Friday, September 25, 2020
Home ಕ್ರೈಂ ನ್ಯೂಸ್ ಹಾಸನದಲ್ಲಿ ನಿರ್ಗತಿಕ ಮಹಿಳೆ ಮೇಲೆ ಅತ್ಯಾಚಾರ; ಆರೋಪಿಯ ಭೀಕರ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ಇದೀಗ ಬಂದ ಸುದ್ದಿ

ದೆಹಲಿ ಡಿಸಿಎಂ ಸಿಸೋಡಿಯಾರಿಗೆ ಕೊರೊನಾ ಜೊತೆ ಡೆಂಗ್ಯೂ...

ಕೊರೊನಾವೈರಸ್ ಸೋಂಕು ತಗುಲಿರುವ ಹಿನ್ನೆಲೆ ನವದೆಹಲಿಯ ಲೋಕ ನಾಯಕ ಜಯಪ್ರಕಾಶ್ ಆಸ್ಪತ್ರೆಗೆ ದಾಖಲಾಗಿರುವ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಡೆಂಗ್ಯೂ ಸೋಂಕು ಕೂಡಾ ತಗುಲಿರುವ ಬಗ್ಗೆ ತಿಳಿದು ಬಂದಿದೆ.

ರಾಜ್ಯ ಪೊಲೀಸ್‌ ಇಲಾಖೆಯಲ್ಲಿ 20,203 ಹುದ್ದೆ ಖಾಲಿ:...

 ಬೆಂಗಳೂರು: ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ವಿವಿಧ ಶ್ರೇಣಿಯ 20,203 ಹುದ್ದೆಗಳು ಖಾಲಿ ಇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ವಿಧಾನ ಪರಿಷತ್‌ನಲ್ಲಿ ಗುರುವಾರ ಜೆಡಿಎಸ್‌...

ಬ್ಯಾಂಕ್ ಖಾತೆಯಲ್ಲಿ ವಂಚನೆಯಾದ್ರೆ ತಕ್ಷಣ ಏನು ಮಾಡಬೇಕು.?...

 ಕೊರೊನಾ ಮಧ್ಯೆ ವಂಚನೆ ಪ್ರಕರಣಗಳು ಹೆಚ್ಚಾಗ್ತಿವೆ. ಇದನ್ನು ತಪ್ಪಿಸಲು ಆರ್‌ಬಿಐ ಸಾಮಾನ್ಯ ಜನರಿಗೆ ನಿರಂತರವಾಗಿ ಮಾಹಿತಿ ನೀಡುತ್ತಿದೆ. ಇದರ ಹೊರತಾಗಿಯೂ ಖಾತೆಯಲ್ಲಿರುವ ಹಣ ಕಳ್ಳತನವಾದ್ರೆ ಏನು ಮಾಡಬೇಕು ಎಂಬ ಬಗ್ಗೆ...

ಕೋವಿಡ್ 19 ಪರಿಹಾರ ಧನ : ಚಾಲಕರಿಗೆ...

ಬೆಂಗಳೂರು: ಲಾಕ್‌ಡೌನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರಿಗೆ ಘೋಷಿಸಿರುವ 5,000 ರೂ. ನೆರವು ಪಡೆಯಲು ಮತ್ತೂಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ಭರವಸೆಯನ್ನು ಸರಕಾರ ನೀಡಿದೆ.

ಡ್ರಗ್ಸ್ ಪ್ರಕರಣ : ನಟಿ ಸಂಜನಾ ಗಲ್ರಾನಿ...

ಬೆಂಗಳೂರು: ಡ್ರಗ್ಸ್ ಜಾಲ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಸೇರಿರುವ ನಟಿ ಸಂಜನಾ ಗಲ್ರಾನಿ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸೆ. 28ಕ್ಕೆ ಮುಂದೂಡಲಾಗಿದೆ. ಸಂಜನಾ ಪರ ವಕೀಲರು...

ಹಾಸನದಲ್ಲಿ ನಿರ್ಗತಿಕ ಮಹಿಳೆ ಮೇಲೆ ಅತ್ಯಾಚಾರ; ಆರೋಪಿಯ ಭೀಕರ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ಆಶ್ರಯವಿಲ್ಲದ ಆಕೆ ಹಾಸನದ ಬಿಎಂ ರಸ್ತೆಯ ಪಕ್ಕದಲ್ಲೇ ಇದ್ದ ಅಂಗಡಿಯೊಂದರ ಮುಂದೆ ಅನಾಥವಾಗಿ ಮಲಗಿದ್ದಳು. ಹೀಗೆ ಅನಾಥವಾಗಿ ಮಲಗಿದ್ದವಳ ಮೇಲೆ ಕಾಮುಕನ ಕಣ್ಣು ಬಿದ್ದಿತ್ತು. ಮೊದಲು ಆಕೆಯನ್ನು ಅತ್ಯಾಚಾರ ಮಾಡಲು ಯತ್ನಿಸಿದ ಕಾಮುಕ ಆಕೆ ಒಪ್ಪದಿದ್ದಾಗ ಆಕೆಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಸಾಯಿಸಿ ಸತ್ತವಳ ದೇಹದ ಮೇಲೆ ಮೃಗದ ರೀತಿ ಅತ್ಯಾಚಾರ ಎಸಗಿದ್ದಾನೆ. ಇಡೀ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹಾಸನ ನಗರದ ಜನ ಬೆಚ್ಚಿಬಿದ್ದಿದ್ದಾರೆ.

ನಗರದ ಜನರಿಗೆ ಬೆಳ್ಳಬೆಳ್ಳಂಗೆ ಶಾಕ್ ಕಾದಿತ್ತು. ಯಾಕಂದ್ರೆ ಹಗಲು ಹೊತ್ತಿನಲ್ಲಿ ಯಾವಾಗಲೂ ಜನರಿಂದ ಗಿಜಿಗುಡುತ್ತಿದ್ದ ಬಿಎಂ ರಸ್ತೆಯಲ್ಲಿ ತಡರಾತ್ರಿ ಕೊಲೆಯೊಂದು ನಡೆದು ಹೋಗಿತ್ತು. ಸುಮಾರು 45 ವರ್ಷದ ಮಹಿಳೆಯ ಮೇಲೆ ಕಲ್ಲು ಎತ್ತಿಹಾಕಿ ಯಾರೋ ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ರು. ಆದ್ರೆ ತನಿಖೆಯ ಬೆನ್ನತ್ತಿಹೋದ ಪೊಲೀಸರಿಗೆ ಕೊಲೆಗಿಂತಲೂ ಭೀಕರವಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೌದು, ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಬಿಎಂ ರಸ್ತೆ ಪಕ್ಕ ಅಂಗಡಿಯೊಂದರ ಮುಂದೆ ಮಲಗಿದ್ದ ಮಹಿಳೆಯ ಬಳಿ ಬಂದ ವ್ಯಕ್ತಿಯೊಬ್ಬ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಆಕೆ ಇದಕ್ಕೆ ವಿರೋಧಿಸಿದಾಗ ಮೆಲ್ಲಗೆ ಅಲ್ಲಿಂದ ಜಾಗ ಖಾಲಿ ಮಾಡಿದ ಆತ ಮಹಿಳೆ ಮಲಗುವುದನ್ನೇ ಕಾದಿದ್ದಾನೆ. ಇರಲು ಬೇರೆ ಜಾಗವಿಲ್ಲದ ಮಹಿಳೆ ಅನಿವಾರ್ಯವಾಗಿ ಅಲ್ಲೇ ಅಂಗಡಿ ಮುಂದೆ ಮಲಗಿದ್ದಾಳೆ. ಆಕೆ ಮಲಗಿದ್ದೇ ತಡ ನಿಧಾನವಾಗಿ ಬಂದ ಕಿರಾತಕ ಸಿಮೆಂಟ್ ಇಟ್ಟಿಗೆಯೊಂದನ್ನು ನಿರ್ಗತಿಕ ಮಹಿಳೆಯ ತಲೆ ಮೇಲೆ ಎತ್ತಿಹಾಕಿ ಅಮಾನುಷವಾಗಿ ಕೊಂದು ಹಾಕಿದ್ದಾನೆ. ಅಷ್ಟೇ ಅಲ್ಲದೆ ಸತ್ತ ಮಹಿಳೆಯ ಮೇಲೆ ಮೃಗದ ರೀತಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ.

ಮೊದಲೇ ಮಹಿಳೆಯ ಕೊಲೆಯಿಂದ ಬೆಚ್ಚಿಬಿದ್ದಿದ್ದ ಹಾಸನ ಜನ, ಇದೀಗ ಕೊಲೆ ಮಾಡಿ ನಂತರ ಅತ್ಯಾಚಾರ ಎಸಗಿದ ವಿಷ್ಯ ಕೇಳಿ ದಂಗುಬಡಿದು ಹೋಗಿದ್ದಾರೆ. ಇಷ್ಟು ವಿಕೃತವಾಗಿ ನಡೆದುಕೊಂಡಿರುವ ಆತ ಯಾರೋ ಸೈಕೋ ಇರಬೇಕು.‌ ಆದಷ್ಟು ಬೇಗ ಆತನನ್ನು ಬಂಧಿಸಿ ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಬೇಕು ಅಂತಿದ್ದಾರೆ ಹಾಸನ ಜನತೆ.

TRENDING