Wednesday, September 23, 2020
Home ಅಂತರ್ ರಾಜ್ಯ ಒಡಿಶಾ: ಮಳೆ ಪ್ರವಾಹಕ್ಕೆ ಮತ್ತೆ ಐದು ಮಂದಿ ಬಲಿ

ಇದೀಗ ಬಂದ ಸುದ್ದಿ

ಜಮ್ಮು,ಕಾಶ್ಮೀರ : ಮಾತಾ ವೈಷ್ಣೋದೇವಿ ಭಕ್ತರಿಗೊಂದು ಸಿಹಿಸುದ್ದಿ

ಶ್ರೀನಗರ: ಜಮ್ಮುಮತ್ತು ಕಾಶ್ಮೀರದ ರೇಸಿ ಜಿಲ್ಲೆಯ ತ್ರಿಕೂಟ ಬೆಟ್ಟದಲ್ಲಿರುವ ಮಾತಾ ವೈಷ್ಣೋದೇವಿ ಭಕ್ತರಿಗೆ ಒಂದು ಸಿಹಿ ಸುದ್ದಿ. ಶೀಘ್ರವೇ ಭಕ್ತರು ಮೊಬೈಲ್ ಆಯಪ್ ಮೂಲಕ ದೇವಿಯ ನೇರ ದರ್ಶನವನ್ನು ಪಡೆಯಬಹುದು. ಇದಕ್ಕಾಗಿ...

ಡ್ರಗ್ಸ್ ಪ್ರಕರಣ : ಕಿರುತೆರೆ ನಟ-ನಟಿ ವಿಚಾರಣೆ

 ಬೆಂಗಳೂರು: ಡ್ರಗ್ಸ್ ಜಾಲದ ತನಿಖೆ ಆರಂಭಿಸಿರುವ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಪೊಲೀಸರು, ಕಿರುತೆರೆ ನಟ ಅಭಿಷೇಕ್ ಹಾಗೂ ನಟಿ ಗೀತಾ ಭಾರತಿ ಭಟ್ ಅವರನ್ನು ಮಂಗಳವಾರ ವಿಚಾರಣೆಗೆ ಒಳಪಡಿಸಿದರು.

ಐಪಿಎಲ್ 2020 : ಚೆನ್ನೈ ಸೂಪರ್...

ಮಂಗಳವಾರ ನಡೆದ ಐಪಿಎಲ್ ನ ನಾಲ್ಕನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

ದ.ಕ. ಜಿಲ್ಲೆಯ ಹಿರಿಯ ಉದ್ಯಮಿ, ಸಾಮಾಜಿಕ, ಧಾರ್ಮಿಕ...

ಪುತ್ತೂರು : ದ.ಕ. ಜಿಲ್ಲೆಯ ಹೆಸರಾಂತ ಹಿರಿಯ ಉದ್ಯಮಿ, ಸಾಮಾಜಿಕ, ಧಾರ್ಮಿಕ ಧುರೀಣ ಕಮ್ಮಾಡಿ ಇಬ್ರಾಹಿಂ ಹಾಜಿ (72) ಅವರು ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನ ಹೊಂದಿದರು.

ಮಹಾರಾಷ್ಟ್ರಕಟ್ಟಡ ಕುಸಿತ; 33ಕ್ಕೇರಿದ ಸಾವಿನ ಸಂಖ್ಯೆ

 ಮುಂಬೈ (ಸೆ. 23): ನೆರೆಯ ರಾಜ್ಯವಾದ ಮಹಾರಾಷ್ಟ್ರದ ಭಿವಾಂಡಿಯಲ್ಲಿ ಸೋಮವಾರ ನಸುಕಿನ ಜಾವ 3 ಅಂತಸ್ತಿನ ಕಟ್ಟಡವೊಂದು ಕುಸಿದುಬಿದ್ದಿತ್ತು. ಇದರಿಂದ ಕಟ್ಟಡದೊಳಗಿದ್ದ 10 ಜನರು ಸ್ಥಳದಲ್ಲೇ ಸಾವನ್ನಪ್ಪಿ, ಸಾಕಷ್ಟು ಜನರು...

ಒಡಿಶಾ: ಮಳೆ ಪ್ರವಾಹಕ್ಕೆ ಮತ್ತೆ ಐದು ಮಂದಿ ಬಲಿ

ಒಡಿಶಾದ ಐದು ಜಿಲ್ಲೆಗಳಲ್ಲಿ ಮಳೆ ಮತ್ತು ಪ್ರವಾಹದ ಅಬ್ಬರದಿಂದ ಜನಜೀವನ ತತ್ತರಿಸಿದೆ. ಮನೆ ಕುಸಿತ ಮತ್ತು ನೀರಿನಲ್ಲಿ ಮುಳುಗಿ ಹೋದ ಪ್ರತ್ಯೇಕ ಘಟನೆಗಳಲ್ಲಿ ಐದು ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ವಿಶೇಷ ಪರಿಹಾರ ಆಯುಕ್ತ ಪ್ರದೀಪ್ ಕುಮಾರ್ ಜೆನಾ ಶುಕ್ರವಾರ ತಿಳಿಸಿದ್ದಾರೆ.

ಬಾರ್ಗಾಡ್, ನೌಪಡ, ಜಜ್ಪುರ್, ಬಾಳೇಶ್ವರ್ ಮತ್ತು ಭದ್ರಾಕ್‌ನಲ್ಲಿ ಮನೆಗಳು ಕುಸಿದಿವೆ. ಕೆಲವರು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಇದರಿಂದ ಇನ್ನೂ ಐದು ಸಾವುಗಳು ವರದಿಯಾಗಿವೆ. ಇದಕ್ಕೂ ಮುನ್ನ ಮಯೂರ್ಭಂಜ್, ಕೊಯಿಂಝರ್ ಮತ್ತು ಸುಂದರ್‌ಗಡದಲ್ಲಿ ಏಳು ಮಂದಿ ಮಳೆಯಿಂದಾಗಿ ಜೀವ ಕಳೆದುಕೊಂಡಿದ್ದರು. ಇಬ್ಬರು ನಾಪತ್ತೆಯಾಗಿದ್ದರು ಎಂದು ಅವರು ವಿವರಿಸಿದ್ದಾರೆ.

ಪ್ರವಾಹ ಪರಿಸ್ಥಿತಿಯ ನಿರ್ವಹಣೆಗೆ ಒಡಿಶಾ 11 ಜಿಲ್ಲೆಗಳಲ್ಲಿ ಸರ್ಕಾರ ರಾಷ್ಟ್ರೀಯ ವಿಪತ್ತು ಸ್ಪಂದನಾ ದಳ, ಒಡಿಶಾ ವಿಪತ್ತು ತ್ವರಿತ ಕ್ರಿಯಾ ತಂಡ ಮತ್ತು ಅಗ್ನಿಶಾಮಕ ದಳಗಳ 39 ತಂಡಗಳನ್ನು ನಿಯೋಜನೆ ಮಾಡಿದೆ. ಶನಿವಾರ ಐದು ಹೆಚ್ಚುವರಿ ಎನ್‌ಡಿಆರ್‌ಎಫ್ ತಂಡಗಳು ಸೇರಿಕೊಳ್ಳಲಿವೆ.

ಒಡಿಶಾದ ವಿವಿಧ ಭಾಗಗಳಲ್ಲಿ ಕೆಲವು ದಿನಗಳಿಂದ ವಿಪರೀತ ಮಳೆ ಸುರಿಯುತ್ತಿದೆ. ಇದರಿಂದ ನದಿಗಳು ಉಕ್ಕಿ ಹರಿಯುತ್ತಿದ್ದು, ಅನೇಕ ಹಳ್ಳಿಗಳು ಜಲಾವೃತವಾಗಿವೆ

TRENDING