Sunday, September 27, 2020
Home ಜಿಲ್ಲೆ ಬೆಂಗಳೂರು ‘ದ್ರೋಣಾಚಾರ್ಯ’ ಪ್ರಶಸ್ತಿಗೆ ಆಯ್ಕೆಯಾಗಿದ್ದ ಅಥ್ಲೆಟಿಕ್ಸ್‌ ಕೋಚ್ ಪುರುಷೋತ್ತಮ್ ರೈ ನಿಧನ

ಇದೀಗ ಬಂದ ಸುದ್ದಿ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್‍ 88ನೇ ಹುಟ್ಟುಹಬ್ಬ,...

ನವದೆಹಲಿ : ಕಾಂಗ್ರೆಸ್ ಮುತ್ಸದ್ದಿ ಮತ್ತು ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರಿಗೆ ಇಂದು 88ನೇ ಜನ್ಮದಿನದ ಸಡಗರ-ಸಂಭ್ರಮ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ...

ಜಮ್ಮು ಮತ್ತು ಕಾಶ್ಮೀರದಲ್ಲಿ 4.5ರಷ್ಟು ತೀವ್ರತೆಯ ಭೂಕಂಪ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಲೇಹ್ ಮತ್ತು ಲಡಾಖ್ ಪ್ರದೇಶಗಳಲ್ಲಿ ಶನಿವಾರ ಭೂ ಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4.5 ರಷ್ಟು ದಾಖಲಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ...

ಚಂಡೀಗಢದಲ್ಲಿ ಆಕ್ಸ್‌ಫರ್ಡ್ ಕೊರೊನಾ ಲಸಿಕೆ ಪ್ರಯೋಗ ಆರಂಭ

 ನವದೆಹಲಿ : ಆಕ್ಸ್‌ಫರ್ಡ್ ಕೊರೊನಾ ಲಸಿಕೆಯ ಎರಡನೇ ಹಂತದ ಪ್ರಯೋಗ ಚಂಡೀಗಢದ ಪೋಸ್ಟ್ ಗ್ರಾಜುವೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಆಂಡ್ ರಿಸರ್ಚ್ ನಲ್ಲಿ ಆರಂಭಗೊಂಡಿದೆ.

ವಿಧಾನಸಭೆಯಲ್ಲಿ ತೀವ್ರ ವಿರೋಧದ ನಡುವೆಯೂ ಕರ್ನಾಟಕ...

ಬೆಂಗಳೂರು, ಸೆ. 26: ತೀವ್ರ ವಿವಾದಕ್ಕೆ ಕಾರಣವಾಗಿದ್ದ ಕರ್ನಾಟಕ ಭೂಸುಧಾರಣೆಗಳ ತಿದ್ದುಪಡಿ ವಿಧೇಯಕ ಅಂಗೀಕಾರವಾಗಿದೆ. ಕಾಂಗ್ರೆಸ್ ಪಕ್ಷದ ಸದಸ್ಯರ ತೀವ್ರ ವಿರೋಧದ ಮಧ್ಯೆಯೇ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರವಾಯಿತು. ಅದಕ್ಕೂ ಮೊದಲು...

ಕೃಷ್ಣ ಜನ್ಮಭೂಮಿ ಮಥುರಾ ಬಳಿ ಮಸೀದಿ ತೆರವು...

ಮಥುರಾ: ಇಲ್ಲಿನ ಕೃಷ್ಣ ಜನ್ಮಭೂಮಿ ಪ್ರದೇಶ ಹಿಂದೂಗಳಿಗೆ ಸೇರಿದ್ದು. ಕೃಷ್ಣನ ಭಕ್ತರು ಮತ್ತು ಹಿಂದೂ ಸಮುದಾಯದವರಿಗೆ ಇದು ಪವಿತ್ರ ಸ್ಥಳ ಎಂದು ವಕೀಲ ವಿಷ್ಣು ಜೈನ್ ಎಂಬುವವರು ಪ್ರತಿಪಾದಿಸಿದ್ದು, ಈ ಕುರಿತು...

‘ದ್ರೋಣಾಚಾರ್ಯ’ ಪ್ರಶಸ್ತಿಗೆ ಆಯ್ಕೆಯಾಗಿದ್ದ ಅಥ್ಲೆಟಿಕ್ಸ್‌ ಕೋಚ್ ಪುರುಷೋತ್ತಮ್ ರೈ ನಿಧನ

ಬೆಂಗಳೂರು: ದೇಶ ಕಂಡ ಖ್ಯಾತ ಅಥ್ಲೆಟಿಕ್ಸ್‌ ತರಬೇತುದಾರ ಪುರುಷೋತ್ತಮ ರೈ ತಮ್ಮ 79ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ.

ಶುಕ್ರವಾರ ರಾತ್ರಿ 7.30ಕ್ಕೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಹೃದಯಾಘಾತ ಹೊಂದಿದ ಪರಿಣಾಮ, ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಶನಿವಾರ ಆನ್‌ಲೈನ್‌ ಮೂಲಕ ದ್ರೋಣಾಚಾರ್ಯ ಪ್ರಶಸ್ತಿಯನ್ನು ಸ್ವೀಕರಿಸುವ ಸಂಭ್ರಮದಲ್ಲಿದ್ದ ಅವರು, ಹಿಂದಿನ ದಿನವಾದ ಶುಕ್ರವಾರ ನಿಧನ ಹೊಂದಿರುವುದು ನೋವಿನ ಸಂಗತಿಯಾಗಿದೆ.

ದ್ರೋಣಾಚಾರ್ಯ ಭಾರತೀಯ ಕ್ರೀಡಾ ತರಬೇತುದಾರರಿಗೆ ನೀಡುವ ಸರ್ವೋಚ್ಚ ಪ್ರಶಸ್ತಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ಪುರುಷೋತ್ತಮ ರೈ ಅವರು, ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದ ತರಬೇತುದಾರರಾಗಿ ನಿವೃತ್ತರಾಗಿದ್ದರು.

ಅವರಿಗೆ ಹತ್ತಾರುವರ್ಷಗಳ ಹಿಂದೆಯೇ ಸಿಗಬೇಕಾಗಿದ್ದ ದ್ರೋಣಾಚಾರ್ಯ, ತಡವಾಗಿಯಾದರೂ ಸಿಕ್ಕಿತ್ತು. ಸ್ವತಃ ರೈಯವರು ಈ ಪ್ರಶಸ್ತಿ ತನಗೆ 20 ವರ್ಷಗಳ ಹಿಂದೆಯೇ ಬರಬೇಕಿತ್ತೆಂದು ಹೇಳಿದ್ದರು. ಪ್ರಸ್ತುತ ತರಬೇತುದಾರರಾಗಿ ಅವರು ಮಾಡಿದ ಆಜೀವ ಸಾಧನೆಗೆ ದ್ರೋಣಾಚಾರ್ಯ ಲಭಿಸಿದೆ.

ಪುರುಷೋತ್ತಮ ಅವರು, 1974ರಿಂದಲೇ ತರಬೇತುದಾರಿಕೆಯನ್ನು ಆರಂಭಿಸಿದರು. ಹಲವಾರು ಏಷ್ಯನ್‌ ಗೇಮ್ಸ್‌ಗಳು, ಸ್ಯಾಫ್ ಗೇಮ್ಸ್‌ಗಳು, ಏಷ್ಯಾಮಟ್ಟದ ಇತರೆ ಕೂಟಗಳಿಗಾಗಿ ಅವರು ಅಥ್ಲೀಟ್‌ಗಳನ್ನು ತಯಾರು ಮಾಡಿದ್ದರು.

1987ರಲ್ಲಿ ಇಟಲಿಯ ರೋಮ್‌ನಲ್ಲಿ ವಿಶ್ವ ಅಥ್ಲೆಟಿಕ್‌ ಕೂಟಕ್ಕೆ ಭಾರತೀಯ ತಂಡದ ತರಬೇತುದಾರರಾಗಿ ತೆರಳಿದ್ದರು.

ಇವರ ಗರಡಿಯಲ್ಲಿ ತಯಾರಾಗಿದ್ದ ಖ್ಯಾತ ಕ್ರೀಡಾಪಟುಗಳು: ಪುರುಷೋತ್ತಮ ಅವರ ಗರಡಿಯಲ್ಲಿ ಹಲವಾರು ಕ್ರೀಡಾರತ್ನಗಳು ಸಿದ್ಧವಾಗಿವೆ ಅಚರಲ್ಲಿ ಪ್ರಮುಖರೆಂದರೆ, ಮುರಳಿಕುಟ್ಟನ್‌, ಅಶ್ವಿ‌ನಿ ನಾಚಪ್ಪ, ಎಸ್‌.ಡಿ.ಈಶನ್‌, ರೋಸಾ ಕುಟ್ಟಿ, ಜಿ.ಜಿ.ಪ್ರಮೀಳಾ, ಎಂ.ಕೆ.ಆಶಾ, ಇ.ಬಿ.ಶೈಲಾ, ಜೈಸಿ ಥಾಮಸ್‌ ಇವರಿಂದ ತರಬೇತಾದ ಪ್ರಮುಖರು.

TRENDING