Sunday, September 27, 2020
Home ಕ್ರೈಂ ನ್ಯೂಸ್ ಸಿಲ್ ಡೌನ್ ಮನೆಗೆ ಕನ್ನ ಹಾಕಿದ್ದ ಚಾಲಾಕಿ ಕಳ್ಳ ಅಂದರ್

ಇದೀಗ ಬಂದ ಸುದ್ದಿ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್‍ 88ನೇ ಹುಟ್ಟುಹಬ್ಬ,...

ನವದೆಹಲಿ : ಕಾಂಗ್ರೆಸ್ ಮುತ್ಸದ್ದಿ ಮತ್ತು ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರಿಗೆ ಇಂದು 88ನೇ ಜನ್ಮದಿನದ ಸಡಗರ-ಸಂಭ್ರಮ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ...

ಜಮ್ಮು ಮತ್ತು ಕಾಶ್ಮೀರದಲ್ಲಿ 4.5ರಷ್ಟು ತೀವ್ರತೆಯ ಭೂಕಂಪ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಲೇಹ್ ಮತ್ತು ಲಡಾಖ್ ಪ್ರದೇಶಗಳಲ್ಲಿ ಶನಿವಾರ ಭೂ ಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4.5 ರಷ್ಟು ದಾಖಲಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ...

ಚಂಡೀಗಢದಲ್ಲಿ ಆಕ್ಸ್‌ಫರ್ಡ್ ಕೊರೊನಾ ಲಸಿಕೆ ಪ್ರಯೋಗ ಆರಂಭ

 ನವದೆಹಲಿ : ಆಕ್ಸ್‌ಫರ್ಡ್ ಕೊರೊನಾ ಲಸಿಕೆಯ ಎರಡನೇ ಹಂತದ ಪ್ರಯೋಗ ಚಂಡೀಗಢದ ಪೋಸ್ಟ್ ಗ್ರಾಜುವೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಆಂಡ್ ರಿಸರ್ಚ್ ನಲ್ಲಿ ಆರಂಭಗೊಂಡಿದೆ.

ವಿಧಾನಸಭೆಯಲ್ಲಿ ತೀವ್ರ ವಿರೋಧದ ನಡುವೆಯೂ ಕರ್ನಾಟಕ...

ಬೆಂಗಳೂರು, ಸೆ. 26: ತೀವ್ರ ವಿವಾದಕ್ಕೆ ಕಾರಣವಾಗಿದ್ದ ಕರ್ನಾಟಕ ಭೂಸುಧಾರಣೆಗಳ ತಿದ್ದುಪಡಿ ವಿಧೇಯಕ ಅಂಗೀಕಾರವಾಗಿದೆ. ಕಾಂಗ್ರೆಸ್ ಪಕ್ಷದ ಸದಸ್ಯರ ತೀವ್ರ ವಿರೋಧದ ಮಧ್ಯೆಯೇ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರವಾಯಿತು. ಅದಕ್ಕೂ ಮೊದಲು...

ಕೃಷ್ಣ ಜನ್ಮಭೂಮಿ ಮಥುರಾ ಬಳಿ ಮಸೀದಿ ತೆರವು...

ಮಥುರಾ: ಇಲ್ಲಿನ ಕೃಷ್ಣ ಜನ್ಮಭೂಮಿ ಪ್ರದೇಶ ಹಿಂದೂಗಳಿಗೆ ಸೇರಿದ್ದು. ಕೃಷ್ಣನ ಭಕ್ತರು ಮತ್ತು ಹಿಂದೂ ಸಮುದಾಯದವರಿಗೆ ಇದು ಪವಿತ್ರ ಸ್ಥಳ ಎಂದು ವಕೀಲ ವಿಷ್ಣು ಜೈನ್ ಎಂಬುವವರು ಪ್ರತಿಪಾದಿಸಿದ್ದು, ಈ ಕುರಿತು...

ಸಿಲ್ ಡೌನ್ ಮನೆಗೆ ಕನ್ನ ಹಾಕಿದ್ದ ಚಾಲಾಕಿ ಕಳ್ಳ ಅಂದರ್

ಅರಕಲಗೂಡು ತಾಲ್ಲೂಕು ಕೊಣನೂರು ಪೊಲೀಸ್‌ಠಾಣಾ ವ್ಯಾಪ್ತಿಯ ಸಿಲ್ ಡೌನ್ ಆಗಿರುವ ಮನೆಯನ್ನು ಕಳ್ಳತನ ಮಾಡಿರುವ ಆರೋಪಿಯನ್ನು ಬಂಧಿಸಿ ಸುಮಾರು 20 ಲಕ್ಣ ರೂ‌ಮೌಲ್ಯದ ಚಿನ್ನಾಭರಣ‌ ಹಾಗೂ 20  ಸಾವಿರ‌ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು‌  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ತಿಳಿಸಿದರು. ತಮ್ಮ‌ಕಛೇರಿಯಲ್ಲಿ‌ ಸುದ್ದಿಗೋಷ್ಟಿ ಮೂಲಕ‌ ಮಾಹಿತಿ ನೀಡಿದ ಅವರು,ಅರಕಲಗೂಡು ತಾಲ್ಲೂಕು ಕೊಣನೂರು ಪೊಲೀಸ್‌ಠಾಣಾ ವ್ಯಾಪ್ತಿಯ ಹಾನಗಲ್ ಗ್ರಾಮದ ವಾಸಿ ಕುಶಕುಮಾರ್  ಅವರು ತಮ್ಮ ಲವಕುಮಾರ್ ಅವರ ಮನೆ‌ಕಳ್ಳತನ ‌ನಡೆದಿದೆ ಎಂಬ ದೂರಿನ ಮೇರೆಗೆ  ಕಾರ್ಯಾಚರಣೆ ‌‌ನಡೆಸಿರುವ ಪೊಲೀಸರು ಆರೋಪಿ ಹಾನಗಲ್‌ ಗ್ರಾಮದ ಹೆಚ್.ಆರ್.ವೆಂಕಟೇಶ್ ಅವರನ್ನು ‌ಬಂಧಿಸಲಾಗಿದೆ ಎಂದರು. ದೂರುರಾರನ ತಮ್ಮ ಲವಕುಮಾರ್ ಕೊರೋನಾ‌‌ ಹಿನ್ನಲೆಯಲ್ಲಿ ‌ಮೃತಪಟ್ಟಿದ್ದರು.‌ಆ ಕಾರಣಕ್ಕಾಗಿ  ಇವರ‌ ಮನೆಯನ್ನು 14 ದಿನ‌ಸಿಲ್ ಡೌನ್ ಮಾಡಲಾಗಿತ್ತು. ಮನೆಯವರು ಅಣ್ಣ ನಾಗೇಂದ್ರ‌‌ ಮನೆಯಲ್ಲಿ ವಾಸವಾಗಿದ್ದರು.ಎರಡು‌ದಿನಗಳಿಗೊಮ್ಮೆ ಮನೆಯನ್ನು ತೆರೆದು ನೋಡಿಕೊಂಡು ಹೋಗುತ್ತಿದ್ದೇವು.ಆಗಸ್ಟ್ 24  ರಂದು ಬೆಳಗ್ಗೆ ಮನೆಯನ್ನು‌ ತೆರೆದು‌ನೋಡಿದ್ದಾಗ‌ ಮನೆಯ‌ ಹಿಂಬಾಗಿಲನ್ನು ಒಡೆದು ಒಳನುಗ್ಗಿ ಮನೆಯಲ್ಲಿದ್ದ ,11,60,000 ರೂಪಾಯಿ, 533 ಗ್ರಾಂ ಚಿನ್ನದ ಒಡವೆ ಮತ್ತು 99,000 ರೂ ಬೆಲೆ ಬಾಳುವ 2.750 ಕೆ.ಜಿ. ಬೆಳ್ಳಿ ಸಾಮಾನುಗಳು ಹಾಗೂ 60,000 ರೂ ನಗದು ಹಣವನ್ನು ಕಳ್ಳತನ ‌ಮಾಡಿ‌ಹೋಗಿರುವುದಾಗಿ ಕೊಣನೂರು‌ ಪೊಲೀಸ್ ಠಾಣೆಗೆ ದೂರು ‌ನೀಡಿದ್ದರು ಎಂದರು. ಆರೋಪಿ ಪತ್ತೆಗೆ ವಿಶೇಷ ತಂಡ ಪ್ರಕರಣವನ್ನು  ದಾಖಲಿಸಿಕೊಂಡ ಪೊಲೀಸರು   ಎಸ್ಪಿ ಶ್ರೀನಿವಾಸಗೌಡ,  ಎಎಸ್ಪಿ ನಂದಿನಿ , ಹೊಳೆನರಸೀಪುರ ‌ಡಿವೈಎಸ್ಪಿ‌ಲಕ್ಣ್ಮೇಗೌಡ, ಅರಕಲಗೂಡು ಸಿಪಿಐ ದೀಪಕ್,  ಕೊನೂರು‌ ಪಿ ಎಸ್ ಐ ಸಾಗರ್ ಅವರ‌‌‌ ನೇತೃತ್ವದಲ್ಲಿ ‌ತಂಡ‌ ರಚಿಸಿ  ಆರೋಪಿಯ ಸುಳಿವಿನ ಮೇರೆಗೆ  ಹಾನಗಲ್‌ ಗ್ರಾಮದ ವೆಂಕಟೇಶ್ ಅವರನ್ನು   ಆಸಗ್ಟ್ 30 ರಂದು ಬಂಧಿಸಿ ಆತನಿಂದ ನಗದು ಹಾಗೂ‌‌ಚಿನ್ನಾಭರಣ ವಶಪಡಿಕೊಂಡು‌ಕ್ರಮ‌ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಆರೋಪಿಗಳ ಪತ್ತೆ ‌ಮಾಡಿದ ತನಿಖೆ ತಂಡಕ್ಕೆ ಎಸ್ಪಿ ಶ್ರೀನಿವಾಸಗೌಡ ಅಭಿನಂದಿಸಿದರು. ಪತ್ರಿಕಾಗೋಷ್ಠಿಯಲ್ಲಿ ಎಎಸ್ ಪಿ ನಂದಿನಿ, ಡಿವೈಎಸ್ಪಿ‌  ಲಕ್ಷ್ಮೇಗೌಡ ಇದ್ದರು.

ವೆಂಕಟೇಶ್

ದಿ ನ್ಯೂಸ್ 24 ಕನ್ನಡ ಹಾಸನ  

TRENDING