Thursday, September 24, 2020
Home ಜಿಲ್ಲೆ ಉಡುಪಿ ಉಡುಪಿ ನಾಡದೋಣಿ ದುರಂತ: ಮೃತಪಟ್ಟ ಮೀನುಗಾರರಿಗೆ ಪರಿಹಾರಕ್ಕಾಗಿ ಒತ್ತಾಯ

ಇದೀಗ ಬಂದ ಸುದ್ದಿ

ಡ್ರಗ್ಸ್ ಪ್ರಕರಣ : ನಟಿ ಸಂಜನಾ ಗಲ್ರಾನಿ...

ಬೆಂಗಳೂರು: ಡ್ರಗ್ಸ್ ಜಾಲ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಸೇರಿರುವ ನಟಿ ಸಂಜನಾ ಗಲ್ರಾನಿ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸೆ. 28ಕ್ಕೆ ಮುಂದೂಡಲಾಗಿದೆ. ಸಂಜನಾ ಪರ ವಕೀಲರು...

ಡ್ರಗ್ಸ್ ಪ್ರಕರಣ :ನಾಳೆ ಎನ್.ಸಿ.ಬಿ. ವಿಚಾರಣೆಗೆ ಹಾಜರಾಗಲಿದ್ದಾರೆ...

 ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಾಲಿವುಡ್ ನ ಹೈ ಪ್ರೊಫೈಲ್ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್, ಶ್ರದ್ಧಾ ಕಪೂರ್ ಸೇರಿದಂತೆ ಹಲವರಿಗೆ ಎನ್.ಸಿ.ಬಿ. ಸಮನ್ಸ್ ನೀಡಿದ್ದು, ನಾಳೆ ನಟಿ...

ಹಿರಿಯಡ್ಕದ ನಡುರಸ್ತೆಯಲ್ಲಿ ಹಾಡುಹಗಲೇ ರಿಯಲ್ ಎಸ್ಟೇಟ್...

 ಉಡುಪಿ : ಉಡಪಿಯ ಹಿರಿಯಡಕದಲ್ಲಿ ಹಾಡುಹಗಲೇ ಕಗ್ಗೊಲೆ ನಡೆದಿದ್ದು, ನಗರದ ಹೃದಯ ಭಾಗದಲ್ಲಿ ದುಷ್ಕರ್ಮಿಗಳ ತಂಡವೊಂದು ವ್ಯಕ್ತಿಯೊಬ್ಬನ ಕತ್ತು ಕತ್ತರಿಸಿ ಕೊಲೆ ಮಾಡಿದೆ. ಕೊಲೆಯಾದ ವ್ಯಕ್ತಿಯನ್ನು ಕಿಶನ್ ಶೆಟ್ಟಿ ಎಂದು...

ಕೇಂದ್ರ ಸರ್ಕಾರ ರೈತರ ನಂತರ, ಕಾರ್ಮಿಕರನ್ನು...

ನವದೆಹಲಿ: ಸಂಸತ್ತು ಅಂಗೀಕರಿಸಿದ ಮೂರು ಕಾರ್ಮಿಕ ಸುಧಾರಣಾ ಮಸೂದೆಗಳ ಕುರಿತು ಗುರುವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಕೇಂದ್ರ ಸರ್ಕಾರ ರೈತರ ನಂತರ ಕಾರ್ಮಿಕರನ್ನು...

ಪಂಜಾಬ್ ನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ:...

ಮೊಹಾಲಿ : ನಿರ್ಮಾಣ ಹಂತದ ಎರಡು ಮಹಡಿಯ ಕಟ್ಟಡವೊಂದು ಕುಸಿದುಬಿದ್ದ ಪರಿಣಾಮ ಮೂವರು ಕಾರ್ಮಿಕರು ಸಾವನ್ನಪ್ಪಿದ್ದು ಕಟ್ಟಡದ ಮಾಲೀಕ ಸೇರಿ ಹಲವರು ಗಾಯಗೊಂಡು ಇನ್ನು ಕೆಲವರು ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿರುವ...

ಉಡುಪಿ ನಾಡದೋಣಿ ದುರಂತ: ಮೃತಪಟ್ಟ ಮೀನುಗಾರರಿಗೆ ಪರಿಹಾರಕ್ಕಾಗಿ ಒತ್ತಾಯ

ಉಡುಪಿ: ಒಂದು ಭಾನುವಾರ ಮೀನುಗಾರರಿಗೆ ಕರಾಳದಿನವಾಗಿತ್ತು. ಒಂದು ಹೊತ್ತಿನ ಊಟಕ್ಕೆ ಸಮುದ್ರದ ಮಧ್ಯದಲ್ಲಿ ಜೀವವನ್ನೇ ಕೈಯಲ್ಲಿ ಹಿಡಿದು ಮೀನುಗಾರಿಕೆನಡೆಸುವ ಮೀನುಗಾರರು ನೀರುಪಾಲಾದ ದುರ್ಘಟನೆ ಸಂಭವಿಸಿದ ದಿನ.‌ ಹೌದು,‌ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಕಿರಿಮಂಜೇಶ್ವರದಲ್ಲಿ ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಳಿ ಮರಳುತ್ತಿದ್ದ ವೇಳೆಬೋಟು ಬಂಡೆಗೆ ಡಿಕ್ಕಿ ಹೊಡೆದು 12ಮೀನುಗಾರರಲ್ಲಿ ನಾಲ್ಕುಮೀನುಗಾರರು ಸಾವನ್ನಪ್ಪಿದ್ದರು.

ತಮ್ಮ ಕುಟುಂಬದ ಲಾಲನೆ ಪಾಲನೆ ಮಾಡುವ ಅದೆಷ್ಟೋ ಕನಸನ್ನ ಕಂಡಿದ್ದ ಮೀನುಗಾರರು ಕಳೆದ ಭಾನುವಾರ ಭಾರೀ ಅಲೆಗೆ ಸಿಲುಕಿ ಜೀವವನ್ನೇ ಕಳೆದುಕೊಂಡಿದ್ದರು. ಇನ್ನೇನು ಸಿಕ್ಕ ಮೀನುಗಳನ್ನ ಕಡಲಿಗೆ ತಂದು ಮಾರಿ ಹಣ ಸಂಪಾದಿಸಬೇಕು. ಮನೆಯಲ್ಲಿ ಕಾದು‌ ಕುಳಿತಿರುವ ತಮ್ಮ ಹೆತ್ತವರು, ಹೆಂಡತಿ‌ ಮಕ್ಕಳ ನಗು ಮುಖ ನೋಡಬೇಕೆಂದು ಬರುತ್ತಿದ್ದ ಆ 12ಮಂದಿ ಮೀನುಗಾರರಲ್ಲಿ ಲಕ್ಷ್ಮಣ ಖಾರ್ವಿ,‌ ನಾಗ ಖಾರ್ವಿ, ಮಂಜುನಾಥ ಖಾರ್ವಿ, ಶೇಖರ ಖಾರ್ವಿ‌ ಎಂಬ ಈ 4 ಮೀನುಗಾರರು ಬಾರದ ಲೋಕಕ್ಕೆ ತೆರಳಿದ್ದರು. : ಚೀನಿಯರ ವೀಸಾ ಮತ್ತು ಭಾರತದಲ್ಲಿನ ಡ್ಯ್ರಾಗನ್ ದೇಶದ ಶಿಕ್ಷಣ ಸಂಸ್ಥೆಗಳ ಪರಿಶೀಲನೆಗೆ ಮುಂದಾದ ಕೇಂದ್ರ ಸರ್ಕಾರ

ತಮ್ಮ ಮನೆಯ ಯಜಮಾನ ಇನ್ನೇನು ಮೀನು ತರುತ್ತಾರೆ ಎಂದು ಕಾದುಕುಳಿತಿದ್ದ ಹೆಂಡತಿ ‌ಮಕ್ಕಳು ಯಜಮಾನನ ಮೃತದೇಹ‌ ಕಂಡು ಕಣ್ಣೀರಲ್ಲಿ ದಿನದೂಡುತ್ತಿದ್ದಾರೆ. ಒಂದೆಡೆ ಮನೆಯ ಆಧಾರ ಸ್ಥಂಬವೂ ಇಲ್ಲ‌, ಇನ್ನೋಂದೆಡೆ ದಿನ ದೂಡೋದೇ ಹರಹಾಸಹಪಡುವ ಕಷ್ಟದ ದಿನಗಳು ಬಂದೆರಗಿದೆ.

ಹೀಗಾಗಿ ಸರ್ಕಾರದಿಂದ ದೊಡ್ಡ ಮಟ್ಟದ ಸಹಾಯಧನ ಸಿಗುವ ನಿರೀಕ್ಷೆಯಲ್ಲಿ ಈ ನಾಲ್ಕು ಮೀನುಗಾರ ಕುಟುಂಬವಿದೆ. ‌ಇನ್ನು ಮೀನುಗಾರ ಸಂಘಗಳು, ಮೃತ‌ ಮೀನುಗಾರರ ಸ್ನೇಹಿತರು ಕೂಡ ಧನಸಹಾಯ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಸರ್ಕಾರ ಕೂಡ ಅತೀ ಶೀಘ್ರದಲ್ಲಿ ಮೀನುಗಾರರಿಗೆ ನೆರವಾಗಬೇಕು, ಪರಹಾ‌ರ‌ ಕೊಡಬೇಕು ಅನ್ನೋ ಒತ್ತಾಯ ಕೇಳಿಬರ್ತಾಯಿದೆ. ಈ ಬಗ್ಗೆ ಸ್ಥಳೀಯ‌ ಶಾಸಕ ಸುಕುಮಾರ್‌ ಶೆಟ್ಟಿ ಕೂಡ ಮೃತ ಮೀನುಗಾರ ಕುಟುಂಬಕ್ಕೆ ‌ಗರಿಷ್ಟ ಪರಿಹಾರ ಕೊಡಬೇಕು ಅಂತ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.  

TRENDING