Friday, September 25, 2020
Home ದೆಹಲಿ ಅರುಣ್ ಜೇಟ್ಲಿ ಒಂದು ವರ್ಷದ ಪುಣ್ಯ ತಿಥಿ: ಪ್ರಧಾನಿ ಮೋದಿ, ಅಮಿತ್ ಶಾ ಗೌರವ ನಮನ

ಇದೀಗ ಬಂದ ಸುದ್ದಿ

ದೆಹಲಿ ಡಿಸಿಎಂ ಸಿಸೋಡಿಯಾರಿಗೆ ಕೊರೊನಾ ಜೊತೆ ಡೆಂಗ್ಯೂ...

ಕೊರೊನಾವೈರಸ್ ಸೋಂಕು ತಗುಲಿರುವ ಹಿನ್ನೆಲೆ ನವದೆಹಲಿಯ ಲೋಕ ನಾಯಕ ಜಯಪ್ರಕಾಶ್ ಆಸ್ಪತ್ರೆಗೆ ದಾಖಲಾಗಿರುವ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಡೆಂಗ್ಯೂ ಸೋಂಕು ಕೂಡಾ ತಗುಲಿರುವ ಬಗ್ಗೆ ತಿಳಿದು ಬಂದಿದೆ.

ರಾಜ್ಯ ಪೊಲೀಸ್‌ ಇಲಾಖೆಯಲ್ಲಿ 20,203 ಹುದ್ದೆ ಖಾಲಿ:...

 ಬೆಂಗಳೂರು: ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ವಿವಿಧ ಶ್ರೇಣಿಯ 20,203 ಹುದ್ದೆಗಳು ಖಾಲಿ ಇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ವಿಧಾನ ಪರಿಷತ್‌ನಲ್ಲಿ ಗುರುವಾರ ಜೆಡಿಎಸ್‌...

ಬ್ಯಾಂಕ್ ಖಾತೆಯಲ್ಲಿ ವಂಚನೆಯಾದ್ರೆ ತಕ್ಷಣ ಏನು ಮಾಡಬೇಕು.?...

 ಕೊರೊನಾ ಮಧ್ಯೆ ವಂಚನೆ ಪ್ರಕರಣಗಳು ಹೆಚ್ಚಾಗ್ತಿವೆ. ಇದನ್ನು ತಪ್ಪಿಸಲು ಆರ್‌ಬಿಐ ಸಾಮಾನ್ಯ ಜನರಿಗೆ ನಿರಂತರವಾಗಿ ಮಾಹಿತಿ ನೀಡುತ್ತಿದೆ. ಇದರ ಹೊರತಾಗಿಯೂ ಖಾತೆಯಲ್ಲಿರುವ ಹಣ ಕಳ್ಳತನವಾದ್ರೆ ಏನು ಮಾಡಬೇಕು ಎಂಬ ಬಗ್ಗೆ...

ಕೋವಿಡ್ 19 ಪರಿಹಾರ ಧನ : ಚಾಲಕರಿಗೆ...

ಬೆಂಗಳೂರು: ಲಾಕ್‌ಡೌನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರಿಗೆ ಘೋಷಿಸಿರುವ 5,000 ರೂ. ನೆರವು ಪಡೆಯಲು ಮತ್ತೂಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ಭರವಸೆಯನ್ನು ಸರಕಾರ ನೀಡಿದೆ.

ಡ್ರಗ್ಸ್ ಪ್ರಕರಣ : ನಟಿ ಸಂಜನಾ ಗಲ್ರಾನಿ...

ಬೆಂಗಳೂರು: ಡ್ರಗ್ಸ್ ಜಾಲ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಸೇರಿರುವ ನಟಿ ಸಂಜನಾ ಗಲ್ರಾನಿ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸೆ. 28ಕ್ಕೆ ಮುಂದೂಡಲಾಗಿದೆ. ಸಂಜನಾ ಪರ ವಕೀಲರು...

ಅರುಣ್ ಜೇಟ್ಲಿ ಒಂದು ವರ್ಷದ ಪುಣ್ಯ ತಿಥಿ: ಪ್ರಧಾನಿ ಮೋದಿ, ಅಮಿತ್ ಶಾ ಗೌರವ ನಮನ

ಭಾರತೀಯ ಜನತಾ ಪಕ್ಷದ ಟ್ರಬಲ್​ ಶೂಟರ್​​ ಮತ್ತು ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್​​ ಜೇಟ್ಲಿ ನಮ್ಮನ್ನಗಲಿ ಇಂದಿಗೆ ಒಂದು ವರ್ಷ. ಅರುಣ್​​ ಜೇಟ್ಲಿಯವರ ಮೊದಲನೇ ವರ್ಷದ ಪುಣ್ಯಸ್ಮರಣೆ ಭಾಗವಾಗಿ ಇಂದು ಇಡೀ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ನೆನಪಿನ ಕಾರ್ಯಕ್ರಮಗಳು ಆಯೋಜಿಸಿದ್ದಾರೆ . ಇನ್ನೊಂದೆಡೆ ಜೇಟ್ಲಿ ಕುಟುಂಬದವರು ಕೂಡ ಕೇಂದ್ರ ಮಾಜಿ ಸಚಿವರ ಮೊದಲ ವರ್ಷದ ಪುಣ್ಯ ತಿಥಿ ಆಚರಿಸುತ್ತಿದ್ದಾರೆ. ಇವರ ಪುಣ್ಯ ತಿಥಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಸೇರಿದಂತೆ ಹಲವರು ಇಂದು ಗೌರವ ನಮನ ಸಲ್ಲಿಸಿದ್ದಾರೆ. ದೇಶಕ್ಕೆ ಜೇಟ್ಲಿಯವರು ಸಲ್ಲಿಸಿದ ಸೇವೆಯನ್ನು ನೆನೆದಿದ್ದಾರೆ.

“ಕಳೆದ ವರ್ಷ ಇದೇ ದಿನ ನಾವು ಅರುಣ್​​ ಜೇಟ್ಲಿಯವರನ್ನು ಕಳೆದುಕೊಂಡೆವು. ನಾನು ಇಂದು ನನ್ನ ಸ್ನೇಹಿತರಾದ ಜೇಟ್ಲಿಯವರನ್ನು ತುಂಬಾ ಮಿಸ್​​ ಮಾಡಿಕೊಳ್ಳುತ್ತಿದ್ದೇನೆ. ಇವರ ಸಾಮಾಜಿಕ ಸೇವೆ, ಬುದ್ಧಿಶಕ್ತಿ, ಕಾನೂನು ಜ್ಞಾನ, ವ್ಯಕ್ತಿತ್ವವೂ ನೆನಪಿನಲ್ಲೇ ಉಳಿಯುವಂತದ್ದು” ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್​ ಮಾಡಿದ್ದಾರೆ.

“ಅರುಣ್​ ಜೇಟ್ಲಿ ಓರ್ವ ಅತ್ಯುತ್ತಮ ರಾಜಕಾರಣಿ. ಭಾರತದ ರಾಜಕೀಯ ಇತಿಹಾಸದಲ್ಲೇ ನೆನಪು ಮಾಡಿಕೊಳ್ಳಬೇಕಾದ ಉತ್ತಮ ವಾಗ್ಮಿ. ಇವರಿಗೆ ದೇಶದ ಮೇಲೆ ಇದ್ದ ಪ್ರೀತಿ ಮತ್ತು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ” ಎಂದು ಅಮಿತ್​ ಶಾ ಟ್ವೀಟ್​​ ಮೂಲಕ ಶ್ರದ್ದಾಂಜಲಿ ಸಲ್ಲಿಸಿದ್ದಾರೆ.

ಜೇಟ್ಲಿಯವರ ಪುಣ್ಯಸ್ಮರಣೆ ಅಂಗವಾಗಿ ದೇಶದ ಹಲವೆಡೆ ಇಂದು ಆರೋಗ್ಯ ತಪಾಸಣೆ, ರಕ್ತ ಪರೀಕ್ಷೆ, ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರ ಹಾಗೂ ಆಯುಷ್ಮಾನ್ ಭಾರತ್ ಕಾರ್ಡ್‌ಗಳ ನೋಂದಣಿ ಹಾಗೂ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಂದರ್ಭ ಸ್ವಯಂ ಸೇವಕರು ಮತ್ತು ಅಭಿಮಾನಿಗಳು ರಕ್ತದಾನ ಮಾಡಲಿದ್ದಾರೆ.  

TRENDING