Thursday, September 24, 2020
Home ಅಂತರ್ ರಾಷ್ಟ್ರೀಯ ಭಾರತದ ಅದೊಂದು ತಂತ್ರ ಫಲಿಸಿದರೆ, ಪಾಕ್ ಆರ್ಥಿಕತೆಯೇ ಕುಸಿತ - ಇಮ್ರಾನ್ ಖಾನ್

ಇದೀಗ ಬಂದ ಸುದ್ದಿ

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡುವ ಯೋಚನೆ...

 ಬೆಂಗಳೂರು: ಕೋವಿಡ್ -19 ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೂ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡುವ ಯೋಚನೆ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.

ದೇಶದಲ್ಲಿ 57 ಲಕ್ಷ ಗಡಿ ದಾಟಿದ ಕೊರೊನಾ...

ನವದೆಹಲಿ: ಒಂದೆಡೆ ದೇಶದಲ್ಲಿ ಮಳೆಯ ಅಬ್ಬರ ಜೋರಾಗಿದ್ದರೆ ಇನ್ನೊಂದೆಡೆ ಮಹಾಮಾರಿ ಕೊರೊನಾ ಅಟ್ಟಹಾಸವೂ ಹೆಚ್ಚುತ್ತಿದೆ. ದೇಶದಲ್ಲಿ ಕಳೆದ 24 ಗಂಟೆಯಲ್ಲಿ 86,508 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ...

ಸಿಎಎ ವಿರುದ್ಧದ ಹೋರಾಟಕ್ಕೆ ಮಹಿಳೆಯರಿಗೆ ದಿನಗೂಲಿ! ಸಾಕ್ಷ್ಯ...

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಕಳೆದ ಫೆಬ್ರುವರಿಯಲ್ಲಿ ದೆಹಲಿಯ ಶಾಹೀನ್ ಬಾಗ್ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ (ಜೆಎಂಐ) ಸಮೀಪವಿರುವ ಸ್ಥಳಗಳಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಮಹಿಳೆಯರಿಗೆ ಸಕಲ...

ತಮಿಳು ನಟನನ್ನು ಟ್ವಿಟರ್‌ನಲ್ಲಿ ಫಾಲೋ ಮಾಡಿದ ಪಾಪ್‌...

ಚೆನ್ನೈ: ಖ್ಯಾತ ಪಾಪ್‌ ಗಾಯಕ ಜಸ್ಟೀನ್‌ ಬೈಬರ್‌ ಅವರು ತಮಿಳಿನ ಸಂಗೀತ ಸಂಯೋಜಕ, ನಟ ಜಿ.ವಿ. ಪ್ರಕಾಶ್‌ ಅವರನ್ನು ಟ್ವಿಟರ್‌ನಲ್ಲಿ ಫಾಲೋ ಮಾಡಿದ್ದಾರೆ. ಜಿ.ವಿ. ಪ್ರಕಾಶ್‌ ಅವರು...

ಲಡಾಖ್‌ ಗಡಿ ಪ್ರದೇಶಕ್ಕೆ ಹೊರಡಲು ಚೀನಾ ಸೈನಿಕರ...

 ತೈಪೆ: ಲಡಾಖ್‌ನ ಎಲ್‌ಎಸಿಯ ದುರ್ಗಮ ವಾತಾವರಣದಲ್ಲಿ ಕರ್ತವ್ಯಕ್ಕಿಳಿಯಲು ಚೀನೀ ಸೈನಿಕರು ಎಷ್ಟು ಭೀತರಾಗುತ್ತಾರೆ ಎನ್ನುವುದಕ್ಕೆ ಸಾಕ್ಷಿಯಾಗಿ ವೀಡಿಯೋವೊಂದು ವೈರಲ್‌ ಆಗಿದೆ.

ಭಾರತದ ಅದೊಂದು ತಂತ್ರ ಫಲಿಸಿದರೆ, ಪಾಕ್ ಆರ್ಥಿಕತೆಯೇ ಕುಸಿತ – ಇಮ್ರಾನ್ ಖಾನ್

 ಇಸ್ಲಾಮಾಬಾದ್  : ಭಾರತದ ಅದೊಂದು ತಂತ್ರ ಫಲಿಸಿದರೆ ಪಾಕಿಸ್ತಾನದ ಆರ್ಥಿಕತೆಯೇ ಕುಸಿಯುತ್ತದೆ.ಈ ಮೂಲಕ ಪಾಕಿಸ್ತಾನ ಸರ್ವನಾಶವಾಗಲಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆತಂಕಕ್ಕೊಳಗಾಗಿದ್ದಾರೆ.

ಪಾಕಿಸ್ತಾನ ಕಪ್ಪುಪಟ್ಟಿಗೆ ಸೇರುವ ಭೀತಿಯನ್ನು ಇಮ್ರಾನ್ ಖಾನ್ ಎದುರಿಸುತ್ತಿದ್ದಾರೆ. ಪಾಕ್ ಕಪ್ಪುಪಟ್ಟಿಗೆ ಸೇರಿದರೆ ಆ ದೇಶದ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ. ಅದಾಗಲೇ ಪಾಕಿಸ್ತಾನ ಎಫ್‌ಎಟಿಎಫ್ ಬೂದೂ ಪಟ್ಟಿ ಸೇರಿರುವುದರಿಂದ ವಾರ್ಷಿಕವಾಗಿ ಸುಮಾರು 10 ಶತಕೋಟಿ ಡಾಲರ್ ಗಳಷ್ಟು ಆರ್ಥಿಕ ಸಹಾಯ ನಿಂತು ಹೋಗಿದೆ. ಇನ್ನು ಕಪ್ಪುಪಟ್ಟಿಗೆ ಸೇರಿದರೆ ಗತಿಯೇನು ಎಂದು ಇಮ್ರಾನ್ ಖಾನ್ ಚಿಂತಿಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಭಯೋತ್ಪಾದಕ ಹಣಕಾಸು ವಾಚ್ ಡಾಗ್ ಫೈನಾನ್ಫಿಯಲ್ ಆಯಕ್ಷನ್ ಟಾಸ್ಕ್ ಫೋರ್ಸ್(ಎಫ್‌ಎಟಿಎಫ್) ಎದುರು ಕೆಂಗಣ್ಣಿಗೆ ಗುರಿಯಾಗಿದೆ. ಭಯೋತ್ಪಾದಯನ್ನು ಮಟ್ಟಹಾಕುವಲ್ಲಿ ವಿಫಲವಾಗಿದ್ದರಿಂದ ಪಾಕಿಸ್ತಾನವನ್ನು ಎರಡು ವರ್ಷಗಳ ಹಿಂದೆ ಗ್ರೇ ಪಟ್ಟಿಗೆ ಸೇರಿಸಿತ್ತು.

ಪಾಕಿಸ್ತಾನ ಭಯೋತ್ಪಾದನಾ ಚಟುವಟಿಕೆ ಇನ್ನೂ ಮುಂದುವರೆಸಿರುವ ಹಿನ್ನೆಲೆಯಲ್ಲಿ ಆರ್ಥಿಕ ಕಪ್ಪು ಪಟ್ಟಿಗೆ ಸೇರಿಸಲು ಎಫ್‌ಎಟಿಎಫ್ ಚಿಂತನೆ ನಡೆಸಿದೆ. ಇದೇ ಸದ್ಯ ಇಮ್ರಾನ್ ಖಾನ್ ಅಳಲಿಗೆ ಕಾರಣವಾಗಿದೆ.

ಇನ್ನು ಭಯೋತ್ಪಾದನೆಯನ್ನು ಮಟ್ಟಹಾಕುವುದನ್ನು ಬಿಟ್ಟು ಇಮ್ರಾನ್ ಖಾನ್, ಭಾರತ ಪಾಕಿಸ್ತಾನವನ್ನು ಸರ್ವನಾಶಗೊಳಿಸಲು ತಂತ್ರ ನಡೆಸಿದೆ. ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಲು ಭಾರತ ಜಾಗತಿಕ ಮಟ್ಟದಲ್ಲಿ ಒತ್ತಡ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ.  

TRENDING