Monday, September 21, 2020
Home ಕೋವಿಡ್-19 ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೆಡಿಕಲ್ ಆಕ್ಸಿಜನ್ ಪ್ಲ್ಯಾಂಟ್ ನಿರ್ಮಾಣ

ಇದೀಗ ಬಂದ ಸುದ್ದಿ

ಇಂದು ಭಾರತ-ಚೀನಾ ನಡುವೆ ಮಹತ್ವದ ಸಭೆ

ಭಾರತ-ಚೀನಾ ನಡುವಿನ ಗಡಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂದು ಭಾರತ-ಚೀನಾ ಸೇನೆಗಳ ನಡುವೆ ಆರನೇ ಹಂತದ ಮಹತ್ವದ ಮಾತುಕತೆ ನಡೆಯಲಿದೆ. ಗಡಿಯಲ್ಲಿರುವ ಚುಶುಲ್ ಮತ್ತು ಮೊಲ್ವೊ ಮೀಟಿಂಗ್...

ಬಿಜೆಪಿ ಶಾಸಕ ಪಿ. ರಾಜೀವ್ ಹೋಂ ಕ್ವಾರಂಟೈನ್

ಬೆಳಗಾವಿ ಜಿಲ್ಲೆಯ ಕುಡಚಿ ಕ್ಷೇತ್ರದ ಬಿಜೆಪಿ ಶಾಸಕ ಪಿ. ರಾಜೀವ್ ಹೋಂ ಕ್ವಾರಂಟೈನ್‌ ಆಗಿದ್ದಾರೆ. ಶಾಸಕರ ತಂದೆಗೆ ಕೋವಿಡ್ ಸೋಂಕು ತಗುಲಿದ್ದು ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ಲಡಾಖ್‌ ಗಡಿ ಸಂಘರ್ಷ: ಪೂರ್ವ ಗಡಿ ಪ್ರದೇಶಗಳಲ್ಲಿ...

 ನವದೆಹಲಿ: ಪೂರ್ವ ಲಡಾಖ್‌ ಗಡಿ ಪ್ರದೇಶದಲ್ಲಿ ವ್ಯೂಹಾತ್ಮಕವಾಗಿ ಮುಖ್ಯವಾಗಿರುವ 20 ಪರ್ವತ ಪ್ರದೇಶಗಳ ಮೇಲೆ ಭಾರತೀಯ ಸೇನೆ ಪ್ರಾಬಲ್ಯ ಹೆಚ್ಚಿಸಿದೆ. ಪಾಂಗಾಂಗ್ ಸರೋವರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ಇರಿಸಿದೆ...

ಕೇರಳದ ಕ್ವಾರಿಯಲ್ಲಿ ಸ್ಫೋಟ: ಇಬ್ಬರು ವಲಸೆ ಕಾರ್ಮಿಕರ...

 ಎರ್ನಾಕುಲಂ: ಕೇರಳದ ಕ್ವಾರಿಯೊಂದರಲ್ಲಿ ಸಂಭವಿಸಿದ ಸ್ಟೋಟದಲ್ಲಿ ಕರ್ನಾಟಕ, ತಮಿಳುನಾಡು ಮೂಲದ ಇಬ್ಬರು ವಲಸೆ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ. ಕೇರಳದ ಎರ್ನಾಕುಲಂನ ಮಲಯತ್ತೂರಿನಲ್ಲಿರುವ ಕ್ವಾರಿಯಲ್ಲಿ ಈ...

ಕೊಡಗಿನಲ್ಲಿ ಇನ್ನು ಎರಡು ದಿನ ಭಾರೀ...

ಕೊಡಗು : ರಾಜ್ಯದಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳು ಮಳೆಗೆ ಸಂಪೂರ್ಣ ನಲುಗಿ ಹೋಗಿವೆ. ಕೊಡಗು ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಇನ್ನೂ ಎರಡು ದಿನ ರೆಡ್​...

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೆಡಿಕಲ್ ಆಕ್ಸಿಜನ್ ಪ್ಲ್ಯಾಂಟ್ ನಿರ್ಮಾಣ

ಶಿವಮೊಗ್ಗ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸೋಂಕಿತರ ಸಂಖ್ಯೆ 7 ಸಾವಿರ ಗಡಿ ದಾಟಿದೆ. ಕೋವಿಡ್​ನಿಂದ ಮೃತಪಟ್ಟದರ ಸಂಖ್ಯೆ ನೂರರ ಗಡಿದಾಟಿದೆ. ಸೋಂಕನ್ನು ತಡೆಗಟ್ಟಲು ಜಿಲ್ಲಾಡಳಿತ ಪ್ರಯತ್ನಿಸುತ್ತಲೇ ಇದೆ. ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ಅವಶ್ಯಕವಾಗಿದ್ದ, ಆಕ್ಸಿಜನ್ ಪ್ಲ್ಯಾಂಟ್ ನಿರ್ಮಾಣ ಮಾಡಲಾಗಿದೆ. ಈ ಮೂಲಕ ಸೋಂಕಿತರಿಗೆ ಅವಶ್ಯಕವಾಗಿದ್ದ ಆಕ್ಸಿಜನ್ ಕೊರತೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ.

ಶಿವಮೊಗ್ಗದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ಪ್ರತಿ ನಿತ್ಯ ಪಾಸಿಟಿವ್ ಪ್ರಕರಣಗಳ ಸಂಖ್ಯೆ ನೂರರ ಗಡಿ ದಾಟುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಕೊರೋನಾ ತಡೆಗಟ್ಟಲು ಜಿಲ್ಲಾಡಳಿತ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಜೊತೆಗೆ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸಹ ಕೆಲವೊಂದು ಕ್ರಮ ಕೈಗೊಳ್ಳಲಾಗುತ್ತಿದೆ. ಅದರ ಒಂದು ಭಾಗವಾಗಿ ಮೆಡಿಕಲ್ ಆಕ್ಸಿಜನ್ ಪ್ಲಾಂಟ್ ಅಳವಡಿಸಿ, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಜನರ ಜೊತೆಗೆ ನಾವಿದ್ದೇವೆ ಎಂಬ ಅಭಯ ನೀಡಿದೆ. 

ಪ್ರಾಕ್ಸಿಯಾರ್ ಇಂಡಿಯಾ ಎಂದು ಖಾಸಗಿ ಸಂಸ್ಥೆಗೆ 10 ವರ್ಷಗಳ ಟೆಂಡರ್ ನೀಡಲಾಗಿದ್ದು, ಆಕ್ಸಿಜನ್ ಸರಬರಾಜು ಪ್ಲ್ಯಾಂಟ್ ಕಾರ್ಯಾರಂಭ ಮಾಡಿದೆ. ಈ ಒಂದು ಟ್ಯಾಂಕ್ 13 ಕೆ.ಎಲ್.ಡಿ ಸಾಮರ್ಥ್ಯದ ಮೆಡಿಕಲ್ ಆಕ್ಸಿಜನ್ ಟ್ಯಾಂಕ್ ಆಗಿದೆ. ಮೆಗ್ಗಾನ್ ಆಸ್ಪತ್ರೆಗೆ ಬೇಕಾಗುವ ಆಕ್ಸಿಜನ್ ನ ಸಂಪೂರ್ಣ ಪೂರೈಕೆ ಮಾಡಲು ಇದರಿಂದ ಸಾಧ್ಯವಾಗಲಿದೆ. ಕೊರೋನಾ ಪೀಡಿತರ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆಕ್ಸಿಜನ್ ಲಭ್ಯತೆಯನ್ನು ಖಾತ್ರಿ ಪಡಿಸಲು ಪ್ಲಾಂಟ್ ಅಳವಡಿಸಲಾಗಿದೆ.

ಕೊರೋನಾ ತೀವ್ರಗೊಂಡಂತೆ ಮೂಲ ತಯಾರಿಕಾ ಸಂಸ್ಥೆಗಳಿಂದ ಮೆಡಿಕಲ್ ಆಕ್ಸಿಜನ್ ಕೊರತೆ ಕಂಡು ಬಂದಿತ್ತು. ಆಸ್ಪತ್ರೆ ಆವರಣದಲ್ಲಿ ಆಕ್ಸಿಜನ್ ಪ್ಲ್ಯಾಂಟ್ ಲಭ್ಯವಿರುವುದರಿಂದ ಇನ್ನು ಮುಂದೆ ಆಕ್ಸಿಜನ್​ಗೆ ಯಾವುದೇ ಕೊರತೆ ಉಂಟಾಗುವುದಿಲ್ಲ. ಆಕ್ಸಿಜನ್ ಅಗತ್ಯವಿರುವ ಕೊರೋನಾ ಪಾಸಿಟಿವ್ ವ್ಯಕ್ತಿಗಳಿಗೆ ಹೆಚ್.ಎಫ್.ಎನ್.ಸಿ ಮತ್ತು ವೆಂಟಿಲೇಟರ್ ಉಪಕರಣಗಳನ್ನು ಬಳಸಲಾಗುತ್ತಿದೆ. ಅವುಗಳಿಗೆ ಇಲ್ಲಿಂದಲೇ ಈಗ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಯಾವುದೇ ತೊಂದರೆಯಾಗದಂತೆ ನಿರ್ವಹಣೆ ಮಾಡಲಾಗುತ್ತಿದೆ.

ಮೆಗ್ಗಾನ್ ಆಸ್ಪತ್ರೆಯು 950 ಹಾಸಿಗೆ ಸಾಮರ್ಥ್ಯ ಹೊಂದಿದ್ದು, ಕೊರೋನಾ ಪೀಡಿತರಿಗೆ ಸಮರ್ಪಕ ಚಿಕಿತ್ಸೆಯನ್ನು ನೀಡಲು ಇದರಿಂದ ಅನುಕೂಲವಾಗಲಿದೆ. ಒಂದು ಬಾರಿ ಈ ಟ್ಯಾಂಕ್ ಭರ್ತಿಯಾದರೆ ಒಂದು ವಾರಕ್ಕೆ ಬೇಕಾಗುವ ಆಕ್ಸಿಜನ್ ಈ ಟ್ಯಾಂಕ್ ನಿಂದ ಪೂರೈಕೆ ಮಾಡಬಹುದಾಗಿದೆ. ಇದೇ ಪ್ಲ್ಯಾಂಟ್ ನಿಂದ ಸಂಪೂರ್ಣ ಮೆಗ್ಗಾನ್ ಆಸ್ಪತ್ರೆಗೆ ಆಕ್ಸಿಜನ್ ಪೂರೈಕೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಒಟ್ಟಾರೆ ಅಧಿಕಾರಿಗಳ ಈ ಕಾರ್ಯಕ್ಕೆ ಜಿಲ್ಲೆಯ ಜನರು ಸಹ ಶ್ಲಾಘನೆ ಮಾಡಿದ್ದಾರೆ.  

TRENDING