Monday, September 21, 2020
Home Exclusive ಕನ್ನಡಿಗರು ಹಾಗೂ ಮಾರಾಠಿಗರ ಮಧ್ಯ ದ್ವೇಷ ಹಚ್ಚಲು ಯತ್ನ

ಇದೀಗ ಬಂದ ಸುದ್ದಿ

ಶೀಘ್ರದಲ್ಲಿಯೇ ರಫೇಲ್ ಜೆಟ್ ಹಾರಿಸಲಿದ್ದಾರೆ ಮಹಿಳಾ ಪೈಲಟ್

 ನವದೆಹಲಿ, ಸೆ 21: ಅಂಬಾಲಾ ವಾಯುನೆಲೆಯಲ್ಲಿನ ಸಂಪೂರ್ಣ ಪುರುಷ ಪೈಲಟ್‌ಗಳ ರಫೇಲ್ ತಂಡಕ್ಕೆ ಶೀಘ್ರದಲ್ಲಿಯೇ ಮೊದಲ ಮಹಿಳಾ ಪೈಲಟ್ ಸೇರ್ಪಡೆಯಾಗಲಿದ್ದಾರೆ. ಭಾರತೀಯ ವಾಯು ಪಡೆಯಲ್ಲಿ ಸಕ್ರಿಯರಾಗಿರುವ...

ಸ್ಯಾಂಡಲ್ವುಡ್ ಡ್ರಗ್ಸ್ ಜಾಲ ; ಆದಿತ್ಯ ಅಗರ್ವಾಲ್...

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ಸ್​ ಲಿಂಕ್ ಆರೋಪ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆದಿತ್ಯಾ ಅಗರ್ವಾಲ್​​ನನ್ನ ಮತ್ತೆ ಸಿಸಿಬಿಗೆ ಒಪ್ಪಿಸಲಾಗಿದೆ. ಸಿಸಿಬಿ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಎನ್​ಡಿಪಿಎಸ್​ ಕೋರ್ಟ್​ಗೆ...

ದೆಹಲಿ ಗಲಭೆ ಪ್ರಕರಣ : ಕುಟುಂಬ ಭೇಟಿಗೆ...

ನವದೆಹಲಿ: ದೆಹಲಿ ಗಲಭೆಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿ ಬಂಧಿತರಾಗಿರುವ ಜೆಎನ್‌ಯು ಹ‌ಳೆಯ ವಿದ್ಯಾರ್ಥಿ ‌ಉಮರ್ ಖಾಲಿದ್, ತಮ್ಮ ಕುಟುಂಬ ಭೇಟಿಗಾಗಿ ಅನುಮತಿ...

N L S I U ಬೆಂಗಳೂರಿನ...

 ನವದೆಹಲಿ: ಬೆಂಗಳೂರಿನ ಎನ್‌ಎಲ್‌ಎಸ್‌ಐಯು ನ ಬಿಎ.ಎಲ್‌ಎಲ್ ಬಿ (ಆನರ್ಸ್) ಪ್ರವೇಶಕ್ಕೆ ನಡೆಸಲಾಗುತ್ತಿದ್ದ ಪ್ರತ್ಯೇಕ ಪ್ರವೇಶ ಪರೀಕ್ಷೆ ಎನ್‌ಎಲ್‌ಎಟಿ-2020 ನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಎಲ್ಲಾ 22 ರಾಷ್ಟ್ರೀಯ...

ಡ್ರಗ್ ಪ್ರಕರಣ : ನಶೆ ರಾಣಿಯರ...

ಬೆಂಗಳೂರು,ಸೆ.21: ಡ್ರಗ್ ಜಾಲದಲ್ಲಿ ಭಾಗಿಯಾಗಿ ಬಂಧಿತರಾಗಿ ಜೈಲು ಸೇರಿರುವ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನಗರದ ಎನ್‍ಡಿಪಿಎಸ್ ವಿಶೇಷ ನ್ಯಾಯಾಲಯ ವಿಚಾರಣೆಯನ್ನು...

ಕನ್ನಡಿಗರು ಹಾಗೂ ಮಾರಾಠಿಗರ ಮಧ್ಯ ದ್ವೇಷ ಹಚ್ಚಲು ಯತ್ನ

ರಾಜ್ಯದಲ್ಲಿ ಎಮ್.ಇ.ಎಸ್ ಸಂಘಟನೆ ಮತ್ತು ಕನ್ನಡಿಗರ ಮೇಲೆ ಹಾಕಿರುವ ಕೇಸ್ ಹಿಂದಕ್ಕೆ ಪಡೆಯಬೇಕು ಎಂದು ಜಯ ಕರ್ನಾಟಕ ರಕ್ಷಣಾ ಸೇನೆ ಆಗ್ರಹ ಮಾಡಿದೆ. ಬೆಳಗಾವಿಯ ಪಿರಣವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಮೂರ್ತಿ ಪ್ರತಿಷ್ಠಾಪನೆ ವೇಳೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಶಿವಸೇನೆ ಪುಂಡರು ಶಿವಾಜಿ ಪುತ್ಥಳಿ ಇಡಲು ಬಂದು ಅನಾವಶ್ಯಕವಾಗಿ ಕನ್ನಡಿಗರ ಹಾಗೂ ಮಾರಾಠಿಗರ ಮಧ್ಯ ಭಾಷಾ ದ್ವೇಷ ಹಚ್ಚಲು ಯತ್ನಿಸಿ, ಹಾಗೂ ಕನ್ನಡಪರ ಹೋರಾಟಗಾರರ ಮೇಲೆ ಹೆರಿರುವ ಕೇಸ್ ಗಳನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಹಾಗೂ ಕನ್ನಡಿಗರ ಮೇಲೆ ನಡೆಸಿರುವ ಹಲ್ಲೆಯನ್ನು ಜಯ ಕರ್ನಾಟಕ ರಕ್ಷಣಾ ಸೇನೆ ತೀವ್ರವಾಗಿ ಖಂಡಿಸುತ್ತೇವೆ ಎಂದು ಪತ್ರಿಕಾ ಪ್ರಕಟನೆಗೆ ತಿಳಿಸಿದ್ದರು.

ಬಾಗಲಕೋಟೆ ಜಿಲ್ಲಾಧ್ಯಕ್ಷ ಮಹೇಶ ವಡ್ಡರ ಮಾತನಾಡಿ ಜಯ ಕರ್ನಾಟಕ ರಕ್ಷಣಾ ಸೇನೆ ತಮ್ಮಲ್ಲಿ ವಿನಂತಿಸಿಕೊಳ್ಳುವುದೆನೆಂದರೆ ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಮಹಾರಾಜರು ಭಾರತಾಂಬೆಯ ಹೆಮ್ಮೆಯ ಪುತ್ರರು.ಬೆಳಗಾವಿಯಲ್ಲಿ ಎಮ್ ಇ ಎಸ್ ಸತ್ತ ಹೆಣದಂತಾಗಿದೆ ಅದಕ್ಕೆ ಪುಷ್ಟಿ ನೀಡುವ ರೀತಿಯಲ್ಲಿ ಶಿವಸೇನೆ ನಡೆದುಕೊಳ್ಳುತ್ತಿದೆ.ಬೆಳಗಾವಿಯಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಈ ರಣಹೇಡಿ ಎಮ್.ಇ.ಎಸ್ ಸಂಘಟನೆಗಳು ವಿನಾಕಾರಣ ಗಲಭೆ ಸೃಷ್ಟಿಸಲು ಯತ್ನಿಸುತ್ತಿವೆ. ಕರ್ನಾಟಕ ಸರ್ಕಾರ ಕೂಡಲೇ ಈ ರಣಹೇಡಿ ಸಂಘಟನೆಗಳನ್ನು ನಿಷೇಧಿಸಬೇಕೆಂದು ಜಯ ಕರ್ನಾಟಕ ರಕ್ಷಣಾ ಸೇನೆಯ ಬಾಗಲಕೋಟೆ ಜಿಲ್ಲಾ ಘಟಕ ಒತ್ತಾಯಿಸುತ್ತದೆ.

ನಂತರ ಮಾತನಾಡಿದ ರಾಜ್ಯ ಉಪಾಧ್ಯಕ್ಷ ರಮೇಶ ಬೀಳಗಿ ಕನ್ನಡಿಗರ ಸ್ವಾಭಿಮಾನದ ನೆಲ ಬೆಳಗಾವಿಯಲ್ಲಿ ಶಿವಾಜಿ ಹೆಸರಿನಲ್ಲಿ ಶಿವಸೇನೆಯ ಪುಂಡರು ಪದೇ ಪದೇ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದು ಕನ್ನಡಿಗರನ್ನು ಅವಮಾನಿಸುವ ಕೆಲಸದಲ್ಲಿ ತೊಡಗಿದ್ದಾರೆ. ಗಡಿ ವಿವಾದದ ಹೆಸರಿನಲ್ಲಿ ಮುಗ್ದ ಮರಾಠಿಗರನ್ನು ಪ್ರಚೋದಿಸಿ ಗಡಿಯಲ್ಲಿ ನಿರಂತರವಾಗಿ ದೌರ್ಜನ್ಯ, ದಬ್ಬಾಳಿಕೆಗಳನ್ನು ಮಾಡುತ್ತಿದ್ದಾರೆ. ಕನ್ನಡಿಗರ ಭಾಷೆ,ಸಂಸ್ಕೃತಿ,ಧರ್ಮವನ್ನು ಗಡಿ ವಿವಾದದ ಹೆಸರಿನಲ್ಲಿ ತಮ್ಮ ಪ್ರಚಾರದ ಸರಕನ್ನಾಗಿಸಿಕೊಂಡ ಈ ರಕ್ತ ಬಿಜಾಸುರನ ಸಂತತಿಯನ್ನು ಕರ್ನಾಟಕದಿಂದ ಬೇರು ಸಹಿತ ಕಿತ್ತು ಹಾಕುವ ಕೆಲಸ ಸರಕಾರ ಮಾಡಬೇಕು. ಕಳೆದ ೬೦ ವರ್ಷಗಳಿಂದ ಇವರ ದೌರ್ಜನ್ಯಕ್ಕೆ ಬೆಳಗಾವಿ ಜಿಲ್ಲೆ ನಲುಗಿ ಹೋಗಿದೆ‌.

ಮರಾಠಿ ಮತಗಳಿಗಾಗಿ ಬೆಳಗಾವಿಯ ಕೆಲ ರಾಜಕಾರಣಿಗಳು MES ಮತ್ತು ಶಿವಸೇನೆಯನ್ನು ಬೆಂಬಲಿಸಿ ಅವರ ಪುಂಡಾಟಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷ ಬೆಂಬಲ ನೀಡುವ ನಾಡ ದ್ರೋಹದ ಕೆಲಸವನ್ನು ಮಾಡುತ್ತಿದ್ದಾರೆ. ಅವರ ಪುಂಡಾಟ ಮೀತಿ ಮೀರಲು ಇದು ಒಂದು ಕಾರಣ. ಕಳೆದ 60 ವರ್ಷಗಳಿಂದ ಗಡಿ ವಿವಾದದ ನೆಪದಲ್ಲಿ ಅವರು ಭಯೋತ್ಪಾದಕರಂತೆ ನಡೆದುಕೊಂಡರೂ ಸರಕಾರ ಮಾತ್ರ ದಿವ್ಯ ಮೌನವಹಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡು. ರಾಜಕಾರಣದ ಸ್ವಾರ್ಥಕ್ಕಾಗಿ ಬೆಳಗಾವಿ ಗಡಿ ವಿವಾದವನ್ನು ಜೀವಂತವಾಗಿರಿಸಿಕೊಂಡು ಕನ್ನಡಿಗರ ಸ್ವಾಭಿಮಾನವನ್ನು ಮರಾಠಿ ಪುಂಡರಿಗೆ ಮಾರಾಟಮಾಡುತ್ತಿರುವ ಆ ಭಾಗದ ರಾಜಕಾರಣಿಗಳ ನಡೆ ನಿಜಕ್ಕೂ ರಣಹೇಡಿತನವಾಗಿದೆ

ಕನ್ನಡದ ಯುವಕರ ಮೇಲೆ ಪುಂಡಾಡಿಕೆ ಮೆರೆದ ನಾಡದ್ರೋಹಿ ಶಿವಸೇನೆಯ ಪುಂಡರನ್ನು ಕ್ರಿಮಿನಲ್ ಪ್ರಕರಣದಡಿಯಲ್ಲಿ ಬಂಧಿಸಿ ಶಿವಸೇನೆಯನ್ನು ಕರ್ನಾಟಕದಲ್ಲಿ ನಿಷೇಧಿಸುವಂತೆ ಹಾಗೂ ಕನ್ನಡಪರ ಹೋರಾಟಗಾರರ ಮೇಲೆ ಹೆರಿರುವ ಕೇಸ್ ಗಳನ್ನು ಕೂಡಲ್ಲೆ ರಾಜ್ಯ ಸರ್ಕಾರವು ಹಿಂದಕ್ಕೆ ಪಡೆದುಕೊಳ್ಳಬೇಕು ಇಲ್ಲದೆ ಹೋದರೆ ರಾಜ್ಯಾಧ್ಯಕ್ಷರಾದ ಕೆ.ಸಿ.ರಾಜಪ್ಪ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡುವದರ ಜೊತೆಗೆ ಉಗ್ರವಾದ ಹೋರಾಟ ನಡೆಸಲಾಗುತ್ತದೆ ಆಗ್ರಹಿಸಿದ್ದರು.

TRENDING