Sunday, September 27, 2020
Home ಸುದ್ದಿ ಜಾಲ ಮಳೆ ತರುವ ರೈತರ ನಂಬಿಗಸ್ತ ಜೋಕುಮಾರ

ಇದೀಗ ಬಂದ ಸುದ್ದಿ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್‍ 88ನೇ ಹುಟ್ಟುಹಬ್ಬ,...

ನವದೆಹಲಿ : ಕಾಂಗ್ರೆಸ್ ಮುತ್ಸದ್ದಿ ಮತ್ತು ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರಿಗೆ ಇಂದು 88ನೇ ಜನ್ಮದಿನದ ಸಡಗರ-ಸಂಭ್ರಮ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ...

ಜಮ್ಮು ಮತ್ತು ಕಾಶ್ಮೀರದಲ್ಲಿ 4.5ರಷ್ಟು ತೀವ್ರತೆಯ ಭೂಕಂಪ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಲೇಹ್ ಮತ್ತು ಲಡಾಖ್ ಪ್ರದೇಶಗಳಲ್ಲಿ ಶನಿವಾರ ಭೂ ಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4.5 ರಷ್ಟು ದಾಖಲಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ...

ಚಂಡೀಗಢದಲ್ಲಿ ಆಕ್ಸ್‌ಫರ್ಡ್ ಕೊರೊನಾ ಲಸಿಕೆ ಪ್ರಯೋಗ ಆರಂಭ

 ನವದೆಹಲಿ : ಆಕ್ಸ್‌ಫರ್ಡ್ ಕೊರೊನಾ ಲಸಿಕೆಯ ಎರಡನೇ ಹಂತದ ಪ್ರಯೋಗ ಚಂಡೀಗಢದ ಪೋಸ್ಟ್ ಗ್ರಾಜುವೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಆಂಡ್ ರಿಸರ್ಚ್ ನಲ್ಲಿ ಆರಂಭಗೊಂಡಿದೆ.

ವಿಧಾನಸಭೆಯಲ್ಲಿ ತೀವ್ರ ವಿರೋಧದ ನಡುವೆಯೂ ಕರ್ನಾಟಕ...

ಬೆಂಗಳೂರು, ಸೆ. 26: ತೀವ್ರ ವಿವಾದಕ್ಕೆ ಕಾರಣವಾಗಿದ್ದ ಕರ್ನಾಟಕ ಭೂಸುಧಾರಣೆಗಳ ತಿದ್ದುಪಡಿ ವಿಧೇಯಕ ಅಂಗೀಕಾರವಾಗಿದೆ. ಕಾಂಗ್ರೆಸ್ ಪಕ್ಷದ ಸದಸ್ಯರ ತೀವ್ರ ವಿರೋಧದ ಮಧ್ಯೆಯೇ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರವಾಯಿತು. ಅದಕ್ಕೂ ಮೊದಲು...

ಕೃಷ್ಣ ಜನ್ಮಭೂಮಿ ಮಥುರಾ ಬಳಿ ಮಸೀದಿ ತೆರವು...

ಮಥುರಾ: ಇಲ್ಲಿನ ಕೃಷ್ಣ ಜನ್ಮಭೂಮಿ ಪ್ರದೇಶ ಹಿಂದೂಗಳಿಗೆ ಸೇರಿದ್ದು. ಕೃಷ್ಣನ ಭಕ್ತರು ಮತ್ತು ಹಿಂದೂ ಸಮುದಾಯದವರಿಗೆ ಇದು ಪವಿತ್ರ ಸ್ಥಳ ಎಂದು ವಕೀಲ ವಿಷ್ಣು ಜೈನ್ ಎಂಬುವವರು ಪ್ರತಿಪಾದಿಸಿದ್ದು, ಈ ಕುರಿತು...

ಮಳೆ ತರುವ ರೈತರ ನಂಬಿಗಸ್ತ ಜೋಕುಮಾರ

ಹಿಂದಿನಿಂದ ತಮ್ಮ ಹಿರಿಯರು ಆಚರಿಸುತ್ತಾ ಬಂದ ಈ ಜೋಕುಮಾರನ ಹಬ್ಬವನ್ನು ತಳವಾರ ಸಮುದಾಯದಲ್ಲಿ ಇಂದಿಗೂ ಜಾರಿಯಲ್ಲಿದೆ. ಭಾದ್ರಪದ ಮಾಸದ ಅಷ್ಟಮಿಯಂದು ಹುಟ್ಟುವ ಜೋಕುಮಾರ ಜೋ ಎಂಬ ಮುನಿಯ ಮಗನು, ಜೇಷ್ಠಾ ದೇವಿಯ ಮಗನೆಂದು ಹೇಳಲಾಗುತ್ತಿದೆ. ಗಣಪ ಕುಳಿತು ತಿಂದು ಉಂಡು ಹೋದರೆ ಜೋಕುಮಾರ ಮಾತ್ರ ಭೂಮಂಡಲದಲ್ಲಿ ಓಣಿ ಓಣಿಗೂ ಸುತ್ತಾಡಿ, ಮಳೆ ಬೆಳೆ ಇಲ್ಲದೇ ಕಂಗಾಲಾಗಿರುವುದನ್ನು ಕಂಡು ಶಿವನಿಗೆ ವರದಿ ಒಪ್ಪಿಸಿ ಮಳೆ ತರುತ್ತಾನೆ ಎಂಬ ಪ್ರತೀತಿಯೂ ಇದೆ ಬಸಪ್ಪ ಕುಂಬಾರ ಮನೆಯಲ್ಲಿ ಜನಿಸಿ, ತಳವಾರ ಮನೆಯಲ್ಲಿ ಮೆರದಾಡಿ, ಕರ‍್ಯಾನವರ ಮನೆಯಲ್ಲಿ ಜಿಗಿದಾಡಿ ಕೊನೆಗೆ ದಾಸರ ಪಡಿಯಲ್ಲಿ ಮರಣ ಹೊಂದುತ್ತಾನೆ ಎಂಬುದು ಮೊದಲಿನಿಂದ ಜಾರಿಯಲ್ಲಿದ್ದ ಪದ್ದತಿಯಾಗಿದೆ. ಗಣಪತಿ ಕುಳಿತ ೪ನೇದಿನಕ್ಕೆ ಜೋಕುಮಾರ ಜನಿಸುತ್ತಾನೆ. ನಂತರ ಅವನಿಗೆ ಬೆಣ್ಣೆ, ಬೇವಿನ ತಪ್ಪಲದಿಂದ ಸಿಂಗರಿಸಿ ಬಿದರಿನ ಬುಟ್ಟಿಯಲ್ಲಿಟ್ಟುಕೊಂಡು ಮಹಿಳೆಯರು ಗಲ್ಲಿ ಗಲ್ಲಿ ಮನೆ ಮನೆ ತಿರುಗಾಡುತ್ತಾರೆ. ಜೋಕುಮಾರನ ಜಾನಪದ ಹಾಡುಗಳನ್ನು ಹಾಡುತ್ತಾ, ಕೇಳುಗರನ್ನು ಮಂತ್ರ ಮಗ್ದರನ್ನಾಗಿಸುತ್ತಾರೆ ಜೋಕುಮಾರನಿಗೆ ಗೋದಿ, ಜೋಳ, ಸಜ್ಜಿ ಹಣ ಸೇರಿದಂತೆ ಅನೇಕ ಪದಾರ್ಥಗಳನ್ನು ಜನ ನೀಡುತ್ತಾರೆ. ಬಂದ ದಾನ್ಯಗಳಲ್ಲಿ ಕುಂಬಾರರು, ಕೇರಿಯ ಜನರು ಸೇರಿ ಮೂರು ಪಾಲು ಹಂಚಿಕೊಳ್ಳುತ್ತಾರೆ. ೭ ದಿನಗಳ ವರೆಗೆ ನಗರದಲ್ಲಿ ತಿರುಗಾಡಿ ೭ನೇ ರಾತ್ರಿ ಎಲ್ಲ ಜನ ಮಲಗಿದ ಮೇಲೆ ಕೇರಿಯಲ್ಲಿನ ದೇವಿಗುಡಿ ಕಟ್ಟೆಮೇಲೆ ಇಟ್ಟು ಬರುತ್ತಾರೆ. ನಂತರ ಕೇರಿಯ ಜನ ಜೋಕುಮಾರನ ಮೂರ್ತಿಮೇಲೆ ಬಾರಿಗಿಡದ ಕಂಟಿಯಿಂದ ಮುಚ್ಚಿ ಆತನ ಸುತ್ತಲೂ ಸುತ್ತುತ್ತಾರೆ. ಸುತ್ತುವಾಗ ಬಾರಿ ಕಂಟಿಗೆ ಸೀರೆ ಸಿಲುಕಿದಾಗ ಜೋಕುಮಾರ ಜಗ್ಗಿದಾ ಎಂದು ಭಾವಿಸಿ ಕಲ್ಲಿನಿಂದ, ಒಣಕೆಯಿಂದ ಜಡಿದು ತಲೆ ಬುರುಡೆ ಒಡೆಯುವುದು ವಾಡಿಕೆ. ನಂತರ ದಾಸರ ಪಡಿಯಲ್ಲಿ ಒಡೆದ ಮೂರ್ತಿ ಧಫನ್ ಮಾಡುತ್ತಾರೆ. ಮರುದಿನ ದಾಸರು (ಅಗಸರು) ಜೋಕುಮಾರನ ದಿನದ (ತಿಥಿ) ಕಾರ್ಯದ ಸಿಹಿ ಊಟ ಮಾಡಿ ಹಬ್ಬ ಮುಗಿಸುತ್ತಾರೆ.

TRENDING