Wednesday, September 23, 2020
Home ಸುದ್ದಿ ಜಾಲ CBIನಿಂದ ರಿಯಾ ಚಕ್ರವರ್ತಿಗೆ 8 ಗಂಟೆಗಳ ನಿರಂತರ ವಿಚಾರಣೆ

ಇದೀಗ ಬಂದ ಸುದ್ದಿ

ಜಮ್ಮು,ಕಾಶ್ಮೀರ : ಮಾತಾ ವೈಷ್ಣೋದೇವಿ ಭಕ್ತರಿಗೊಂದು ಸಿಹಿಸುದ್ದಿ

ಶ್ರೀನಗರ: ಜಮ್ಮುಮತ್ತು ಕಾಶ್ಮೀರದ ರೇಸಿ ಜಿಲ್ಲೆಯ ತ್ರಿಕೂಟ ಬೆಟ್ಟದಲ್ಲಿರುವ ಮಾತಾ ವೈಷ್ಣೋದೇವಿ ಭಕ್ತರಿಗೆ ಒಂದು ಸಿಹಿ ಸುದ್ದಿ. ಶೀಘ್ರವೇ ಭಕ್ತರು ಮೊಬೈಲ್ ಆಯಪ್ ಮೂಲಕ ದೇವಿಯ ನೇರ ದರ್ಶನವನ್ನು ಪಡೆಯಬಹುದು. ಇದಕ್ಕಾಗಿ...

ಡ್ರಗ್ಸ್ ಪ್ರಕರಣ : ಕಿರುತೆರೆ ನಟ-ನಟಿ ವಿಚಾರಣೆ

 ಬೆಂಗಳೂರು: ಡ್ರಗ್ಸ್ ಜಾಲದ ತನಿಖೆ ಆರಂಭಿಸಿರುವ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಪೊಲೀಸರು, ಕಿರುತೆರೆ ನಟ ಅಭಿಷೇಕ್ ಹಾಗೂ ನಟಿ ಗೀತಾ ಭಾರತಿ ಭಟ್ ಅವರನ್ನು ಮಂಗಳವಾರ ವಿಚಾರಣೆಗೆ ಒಳಪಡಿಸಿದರು.

ಐಪಿಎಲ್ 2020 : ಚೆನ್ನೈ ಸೂಪರ್...

ಮಂಗಳವಾರ ನಡೆದ ಐಪಿಎಲ್ ನ ನಾಲ್ಕನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

ದ.ಕ. ಜಿಲ್ಲೆಯ ಹಿರಿಯ ಉದ್ಯಮಿ, ಸಾಮಾಜಿಕ, ಧಾರ್ಮಿಕ...

ಪುತ್ತೂರು : ದ.ಕ. ಜಿಲ್ಲೆಯ ಹೆಸರಾಂತ ಹಿರಿಯ ಉದ್ಯಮಿ, ಸಾಮಾಜಿಕ, ಧಾರ್ಮಿಕ ಧುರೀಣ ಕಮ್ಮಾಡಿ ಇಬ್ರಾಹಿಂ ಹಾಜಿ (72) ಅವರು ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನ ಹೊಂದಿದರು.

ಮಹಾರಾಷ್ಟ್ರಕಟ್ಟಡ ಕುಸಿತ; 33ಕ್ಕೇರಿದ ಸಾವಿನ ಸಂಖ್ಯೆ

 ಮುಂಬೈ (ಸೆ. 23): ನೆರೆಯ ರಾಜ್ಯವಾದ ಮಹಾರಾಷ್ಟ್ರದ ಭಿವಾಂಡಿಯಲ್ಲಿ ಸೋಮವಾರ ನಸುಕಿನ ಜಾವ 3 ಅಂತಸ್ತಿನ ಕಟ್ಟಡವೊಂದು ಕುಸಿದುಬಿದ್ದಿತ್ತು. ಇದರಿಂದ ಕಟ್ಟಡದೊಳಗಿದ್ದ 10 ಜನರು ಸ್ಥಳದಲ್ಲೇ ಸಾವನ್ನಪ್ಪಿ, ಸಾಕಷ್ಟು ಜನರು...

CBIನಿಂದ ರಿಯಾ ಚಕ್ರವರ್ತಿಗೆ 8 ಗಂಟೆಗಳ ನಿರಂತರ ವಿಚಾರಣೆ

ನವದೆಹಲಿಸುಶಾಂತ್‌ ಸಿಂಗ್‌ ರಜಪೂತ್‌ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾ ಚಕ್ರವರ್ತಿಯನ್ನು ಸಿಬಿಐ ಅಧಿಕಾರಿಗಳು ಸತತ 8 ತಾಸು ನಿರಂತರ ವಿಚಾರಣೆಗೆ ಒಳಪಡಿಸಿದರು ಎಂದು ಹೆಸರು ಹೇಳಲು ಇಚ್ಛಿಸದ ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಸಿಬಿಐ ವಿಚಾರಣಾ ತಂಡದಲ್ಲಿರುವ ನೂಪುರ್ ಪ್ರಸಾದ್ ಅವರು ರಿಯಾ ಚಕ್ರವರ್ತಿ ಅವರ ಹೇಳಿಕೆಯನ್ನು ದಾಖಲಿಸಲಿದ್ದಾರೆ. ರಿಯಾ ಚಕ್ರವರ್ತಿ ಅವರು ಸುಶಾಂತ್‌ ಅವರ ಬ್ಯಾಂಕ್ ಖಾತೆಗಳಿಂದ ಹಣ ತೆಗೆದಿದ್ದರು, ಮೃತ ನಟನಿಗೆ ಮಾನಸಿಕ ಹಿಂಸೆ ನೀಡಿದ್ದರು ಎಂಬ ದೂರುಗಳ ಬಗ್ಗೆಯೂ ಸಿಬಿಐ ವಿಚಾರಣೆ ನಡೆಸಿದೆ. ರಿಯಾ ಅವರ ಸೋದರ ಶೌಬಿಕ್ ಅವರಿಗೂ ತನಿಖಾಧಿಕಾರಿಗಳು ಪ್ರಶ್ನೆಗಳನ್ನು ಕೇಳಿದರು ಎನ್ನಲಾಗಿದೆ.

ರಿಯಾ ಮತ್ತು ಸೌಬಿಕ್ ಅವರನ್ನು ಸಿಬಿಐ ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿತು. ಅವರ ಹೇಳಿಕೆಗಳಲ್ಲಿ ವ್ಯತ್ಯಾಸಗಳೇನಾದರೂ ಇವೆಯೇ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಲಾಯಿತು ಎಂದು ಮೂಲಗಳು ಹೇಳಿವೆ.

ಸುಶಾಂತ್‌ ಜೊತೆಗೆ ಒಂದು ವರ್ಷ ಡೇಟಿಂಗ್ ಮಾಡಿದ್ದ ರಿಯಾ ನಟ ಸಾವನ್ನಪ್ಪುವ ಆರು ದಿನ ಮೊದಲು, ಜೂನ್ 8ರಂದು ಅವರಿಂದ ಬೇರೆಯಾಗಿದ್ದರು. 28ರ ಹರೆಯದ ರಿಯಾ ಅವರ ವಿಚಾರಣೆ ವೇಳೆ ಸಿಬಿಐ 10 ಪ್ರಶ್ನೆಗಳನ್ನು ಮುಖ್ಯವಾಗಿ ಕೇಳಿತು ಎಂದು ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ಹೇಳಿವೆ.

1) ನಿಮಗೆ ಸುಶಾಂತ್‌ ಸಿಂಗ್ ರಜಪೂತ್ ಸಾವಿನ ವಿಚಾರವನ್ನು ತಿಳಿಸಿದವರು ಯಾರು? ಆಗ ನೀವು ಎಲ್ಲಿದ್ದಿರಿ?

2) ಸಾವಿನ ವಿಷಯ ತಿಳಿದ ತಕ್ಷಣ ನೀವು ಬಾಂದ್ರಾ ಮನೆಗೆ ಹೋದ್ರಾ? ಇಲ್ಲವಾದಲ್ಲಿ ಯಾಕೆ, ಯಾವಾಗ ಮತ್ತು ಎಲ್ಲಿ ಸುಶಾಂತ್‌ನ ಮೃತದೇಹ ನೋಡಿದಿರಿ?

3) ಜೂನ್ 8ರಂದು ಸುಶಾಂತ್‌ ಸಿಂಗ್ ರಜಪೂತ್‌ ಮನೆಯಿಂದ ಹೊರಗೆ ಹೋಗಿದ್ದು ಏಕೆ?

4) ಜಗಳವಾಡಿಕೊಂಡು ಸುಶಾಂತ್‌ ಮನೆಯಿಂದ ಹೊರನಡೆದದ್ದಾ?

5) ಸುಶಾಂತ್‌ ಮನೆಯಿಂದ ಹೊರನಡೆದ ನಂತರ, ಜೂನ್ 9 ಮತ್ತು 14ರಂದು ಸುಶಾಂತ್‌ ಜೊತೆಗೆ ಮಾತನಾಡಿದ್ರಾ? ಒಂದು ವೇಳೆ ಹೌದು ಎಂದಾದಲ್ಲಿ ಏನು ವಿಷಯ? ಒಂದ ವೇಳೆ ಇಲ್ಲ ಎಂದಾದಲ್ಲಿ ಏಕೆ?

6) ನಿಮ್ಮನ್ನು ಸಂಪರ್ಕಿಸಲು ಸುಶಾಂತ್‌ ಸಿಂಗ್ ಪ್ರಯತ್ನಿಸಿದ್ರಾ? ನೀವು ಅವರ ಫೋನ್ ಕಾಲ್‌ಗಳನ್ನು ಸ್ವೀಕರಿಸಲಿಲ್ಲವೇ? ಸ್ವೀಕರಿಸಲಿಲ್ಲ ಎಂದಾದರೆ ಏಕೆ? ನೀವು ಅವರ ಕಾಲ್‌ಗಳನ್ನು ಬ್ಲಾಕ್ ಮಾಡಿದ್ದು ಏಕೆ?

7) ನಿಮ್ಮ ಕುಟುಂಬದ ಇತರ ಯಾವುದೇ ಸದಸ್ಯರನ್ನು ಭೇಟಿಯಾಗಲು ಸುಶಾಂತ್ ಯತ್ನಿಸಿದ್ದರಾ? ಯಾವ ವಿಷಯಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆದಿತ್ತು?

8) ಸುಶಾಂತ್ ಸಿಂಗ್‌ ರಜಪೂತ್‌ರ ಆರೋಗ್ಯ ಸಮಸ್ಯೆಗಳು ಮತ್ತು ಅದಕ್ಕೆ ಅವರು ತೆಗೆದುಕೊಳ್ಳುತ್ತಿದ್ದ ಚಿಕಿತ್ಸೆ. ವೈದ್ಯರು, ಮನಃಶಾಸ್ತ್ರಜ್ಞರು ಮತ್ತು ಔಷಧಗಳ ಮಾಹಿತಿ

9) ಸುಶಾಂತ್‌ ಕುಟುಂಬದ ಜೊತೆಗೆ ನಿಮ್ಮ ಸಂಬಂಧ ಹೇಗಿತ್ತು?

10) ಸಿಬಿಐ ತನಿಖೆಗೆ (ರಿಯಾ) ಒತ್ತಾಯಿಸಿದ್ದು ಏಕೆ? ಅನುಮಾನಗಳೇನಾದರೂ ಇತ್ತೆ?

TRENDING