Monday, September 21, 2020
Home ಕೋವಿಡ್-19 ಡೆಡ್ಲಿ ಕೊರೋನಾಗೆ ತಮಿಳುನಾಡು ಸಂಸದ ಹೆಚ್. ವಸಂತಕುಮಾರ್ ಬಲಿ

ಇದೀಗ ಬಂದ ಸುದ್ದಿ

ಶೀಘ್ರದಲ್ಲಿಯೇ ರಫೇಲ್ ಜೆಟ್ ಹಾರಿಸಲಿದ್ದಾರೆ ಮಹಿಳಾ ಪೈಲಟ್

 ನವದೆಹಲಿ, ಸೆ 21: ಅಂಬಾಲಾ ವಾಯುನೆಲೆಯಲ್ಲಿನ ಸಂಪೂರ್ಣ ಪುರುಷ ಪೈಲಟ್‌ಗಳ ರಫೇಲ್ ತಂಡಕ್ಕೆ ಶೀಘ್ರದಲ್ಲಿಯೇ ಮೊದಲ ಮಹಿಳಾ ಪೈಲಟ್ ಸೇರ್ಪಡೆಯಾಗಲಿದ್ದಾರೆ. ಭಾರತೀಯ ವಾಯು ಪಡೆಯಲ್ಲಿ ಸಕ್ರಿಯರಾಗಿರುವ...

ಸ್ಯಾಂಡಲ್ವುಡ್ ಡ್ರಗ್ಸ್ ಜಾಲ ; ಆದಿತ್ಯ ಅಗರ್ವಾಲ್...

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ಸ್​ ಲಿಂಕ್ ಆರೋಪ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆದಿತ್ಯಾ ಅಗರ್ವಾಲ್​​ನನ್ನ ಮತ್ತೆ ಸಿಸಿಬಿಗೆ ಒಪ್ಪಿಸಲಾಗಿದೆ. ಸಿಸಿಬಿ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಎನ್​ಡಿಪಿಎಸ್​ ಕೋರ್ಟ್​ಗೆ...

ದೆಹಲಿ ಗಲಭೆ ಪ್ರಕರಣ : ಕುಟುಂಬ ಭೇಟಿಗೆ...

ನವದೆಹಲಿ: ದೆಹಲಿ ಗಲಭೆಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿ ಬಂಧಿತರಾಗಿರುವ ಜೆಎನ್‌ಯು ಹ‌ಳೆಯ ವಿದ್ಯಾರ್ಥಿ ‌ಉಮರ್ ಖಾಲಿದ್, ತಮ್ಮ ಕುಟುಂಬ ಭೇಟಿಗಾಗಿ ಅನುಮತಿ...

N L S I U ಬೆಂಗಳೂರಿನ...

 ನವದೆಹಲಿ: ಬೆಂಗಳೂರಿನ ಎನ್‌ಎಲ್‌ಎಸ್‌ಐಯು ನ ಬಿಎ.ಎಲ್‌ಎಲ್ ಬಿ (ಆನರ್ಸ್) ಪ್ರವೇಶಕ್ಕೆ ನಡೆಸಲಾಗುತ್ತಿದ್ದ ಪ್ರತ್ಯೇಕ ಪ್ರವೇಶ ಪರೀಕ್ಷೆ ಎನ್‌ಎಲ್‌ಎಟಿ-2020 ನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಎಲ್ಲಾ 22 ರಾಷ್ಟ್ರೀಯ...

ಡ್ರಗ್ ಪ್ರಕರಣ : ನಶೆ ರಾಣಿಯರ...

ಬೆಂಗಳೂರು,ಸೆ.21: ಡ್ರಗ್ ಜಾಲದಲ್ಲಿ ಭಾಗಿಯಾಗಿ ಬಂಧಿತರಾಗಿ ಜೈಲು ಸೇರಿರುವ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನಗರದ ಎನ್‍ಡಿಪಿಎಸ್ ವಿಶೇಷ ನ್ಯಾಯಾಲಯ ವಿಚಾರಣೆಯನ್ನು...

ಡೆಡ್ಲಿ ಕೊರೋನಾಗೆ ತಮಿಳುನಾಡು ಸಂಸದ ಹೆಚ್. ವಸಂತಕುಮಾರ್ ಬಲಿ

 ಚೆನ್ನೈಮಾರಕ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿದ್ದ ತಮಿಳುನಾಡಿನ ಕನ್ಯಾಕುಮಾರಿ ಕ್ಷೇತ್ರದ ಸಂಸದ ಹೆಚ್ ವಸಂತಕುಮಾರ್ ಅವರು ಸಾವನ್ನಪ್ಪಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.

ಕನ್ಯಾಕುಮಾರಿ ಕ್ಷೇತ್ರ ಸಂಸದರಾಗಿರುವ ಹೆಚ್ ವಸಂತಕುಮಾರ್ ಅವರು ಇದೇ ಆಗಸ್ಟ್ 10ರಂದು ಕೊರೋನಾ ಸೋಂಕಿಗೆ ತುತ್ತಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಸಂಜೆಯಿಂದೀಚೆಗೆ ಅವರ ಆರೋಗ್ಯದಲ್ಲಿ ತೀವ್ರ ವ್ಯತ್ಯಯವಾಗಿತ್ತು. ಹೀಗಾಗಿ ಅವರನ್ನು ತೀವ್ರ ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿ ಅಧಿಕೃತ ಪ್ರಕಟಣೆ ಹೊರಡಿಸಿದೆ.

ತಮಿಳುನಾಡಿನ ಖ್ಯಾತ ಉದ್ಯಮಿಗಳಲ್ಲಿ ಒಬ್ಬರಾಗಿದ್ದ ವಸಂತ್ ಕುಮಾರ್ ಅವರು ವಸಂತ್ ಅಂಡ್ ಕಂ ಸಮೂಹ ಸಂಸ್ಥೆಗಳ ಮಾಲೀಕರು ಕೂಡ ಆಗಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕನ್ಯಾಕುಮಾರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರು. ಇದಕ್ಕೂ ಮೊದಲು ಅವರು 2 ಬಾರಿ ಶಾಸಕರಾಗಿಯೂ ಗೆದ್ದಿದ್ದರು.

ಇನ್ನು ವಸಂತಕುಮಾರ್ ಅವರ ಸಾವಿಗೆ ಕಾಂಗ್ರೆಸ್ ಕಂಬನಿ ಮಿಡಿದ್ದು, ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷದ ವಕ್ತಾರ ರಂದೀಪ್ ಸುರ್ಜೇವಾಲಾ ಅವರು, ವಸಂತಕುಮಾರ್ ಅವರ ಸಾವಿನಿಂದ ತೀವ್ರ ನೋವಾಗಿದ್ದು, ವಸಂತ್ ಕುಮಾರ್ ಅವರು ಹುಟ್ಟು ಹೋರಾಟಗಾರರಾಗಿದ್ದರು. ಟಿಎನ್ ಸಿಸಿ ಕಾರ್ಯಕಾರಿ ಅಧ್ಯಕ್ಷರಾಗಿದ್ದ ಅವರು ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದ್ದರು. ಅವರ ಅಗಲಿಕೆ ಅವರ ಅಭಿಮಾನಿಗಳು ಮತ್ತು ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರಿಗೆ ನೋವುತಂದಿದೆ. ಅವರ ಆತ್ಮಕ್ಕೆ ಶಾಂತಿಸಿಗಲಿ. ಅವರ ಕುಟುಂಬಕ್ಕೆ ಅಗಲಿಕೆ ನೋವು ತಡೆಯುವ ಶಕ್ತಿ ಆ ದೇವರು ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.

TRENDING