Tuesday, September 22, 2020
Home ಜಿಲ್ಲೆ ಜಿಲ್ಲಾ ಸುದ್ದಿ ಜಿಲ್ಲೆಯ ಅಭಿವೃದ್ಧಿಯೇ ನನ್ನ ಧ್ಯೇಯ : ಕೆ. ಶಿವನಗೌಡ

ಇದೀಗ ಬಂದ ಸುದ್ದಿ

ಮಹಾಮಾರಿ ʼಕೊರೊನಾʼ ಕುರಿತು ಬಹಿರಂಗವಾಯ್ತು ಮತ್ತೊಂದು ಆತಂಕಕಾರಿ...

ಕೊರೊನಾ ಮಹಾಮಾರಿಯ ಕರಿ ಛಾಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕೊರೊನಾದಿಂದ ಸಾಯುವವರ ಸಂಖ್ಯೆಯಲ್ಲೂ ಕೂಡ ಹೆಚ್ಚಾಗಿದೆ. ಇದರ ಜೊತೆಗೆ ಈ ಕೊರೊನಾ ಯಾವಾಗ ಕೊನೆಯಾಗುತ್ತೆ ಅನ್ನೋದು ಯಾರಿಗೂ ಗೊತ್ತಿಲ್ಲ....

ಸುಶಾಂತ್ ಸಾವಿನ ಪ್ರಕರಣ: ನಟಿ ರಿಯಾಗೆ ಅಕ್ಟೋಬರ್...

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಬಂಧಿಯಾಗಿರುವ ನಟಿ ರಿಯಾ ಚಕ್ರವರ್ತಿಯ ನ್ಯಾಯಾಂಗ ಬಂಧನ ಅವಧಿಯನ್ನು ಅಕ್ಟೋಬರ್ 6 ರವರೆಗೆ ವಿಸ್ತರಿಸಿ ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯವು...

ಬೈಂದೂರಿನ ಸಮುದ್ರ ತೀರದಲ್ಲಿ ಕ್ಷಿಪಣಿ ಮಾದರಿಯ ಉಪಕರಣ...

 ಉಡುಪಿ: ಬೈಂದೂರು ತಾಲ್ಲೂಕಿನ ಶಿರೂರು ಸಮೀಪದ ಕಳಿಹಿತ್ಲು ಸಮುದ್ರ ತೀರದಲ್ಲಿ ಮಂಗಳವಾರ ಕ್ಷಿಪಣಿ ಮಾದರಿಯ ವಸ್ತುವೊಂದು ಪತ್ತೆಯಾಗಿದೆ. ಸುಮಾರು 10 ಅಡಿ ಉದ್ದವಿರುವ ಕೆಂಪು ಬಣ್ಣದ ಉಪಕರಣವನ್ನು...

ಹಿರಿಯ ನಟಿ ಆಶಾಲತಾ ಕೊರೊನಾ ಸೋಂಕಿಗೆ ಬಲಿ

ನವದೆಹಲಿ:ಕೋವಿಡ್ 19 ಸೋಂಕಿಗೆ ಮರಾಠಿ ಚಿತ್ರರಂಗದ ಪ್ರಸಿದ್ಧ ನಟಿ ಆಶಾಲತಾ ವಾಬ್ಗಾಂವ್ ಕರ್ (79ವರ್ಷ) ಸತಾರಾ ಆಸ್ಪತ್ರೆಯಲ್ಲಿ ಮಂಗಳವಾರ ವಿಧಿವಶರಾಗಿರುವುದಾಗಿ ವರದಿ ತಿಳಿಸಿದೆ. ಐಎಎನ್ ಎಸ್...

ಭಾರತದಲ್ಲಿ 55 ಲಕ್ಷದ ಗಡಿ ದಾಟಿದ ಕೊರೊನಾ...

 ನವದೆಹಲಿ : ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನ ಆರ್ಭಟ ಮುಂದುವರಿದಿದ್ದು, ಇದೀಗ ಸೋಂಕಿತರ ಸಂಖ್ಯೆ 55 ಲಕ್ಷದ ಗಡಿ ದಾಟಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ...

ಜಿಲ್ಲೆಯ ಅಭಿವೃದ್ಧಿಯೇ ನನ್ನ ಧ್ಯೇಯ : ಕೆ. ಶಿವನಗೌಡ

ದೇವದುರ್ಗ : ಕೆ.ಶಿವನಗೌಡ ನಾಯಕ್ ಸುದ್ದಿಗಾರರೊಂದಿಗೆ ಮಾತನಾಡಿ , ನಾನೇನು ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ . ರಾಜ್ಯದ ರಾಜಕೀಯ ಪರಿಸ್ಥಿತಿ , ಪ್ರವಾಹ , ಕೊರೋನಾದಂತಹ ಸಮಸ್ಯೆಗಳಿರುವಾಗ ಸಚಿವ ಸ್ಥಾನದ ಬೇಡಿಕೆ ಇಡುವುದು ಸಮಂಜಸವಲ್ಲ ಎಂಬುದು ನನ್ನ ಅಭಿಪ್ರಾಯವಾಗಿದೆ . ಆದರೆ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ಮುಖಂಡರು ನನಗೆ ನಿಗಮ ಅಧ್ಯಕ್ಷ ಸ್ಥಾನ ಕಲ್ಪಿಸಿದ್ದಾರೆ . ಆದರೂ ನಾನೂ ಕ್ಷೇತ್ರಕ್ಕೆ ಆದ್ಯತೆ ನೀಡುವುದಾದರೆ ಮಾಜಿ ಜಿಪಂ ಸದಸ್ಯ ಪ್ರಕಾಶ ಪಾಟೀಲ್ ಜೇರಬಂಡಿಯವರಿಗೆ ಅವಕಾಶ ನೀಡಲು ಮನವಿ ಮಾಡಿದ್ದೆ ಆದರೆ ಪಕ್ಷ ತೀರ್ಮಾನದ ಮೇರೆಗೆ ಕಳೆದ ವಾರ ಅಧಿಕಾರ ಸ್ವೀಕಾರ ಮಾಡಿದ್ದೇನೆ ಎಂದರು.

ರಾಯಚೂರು ಸಿಂಧನೂರು, ರಾಯಚೂರು ಮುದಗಲ್, ಇಲಕಲ್ ರಸ್ತೆಗಳ ನಿರ್ಮಾಣ, ರಾಯಚೂರಲ್ಲಿ ರಿಂಗರೋಡ್, ಸಿರವಾರ ದೇವದುರ್ಗ ರಸ್ತೆ , ದೇವದುರ್ಗ ಪಟ್ಟಣಕ್ಕೆ ಪ್ರವೇಶಿಸುವ 3 ರಸ್ತೆಗಳನ್ನು ಚತುಷ್ಪತ ಮಾದರಿ ರಸ್ತೆ ಹಾಗೂ ದೇವದುರ್ಗ ಪಟ್ಟಣದಲ್ಲಿ ಬೈಪಾಸ್ ರೋಡ್ ನಿರ್ಮಿಸಲು ಚಿಂತನೆ ನಡೆಸಿದ್ದು , ಜಿಲ್ಲೆಯ ಸಂಸದ , ಶಾಸಕರೊಡನೆ ಚರ್ಚಿಸಿ ಕಾಮಗಾರಿಗಳ ನೀಲ ನಕ್ಷೆ ಸಿದ್ದಪಡಿಸಲಾಗುವುದು . ಆ .25,26 ರಂದು ನಿಗಮ ಅಧಿಕಾರಿಗಳ ತಂಡ ಜಿಲ್ಲೆಗೆ ಆಗಮಿಸಲಿದ್ದು , ಮೊದಲ ಹಂತದ ಕಾಮಗಾರಿಗಳ ಸ್ಥಿತಿಗತಿ ಪರಿಶೀಲಿಸಲು ಸೂಚಿಸಲಾಗಿದೆ . ದೇವದುರ್ಗ , ಕೊಪ್ಪರ , ಗೂಗಲ್ , ಸುಂಕೇಶ್ವರಹಾಳ , ಅರಕೇರಾ ಮಾರ್ಗದ ರಸ್ತೆ ನಿರ್ಮಾಣ ಯೋಜನೆ ಬಹುತೇಕ ಪೂರ್ಣಗೊಂಡಿದ್ದುತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗಿದೆ . ಆದಷ್ಟು ಬೇಗನೆ ಕಾಮಗಾರಿಗೆ ಚಾಲನೆ ನೀಡಲಾಗುವುದು . ವಸತಿ ಖಾತೆ ಸಚಿವ ವಿ.ಸೋಮಣ್ಣನವರು ದೇವದುರ್ಗ ಪಟ್ಟಣಕ್ಕೆ ಸ್ಲಂ ಬೋರ್ಡನಿಂದ 750 ಮನೆಗಳನ್ನು ಮಂಜೂರು ಮಾಡಿದ್ದಾರೆ .

ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಜಲಧಾರೆ ಯೋಜನೆಯಲ್ಲಿ ಪ್ರತಿವರ್ಷ ಕುಡಿಯುವ ನೀರಿಗಾಗಿ 1 ಕೋಟಿ ಅನುದಾನ ಲಭ್ಯವಿದ್ದು , ತಾಲೂಕಿಗೆ ಮೊದಲ ಹಂತದಲ್ಲಿ 80 ಲಕ್ಷ ಹಣ ಬಿಡುಗಡೆಯಾಗಿದೆ . ಕೂಡಲೇ ಅಗತ್ಯ ಗ್ರಾಮಗಳನ್ನು ಗುರುತಿಸಿ , ಕಾಮಗಾರಿಗಳ ಕ್ರಿಯಾ ಯೋಜನೆ ಸಿದ್ಧಪಡಿಸಿ , ಪ್ರತಿ ಮನೆಗೆ ನಳದ ನೀರು ತಲುಪುವಂತಹ ಯೋಜನೆ ಸಾಕಾರಗೊಳ್ಳಲಿದೆ .

ಕಾಲುವೆ ನಿರ್ಮಾಣ ಕಾಮಗಾರಿ ಪರಿಶೀಲನೆ :

ನಾರಾಯಣಪೂರ ಬಲದಂಡೆ ನಾಲೆಯ ಮರುನಿರ್ಮಾಣ ಕಾಮಗಾರಿ ಕಳಪೆ ಗುಣಮಟ್ಟದ್ದಾಗಿದೆ ಎಂದು ದೂರುಗಳು ಕೇಳಿಬಂದಿವೆ . ಆದರೆ ನೋಡದೇ ಆರೋಪ ಮಾಡುವದಿಲ್ಲ . ಪಾದಯಾತ್ರೆ ಮಾಡುವ ಮೂಲಕ ಕಾಮಗಾರಿಗೆ ಅನುದಾನ ಪಡೆಯಲಾಗಿದೆ . ಯಾವುದೇ ಕಾರಣಕ್ಕೂ ಕಳಪೆ ಕಾಮಗಾರಿಯಾಗಲು ಬಿಡುವುದಿಲ್ಲ . ಮೊದಲ ಹಂತದಲ್ಲಿ ಕೇವಲ 49 ಕಿ.ಮೀ ಕಾಮಗಾರಿಯಾಗಿದೆ ಎಂದು ತಿಳಿದಿರುವೆ . ತಾಂತ್ರಿಕ ಸಲಹೆಗಳನ್ನು ಪಡೆದು , ಕಾಮಗಾರಿಯನ್ನು ಪರಿಶೀಲಿಸಲಾಗುವುದು . ಜೊತೆಗೆ

ಅಭಿವೃದ್ಧಿಗೆ ಅಡ್ಡಿಪಡಿಸಿದರೆ ಸಹಿಸಲ್ಲ ಹಿಂದಿನ ಸರಕಾರದ ಅವಘಡದಿಂದ ಆರ್ಥಿಕ ಸಂಕಷ್ಟದ ಜೊತೆಗೆ ಪ್ರವಾಹ , ಕೊರೋನಾದಂತಹ ಸಮಸ್ಯೆಗಳನ್ನು ಎದರಿಸುತ್ತಿರುವ ಸರ್ಕಾರದಲ್ಲಿ ಅನುದಾನ ತರುವುದೆಂದರೆ ಸಣ್ಣ ಸಾಹಸವಲ್ಲ . ಆದರೆ ಕಾಮಗಾರಿಗಳ ನಿರ್ಮಾಣಕ್ಕೆ ಅಡ್ಡಿಪಡಿಸಿದರೆ ಸಹಿಸಲು ಆಗುವುದಿಲ್ಲ . ಬುಂಕಲದೊಡ್ಡಿ ಪ್ರಕರಣದಲ್ಲಿ ದೌರ್ಜನ್ಯ ಮಾಡಿದ್ದಾರೆ ಎಂಬ ಆರೋಪ ಕೇಳಿಬಂತು . ಮನಸ್ಸಿಗೆ ನೋವಾಯಿತು . ನನ್ನದೇನು ಸ್ವಾರ್ಥವಿದೆ . ಆದರೆ ಅಲ್ಲಿ ವಾಸಿಗಳ ಬೇಡಿಕೆ ಆಧರಿಸಿ ರಸ್ತೆ ನಿರ್ಮಿಸಲಾಗುತ್ತಿದೆ ಎಂದ ಅವರು , ವಿರೋಧ ಪಕ್ಷಗಳು ಅಭಿವೃದ್ಧಿಗೆ ಸಹಕರಿಸಬೇಕು . ಸಕಾರಾತ್ಮಕ ಸಲಹೆ , ಸೂಚನೆಗಳನ್ನು ಕೊಡಲಿ ಸ್ವಾಗತಿಸುವೆ ಎಂದು ಶಾಸಕ , ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಅಧ್ಯಕ್ಷ ಕೆ . ಶಿವನಗೌಡನಾಯಕ ತಿಳಿಸಿದರು .

ಅಭಿವೃದ್ಧಿಗೆ ಅಡ್ಡಿಪಡಿಸಿದರೆ ಸಹಿಸಲ್ಲ ಹಿಂದಿನ ಸರಕಾರದ ಅವಘಡದಿಂದ ಆರ್ಥಿಕ ಸಂಕಷ್ಟದ ಜೊತೆಗೆ ಪ್ರವಾಹ , ಕೊರೋನಾದಂತಹ ಸಮಸ್ಯೆಗಳನ್ನು ಎದರಿಸುತ್ತಿರುವ ಸರ್ಕಾರದಲ್ಲಿ ಅನುದಾನ ತರುವುದೆಂದರೆ ಸಣ್ಣ ಸಾಹಸವಲ್ಲ . ಆದರೆ ಕಾಮಗಾರಿಗಳ ನಿರ್ಮಾಣಕ್ಕೆ ಅಡ್ಡಿಪಡಿಸಿದರೆ ಸಹಿಸಲು ಆಗುವುದಿಲ್ಲ . ಬುಂಕಲದೊಡ್ಡಿ ಪ್ರಕರಣದಲ್ಲಿ ದೌರ್ಜನ್ಯ ಮಾಡಿದ್ದಾರೆ ಎಂಬ ಆರೋಪ ಕೇಳಿಬಂತು . ಮನಸ್ಸಿಗೆ ನೋವಾಯಿತು . ನನ್ನದೇನು ಸ್ವಾರ್ಥವಿದೆ . ಆದರೆ ಅಲ್ಲಿ ವಾಸಿಗಳ ಬೇಡಿಕೆ ಆಧರಿಸಿ ರಸ್ತೆ ನಿರ್ಮಿಸಲಾಗುತ್ತಿದೆ ಎಂದ ಅವರು , ವಿರೋಧ ಪಕ್ಷಗಳು ಅಭಿವೃದ್ಧಿಗೆ ಸಹಕರಿಸಬೇಕು . ಸಕಾರಾತ್ಮಕ ಸಲಹೆ , ಸೂಚನೆಗಳನ್ನು ಕೊಡಲಿ ಸ್ವಾಗತಿಸುವೆ ಎಂದು ಶಾಸಕ , ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಕೆ . ಶಿವನಗೌಡನಾಯಕ ತಿಳಿಸಿದರು

TRENDING