Wednesday, September 23, 2020
Home ದೇಶ ಭಾರತಕ್ಕೂ ಬಂತು ಸೋಂಕು ನಿರೋಧಕ ಡುರೊಫ್ಲೆಕ್ಸ್ ಮ್ಯಾಟ್ರೆಸ್

ಇದೀಗ ಬಂದ ಸುದ್ದಿ

ಜಮ್ಮು,ಕಾಶ್ಮೀರ : ಮಾತಾ ವೈಷ್ಣೋದೇವಿ ಭಕ್ತರಿಗೊಂದು ಸಿಹಿಸುದ್ದಿ

ಶ್ರೀನಗರ: ಜಮ್ಮುಮತ್ತು ಕಾಶ್ಮೀರದ ರೇಸಿ ಜಿಲ್ಲೆಯ ತ್ರಿಕೂಟ ಬೆಟ್ಟದಲ್ಲಿರುವ ಮಾತಾ ವೈಷ್ಣೋದೇವಿ ಭಕ್ತರಿಗೆ ಒಂದು ಸಿಹಿ ಸುದ್ದಿ. ಶೀಘ್ರವೇ ಭಕ್ತರು ಮೊಬೈಲ್ ಆಯಪ್ ಮೂಲಕ ದೇವಿಯ ನೇರ ದರ್ಶನವನ್ನು ಪಡೆಯಬಹುದು. ಇದಕ್ಕಾಗಿ...

ಡ್ರಗ್ಸ್ ಪ್ರಕರಣ : ಕಿರುತೆರೆ ನಟ-ನಟಿ ವಿಚಾರಣೆ

 ಬೆಂಗಳೂರು: ಡ್ರಗ್ಸ್ ಜಾಲದ ತನಿಖೆ ಆರಂಭಿಸಿರುವ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಪೊಲೀಸರು, ಕಿರುತೆರೆ ನಟ ಅಭಿಷೇಕ್ ಹಾಗೂ ನಟಿ ಗೀತಾ ಭಾರತಿ ಭಟ್ ಅವರನ್ನು ಮಂಗಳವಾರ ವಿಚಾರಣೆಗೆ ಒಳಪಡಿಸಿದರು.

ಐಪಿಎಲ್ 2020 : ಚೆನ್ನೈ ಸೂಪರ್...

ಮಂಗಳವಾರ ನಡೆದ ಐಪಿಎಲ್ ನ ನಾಲ್ಕನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

ದ.ಕ. ಜಿಲ್ಲೆಯ ಹಿರಿಯ ಉದ್ಯಮಿ, ಸಾಮಾಜಿಕ, ಧಾರ್ಮಿಕ...

ಪುತ್ತೂರು : ದ.ಕ. ಜಿಲ್ಲೆಯ ಹೆಸರಾಂತ ಹಿರಿಯ ಉದ್ಯಮಿ, ಸಾಮಾಜಿಕ, ಧಾರ್ಮಿಕ ಧುರೀಣ ಕಮ್ಮಾಡಿ ಇಬ್ರಾಹಿಂ ಹಾಜಿ (72) ಅವರು ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನ ಹೊಂದಿದರು.

ಮಹಾರಾಷ್ಟ್ರಕಟ್ಟಡ ಕುಸಿತ; 33ಕ್ಕೇರಿದ ಸಾವಿನ ಸಂಖ್ಯೆ

 ಮುಂಬೈ (ಸೆ. 23): ನೆರೆಯ ರಾಜ್ಯವಾದ ಮಹಾರಾಷ್ಟ್ರದ ಭಿವಾಂಡಿಯಲ್ಲಿ ಸೋಮವಾರ ನಸುಕಿನ ಜಾವ 3 ಅಂತಸ್ತಿನ ಕಟ್ಟಡವೊಂದು ಕುಸಿದುಬಿದ್ದಿತ್ತು. ಇದರಿಂದ ಕಟ್ಟಡದೊಳಗಿದ್ದ 10 ಜನರು ಸ್ಥಳದಲ್ಲೇ ಸಾವನ್ನಪ್ಪಿ, ಸಾಕಷ್ಟು ಜನರು...

ಭಾರತಕ್ಕೂ ಬಂತು ಸೋಂಕು ನಿರೋಧಕ ಡುರೊಫ್ಲೆಕ್ಸ್ ಮ್ಯಾಟ್ರೆಸ್

ಬೆಂಗಳೂರು: ಕೊರೊನಾ ವೈರಸ್‌ ಸೋಂಕನ್ನು ಜನರು ಮಾಸ್ಕ್‌ ಹಾಗೂ ಸ್ಯಾನಿಟೈಜರ್‌ ಮೊರೆ ಹೋಗುತ್ತಿದ್ದಾರೆ. ಇದು ಆರೋಗ್ಯ ಕಾಳಜಿಯಾಗಿದೆ. ಈ ಕೋವಿಡ್‌ ಸಂದರ್ಭ ಜನರು ಮನೆಗಳಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಿದ್ದಾರೆ. ಮನೆಯಲ್ಲಿ ಕೂಡ ಡುರೊಫ್ಲೆಕ್ಸ್ ಹೆಚ್ಚಿನ ಸುರಕ್ಷತೆಯನ್ನು ನೀಡಬಲ್ಲದಾಗಿದೆ.

ಡುರೊಫ್ಲೆಕ್ಸ್ ಭಾರತೀಯರ ಪ್ರತಿ ಮನೆಯನ್ನು ಸುರಕ್ಷಿತವಾಗಿಸುವಂತಹ ಪರಿಹಾರವನ್ನು ಕಂಡುಹಿಡಿದಿದೆ. ಸ್ವಿಸ್ ತಂತ್ರಜ್ಞಾನದ ಭಾರತದ ಮೊದಲ ವೈರಸ್-ನಿರೋಧಕ ಬೆಡ್ ಕವರ್ ಅನ್ನು ಅಭಿವೃದ್ಧಿಪಡಿಸಿದೆ. ಶೇ 99ರಷ್ಟು ವೈರಸ್ ಮತ್ತು ಬ್ಯಾಕ್ಟೀರಿಯಾಗಳನ್ನು ನಿಮಿಷಗಳಲ್ಲಿ ಕೊಲ್ಲಬಲ್ಲ ಹೈ-ಕ್ಯೂ ವೈರೊ ಮ್ಯಾಟ್ರೆಸ್‌ ಇದಾಗಿದೆ.

ಇದು ಸುಧಾರಿತ ಡುರೊ ಸೇಫ್ ಮ್ಯಾಟ್ರೆಸ್ ಪ್ರೊಟೆಕ್ಟರ್ ಬ್ರ್ಯಾಂಡ್‍ನ ಹೊಸ ಆವಿಷ್ಕಾರವಾಗಿದೆ. ಹೈ-ಕ್ಯೂ ವೈರೋ ಬ್ಲಾಕ್ (ಬೆಡ್‌ ಕವರ್‌) 94 ಕ್ಕೂ ಹೆಚ್ಚು ವೈರಸ್‍ಗಳನ್ನು ನಿಮಿಷಗಳಲ್ಲಿ ನಿಷ್ಕ್ರಿಯಗೊಳಿಸಬಲ್ಲದು ಎಂಬುದು ಪ್ರಾಯೋಗಿಕವಾಗಿ ತಿಳಿದುಬಂದಿದೆ. ಇದು ನೂರರಷ್ಟು ನೀರು ಮತ್ತು ಧೂಳು ನಿರೋಧಕವಾಗಿದ್ದು ಹೈಪೋಲಾರೆನ್ಸಿಕ್‌ ತಂತ್ರಜ್ಞಾನ ಚರ್ಮಕ್ಕೆ ಸುರಕ್ಷತೆ ಒದಗಿಸುತ್ತದೆ ಎಂದು ಕಂಪನಿ ಹೇಳಿದೆ.

ನಾವು ನಮ್ಮ ಜೀವನದಲ್ಲಿ ಮೂರನೇ ಒಂದು ಭಾಗವನ್ನು ನಿದ್ರೆಯಲ್ಲಿ ಕಳೆಯುತ್ತೇವೆ ಆದ್ದರಿಂದ ನಮ್ಮ ವಿರಾಮದ ಸ್ಥಳಗಳನ್ನು ಹೆಚ್ಚು ಸುರಕ್ಷಿತವಾಗಿಟ್ಟುಕೊಳ್ಳಬೇಕು. ವೈರಸ್‌, ಬ್ಯಾಕ್ಟಿರೀಯಾಗಳು ಹರಡದಂತೆ ಎಚ್ಚರವಹಿಸಬೇಕು. ಇದಕ್ಕಾಗಿ
ಡುರೊಫ್ಲೆಕ್ಸ್‍ ಕಂಪನಿ ಆಯಂಟಿ ವೈರಲ್‌ ಬೆಡ್‌ ಕವರ್‌ಗಳನ್ನು ಪರಿಚಯಿಸಿದೆ ಎಂದು ಡುರೊಫ್ಲೆಕ್ಸ್‍ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮ್ಯಾಥ್ಯೂ ಚಾಂಡಿ ತಿಳಿಸಿದರು.

ಹೈ-ಕ್ಯೂ ವೈರೋ ಬ್ಲಾಕ್ ತಂತ್ರಜ್ಞಾನದ ಮ್ಯಾಟ್ರೆಸ್‌ ಕವರ್‌ ಸಂಪೂರ್ಣವಾಗಿ ಸ್ವದೇಶಿ ಬ್ರ್ಯಾಂಡ್‌ ಆಗಿದೆ ಎಂದು ಕಂಪನಿಯ ಮತ್ತೊಬ್ಬ ಅಧಿಕಾರಿ ಮೋಹನ್‌ ರಾಜ್‌ ಮಾಹಿತಿ ನೀಡಿದರು.

ಡ್ಯುರೊ ಸೇಫ್ ಆಯಂಟಿ ವೈರಲ್‌ ಮ್ಯಾಟ್ರೆಸ್‌ ಕವರ್‌ಗಳು ಸಿಂಗಲ್, ಡಬಲ್, ಕ್ವೀನ್ ಮತ್ತು ಕಿಂಗ್ ಸೈಜ್‌ನಲ್ಲಿ ಲಭ್ಯವಿವೆ. ಸಿಂಗಲ್ ಗಾತ್ರದ ಮ್ಯಾಟ್ರೆಸ್ ಕವರ್‌ ಬೆಲೆ ₹ 2099ರಿಂದ ಆರಂಭವಾಗುತ್ತದೆ. ಮ್ಯಾಟ್ರೆಸ್‌ ಕವರ್‌ಗಳು ಮತ್ತು ಮ್ಯಾಟ್ರೆಸ್‌ಗಳು ದೇಶದಾದ್ಯಂತ ಎಲ್ಲಾ ಡುರೊಫ್ಲೆಕ್ಸ್ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಲಭ್ಯವಿರುತ್ತವೆ. ಹಾಗೇ ಅಮೆಜಾನ್ ಮತ್ತು ಫ್ಲಿಪ್‍ಕಾರ್ಟ್‍ನಂತಹ ಪ್ರಮುಖ ಇ-ಕಾಮರ್ಸ್ ತಾಣಗಳಲ್ಲಿ ದೊರೆಯಲಿದೆ.‌

TRENDING