್ಟೆ, ಜ್ಯೋತಿಪುರ, ಕಡ್ಲೇಬಾಳ್‌ನ ಒಬ್ಬೊಬ್ಬರು ಹೀಗೆ 26 ಮಂದಿ ಗ್ರಾಮೀಣ ಪ್ರದೇಶದವರು. 108 ಮಂದಿ ಮಹಾನಗರ ಪಾಲಿಕೆಯ ವ್ಯಾಪ್ತಿಯವರಾಗಿದ್ದಾರೆ. ಎಸ್‌ಎಸ್‌ ಬಡಾವಣೆ ಎಂಸಿಸಿ ‘ಎ’ ಬ್ಲಾಕ್‌, ಜಯನಗರಗಳಲ್ಲಿ ಐದಕ್ಕಿಂತ ಅಧಿಕ ಪ್ರಕರಣಗಳು ಕಂಡುಬಂದಿವೆ.

ಚನ್ನಗಿರಿ ತಾಲ್ಲೂಕಿನಲ್ಲಿ 38, ಜಗಳೂರು ತಾಲ್ಲೂಕಿನಲ್ಲಿ 26, ಹೊನ್ನಾಳಿ-ನ್ಯಾಮತಿ ತಾಲ್ಲೂಕಿನಲ್ಲಿ 26, ಹರಿಹರ ತಾಲ್ಲೂಕಿನಲ್ಲಿ 23 ಮಂದಿಗೆ ಕೊರೊನಾ ಬಂದಿದೆ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಾವೇರಿ ಜಿಲ್ಲೆ ರಾಣೆ ಬೆನ್ನೂರಿನ ನಾಲ್ವರು, ಬಳ್ಳಾರಿ ಜಿಲ್ಲೆ ಹರಪನಹಳ್ಳಿಯ ಒಬ್ಬರು, ಚಿಕ್ಕಮಗಳೂರು, ಬೆಂಗಳೂರು, ಚಿತ್ರದುರ್ಗದ ಒಬ್ಬರಿಗೆ ಸೋಂಕು ಇರುವುದು ಖಚಿತವಾಗಿದೆ.

ಸೋಮವಾರ 371 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 91 ವರ್ಷದವರು ಸೇರಿ 55 ವೃದ್ಧರು, 26 ವೃದ್ಧೆಯರು, 18 ಬಾಲಕರು, 7 ಬಾಲಕಿಯರೂ ಅದರಲ್ಲಿ ಸೇರಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 9486 ಮಂದಿಗೆ ಕೊರೊನಾ ಬಂದಿದೆ. ಅದರಲ್ಲಿ 7003 ಮಂದಿ ಗುಣಮುಖರಾಗಿದ್ದಾರೆ. 192 ಮಂದಿ ಮೃತಪಟ್ಟಿದ್ದಾರೆ. 2292 ಸಕ್ರಿಯ ಪ್ರಕರಣಗಳಿವೆ. ಏಳು ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

TRENDING