Monday, September 21, 2020
Home ಅಂತರ್ ರಾಜ್ಯ ರಾಯಗಡ ಕಟ್ಟಡ ಕುಸಿತ: 13 ಮಂದಿ ಸಾವು

ಇದೀಗ ಬಂದ ಸುದ್ದಿ

ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ರೈತರ ಬೃಹತ್ ಪ್ರತಿಭಟನೆ

ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಮುಂದಾಗಿರುವ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತ ಸಂಘ, ಕಾರ್ಮಿಕ ಸಂಘಟನೆಗಳು ಸೇರಿದಂತೆ 30ಕ್ಕೂ ಹೆಚ್ಚು...

ಪತ್ರಕರ್ತ ರಾಜೀವ್ ಶರ್ಮಾ ಮತ್ತೆ 7 ದಿನ...

ಚೀನಾದ ಪರ ಬೇಹುಗಾರಿಕೆ ಆರೋಪದಡಿ ಬಂಧಿತರಾಗಲಿರುವ ಫ್ರೀಲ್ಯಾನ್ಸ್ ಪತ್ರಕರ್ತ ರಾಜೀವ್ ಶರ್ಮಾರನ್ನು ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.

ವಾಟ್ಸ್ ಆಪ್ ಬಳಕೆದಾರರಿಗೆ ಸಿಹಿ ಸುದ್ದಿ

ವಾಟ್ಸಾಪ್ ಬಹಳ ಸಮಯದಿಂದ ಬಹು ಸಾಧನಬೆಂಬಲದ ಮೇಲೆ ಕೆಲಸ ಮಾಡುವ ಅವೃತ್ತಿ ಬಗ್ಗೆ ಸಂಶೋಧನೆ ನಡೆಸುತ್ತಿದೆ. ಈ ಫೀಚರ್ ಹಲವು ಡಿವೈಸ್ ಗಳಲ್ಲಿ ಒಂದು ವಾಟ್ಸಾಪ್ ಖಾತೆಯನ್ನು ಬಳಸಲು ಅನುಮತಿಸುತ್ತದೆ....

ವಿಧಾನಸೌಧದಲ್ಲಿ ಆಡಳಿತ ಪಕ್ಷದ ಶಾಸಕ-ಸಚಿವರ ನಡುವೆ ಫೈಟ್

ಇಂದಿನಿಂದ ವಿಧಾನಸಭೆ ಅಧಿವೇಶನ ಆರಂಭವಾಗಿದ್ದು, ಆಡಳಿತ ಪಕ್ಷದ ಶಾಸಕ ಮತ್ತು ಸಚಿವರ ನಡುವೆ ಅನುದಾನದ ವಿಚಾರವಾಗಿ ಗಲಾಟೆ ಮಾಡಿಕೊಂಡಿರುವ ಘಟನೆ ವಿಧಾನಸಭೆ ಸೆಂಟ್ರಲ್ ಹಾಲ್ ಲಾಂಜ್ ನಲ್ಲಿ ನಡೆದಿದೆ.

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್‍ಗೆ ಮುಖಭಂಗ

ಐದು ವರ್ಷಗಳ ಸಮಗ್ರ ಬಿಎ ಎಲ್‍ಎಲ್‍ಬಿ(ಹಾನರ್ಸ್) ಪದವಿಗಾಗಿ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (ಎನ್‍ಎಲ್‍ಎಸ್‍ಐಯು) ನಡೆಸಿದ್ದ ಪ್ರತ್ಯೇಕ ಪ್ರವೇಶ ಪರೀಕ್ಷೆಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಇದರಿಂದಾಗಿ ರಾಷ್ಟ್ರೀಯ...

ರಾಯಗಡ ಕಟ್ಟಡ ಕುಸಿತ: 13 ಮಂದಿ ಸಾವು

ಮುಂಬೈ: ರಾಯಗಡ ಜಿಲ್ಲೆಯಲ್ಲಿ ಐದು ಮಹಡಿಗಳ ಕಟ್ಟಡ ಕುಸಿದು ಬಿದ್ದು ಅವಶೇಷಗಳಡಿ ಸಿಲುಕಿದ್ದ 60ರ ಹರೆಯದ ಮೆಹರುನ್ನಿಸ್ಸಾ ಅಬ್ದುಲ್ ಹಮೀದ್ ಕಾಝಿ ಎಂಬ ಮಹಿಳೆಯನ್ನು 26 ಗಂಟೆಗಳ ನಂತರ ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ.

ಇದಕ್ಕಿಂತ ಮುನ್ನ 19 ಗಂಟೆಗಳ ಕಾಲ ಅವಶೇಷದಡಿಯಲ್ಲಿದ್ದ ನಾಲ್ಕರ ಹರೆಯದ ಬಾಲಕನನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ರಕ್ಷಿಸಿತ್ತು.

ಮುುಂಬೈನಿಂದ 170 ಕಿಮೀ ದೂರದಲ್ಲಿರುವ ಮಹಾಡ್ ನಗರದಲ್ಲಿ ನಡೆದ ಈ ಘಟನೆಯಲ್ಲಿ 13 ಮಂದಿ ಸಾವಿಗೀಡಾಗಿದ್ದಾರೆ. 12 ಮಂದಿಯ ಮೃತದೇಹವನ್ನು ಮಂಗಳವಾರ ರಾತ್ರಿ ಹೊರತೆಗೆಯಲಾಗಿದೆ. 9 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

7 ವರ್ಷದ ಹಿಂದೆ ನಿರ್ಮಿಸಿದ್ದ 45 ವಸತಿಗಳಿರುವ ಐದು ಅಂತಸ್ತಿನ ಸಮುಚ್ಚಯ ಸೋಮವಾರ ಸಂಜೆ ಕುಸಿದು ಬಿದ್ದಿತ್ತು. ಕಟ್ಟಡದ ಗುತ್ತಿಗೆದಾರ ಮತ್ತು ವಾಸ್ತುಶಿಲ್ಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

2013ರಲ್ಲಿ ನಾವು ಇಲ್ಲಿ ವಾಸಿಸಲು ಬಂದಾಗಿನಿಂದ ಗಮನಿಸಿದ್ದೇವೆ. ಕಟ್ಟಡದ ನಿರ್ಮಾಣ ರೀತಿ ಕಳಪೆಯಾಗಿದ್ದು, ಮೇಲ್ಪದರ ಕಿತ್ತು ಬರುತ್ತಿತ್ತು. ನಂತರದ ಎರಡು ವರ್ಷಗಳಲ್ಲಿ ಸಮಸ್ಯೆ ಮತ್ತಷ್ಟು ಹೆಚ್ಚಾದಾಗ ನಾವು ಬಿಲ್ಡರ್‌ನ್ನು ಭೇಟಿಯಾದೆವು. ಆದರೆ ಅವರು ರಿಪೇರಿ ಮಾಡಲು ಹಿಂಜರಿದರು. ನಾವು ಕಟ್ಟಡ ನಿರ್ಮಿಸಿ ನಿಮಗೆ ನೀಡಿದ್ದೇವೆ. ಇನ್ನು ಮುಂದೆ ಏನು ಮಾಡಬೇಕು ಎಂಬುದು ನಿಮಗೆ ಬಿಟ್ಟಿದ್ದು ಎಂದಿದ್ದರು. ನಾನು ಕಟ್ಟಡ ಕುಸಿದು ಬೀಳುತ್ತಿದ್ದಂತೆ ಓಡಿ ಪಾರಾದೆ ಎಂದು ಅದೇ ಕಟ್ಟಡದ ನಿವಾಸಿ ಮುಸ್ತಾಫವ್ ಚಫೇಕರ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಸಾವಿಗೀಡಾದ ವ್ಯಕ್ತಿಗಳ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಧನ ಮತ್ತು ಗಾಯಗೊಂಡವರಿಗೆ ₹50,000 ಧನ ಸಹಾಯ ನೀಡುವುದಾಗಿ ಮಹಾರಾಷ್ಟ್ರದ ಸಚಿವ ವಿಜಯ್ ವಾಡೆಟ್ಟಿವಾರ್ ಹೇಳಿದ್ದಾರೆ.

TRENDING