Friday, September 25, 2020
Home ಅಂತರ್ ರಾಷ್ಟ್ರೀಯ ಜಗತ್ತಿನಾದ್ಯಂತ 2.39 ಕೋಟಿ ಕೊರೊನಾ ಸೋಂಕಿತರು

ಇದೀಗ ಬಂದ ಸುದ್ದಿ

ದೆಹಲಿ ಡಿಸಿಎಂ ಸಿಸೋಡಿಯಾರಿಗೆ ಕೊರೊನಾ ಜೊತೆ ಡೆಂಗ್ಯೂ...

ಕೊರೊನಾವೈರಸ್ ಸೋಂಕು ತಗುಲಿರುವ ಹಿನ್ನೆಲೆ ನವದೆಹಲಿಯ ಲೋಕ ನಾಯಕ ಜಯಪ್ರಕಾಶ್ ಆಸ್ಪತ್ರೆಗೆ ದಾಖಲಾಗಿರುವ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಡೆಂಗ್ಯೂ ಸೋಂಕು ಕೂಡಾ ತಗುಲಿರುವ ಬಗ್ಗೆ ತಿಳಿದು ಬಂದಿದೆ.

ರಾಜ್ಯ ಪೊಲೀಸ್‌ ಇಲಾಖೆಯಲ್ಲಿ 20,203 ಹುದ್ದೆ ಖಾಲಿ:...

 ಬೆಂಗಳೂರು: ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ವಿವಿಧ ಶ್ರೇಣಿಯ 20,203 ಹುದ್ದೆಗಳು ಖಾಲಿ ಇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ವಿಧಾನ ಪರಿಷತ್‌ನಲ್ಲಿ ಗುರುವಾರ ಜೆಡಿಎಸ್‌...

ಬ್ಯಾಂಕ್ ಖಾತೆಯಲ್ಲಿ ವಂಚನೆಯಾದ್ರೆ ತಕ್ಷಣ ಏನು ಮಾಡಬೇಕು.?...

 ಕೊರೊನಾ ಮಧ್ಯೆ ವಂಚನೆ ಪ್ರಕರಣಗಳು ಹೆಚ್ಚಾಗ್ತಿವೆ. ಇದನ್ನು ತಪ್ಪಿಸಲು ಆರ್‌ಬಿಐ ಸಾಮಾನ್ಯ ಜನರಿಗೆ ನಿರಂತರವಾಗಿ ಮಾಹಿತಿ ನೀಡುತ್ತಿದೆ. ಇದರ ಹೊರತಾಗಿಯೂ ಖಾತೆಯಲ್ಲಿರುವ ಹಣ ಕಳ್ಳತನವಾದ್ರೆ ಏನು ಮಾಡಬೇಕು ಎಂಬ ಬಗ್ಗೆ...

ಕೋವಿಡ್ 19 ಪರಿಹಾರ ಧನ : ಚಾಲಕರಿಗೆ...

ಬೆಂಗಳೂರು: ಲಾಕ್‌ಡೌನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರಿಗೆ ಘೋಷಿಸಿರುವ 5,000 ರೂ. ನೆರವು ಪಡೆಯಲು ಮತ್ತೂಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ಭರವಸೆಯನ್ನು ಸರಕಾರ ನೀಡಿದೆ.

ಡ್ರಗ್ಸ್ ಪ್ರಕರಣ : ನಟಿ ಸಂಜನಾ ಗಲ್ರಾನಿ...

ಬೆಂಗಳೂರು: ಡ್ರಗ್ಸ್ ಜಾಲ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಸೇರಿರುವ ನಟಿ ಸಂಜನಾ ಗಲ್ರಾನಿ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸೆ. 28ಕ್ಕೆ ಮುಂದೂಡಲಾಗಿದೆ. ಸಂಜನಾ ಪರ ವಕೀಲರು...

ಜಗತ್ತಿನಾದ್ಯಂತ 2.39 ಕೋಟಿ ಕೊರೊನಾ ಸೋಂಕಿತರು

ಲಂಡನ್‌: ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯ ಎಲ್ಲ ಮಾದರಿಯ ಕೊರೊನಾ ವೈರಸ್‌ ಸೋಂಕಿಗೆ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಬ್ರಿಟನ್‌ ಸರ್ಕಾರ ಬುಧವಾರ ತಿಳಿಸಿದೆ.

ಈ ಲಸಿಕೆ ಕೋವಿಡ್-19ಗೆ ಮಾತ್ರವಲ್ಲದೇ ಎಲ್ಲಾ ಮಾದರಿಯ ಕೊರೊನಾ ವೈರಸ್‌ ಸೋಂಕಿಗೂ ಪರಿಣಾಮಕಾರಿ ಎಂದು ಬ್ರಿಟನ್‌ ವಿಜ್ಞಾನಿಗಳು ತಿಳಿಸಿದ್ದಾರೆ. ಈಗಾಗಲೇ ಪ್ರಾಣಿಗಳ ಮೇಲಿನ ಪರೀಕ್ಷೆ ಯಶಸ್ವಿಯಾಗಿದ್ದು, ಮುಂದಿನ ವಾರದಲ್ಲಿ ಮಾನವರ ಮೇಲೆ ಪ್ರಯೋಗ ನಡೆಸಲಾಗುವುದು ಎಂದು ವಿಜ್ಞಾಣಿಗಳು ಖಚಿತ ಪಡಿಸಿದ್ದಾರೆ.

ಜಾಗತಿಕವಾಗಿ ಕೊರೊನಾ ಸೋಂಕಿನ ತೀವ್ರತೆ ಕಡಿಮೆಯಾಗಿದೆ. ಜರ್ಮನಿ ಪ್ರಯಾಣದ ಹಿನ್ನೆಲೆ ಇರುವವರ ಕಡ್ಡಾಯ ಕೋವಿಡ್‌ ಪರೀಕ್ಷೆಯನ್ನು ವಾಪಾಸು ಪಡೆದಿದೆ. ಈ ನಡುವೆ ಆಸ್ಟ್ರೇಲಿಯಾದಲ್ಲಿ ಸೋಂಕು ಹೆಚ್ಚುತ್ತಿದ್ದು ಒಂದೇ ದಿನ 24 ಜನರು ಮೃತಪಟ್ಟಿದ್ದಾರೆ.

ಜಗತ್ತಿನಾದ್ಯಂತ ಒಟ್ಟು 2.39 ಕೋಟಿ ಸೋಂಕಿತರು

ಜಗತ್ತಿನಾದ್ಯಂತ ಇದುವರೆಗೆ ಒಟ್ಟು 2,39,36,026 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಇದರಲ್ಲಿ 1,56,15,139 ಸೋಂಕಿತರು ಗುಣಮುಖರಾಗಿದ್ದಾರೆ. 8,20,438 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಜಾನ್ಸ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯದ ಕೊರೊನಾ ಸಂಪನ್ಮೂಲ ಕೇಂದ್ರ ಮಾಹಿತಿ ನೀಡಿದೆ.

ಜಗತ್ತಿನಲ್ಲಿ ಅತಿಹೆಚ್ಚು ಪ್ರಕರಣಗಳು ವರದಿಯಾಗಿರುವ ಅಮೆರಿಕದಲ್ಲಿ ಈ ವರೆಗೆ 57,81,834 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಲ್ಲಿ 20,53,699 ಸೋಂಕಿತರು ಗುಣಮುಖರಾಗಿದ್ದು, 1,78,578 ಮಂದಿ ಮೃತಪಟ್ಟಿದ್ದಾರೆ.

ಅಮೆರಿಕ ನಂತರ ಹೆಚ್ಚು ಪ್ರಕರಣಗಳು ವರದಿಯಾದ ರಾಷ್ಟ್ರಗಳ ಸಾಲಿನಲ್ಲಿರುವ ಬ್ರೆಜಿಲ್‌ನಲ್ಲಿ 36,69,995 ಪ್ರಕರಣಗಳು ಬೆಳಕಿಗೆ ಬಂದಿವೆ. 30,32,551 ಸೋಂಕಿತರು ಗುಣಮುಖರಾಗಿದ್ದು1,16,580 ಜನರು ಮೃತಪಟ್ಟಿದ್ದಾರೆ.

ಭಾರತದಲ್ಲಿ..
ದೇಶದಾದ್ಯಂತ ಕಳೆದ 24 ಗಂಟೆಗಳ ಅವಧಿಯಲ್ಲಿ 67,151 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, 1,059 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 32,34,475ಕ್ಕೆ ಏರಿಕೆಯಾಗಿದ್ದು, 24,67,759 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 59,449 ಮಂದಿ ಸಾವಿಗೀಡಾಗಿದ್ದಾರೆ. ಸದ್ಯ ದೇಶದಲ್ಲಿ 7,07,267 ಸಕ್ರಿಯ ಪ್ರಕರಣಗಳು ಇವೆ.

ಸೋಂಕಿನ ತೀವ್ರತೆ ಪಟ್ಟಿಯಲ್ಲಿ ಜಾಗತಿಕವಾಗಿ ಭಾರತ ಮೂರನೇ ಸ್ಥಾನದಲ್ಲಿದೆ.

ರಷ್ಯಾದಲ್ಲಿ 9,68,297, ದಕ್ಷಿಣ ಆಫ್ರಿಕಾದಲ್ಲಿ 6,13,017, ಪೆರುವಿನಲ್ಲಿ 6,00,438, ಮೆಕ್ಸಿಕೋದಲ್ಲಿ 5,68,621 ಸ್ಪೇನ್‌ನಲ್ಲಿ 4,12,553, ಚಿಲಿಯಲ್ಲಿ 4,00,985, ಇಂಗ್ಲೆಂಡ್‌ನಲ್ಲಿ 3,29,883 ಪ್ರಕರಣಗಳು ವರದಿಯಾಗಿವೆ.

ಜಗತ್ತಿನಲ್ಲೇ ಮೊದಲು ಸೋಂಕು ಕಾಣಿಸಿಕೊಂಡ ಚೀನಾದಲ್ಲಿ ಈವರೆಗೆ 89,738 ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ 4,711 ಸೋಂಕಿತರು ಮೃತಪಟ್ಟಿದ್ದು, 84,058 ಗುಣಮುಖರಾಗಿದ್ದಾರೆ. ಇನ್ನು ಕೇವಲ 969 ಸಕ್ರಿಯ ಪ್ರಕರಣಗಳು ಇವೆ ಎಂದು ವರದಿಯಾಗಿದೆ.

TRENDING