Friday, September 25, 2020
Home ಕೋವಿಡ್-19 ಆಗಸ್ಟ್‌ನಲ್ಲೇ 15 ಲಕ್ಷ ದಾಟಿದ ಕೊರೊನಾ ಪ್ರಕರಣಗಳು

ಇದೀಗ ಬಂದ ಸುದ್ದಿ

ದೆಹಲಿ ಡಿಸಿಎಂ ಸಿಸೋಡಿಯಾರಿಗೆ ಕೊರೊನಾ ಜೊತೆ ಡೆಂಗ್ಯೂ...

ಕೊರೊನಾವೈರಸ್ ಸೋಂಕು ತಗುಲಿರುವ ಹಿನ್ನೆಲೆ ನವದೆಹಲಿಯ ಲೋಕ ನಾಯಕ ಜಯಪ್ರಕಾಶ್ ಆಸ್ಪತ್ರೆಗೆ ದಾಖಲಾಗಿರುವ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಡೆಂಗ್ಯೂ ಸೋಂಕು ಕೂಡಾ ತಗುಲಿರುವ ಬಗ್ಗೆ ತಿಳಿದು ಬಂದಿದೆ.

ರಾಜ್ಯ ಪೊಲೀಸ್‌ ಇಲಾಖೆಯಲ್ಲಿ 20,203 ಹುದ್ದೆ ಖಾಲಿ:...

 ಬೆಂಗಳೂರು: ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ವಿವಿಧ ಶ್ರೇಣಿಯ 20,203 ಹುದ್ದೆಗಳು ಖಾಲಿ ಇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ವಿಧಾನ ಪರಿಷತ್‌ನಲ್ಲಿ ಗುರುವಾರ ಜೆಡಿಎಸ್‌...

ಬ್ಯಾಂಕ್ ಖಾತೆಯಲ್ಲಿ ವಂಚನೆಯಾದ್ರೆ ತಕ್ಷಣ ಏನು ಮಾಡಬೇಕು.?...

 ಕೊರೊನಾ ಮಧ್ಯೆ ವಂಚನೆ ಪ್ರಕರಣಗಳು ಹೆಚ್ಚಾಗ್ತಿವೆ. ಇದನ್ನು ತಪ್ಪಿಸಲು ಆರ್‌ಬಿಐ ಸಾಮಾನ್ಯ ಜನರಿಗೆ ನಿರಂತರವಾಗಿ ಮಾಹಿತಿ ನೀಡುತ್ತಿದೆ. ಇದರ ಹೊರತಾಗಿಯೂ ಖಾತೆಯಲ್ಲಿರುವ ಹಣ ಕಳ್ಳತನವಾದ್ರೆ ಏನು ಮಾಡಬೇಕು ಎಂಬ ಬಗ್ಗೆ...

ಕೋವಿಡ್ 19 ಪರಿಹಾರ ಧನ : ಚಾಲಕರಿಗೆ...

ಬೆಂಗಳೂರು: ಲಾಕ್‌ಡೌನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರಿಗೆ ಘೋಷಿಸಿರುವ 5,000 ರೂ. ನೆರವು ಪಡೆಯಲು ಮತ್ತೂಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ಭರವಸೆಯನ್ನು ಸರಕಾರ ನೀಡಿದೆ.

ಡ್ರಗ್ಸ್ ಪ್ರಕರಣ : ನಟಿ ಸಂಜನಾ ಗಲ್ರಾನಿ...

ಬೆಂಗಳೂರು: ಡ್ರಗ್ಸ್ ಜಾಲ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಸೇರಿರುವ ನಟಿ ಸಂಜನಾ ಗಲ್ರಾನಿ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸೆ. 28ಕ್ಕೆ ಮುಂದೂಡಲಾಗಿದೆ. ಸಂಜನಾ ಪರ ವಕೀಲರು...

ಆಗಸ್ಟ್‌ನಲ್ಲೇ 15 ಲಕ್ಷ ದಾಟಿದ ಕೊರೊನಾ ಪ್ರಕರಣಗಳು

 ಹೊಸದಿಲ್ಲಿ: ಆಗಸ್ಟ್ ತಿಂಗಳ ಮೊದಲ 25 ದಿನಗಳಲ್ಲಿ ದೇಶದ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 15 ಲಕ್ಷ ದಾಟಿದೆ. ಅಂತೆಯೇ ಮಂಗಳವಾರ ಎರಡನೇ ಗರಿಷ್ಠ ಅಂದರೆ 1071 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

ಎರಡು ದಿನಗಳ ಇಳಿಕೆ ಪ್ರವೃತ್ತಿ ಬಳಿಕ ಮಂಗಳವಾರ 66 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 32 ಲಕ್ಷ ದಾಟಿರುವುದು ರಾಜ್ಯ ಸರ್ಕಾರಗಳಿಂದ ಸಂಗ್ರಹಿಸಿದ ಅಂಕಿ ಅಂಶಗಳಿಂದ ತಿಳಿದುಬಂದಿದೆ. ಸೋಮವಾರ ಭಾರಿ ಪ್ರಮಾಣದಲ್ಲಿ ಇಳಿಕೆಯ ಬಳಿಕ ಸಕ್ರಿಯ ಪ್ರಕರಣಗಳ ಸಂಖ್ಯೆ 1000ದಷ್ಟು ಹೆಚ್ಚಿ ಏಳು ಲಕ್ಷ ತಲುಪಿದೆ.

ಆಗಸ್ಟ್‌ನಲ್ಲಿ ಇದುವರೆಗೆ 15.3 ಲಕ್ಷ ಪ್ರಕರಣಗಳು ದೃಢಪಟ್ಟಿವೆ. ಅಮೆರಿಕದಲ್ಲಿ ಜುಲೈನಲ್ಲಿ 20 ಲಕ್ಷ ಪ್ರಕರಣ ವರದಿಯಾದ ಬಳಿಕ ವಿಶ್ವದ ಯಾವುದೇ ದೇಶದಲ್ಲಿ ಒಂದೇ ತಿಂಗಳಲ್ಲಿ ಇಷ್ಟು ಪ್ರಕರಣಗಳು ವರದಿಯಾಗಿರುವುದು ಇದೇ ಮೊದಲು. ಆಗಸ್ಟ್ ತಿಂಗಳಲ್ಲಿ ವಿಶ್ವದಲ್ಲೇ ಗರಿಷ್ಠ ಸಂಖ್ಯೆಯ ಪ್ರಕರಣಗಳು ಭಾರತದಲ್ಲಿ ದಾಖಲಾಗಿವೆ.

ದೇಶಾದ್ಯಂತ ಮಂಗಳವಾರ ಒಟ್ಟು 1071 ಮಂದಿ ಸೋಂಕಿತರು ಮೃತಪಟ್ಟಿದ್ದು, 28 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲೂ ಸಾವು ಸಂಭವಿಸಿದೆ. ಮಹಾರಾಷ್ಟ್ರದಲ್ಲಿ ಗರಿಷ್ಠ (329) ಮಂದಿ ಅಸುನೀಗಿದ್ದರೆ, ಕರ್ನಾಟಕ (148), ತಮಿಳುನಾಡು (107), ಆಂಧ್ರಪ್ರದೇಶ (92), ಉತ್ತರ ಪ್ರದೇಶ (72), ಬಂಗಾಳ (58) ಮತ್ತು ಪಂಜಾಬ್ (49) ನಂತರದ ಸ್ಥಾನಗಳಲ್ಲಿವೆ.

ಮಹಾರಾಷ್ಟ್ರದಲ್ಲಿ ಮಂಗಳವಾರ 10,425 ಪ್ರಕರಣಗಳು ಪತ್ತೆಯಾಗಿದ್ದು, ಆಂಧ್ರಪ್ರದೇಶ (9,927), ಕರ್ನಾಟಕ (8,161) ಮತ್ತು ಉತ್ತರ ಪ್ರದೇಶ (5,124)ದಲ್ಲಿ ಕೂಡಾ ಅಧಿಕ ಪ್ರಕರಣಗಳು ದೃಢಪಟ್ಟಿವೆ. ತಮಿಳುನಾಡಿನಲ್ಲಿ 5,951, ತೆಲಂಗಾಣ (2,579), ಕೇರಳ (2,375), ರಾಜಸ್ಥಾನ (1,370), ಮಧ್ಯಪ್ರದೇಶ (1,374), ಛತ್ತೀಸ್‌ಗಢ (1,467) ಮತ್ತು ಪುದುಚೇರಿಯಲ್ಲಿ 571 ಪ್ರಕರಣಗಳು ವರದಿಯಾಗಿವೆ.

TRENDING