Tuesday, September 22, 2020
Home ಬೆಂಗಳೂರು 18 ವರ್ಷದೊಳಗಿನ, 60 ವರ್ಷ ಮೇಲ್ಪಟ್ಟವರಿಗೆ ಉಚಿತ ಬಸ್‌ ಪ್ರಯಾಣ: ರವಿಕಾಂತೇಗೌಡ ಅಗ್ರಹ

ಇದೀಗ ಬಂದ ಸುದ್ದಿ

ಪೂರಕ ಪರೀಕ್ಷೆ: 723 ವಿದ್ಯಾರ್ಥಿಗಳು ಗೈರುಹಾಜರು

 ಬೆಳಗಾವಿ: ಜಿಲ್ಲೆಯಾದ್ಯಂತ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಸೋಮವಾರ ಆರಂಭವಾಯಿತು. 'ಮೊದಲ ದಿನ ನಿಗದಿಯಾಗಿದ್ದ ಗಣಿತ ವಿಷಯದ ಪರೀಕ್ಷೆ ಸುಗಮವಾಗಿ ನಡೆಯಿತು. ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ...

ರಾಜ್ಯದಲ್ಲಿಂದು 7339 ಮಂದಿಗೆ ಕೊರೊನಾ ಪಾಸಿಟಿವ್ ಕೇಸ್...

ಬೆಂಗಳೂರು : ರಾಜ್ಯದಲ್ಲಿ ಇಂದು 7339 ಮಂದಿಗೆ ಕೊರೊನಾ ಸೋಂಕು ಧೃಡವಾಗಿದ್ದು, ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5,26,876 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು...

ಡ್ರಗ್ಸ್ ಪ್ರಕರಣ : ವಿಚಾರಣೆ ಎದುರಿಸಿದ ನಟ...

ಬೆಂಗಳೂರು, ಸೆ. 21: ನಿಷೇಧಿತ ಡ್ರಗ್ಸ್ ಸೇವನೆ, ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ವಸ್ತು ನಿಯಂತ್ರಣ ಕಾಯ್ದೆ(NDPS) ಅಡಿಯಲ್ಲಿ ಸಿಸಿಬಿ ತನಿಖೆ ನಡೆಸುತ್ತಿದೆ. ಇನ್ನೊಂದೆಡೆ ಎನ್ ಸಿಬಿ ಡ್ರಗ್ ಪೆಡ್ಲರ್...

ಎಲ್‌ಕೆಜಿ, ಯುಕೆಜಿ : ಅಂಗನವಾಡಿಯಲ್ಲೇ ನಡೆಸಿ

ಚಿತ್ರದುರ್ಗ: ಸರ್ಕಾರಿ ಪಬ್ಲಿಕ್ ಶಾಲೆಗಳಲ್ಲಿ 'ಎಲ್‌ಕೆಜಿ, ಯುಕೆಜಿ ತರಗತಿ' ನಡೆಸುವ ಬದಲು ಅಂಗನವಾಡಿಗಳಲ್ಲೇ ಆರಂಭಿಸಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ಜಿಲ್ಲಾ ಮಂಡಳಿ ಕಾರ್ಯಕರ್ತೆಯರು ಸೋಮವಾರ ಪ್ರತಿಭಟನೆ...

ಶೀಘ್ರದಲ್ಲಿಯೇ ರಫೇಲ್ ಜೆಟ್ ಹಾರಿಸಲಿದ್ದಾರೆ ಮಹಿಳಾ ಪೈಲಟ್

 ನವದೆಹಲಿ, ಸೆ 21: ಅಂಬಾಲಾ ವಾಯುನೆಲೆಯಲ್ಲಿನ ಸಂಪೂರ್ಣ ಪುರುಷ ಪೈಲಟ್‌ಗಳ ರಫೇಲ್ ತಂಡಕ್ಕೆ ಶೀಘ್ರದಲ್ಲಿಯೇ ಮೊದಲ ಮಹಿಳಾ ಪೈಲಟ್ ಸೇರ್ಪಡೆಯಾಗಲಿದ್ದಾರೆ. ಭಾರತೀಯ ವಾಯು ಪಡೆಯಲ್ಲಿ ಸಕ್ರಿಯರಾಗಿರುವ...

18 ವರ್ಷದೊಳಗಿನ, 60 ವರ್ಷ ಮೇಲ್ಪಟ್ಟವರಿಗೆ ಉಚಿತ ಬಸ್‌ ಪ್ರಯಾಣ: ರವಿಕಾಂತೇಗೌಡ ಅಗ್ರಹ

ಬೆಂಗಳೂರು: ‘ನಗರದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ಸಾರಿಗೆ ಬಳಸಬೇಕಾದರೆ ಬಸ್ ವ್ಯವಸ್ಥೆ ಆಧುನೀಕರಣಗೊಳ್ಳಬೇಕು. ಪ್ರಯಾಣಿಕರಲ್ಲಿ ಬಸ್ ಸಂಚಾರದ ಬಗ್ಗೆ ವಿಶ್ವಾಸಾರ್ಹತೆ ಮೂಡಬೇಕು’ ಎಂದು ಜಂಟಿ ಪೊಲೀಸ್ ಕಮಿಷನರ್‌ (ಸಂಚಾರ) ಬಿ.ಆರ್.ರವಿಕಾಂತೇಗೌಡ ತಿಳಿಸಿದರು.

ಎನ್ವಿರಾನ್‍ಮೆಂಟ್ ಸಪೋರ್ಟ್ ಗ್ರೂಪ್ ಟ್ರಸ್ಟ್ (ಇಎಸ್‍ಜಿ) ಸಹಯೋಗದಲ್ಲಿ ‘ಸಂಚಾರ ದಟ್ಟಣೆಯ ಸುವ್ಯವಸ್ಥೆ ಹಾಗೂ ಶಾಂತಗೊಳಿಸುವಿಕೆ’ ಕುರಿತು ಶುಕ್ರವಾರ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

‘ಯಾವುದೇ ದೇಶದ ಸಾರ್ವಜನಿಕ ಸಾರಿಗೆ ಸಂಸ್ಥೆಗಳು ಲಾಭದ ದೃಷ್ಟಿಯಿಂದ ನಡೆಯುತ್ತಿಲ್ಲ. ಈ ವಿಚಾರದಲ್ಲಿ ನಗರ ಸಾರಿಗೆ ಅಭಿವೃದ್ಧಿಯಾಗಬೇಕಿದೆ. ಸಾರ್ವಜನಿಕರಿಗಾಗಿ ಬಸ್ ದರ ಕಡಿಮೆ ಮಾಡುವುದರ ಜೊತೆಗೆ 18 ವರ್ಷದೊಳಗಿನ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕು’ ಎಂದರು.

‘ಖಾಸಗಿ ವಾಹನಗಳ ಅನಗತ್ಯ ಸಂಚಾರ ತಡೆಗೆ ಪಾರ್ಕಿಂಗ್ ಶುಲ್ಕ ನಿಗದಿ ಮಾಡಬೇಕು. ನಗರದಲ್ಲಿ ಸಂಚರಿಸುತ್ತಿರುವ ಬಸ್‍ಗಳು ಉದ್ದವಾಗಿದ್ದು, ಇಲ್ಲಿನ ರಸ್ತೆಗಳಿಗೆ ಹೋಲುವಂತಹ ಬಸ್‍ಗಳ ವಿನ್ಯಾಸಕ್ಕೆ ಮುಂದಾಗಬೇಕು. ಇದರಿಂದ ಪ್ರಯಾಣಿಕರ ಸಮೀಪಕ್ಕೆ ಬಸ್‍ಗಳು ತಲುಪಬಹುದು’ ಎಂದು ಸಲಹೆ ನೀಡಿದರು.

ನಗರ ಭೂ ಸಾರಿಗೆ ನಿರ್ದೇಶನಾಲಯದ ಆಯುಕ್ತೆ ವಿ.ಮಂಜುಳಾ, ‘ನಗರದಲ್ಲಿ ಬಿಎಂಟಿಸಿಯನ್ನು ಜನರು ಪ್ರಾಥಮಿಕ ಹಂತದ ಸಾರಿಗೆಯಾಗಿ ಅವಲಂಬಿಸಿದ್ದಾರೆ. ಒಂದೇ ಮಾರ್ಗದಲ್ಲಿ ಮೆಟ್ರೊ ಹಾಗೂ ಬಿಎಂಟಿಸಿ ಸಂಚರಿಸುವ ಬದಲಿಗೆ, ಮೆಟ್ರೊ ಸಂಪರ್ಕವಿಲ್ಲದ ಸ್ಥಳಗಳಿಗೆ ಬಸ್ ಸೇವೆ ಹೆಚ್ಚಾಗಬೇಕು. ಬಸ್‍ಗಳ ಸಂಚಾರಕ್ಕೆ ರಸ್ತೆಯಲ್ಲಿ ಹೆಚ್ಚಿನ ಜಾಗ ಸಿಗಬೇಕು’ ಎಂದರು.

ಕಾಂಗ್ರೆಸ್‌ ಮುಖಂಡ ಪ್ರೊ.ರಾಜೀವ್ ಗೌಡ, ‘ದಟ್ಟಣೆ ತಗ್ಗಲು ನಗರದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣಗಳು ತಲೆ ಎತ್ತಬೇಕಿವೆ. ಮುಂಬರುವ ಬಸ್‍ನ ಮಾಹಿತಿ ಪ್ರಯಾಣಿಕನಿಗೆ ಸುಲಭವಾಗಿ ಸಿಗಬೇಕು ಹಾಗೂ ನಿರ್ಧರಿಸುವ ಸಾಮರ್ಥ್ಯ ಹೆಚ್ಚಬೇಕು. ನಗರದ ದಟ್ಟಣೆ ಪೀಡಿತ ಸ್ಥಳಗಳಲ್ಲಿ ‘ಆದ್ಯತಾ ಪಥ’ಗಳು ಹೆಚ್ಚಾಗಬೇಕಿವೆ’ ಎಂದು ತಿಳಿಸಿದರು.

ಶಾಸಕ ಉದಯ್ ಬಿ.ಗರುಡಾಚಾರ್, ‘ಪ್ರತಿದಿನ ಹೊಸ ಯೋಜನೆಗಳು ಆರಂಭವಾಗುತ್ತಿವೆ. ಮರ ಕಡಿಯಲು ಇದು ಎಡೆಮಾಡಿಕೊಡುತ್ತಿವೆ. ಜೆ.ಸಿ.ರಸ್ತೆ, ಅವೆನ್ಯೂ ರಸ್ತೆಯಂತಹ ವಾಣಿಜ್ಯ ಪ್ರದೇಶಗಳಲ್ಲಿ ದಟ್ಟಣೆ ಅಧಿಕವಾಗಿದ್ದು, ಇಂತಹ ಸ್ಥಳಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಭಿವೃದ್ಧಿಯಾಗಬೇಕು. ಇದಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಯಬೇಕು’ ಎಂದರು.

TRENDING