Tuesday, September 22, 2020
Home ಕೋವಿಡ್-19 'ಕೊರೊನಾದಿಂದ ಮೃತಪಟ್ಟ ಅಂಗನವಾಡಿ ಕಾರ್ಯಕರ್ತೆಯರಿಗೆ ₹50 ಲಕ್ಷ ಪರಿಹಾರ ನೀಡಿ'

ಇದೀಗ ಬಂದ ಸುದ್ದಿ

ಕೊರೊನಾ ಹಿನ್ನೆಲೆ : ಕೊಳ್ಳೇಗಾಲದಲ್ಲಿ ಮಧ್ಯಾಹ್ನದ ನಂತರ...

ಕೊಳ್ಳೇಗಾಲ: ನಗರದಲ್ಲಿ ಪ್ರತಿನಿತ್ಯ ಕೊರೊನಾ ಸೋಂಕು ಹೆಚ್ಚಾಗುತ್ತಿರುವುದರಿಂದ ಜನರಲ್ ಮರ್ಚೆಂಟ್ಸ್ ಅಸೋಸಿಯೇಷನ್ ಅವರು ಸೆ. 21ರಿಂದ ಅ.4 ರವರೆಗೆ ಪ್ರತಿದಿನ ಮಧ್ನಾಹ 2.30ರ ನಂತರ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಬಂದ್...

ನಿರ್ಮಾಪಕ ಮಹೇಶ್ ಭಟ್, ರಿಯಾ ಚಕ್ರವರ್ತಿ ಖಾಸಗಿ...

ಮುಂಬೈ: ರಿಯಾ ಚಕ್ರವರ್ತಿ ಮತ್ತು ಚಲನಚಿತ್ರ ನಿರ್ಮಾಪಕ ಮಹೇಶ್ ಭಟ್ ಅವರ ಹೊಸ ವೀಡಿಯೊ ಈಗ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ವಿಡಿಯೊದಲ್ಲಿ ರಿಯಾ ಮತ್ತು ಮಹೇಶ್ ಭಟ್ ಒಂದು ಕೋಣೆಯಲ್ಲಿ ಒಟ್ಟಿಗೆ...

ಕೊರೊನಾ ಸೋಂಕಿತರಿಗೆ ‘ ICU ‘ ಲಭ್ಯವಾಗುವ...

ಭಾರತದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 55 ಲಕ್ಷ ದಾಟಿರುವ ನಡುವೆ ಆಸ್ಪತ್ರೆಗಳಲ್ಲಿ ರೋಗಿಗಳ ನಿರ್ವಹಣೆಯ ಸವಾಲುಗಳೂ ಸಹ ಹೆಚ್ಚಾಗುತ್ತಿವೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ನಡುವೆ ಆಸ್ಪತ್ರೆಗಳಲ್ಲಿ ಐಸಿಯು ಲಭ್ಯತೆ ಕಡಿಮೆಯಾಗುತ್ತಿದೆ.

ವಿಶ್ವದಾದ್ಯಂತ 3 ಕೋಟಿ ದಾಟಿದ ಕೊರೊನಾ ಸೋಂಕಿತರ...

ವಿಶ್ವದ ಒಟ್ಟು 210 ದೇಶಗಳಲ್ಲಿ ಈವರೆಗೆ 3 ಕೋಟಿಗೂ ಹೆಚ್ಚು ಜನರಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ. ಒಟ್ಟು 9.47 ಲಕ್ಷ ಮಂದಿ ಕೋವಿಡ್-19ರಿಂದ ಮೃತಪಟ್ಟಿದ್ದಾರೆ. ಲಸಿಕೆ ಅಭಿವೃದ್ಧಿಪಡಿಸುವ ಕಾರ್ಯಕ್ಕೆ...

ಮಹಾರಾಷ್ಟ್ರ ಕಟ್ಟಡ ದುರಂತ: 17ಕ್ಕೇರಿದ ಸಾವಿನ ಸಂಖ್ಯೆ

ಮುಂಬೈ : ಮಹಾರಾಷ್ಟ್ರದ ಭಿವಾಂಡಿ ಪ್ರದೇಶದಲ್ಲಿ ಸಂಭವಿಸಿದ 3 ಅಂತಸ್ತಿದ ಕಟ್ಟಡ ಕುಸಿತದ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಕಟ್ಟಡಡದ ಅವಶೇಷಗಳಡಿ ಮತ್ತಷ್ಟು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

‘ಕೊರೊನಾದಿಂದ ಮೃತಪಟ್ಟ ಅಂಗನವಾಡಿ ಕಾರ್ಯಕರ್ತೆಯರಿಗೆ ₹50 ಲಕ್ಷ ಪರಿಹಾರ ನೀಡಿ’

ದಾವಣಗೆರೆ: ಕೋವಿಡ್‌ ರೋಗದಿಂದ ಮೃತಪಟ್ಟ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕುಟುಂಬದವರಿಗೆ ₹ 50 ಲಕ್ಷ ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿಯನ್ನು ನೀಡಬೇಕು ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್‌ (ಎ.ಐ.ಟಿ.ಯು.ಸಿ) ಅಧ್ಯಕ್ಷ ಎಚ್‌.ಕೆ. ರಾಮಚಂದ್ರಪ್ಪ ಒತ್ತಾಯಿಸಿದರು.

‘ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರಿಯರೂ ಕೋವಿಡ್‌ ವಾರಿಯರ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಕಾರ ರಾಜ್ಯದಲ್ಲಿ 25 ಅಂಗನವಾಡಿ ಕಾರ್ಯಕರ್ತೆಯರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಗೌರಮ್ಮ, ಸಾವಿತ್ರಮ್ಮ, ಪದ್ಮಾವತಿ, ಇಂದಿರಮ್ಮ ಅವರು ಮೃತಪಟ್ಟಿದ್ದಾರೆ. ಆದರೆ, ಇದುವರೆಗೂ ಅವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಬಂದಿಲ್ಲ’ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘ಕೇಂದ್ರ ಸರ್ಕಾರವು ಕೋವಿಡ್‌ನಿಂದ ಮೃತಪಡುವ ವಾರಿಯರ್‌ಗಳಿಗೆ ₹ 50 ಲಕ್ಷ ಪರಿಹಾರ ಘೋಷಿಸಿದೆ. ರಾಜ್ಯ ಸರ್ಕಾರ ₹ 30 ಲಕ್ಷ ನೀಡುವುದಾಗಿ ಪ್ರಕಟಿಸಿದೆ. ಅಂಗನವಾಡಿ ಕಾರ್ಯಕರ್ತೆಯರು ಮೃತಪಟ್ಟಿದ್ದರೂ ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಸರ್ಕಾರಕ್ಕೆ ವರದಿ ಸಲ್ಲಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ ಅವರು, ‘ಕೇಂದ್ರ ಸರ್ಕಾರ ಘೋಷಿಸಿದಂತೆ ₹ 50 ಲಕ್ಷ ಪರಿಹಾರವನ್ನು ತಕ್ಷಣವೇ ಕುಟುಂಬದವರಿಗೆ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.

ಕೋವಿಡ್‌ ಕೆಲಸದ ಒತ್ತಡದಿಂದಾಗಿ ನಂಜನಗೂಡು ತಾಲ್ಲೂಕು ವೈದ್ಯಾಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ಕೊಡುವುದಾಗಿ ಸರ್ಕಾರ ಭರವಸೆ ನೀಡಿದೆ. ಅದೇ ರೀತಿ ಅಂಗನವಾಡಿ ಕಾರ್ಯಕರ್ತೆಯರು ಮೃತಪಟ್ಟಾಗಲೂ ಅವರ ಕುಟುಂಬದವರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಒತ್ತಾಯಿಸಿದರು.

ಅಂಗನವಾಡಿ ಕಾರ್ಯಕರ್ತೆಯರಿಗೆ ಪಿಪಿಇ ಕಿಟ್‌, ಮುಖಗವಚ, ಸ್ಯಾನಿಟೈಸರ್‌, ಥರ್ಮಲ್‌ ಸ್ಕ್ರೀನಿಂಗ್‌ ಯಂತ್ರಗಳನ್ನು ನೀಡಬೇಕು. ಇದನ್ನು ಪೂರೈಸದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

15 ದಿನಗಳ ಒಳಗೆ ಬೇಡಿಕೆ ಈಡೇರಿಸದಿದ್ದರೆ ಕೆಲಸ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ರಾಚಂದ್ರಪ್ಪ ಎಚ್ಚರಿಕೆ ನೀಡಿದರು.

ಫೆಡರೇಷನ್‌ನ ಖಜಾಂಚಿ ಎಂ.ಬಿ. ಶಾರದಮ್ಮ, ರಾಜ್ಯ ಸಮಿತಿ ಸದಸ್ಯೆ ವಿಶಾಲಕ್ಷಿ, ರಾಜ್ಯ ಸಂಚಾಲಕರಾದ ಆವರಗೆರೆ ಚಂದ್ರು, ಆವರಗೆರೆ ವಾಸು, ಎನ್‌.ಎಚ್‌. ರಾಮಪ್ಪ, ಎಸ್‌.ಎಸ್‌. ಮಲ್ಲಮ್ಮ ಅವರೂ ಇದ್ದರು.

ಜಿಲ್ಲೆಯವರೇ ಉಸ್ತುವಾರಿ ಸಚಿವರಾಗಲಿ

‘ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಬಸವರಾಜ ಅವರು ಯಾವಾಗಲೋ ಒಮ್ಮೆ ಬೆಂಗಳೂರಿನಿಂದ ಬೆಳಿಗ್ಗೆ ಬಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಂಜೆ ಬೆಂಗಳೂರಿಗೆ ವಾಪಸ್‌ ಹೋಗುತ್ತಿದ್ದಾರೆ. ಜಿಲ್ಲೆಯ ಜನರಿಗೆ ಅಹವಾಲು ಸಲ್ಲಿಸಲು ಅವರು ಸಮಯವನ್ನೇ ನೀಡುತ್ತಿಲ್ಲ. ಹೀಗಾಗಿ ಜಿಲ್ಲೆಯವರಿಗೇ ಸಚಿವ ಸ್ಥಾನವನ್ನು ನೀಡಿ, ಉಸ್ತುವಾರಿ ಹೊಣೆಯನ್ನು ಕೊಡಬೇಕು. ಆಗ ಜನರಿಗೆ ಕೆಲಸ ಮಾಡಿಸಿಕೊಳ್ಳಲು ಅನುಕೂಲವಾಗಲಿದೆ’ ಎಂದು ಕಮ್ಯುನಿಷ್ಟ್‌ ಪಕ್ಷದ ಮುಖಂಡರೂ ಆಗಿರುವ ಎಚ್‌.ಕೆ. ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

TRENDING