Tuesday, September 22, 2020
Home ಅಂತರ್ ರಾಷ್ಟ್ರೀಯ ತುರ್ತು ಸಂದರ್ಭದಲ್ಲಿ ಪ್ಲಾಸ್ಮಾ ಚಿಕಿತ್ಸೆ ನೀಡಲು ಅಮೆರಿಕ ಗ್ರೀನ್‌ ಸಿಗ್ನಲ್‌

ಇದೀಗ ಬಂದ ಸುದ್ದಿ

ಕೇರಳದ 10 ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’ ಘೋಷಣೆ

 ತಿರುವನಂತಪುರ: ಕೇರಳ ದಲ್ಲಿ ಸೋಮವಾರವೂ ಭಾರಿ ಮಳೆ ಯಾಗಿದ್ದು, ರಾಜ್ಯದ 10 ಜಿಲ್ಲೆಗಳಲ್ಲಿ 'ಆರೆಂಜ್ ಅಲರ್ಟ್'‌ ಘೋಷಿಸಲಾಗಿದೆ.ಹೆಚ್ಚು ಮಳೆಯಾಗುತ್ತಿರುವ ವಯನಾಡು, ಮಲಪ್ಪುರಂ ಮತ್ತು ತ್ರಿಶೂರ್‌ ಜಿಲ್ಲೆಗಳಲ್ಲಿ ಮಳೆ ಸಂಬಂಧಿ ಅವಘಡಗಳ ನಿರ್ವಹಣೆಗಾಗಿ...

ಕೊಡಗಿನಲ್ಲಿ ಮುಂದುವರಿದ ಧಾರಕಾರ ಮಳೆ : ಕೋಳಿಕಾಡಿನಲ್ಲಿ...

ಕೊಡಗು : ಕೊಡಗು ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು ತಲಕಾವೇರಿ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿರುವ ಕೋಳಿಕಾಡಿನಲ್ಲಿ ಭೂಕುಸಿತದ ಆತಂಕ ಎದುರಾಗಿದೆ. ಕೋಳಿಕಾಡು ಪ್ರದೇಶದಲ್ಲಿ ಹೊಸದಾಗಿ ಹೊಳೆ...

ಹುಬ್ಬಳ್ಳಿಯಿಂದ ಮಹಾರಾಷ್ಟ್ರಕ್ಕೆ ಸಾರಿಗೆ ಬಸ್ ಸಂಚಾರ...

ಹುಬ್ಬಳ್ಳಿ: ಕೋವಿಡ್-19 ಲಾಕ್ ಡೌನ್ ಕಾರಣದಿಂದ ಕಳೆದ ಆರು ತಿಂಗಳಿಂದ ಸ್ಥಗಿತಗೊಂಡಿದ್ದ ಮಹಾರಾಷ್ಟ್ರ ರಾಜ್ಯಕ್ಕೆ ಹುಬ್ಬಳ್ಳಿಯಿಂದ ತೆರಳುವ ಸಾರಿಗೆ ಬಸ್ ಸಂಚಾರವನ್ನು ಮತ್ತೆ ಪ್ರಾರಂಭಿಸಲಾಗಿದೆ. ಸರ್ಕಾರದ ಮಾರ್ಗದರ್ಶಿ ನಿರ್ದೇಶನಗಳ ಪ್ರಕಾರ...

ತನ್ನ ಮಕ್ಕಳ ಚಿಕಿತ್ಸೆಗಾಗಿ ತಮ್ಮಎಲ್ಲ ಅಂಗಾಂಗ...

 ತಿರುವನಂತಪುರ: ತನ್ನ ಮಕ್ಕಳ ಚಿಕಿತ್ಸೆಗಾಗಿ ಕೇರಳದಲ್ಲಿ ತಾಯಿಯೊಬ್ಬರು ತಮ್ಮ ಎಲ್ಲ ಅಂಗಾಂಗಗಳ ಮಾರಾಟಕ್ಕೆ ಮುಂದಾಗಿದ್ದಾರೆ. ಕೊಚ್ಚಿಯ ವರಪ್ಪುಳದಲ್ಲಿ ವಾಸಿಸುತ್ತಿರುವ ಈ ಮಹಿಳೆ ತನ್ನ ಗುಡಿಸಲ ಮುಂದೆ ಈ...

ಡೆಬಿಟ್ / ಕ್ರೆಡಿಟ್‌ ಕಾರ್ಡ್‌ ಹೊಂದಿರುವವರಿಗೆ ಇಲ್ಲಿದೆ...

 ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತಿರುವವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಕೆಲವೊಂದು ನಿಯಮಗಳನ್ನು ಬದಲಾಯಿಸುತ್ತಿದೆ. ಈ ನಿಯಮಗಳು ಸೆಪ್ಟೆಂಬರ್...

ತುರ್ತು ಸಂದರ್ಭದಲ್ಲಿ ಪ್ಲಾಸ್ಮಾ ಚಿಕಿತ್ಸೆ ನೀಡಲು ಅಮೆರಿಕ ಗ್ರೀನ್‌ ಸಿಗ್ನಲ್‌

 ವಾಷಿಂಗ್ಟನ್‌: ಸೋಂಕು ಪೀಡಿತ ರಾಷ್ಟ್ರಗಳಲ್ಲಿ ಅಗ್ರಸ್ಥಾನದಲ್ಲಿರುವ ಅಮೆರಿಕ ಸೋಂಕಿನ ವಿರುದ್ಧದ ಚಿಕಿತ್ಸೆಗೆ ತುರ್ತು ಸಂದರ್ಭದಲ್ಲಿ ಪ್ಲಾಸ್ಮಾ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಗುಣಮುಖರಾದ ಸೋಂಕಿತ ರೋಗಿಗಳ ರಕ್ತದ ಪ್ಲಾಸ್ಮಾವನ್ನು ವೈದ್ಯರು ತುರ್ತು ಸಂದರ್ಭದಲ್ಲಿ ಮತ್ತೂಬ್ಬ ರೋಗಿಯ ಚಿಕಿತ್ಸೆಗೆ ಬಳಸಲು ಅಮೆರಿಕದ ಅಧಿಕಾರಿಗಳು ಅನುಮತಿ ನೀಡಿದ್ದಾರೆ.

ವಿಶ್ವದ ಅತಿದೊಡ್ಡ ಆರ್ಥಿಕತೆಯನ್ನು ಧ್ವಂಸಗೊಳಿಸಿರುವ ಹಾಗೂ ನವೆಂಬರ್‌ನಲ್ಲಿ ನಡೆಯುವ ಚುನಾವಣೆಯಲ್ಲಿ ಎರಡನೇ ಅವಧಿಗೆ ದೇಶದ ಅಧ್ಯಕ್ಷರಾಗುವ ಕನಸು ಕಾಣುತ್ತಿರುವ ಟ್ರಂಪ್‌ ಅವರ ಮೇಲೆ ಮಾರಕ ಸಾಂಕ್ರಾಮಿಕವನ್ನು ನಿಯಂತ್ರಿಸುವ ಬಲುದೊಡ್ಡ ಸವಾಲು ಇರುವ ಸನ್ನಿವೇಶದಲ್ಲಿ, ಫ‌ುಡ್‌ ಆಯಂಡ್‌ ಡ್ರಗ್‌ ಅಡ್ಮಿನಿಸ್ಟ್ರೇಷನ್‌ ವಿಭಾಗ ಈ ಆದೇಶ ಹೊರಡಿಸಿದೆ.

ಪ್ಲಾಸ್ಮಾದಲ್ಲಿ ಶಕ್ತಿಶಾಲಿ ಆಯಂಟಿಬಾಡಿಗಳಿದ್ದು, ಇದು ಸೋಂಕಿತರು ವೇಗವಾಗಿ ಗುಣಮುಖರಾಗಲು ನೆರವಾಗಲಿದೆ ಹಾಗೂ ರೋಗಿಗಳ ಸ್ಥಿತಿ ಗಂಭೀರವಾಗುವುದನ್ನು ತಡೆಯುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಪ್ಲಾಸ್ಮಾ ಕೋವಿಡ್‌ ಚಿಕಿತ್ಸೆಯಲ್ಲಿ ಪರಿಣಾಮಕಾರಿ, ಇದರ ಸಂಭಾವ್ಯ ಪ್ರಯೋಜನಗಳನ್ನು ಮತ್ತು ಅಪಾಯ ಸಾಧ್ಯತೆಯ ನ್ನು ಅಂದಾಜಿಸಲಾಗಿದೆ ಎಂದು ಎಫ್ಡಿಎ ಹೇಳಿಕೆ ನೀಡಿದ್ದು, ಈ ಚಿಕಿತ್ಸಾ ವಿಧಾನವನ್ನು ಹಲವು ದೇಶಗಳಲ್ಲಿ ಅನುಸರಿಸಲಾಗುತ್ತಿದ್ದರೂ, ಇದರ ಪರಿಣಾಮದ ಬಗ್ಗೆ ತಜ್ಞರ ಮಟ್ಟದಲ್ಲಿ ಇನ್ನೂ ಚರ್ಚೆ ಮುಂದುವರಿದಿದೆ.

ಟೋಕಿಯೊ ಪ್ಯಾರಾಲಿಂಪಿಕ್ಮೇಲೆ ಕೊರೊನಾ ಕರಿನೆರಳು
ಟೋಕಿಯೊ: ಎಲ್ಲ ಸರಿ ಇದ್ದರೆ ಸೋಮವಾರ ಟೋಕಿಯೊ ಪ್ಯಾರಾಲಿಂಪಿಕ್‌ ಕ್ರೀಡಾಕೂಟ ಪ್ರಾರಂಭವಾಗಬೇಕಿತ್ತು. ಆದರೆ ಕೋವಿಡ್‌ ಸೋಂಕಿನಿಂದಾಗಿ ಆಗಸ್ಟ್‌ 24 ರಿಂದ ಆರಂಭವಾಗಬೇಕಿದ್ದ ಈ ಕ್ರೀಡಾಕೂಟ ಒಂದು ವರ್ಷಕ್ಕೆ ಮುಂದೂಡಿಕೆಯಾಗಿದೆ.

ಜುಲೈನಿಂದಲೂ ಒಲಿಂಪಿಕ್‌ ಆತಿಥೇಯ ನಗರವಾಗಿರುವ ಟೋಕಿಯೊದಲ್ಲಿ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ವರದಿಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಕ್ರೀಡಾಕೂಟದ ಆಯೋಜ ನೆ ಕುರಿತು ಅನಿಶ್ಚಿತತೆ ಕಾಡುತ್ತಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ.

ಸೋಂಕು ತ್ವರಿತವಾಗಿ ಹರಡುತ್ತಿದ್ದು, ಮುನ್ನೆಚ್ಚರಿಕೆ ಕ್ರಮದಿಂದ ಟೋಕಿಯೊ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಅನ್ನು 2021 ರ ಬೇಸಿಗೆಗೆ ಮುಂದೂಡಲು ಅಂ.ರಾ.ಒಲಿಂಪಿಕ್‌ ಸಮಿತಿ ಮತ್ತು ಸ್ಥಳೀಯ ಸಂಘಟಕರು ಮಾರ್ಚ್‌ ಅಂತ್ಯದಲ್ಲಿ ನಿರ್ಧರಿಸಿತ್ತು.

TRENDING