Tuesday, September 22, 2020
Home ಅಂತರ್ ರಾಷ್ಟ್ರೀಯ ಭೂಗತ ಪಾತಕಿ ‘ದಾವೂದ್ ಇಬ್ರಾಹಿಂ’ ನಮ್ಮಲ್ಲಿಯೇ ಇದ್ದಾನೆಂದು ಒಪ್ಪಿಕೊಂಡ ಪಾಕಿಸ್ತಾನ್!

ಇದೀಗ ಬಂದ ಸುದ್ದಿ

ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ವಿರುದ್ಧ...

ಹೈದರಾಬಾದ್ : ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಹೈದರಾಬಾದ್ ನಲ್ಲಿ ಮನೆಯೊಂದನ್ನು ಖರೀದಿಸಿದ್ದಾರಂತೆ. ಶಂಶಾಬಾದ್ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ಗೊಚ್ಚಿಬೋಲಿ ಏರಿಯಾದಲ್ಲಿ 4 ಬೆಡ್ ರೂಂನ ವಿಶಾಲವಾದ ಮನೆಯನ್ನು...

ಕೊರೊನಾ ಹಿನ್ನೆಲೆ : ಕೊಳ್ಳೇಗಾಲದಲ್ಲಿ ಮಧ್ಯಾಹ್ನದ ನಂತರ...

ಕೊಳ್ಳೇಗಾಲ: ನಗರದಲ್ಲಿ ಪ್ರತಿನಿತ್ಯ ಕೊರೊನಾ ಸೋಂಕು ಹೆಚ್ಚಾಗುತ್ತಿರುವುದರಿಂದ ಜನರಲ್ ಮರ್ಚೆಂಟ್ಸ್ ಅಸೋಸಿಯೇಷನ್ ಅವರು ಸೆ. 21ರಿಂದ ಅ.4 ರವರೆಗೆ ಪ್ರತಿದಿನ ಮಧ್ನಾಹ 2.30ರ ನಂತರ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಬಂದ್...

ನಿರ್ಮಾಪಕ ಮಹೇಶ್ ಭಟ್, ರಿಯಾ ಚಕ್ರವರ್ತಿ ಖಾಸಗಿ...

ಮುಂಬೈ: ರಿಯಾ ಚಕ್ರವರ್ತಿ ಮತ್ತು ಚಲನಚಿತ್ರ ನಿರ್ಮಾಪಕ ಮಹೇಶ್ ಭಟ್ ಅವರ ಹೊಸ ವೀಡಿಯೊ ಈಗ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ವಿಡಿಯೊದಲ್ಲಿ ರಿಯಾ ಮತ್ತು ಮಹೇಶ್ ಭಟ್ ಒಂದು ಕೋಣೆಯಲ್ಲಿ ಒಟ್ಟಿಗೆ...

ಕೊರೊನಾ ಸೋಂಕಿತರಿಗೆ ‘ ICU ‘ ಲಭ್ಯವಾಗುವ...

ಭಾರತದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 55 ಲಕ್ಷ ದಾಟಿರುವ ನಡುವೆ ಆಸ್ಪತ್ರೆಗಳಲ್ಲಿ ರೋಗಿಗಳ ನಿರ್ವಹಣೆಯ ಸವಾಲುಗಳೂ ಸಹ ಹೆಚ್ಚಾಗುತ್ತಿವೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ನಡುವೆ ಆಸ್ಪತ್ರೆಗಳಲ್ಲಿ ಐಸಿಯು ಲಭ್ಯತೆ ಕಡಿಮೆಯಾಗುತ್ತಿದೆ.

ವಿಶ್ವದಾದ್ಯಂತ 3 ಕೋಟಿ ದಾಟಿದ ಕೊರೊನಾ ಸೋಂಕಿತರ...

ವಿಶ್ವದ ಒಟ್ಟು 210 ದೇಶಗಳಲ್ಲಿ ಈವರೆಗೆ 3 ಕೋಟಿಗೂ ಹೆಚ್ಚು ಜನರಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ. ಒಟ್ಟು 9.47 ಲಕ್ಷ ಮಂದಿ ಕೋವಿಡ್-19ರಿಂದ ಮೃತಪಟ್ಟಿದ್ದಾರೆ. ಲಸಿಕೆ ಅಭಿವೃದ್ಧಿಪಡಿಸುವ ಕಾರ್ಯಕ್ಕೆ...

ಭೂಗತ ಪಾತಕಿ ‘ದಾವೂದ್ ಇಬ್ರಾಹಿಂ’ ನಮ್ಮಲ್ಲಿಯೇ ಇದ್ದಾನೆಂದು ಒಪ್ಪಿಕೊಂಡ ಪಾಕಿಸ್ತಾನ್!

ಕರಾಚಿ (.23): ಮೂರು ದಶಕಗಳಲ್ಲಿ ಇದೇ ಮೊದಲ ಬಾರಿಗೆ ದಾವೂದ್ಇಬ್ರಾಹಿಂ ನಮ್ಮಲ್ಲಿಯೇ ಇರುವುದಾಗಿ ಪಾಕಿಸ್ತಾನ ಒಪ್ಪಿಕೊಂಡಿದೆ . ವಿಶ್ವಸಂಸ್ಥೆಯ ಅನುಮೋದನೆ ನಿರ್ಣಯದಡಿಯಲ್ಲಿ 88 ಭಯೋತ್ಪಾದಕರನ್ನು ನಿಷೇಧಿಸುವ ಆದೇಶವನ್ನು ಪಾಕಿಸ್ತಾನ ಸರ್ಕಾರ ಹೊರಡಿಸಿದೆ. ಆದೇಶದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೆಸರು ಕೂಡ ಇದೆ.

ದಾವೂದ್ ಇಬ್ರಾಹಿಂ ಸಾಕಷ್ಟು ಅಕ್ರಮ ದಂದೆಗಳನ್ನು ನಡೆಸುತ್ತಿದ್ದಾನೆ. 1993ರಲ್ಲಿ ನಡೆದ ಮುಂಬೈ ಬಾಂಬ್​ ದಾಳಿಗೆ ಈತನೇ ಮಾಸ್ಟರ್​ ಮೈಂಡ್​. ಈ ಘಟನೆ ನಡೆದ ನಂತರದಲ್ಲಿ ಭಾರತದ ಮೋಸ್ಟ್​ ವಾಂಟೆಡ್​ ಕ್ರಿಮಿನಲ್​ಗಳ ಸಾಲಿಗೆ ದಾವೂದ್​ ಸೇರಿದ್ದ. ಇಲ್ಲೊಂದು ಅಚ್ಚರಿಯ ವಿಚಾರವಿದೆ. ಅದೇನೆಂದರೆ, ಪಾಕಿಸ್ತಾನ 2015 ಹಾಗೂ 2019ರಲ್ಲಿ ಇದೇ ಮಾದರಿಯ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿತ್ತು. ಆದರೆ, ಇಬ್ರಾಹಿಂ ಎಲ್ಲಿದ್ದಾನೆ ಎಂಬುದಾಗಿ ಪಾಕಿಸ್ತಾನ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ದಾವೂದ್​ ಪಾಕಿಸ್ತಾನದಲ್ಲಿರುವುದಾಗಿ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ, ಆತನ ನಿವಾಸದ ವಿಳಾಸ ಕೂಡ ಬಹಿರಂಗವಾಗಿದೆ. ಈತನ ಮೇಲೆ ಆರ್ಥಿಕ ನಿರ್ಬಂಧವನ್ನೂ ಹೇರಿವೆ.

ದಾವೂದ್​ ಇಬ್ರಾಹಿಂ ಬಳಿ ಐದು ಪಾಸ್​​ಪೋರ್ಟ್​ಗಳು ಇವೆ ಎನ್ನಲಾಗಿದೆ. ಈ ಪೈಕಿ ಎಲ್ಲ ಪಾಸ್​​ಪೋರ್ಟ್​ಗಳು ನಕಲಿ ಆಗಿದ್ದು, ಒಂದೊಂದು ದೇಶಕ್ಕೆ ಹೋಗುವಾಗ ಒಂದೊಂದು ಪಾಸ್​​ಪೋರ್ಟ್​ಗಳನ್ನು ಈತ ಬಳಕೆ ಮಾಡುತ್ತಿದ್ದಾನೆ. ಆದರೆ, ದೇಶದ ನಾಗರೀಕತೆಗೆ ಸಂಬಂಧಿಸಿದ ಯಾವುದೇ ಕಾರ್ಡ್​​ಗಳನ್ನು ಆತನಿಗೆ ನೀಡಿಲ್ಲ ಎಂದು ಪಾಕ್​ ಹೇಳಿದೆ.

1993ರ ಮುಂಬೈ ಬಾಂಬ್​ ಸ್ಫೋಟದ ಪ್ರಮುಖ ರುವಾರಿ ಈತನೇ ಆಗಿದ್ದ. ದಾವೂದ್​ ಮಾಡಿದ ದುಷ್ಕೃತ್ಯದಿಂದ ಸಾಕಷ್ಟು ಜನರು ಮೃತಪಟ್ಟಿದ್ದರು. ಇದಿಷ್ಟೇ ಅಲ್ಲದೆ ಬೇರೆ ಬೇರೆ ಕೃತ್ಯಗಳಲ್ಲೂ ಈತನ ಹೆಸರು ಕೇಳಿ ಬಂದಿದೆ.  

TRENDING