Saturday, September 19, 2020
Home ದೆಹಲಿ ವಾಹನ ಸವಾರರಿಗೆ ಶಾಕ್ : ಪೆಟ್ರೋಲ್ ದರದಲ್ಲಿ ಮತ್ತೆ ಏರಿಕೆ

ಇದೀಗ ಬಂದ ಸುದ್ದಿ

ಆಹಾರದಿಂದ ‘ಕೊರೊನಾವೈರಸ್’ ಹರಡಬಹುದೇ?

COVID-19 ಆಹಾರದಿಂದ ಹರಡುವ ಬಗ್ಗೆ ಯಾವುದೇ ನಿರ್ಣಾಯಕ ಪುರಾವೆಗಳಿಲ್ಲ, COVID-19 ಪೀಡಿತ ದೇಶಗಳಿಂದ ಭಾರತಕ್ಕೆ ಆಮದು ಮಾಡಿಕೊಳ್ಳುವ ಆಹಾರವು ಮಾನವ ಬಳಕೆಗೆ ಸುರಕ್ಷಿತವಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ...

ಕೊಡಗಿನಲ್ಲಿ ರೆಡ್ ಅಲರ್ಟ್ ಘೋಷಣೆ

ಭಾರಿ ಮಳೆಯಿಂದ ತತ್ತರಿಸಿದ್ದ ಕೊಡಗಿಗೆ ಮತ್ತೆ ವರುಣಾಘಾತವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ರೆಡ್​ ಆಲರ್ಟ್​ ಘೋಷಣೆ ಮಾಡಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುತ್ತಿದ್ದು,...

ಕಲಬುರ್ಗಿ ಯಲ್ಲಿ ಕೊರೊನಾಗೆ ಮತ್ತೆ 6 ಜನ...

 ಕಲಬುರ್ಗಿ: ಕೋವಿಡ್-19 ಸೋಂಕಿನಿಂದ ಜಿಲ್ಲೆಯಲ್ಲಿ ಮತ್ತೆ 6 ಜನ ನಿಧನರಾಗಿರುವ ಬಗ್ಗೆ ಶುಕ್ರವಾರ ವರದಿಯಾಗಿದ್ದು, ಇದರಿಂದ ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ 254ಕ್ಕೆ ಏರಿಕೆಯಾಗಿದೆ. ತೀವ್ರ...

ನಾಗಪುರ : ಆರೆಸ್ಸೆಸ್ ಮುಖ್ಯಸ್ಥ ಸೇರಿ 9...

 ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್​ಎಸ್​ಎಸ್​)ದ ಶಕ್ತಿ ಕೇಂದ್ರ ನಾಗಪುರದ ಕೇಂದ್ರ ಕಚೇರಿಯಲ್ಲಿ ಕನಿಷ್ಠ 9 ಹಿರಿಯ ನಾಯಕರಿಗೆ ಕೊರೋನಾ ಸೋಂಕು ತಗುಲಿದೆ. ಕೋವಿಡ್ 19 ಟೆಸ್ಟ್ ಪಾಸಿಟಿವ್ ಬಂದ ಕಾರಣ ಅವರನ್ನು...

ದೇಶದಲ್ಲಿ ಸೈಬರ್ ಕ್ರೈಂ ಶೇ 500ರಷ್ಟು ಹೆಚ್ಚಳ:...

ನವದೆಹಲಿ: ಭಾರತದಲ್ಲಿ ಸೈಬರ್ ಕ್ರೈಂ ಪ್ರಮಾಣ ಶೇಕಡ 500 ಹೆಚ್ಚಳ ಕಂಡಿದೆ. ಇದಕ್ಕೆ ಸೀಮಿತ ಜಾಗೃತಿ ಮತ್ತು ಕಳಪೆ ಸೈಬರ್​ ಹೈಜೀನ್ ಕಾರಣ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್​ಎಸ್​ಎ) ಅಜಿತ್...

ವಾಹನ ಸವಾರರಿಗೆ ಶಾಕ್ : ಪೆಟ್ರೋಲ್ ದರದಲ್ಲಿ ಮತ್ತೆ ಏರಿಕೆ

ಕಳೆದ ಭಾನುವಾರದಿಂದ ಮೊದಲುಗೊಂಡು ಮೆಟ್ರೋ ನಗರಗಳಲ್ಲಿ ಏರಿಕೆ ಕಂಡಿದ್ದ ಪೆಟ್ರೋಲ್ ದರ ಒಂದೆರಡು ದಿನಗಳ ಬಿಡುವಿನ ನಂತರ ಮತ್ತೆ ಸತತ ಮೂರನೇ ದಿನ ಏರಿಕೆಯಾಗಿದೆ. ಆದರೆ, ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸ ಕಂಡು ಬಂದಿಲ್ಲ

ದೆಹಲಿಯಲ್ಲಿ ಪ್ರತಿ ಲೀಟರ್ ಬೆಲೆ 81.19 ರು ನಷ್ಟಿದ್ದ ಪೆಟ್ರೋಲ್ ದರ ಶನಿವಾರ(ಆಗಸ್ಟ್ 22)ದಂದು 81.35ರು ಗೇರಿದೆ. ಒಟ್ಟಾರೆ ಕಳೆದ ಒಂದು ವಾರದಿಂದ 92 ಪೈಸೆ ಏರಿಕೆಯಾಗಿದೆ. ಮುಂಬೈನಲ್ಲಿ ಒಂದು ವಾರದಲ್ಲಿ 83ಪೈಸೆ ಏರಿಕೆ ಕಂಡು ಬಂದಿದೆ. ಆಗಸ್ಟ್ 22ರಂದು ಹೈದರಾಬಾದ್ 17 ಪೈಸೆ, ಬೆಂಗಳೂರು 16 ಪೈಸೆ, ಚೆನ್ನೈನಲ್ಲಿ 13 ಪೈಸೆ ಪ್ರತಿ ಲೀಟರ್ ಮೇಲೆ ಏರಿಕೆಯಾಗಿದೆ.

ದೆಹಲಿಯಲ್ಲಿ ಜೂನ್ 29ರಂದು 80. 43 ಬೆಲೆ ಇತ್ತು. ಬೆಲೆ ಏರಿಕೆಗೂ ಮುನ್ನ ಮುಂಬೈನಲ್ಲಿ ಪೆಟ್ರೋಲ್ ದರ 87.31ರು, ಚೆನ್ನೈ-83.75 ರು ಹಾಗೂ ಕೋಲ್ಕತಾದಲ್ಲಿ 82.17 ಪ್ರತಿ ಲೀಟರ್ ನಷ್ಟು ಬೆಲೆ ಇತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಏರಿಕೆ ಕಾಣುತ್ತಿದ್ದು, ಬ್ರೆಂಟ್ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್ ಬೆಲೆ 45 ಯುಎಸ್ ಡಾಲರ್ ನಷ್ಟಿತ್ತು.

ಆಗಸ್ಟ್ 22ರಂದು ದರ ಪಟ್ಟಿ:

* ಮುಂಬೈನಲ್ಲಿ ಪ್ರತಿ ಲೀಟರ್ 88.02 ರು ಆಗಿದೆ.

* ಕೋಲ್ಕತಾದಲ್ಲಿ 82.87ರು ನಷ್ಟಿದೆ.

* ಚೆನ್ನೈನಲ್ಲಿ 84.40 ರು ನಷ್ಟಿದೆ.

* ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಬೆಲೆ 83.99 ರು ನಷ್ಟಿದೆ.

ಡೀಸೆಲ್ ಬೆಲೆ ಬದಲಾಗಿಲ್ಲ:

ಕಳೆದ 20 ದಿನಗಳಿಂದ ದೆಹಲಿಯಲ್ಲಿ ಡೀಸೆಲ್ ಬೆಲೆ ಬದಲಾಗಿಲ್ಲ. ಪ್ರತಿ ಲೀಟರ್ ಗೆ 73.56 ರು ನಷ್ಟೇ ಇದೆ. ಜುಲೈ 31ರಂದು 8 ರು ಕುಸಿತ ಕಂಡಿತ್ತು. ಕೇಜ್ರಿವಾಲ್ ಸರ್ಕಾರ ವ್ಯಾಟ್ ಇಳಿಸಿದ್ದರ ಪರಿಣಾಮವಿದು. ಮಿಕ್ಕಂತೆ ಮುಂಬೈನಲ್ಲಿ ಪ್ರತಿ ಲೀಟರ್ ಬೆಲೆ 80.11 ರು , ಚೆನ್ನೈನಲ್ಲಿ 78.86ರು, ಕೋಲ್ಕತಾದಲ್ಲಿ 77.06 ರು ಹಾಗೂ ಬೆಂಗಳೂರಲ್ಲಿ 77.88 ರು ನಷ್ಟಿದೆ.

TRENDING