Wednesday, September 23, 2020
Home ಜಿಲ್ಲೆ ಯಾದಗಿರಿ ಭರವಸೆ ನೀಡಿದ ಎರಡೇ ದಿನದಲ್ಲಿ ಬಡ ಕುಟುಂಬಕ್ಕೆ ಆಹಾರ ಸಾಮಗ್ರಿ ತಲುಪಿಸಿದ “ಸೋನು ಸೂದ್”

ಇದೀಗ ಬಂದ ಸುದ್ದಿ

ಜಮ್ಮು,ಕಾಶ್ಮೀರ : ಮಾತಾ ವೈಷ್ಣೋದೇವಿ ಭಕ್ತರಿಗೊಂದು ಸಿಹಿಸುದ್ದಿ

ಶ್ರೀನಗರ: ಜಮ್ಮುಮತ್ತು ಕಾಶ್ಮೀರದ ರೇಸಿ ಜಿಲ್ಲೆಯ ತ್ರಿಕೂಟ ಬೆಟ್ಟದಲ್ಲಿರುವ ಮಾತಾ ವೈಷ್ಣೋದೇವಿ ಭಕ್ತರಿಗೆ ಒಂದು ಸಿಹಿ ಸುದ್ದಿ. ಶೀಘ್ರವೇ ಭಕ್ತರು ಮೊಬೈಲ್ ಆಯಪ್ ಮೂಲಕ ದೇವಿಯ ನೇರ ದರ್ಶನವನ್ನು ಪಡೆಯಬಹುದು. ಇದಕ್ಕಾಗಿ...

ಡ್ರಗ್ಸ್ ಪ್ರಕರಣ : ಕಿರುತೆರೆ ನಟ-ನಟಿ ವಿಚಾರಣೆ

 ಬೆಂಗಳೂರು: ಡ್ರಗ್ಸ್ ಜಾಲದ ತನಿಖೆ ಆರಂಭಿಸಿರುವ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಪೊಲೀಸರು, ಕಿರುತೆರೆ ನಟ ಅಭಿಷೇಕ್ ಹಾಗೂ ನಟಿ ಗೀತಾ ಭಾರತಿ ಭಟ್ ಅವರನ್ನು ಮಂಗಳವಾರ ವಿಚಾರಣೆಗೆ ಒಳಪಡಿಸಿದರು.

ಐಪಿಎಲ್ 2020 : ಚೆನ್ನೈ ಸೂಪರ್...

ಮಂಗಳವಾರ ನಡೆದ ಐಪಿಎಲ್ ನ ನಾಲ್ಕನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

ದ.ಕ. ಜಿಲ್ಲೆಯ ಹಿರಿಯ ಉದ್ಯಮಿ, ಸಾಮಾಜಿಕ, ಧಾರ್ಮಿಕ...

ಪುತ್ತೂರು : ದ.ಕ. ಜಿಲ್ಲೆಯ ಹೆಸರಾಂತ ಹಿರಿಯ ಉದ್ಯಮಿ, ಸಾಮಾಜಿಕ, ಧಾರ್ಮಿಕ ಧುರೀಣ ಕಮ್ಮಾಡಿ ಇಬ್ರಾಹಿಂ ಹಾಜಿ (72) ಅವರು ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನ ಹೊಂದಿದರು.

ಮಹಾರಾಷ್ಟ್ರಕಟ್ಟಡ ಕುಸಿತ; 33ಕ್ಕೇರಿದ ಸಾವಿನ ಸಂಖ್ಯೆ

 ಮುಂಬೈ (ಸೆ. 23): ನೆರೆಯ ರಾಜ್ಯವಾದ ಮಹಾರಾಷ್ಟ್ರದ ಭಿವಾಂಡಿಯಲ್ಲಿ ಸೋಮವಾರ ನಸುಕಿನ ಜಾವ 3 ಅಂತಸ್ತಿನ ಕಟ್ಟಡವೊಂದು ಕುಸಿದುಬಿದ್ದಿತ್ತು. ಇದರಿಂದ ಕಟ್ಟಡದೊಳಗಿದ್ದ 10 ಜನರು ಸ್ಥಳದಲ್ಲೇ ಸಾವನ್ನಪ್ಪಿ, ಸಾಕಷ್ಟು ಜನರು...

ಭರವಸೆ ನೀಡಿದ ಎರಡೇ ದಿನದಲ್ಲಿ ಬಡ ಕುಟುಂಬಕ್ಕೆ ಆಹಾರ ಸಾಮಗ್ರಿ ತಲುಪಿಸಿದ “ಸೋನು ಸೂದ್”

ಯಾದಗಿರಿತಾಲ್ಲೂಕಿನ ರಾಮಸಮುದ್ರ ಗ್ರಾಮದ ಪದ್ಮಮ್ಮ ನಾಗರಾಜ ದಂಪತಿಗೆ ನಟ ಸೋನು ಸೂದ್‌ ಅವರು ನೀಡಿದ ಭರವಸೆಯಂತೆ ಎರಡು ತಿಂಗಳಿಗೆ ಆಗುವಷ್ಟು ಆಹಾರ ಪದಾರ್ಥಗಳನ್ನು ಆಮೆಜಾನ್ ಪಾರ್ಸಲ್ ಮೂಲಕ ಕಳುಹಿಸಿದ್ದಾರೆ.

6 ದಿನಗಳ ಹಿಂದೆ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಪದ್ಮಮ್ಮ ತ್ರಿವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ಅವರ ಕುಟುಂಬ ಸಂಕಷ್ಟದಲ್ಲಿದ್ದು, ನೆರವು ನೀಡುವಂತೆ ಸ್ಥಳೀಯರೊಬ್ಬರು ನಟ ಸೋನು ಸೂದ್ ಅವರನ್ನು ಕೋರಿದ್ದರು.

ಮಕ್ಕಳಿಗೆ ಅಗತ್ಯವಿರುವ ವಸ್ತುಗಳನ್ನು ಹಾಗೂ ಅಗತ್ಯಬಿದ್ದರೆ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡುವುದಾಗಿ ಸೋನು ಸೂದ್‌ ಭರವಸೆ ನೀಡಿದ್ದರು.

ಗುರುವಾರ ಆಹಾರ ಸಾಮಗ್ರಿ ಸ್ವೀಕರಿಸಿದ ನಾಗರಾಜ, ‘ನಟ ಸೋನು ಸೂದ್ ಅವರು ನಮ್ಮ ಕುಟುಂಬಕ್ಕೆ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಕಳುಹಿಸಿದ್ದಾರೆ. ಅವರ ಮುಖ ನಾನು ನೋಡಿಲ್ಲ. ಅವರಿಗೆ ಯಾವ ರೀತಿ ಕೃತಜ್ಞತೆ ಸಲ್ಲಿಸಬೇಕು ಎಂಬುದು ಅರ್ಥವಾಗುತ್ತಿಲ್ಲ’ ಎಂದು ಭಾವುಕರಾದರು.

ವಿಡಿಯೊ ಸಂದೇಶ ಕಳುಹಿಸಿ ಅಭಿಪ್ರಾಯ ಹಂಚಿಕೊಂಡಿರುವ ನಟ ಸೋನು ಸೂದ್, ‘ನಾನು ನಾಗರಾಜನ ಕುಟುಂಬಕ್ಕೆ ಸಣ್ಣ ಸಹಾಯ ಮಾಡಿದ್ದೇನೆ. ಸಮಾಜದಲ್ಲಿರುವ ಸ್ಥಿತಿವಂತರು ಇಂಥ ಕುಟುಂಬಗಳಿಗೆ ಸಹಾಯ ಮಾಡಬೇಕು. ಆ ಭಗವಂತನ ದಯೆಯಿಂದ ತಾಯಿ, ಮಕ್ಕಳು ಆ ಕುಟುಂಬ ಆರೋಗ್ಯದಿಂದ ಜೀವನ ನಡೆಸಲಿ’ ಎಂದು ಹಾರೈಸಿದ್ದಾರೆ.

TRENDING