Monday, September 28, 2020
Home ದೆಹಲಿ ಸೆ.14ರಿಂದ ಅ.1ರ ವರೆಗೆ ನಡೆಯಲಿವೆ‌ ಒಟ್ಟು 18 ಕಲಾಪಗಳು

ಇದೀಗ ಬಂದ ಸುದ್ದಿ

ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಗೂ ಕೊರೋನಾ...

ರಾಜ್ಯದಲ್ಲಿ ಕೊರೊನಾ ವೈರಸ್ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಮಾಜಿ ಸಚಿವ, ಕಾಂಗ್ರೆಸ್ ಮುಖಂಡ .ಹೆಚ್.ಕೆ. ಪಾಟೀಲ್ ಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಈ...

ಕಲಬುರಗಿಯಲ್ಲಿ ಪ್ರತಿಭಟನಾ ಮೆರವಣಿಗೆ

ಕೃಷಿ‌ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳ ಸೇರಿ ವಿವಿಧ ತಿದ್ದುಪಡಿ ಕಾಯ್ದೆಗಳ ವಿರೋಧಿಸಿ ಸೋಮವಾರ ನಡೆಯುತ್ತಿರುವ ಕರ್ನಾಟಕ ಬಂದ್ ಗೆ ಕಲಬುರಗಿಯಲ್ಲಿ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸ್ಯಾಂಡಲ್ ವುಡ್​​​ ಡ್ರಗ್ಸ್ ಕೇಸ್: ಇಂದು ನಶೆ...

ಸ್ಯಾಂಡಲ್​​ವುಡ್​​​ ಡ್ರಗ್ಸ್​ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ, ಸಂಜನಾ ಗರ್ಲಾನಿ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಪ್ರಕರಣದ ಕುರಿತು ವಾದ-ಪ್ರತಿವಾದ ಆಲಿಸಲಿರುವ ಎನ್​ಡಿಪಿಎಸ್...

ಕರ್ನಾಟಕ ಬಂದ್; ಏನೇನಿರತ್ತೆ..?ಏನಿರಲ್ಲ ?

 ಬೆಂಗಳೂರು: ಸರ್ಕಾರ ಅಂಗೀಕಾರ ಮಾಡಿರುವ ಭೂ ಸುಧಾರಣಾ ಮತ್ತು ಎಪಿಎಂಸಿ ಕಾಯ್ದೆ ವಿರೋಧಿಸಿ ಇಂದು (ಸೆಪ್ಟೆಂಬರ್​ 28) ರೈತಪರ ಸಂಘಟನೆಗಳು ಬಂದ್​ಗೆ ಕರೆ ನೀಡಿವೆ. ಈ ಕರ್ನಾಟಕ ಬಂದ್​ ನಿಮಿತ್ತ ಇಂದು...

‘ಸುರೇಶ ಅಂಗಡಿ ನಿರ್ಲಕ್ಷ್ಯ ವಹಿಸದಿದ್ದರೆ ಬದುಕುತ್ತಿದ್ದರೇನೋ…’: ಜಗದೀಶ...

   ಬೆಳಗಾವಿ: 'ಸುರೇಶ ಅಂಗಡಿ ಅವರು ಮಾಸ್ಕ್ ಹಾಕುವುದರಲ್ಲಿ ನಿರ್ಲಕ್ಷ್ಯ ವಹಿಸಿದರು. ಯಾವುದೇ ಚಟವಿಲ್ಲದ ನನಗೆ ಏನೂ ಆಗುವುದಿಲ್ಲ ಎಂಬ ಅತಿಯಾದ ಆತ್ಮವಿಶ್ವಾಸ ಅವರಲ್ಲಿತ್ತು....

ಸೆ.14ರಿಂದ ಅ.1ರ ವರೆಗೆ ನಡೆಯಲಿವೆ‌ ಒಟ್ಟು 18 ಕಲಾಪಗಳು

 ಹೊಸದಿಲ್ಲಿ: ಕೋವಿಡ್ 19 ಆತಂಕದ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಸಂಸತ್‌ನ ಮುಂಗಾರು ಅಧಿವೇಶನಕ್ಕೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ.

ಸೆ.14ರಂದು ಆರಂಭವಾಗಲಿರುವ ಅಧಿವೇಶನ ಒಂದು ದಿನವೂ ವಿರಾಮ ತೆಗೆದುಕೊಳ್ಳದೆ ಅಕ್ಟೋಬರ್‌ 1ರವರೆಗೆ ನಡೆಯಲಿದೆ.

ಉಭಯ ಸದನಗಳಲ್ಲಿ ಒಟ್ಟು 18 ಕಲಾಪಗಳು ನಡೆಯಲಿವೆ. ಪ್ರತಿ ಸದನವೂ ನಿತ್ಯ 4 ಗಂಟೆಗಳ ಕಾಲ ನಡೆಯಲಿದೆ. ರಾಜ್ಯಸಭೆ ಅಧಿವೇಶನ ದಿನದ ಆರಂಭದ 4 ಗಂಟೆ, ಬಳಿಕ ಲೋಕಸಭೆಯ ಕಲಾಪಗಳು 4 ಗಂಟೆ ನಡೆಯಲಿವೆ.

ನೋ ಬ್ರೇಕ್‌: ಕಲಾಪ ಸಂಬಂಧ ಮಾಹಿತಿ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ, ‘ಒಟ್ಟು 18 ಕಲಾಪಗಳ ನಡುವೆ ಯಾವುದೇ ವಿರಾಮಗಳು ಇರುವುದಿಲ್ಲ. ವಾರಾಂತ್ಯದ ರಜೆಗಳನ್ನು ನೀಡಿದರೆ ಸಂಸದರು ಬೇರೆ ಸ್ಥಳಗಳಿಗೆ ಪ್ರಯಾಣಿಸುವ ಸಾಧ್ಯತೆ ಇರುತ್ತದೆ. ಇದರಿಂದ ಸೋಂಕಿನ ಅಪಾಯ ಹೆಚ್ಚಾಗಬಹುದು. ವೀಕೆಂಡ್‌ನ‌ ಬಿಡುವು ನೀಡಿದರೆ ಅ. 1ರ ಆಚೆಗೂ ಅಧಿವೇಶನ ಮುಂದುವರಿಸಬೇಕಾಗುತ್ತದೆ. ಹೀಗೆ ಕಲಾಪ ವಿಸ್ತರಿಸುವುದು ಈ ಸಂದರ್ಭದಲ್ಲಿ ಸುರಕ್ಷಿತವಲ್ಲ’ ಎಂದು ಹೇಳಿದರು.

11 ಅಧ್ಯಾದೇಶ: ಉಭಯ ಸದನಗಳ ಅಂಗೀಕಾರಕ್ಕಾಗಿ ಕೇಂದ್ರ ಸರಕಾರ 11 ಅಧ್ಯಾದೇಶಗಳನ್ನು ತರಲು ಸಜ್ಜಾಗಿದೆ. ಇವು ಸಂಸದೀಯ ವ್ಯವಹಾರ, ಆರೋಗ್ಯ, ಹಣಕಾಸು, ಕೃಷಿ ಸಚಿವಾಲಯಕ್ಕೆ ಸಂಬಂಧಿಸಿವೆ.

ಕಾಂಗ್ರೆಸ್ಸದನ ತಂತ್ರ: ಸರಕಾರ ಪ್ರಕಟಿಸುವ ಅಧ್ಯಾದೇಶ ಚರ್ಚೆಗೆ ಹಾಗೂ ಆಡಳಿತ ವೈಫ‌ಲ್ಯಗಳನ್ನು ಪ್ರಶ್ನಿಸಲು ಪ್ರಮುಖ ವಿಪಕ್ಷ ಕಾಂಗ್ರೆಸ್‌ ಹಿರಿಯ ನಾಯಕರನ್ನು ಮುಂದೆ ಬಿಟ್ಟಿದೆ. ಪಿ. ಚಿದಂಬರಂ, ದಿಗ್ವಿಜಯ ಸಿಂಗ್‌, ಜೈರಾಮ್‌ ರಮೇಶ್‌, ಅಮರ್‌ ಸಿಂಗ್‌, ಗೌರವ್‌ ಗೊಗೊಯ್‌ ಅವರನ್ನೊಳಗೊಂಡ 5 ಸದಸ್ಯರ ಸಮಿತಿಯನ್ನು ಕಾಂಗ್ರೆಸ್‌ ರಚಿಸಿದೆ.

ಲಡಾಖ್‌ ಗಡಿ ಬಿಕ್ಕಟ್ಟು, ವಲಸೆ ಕಾರ್ಮಿಕರ ಸಮಸ್ಯೆ, ಕೋವಿಡ್ 19 ಆರ್ಥಿಕ ಬಿಕ್ಕಟ್ಟು ನಿರ್ವಹಣೆ ಕುರಿತು ಪ್ರಶ್ನೆಗಳ ದಾಳಿ ನಡೆಸಲು ಕಾಂಗ್ರೆಸ್‌ ತಂತ್ರ ಹೆಣೆದಿದೆ. ಕೋವಿಡ್ 19 ಪ್ರೊಟೋಕಾಲ್‌ ಅನ್ವಯ ಉಭಯ ಸದನಗಳ ಕಲಾಪಗಳು ನಡೆಯಲಿವೆ.

ಮುಂಗಾರು ಅಧಿವೇಶನ ಆರಂಭವಾಗುವ 72 ಗಂಟೆಗಳ ಮುಂಚೆ ಎಲ್ಲ ಸಂಸದರು, ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು ಮತ್ತು ಸಿಬಂದಿ ಕೋವಿಡ್ 19 ಪರೀಕ್ಷೆ ಮಾಡಿಸಿಕೊಳ್ಳಬೇಕು.

TRENDING