Wednesday, September 23, 2020
Home ದೇಶ ದೇಶದಲ್ಲಿ 29 ಲಕ್ಷಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ

ಇದೀಗ ಬಂದ ಸುದ್ದಿ

ಜಮ್ಮು,ಕಾಶ್ಮೀರ : ಮಾತಾ ವೈಷ್ಣೋದೇವಿ ಭಕ್ತರಿಗೊಂದು ಸಿಹಿಸುದ್ದಿ

ಶ್ರೀನಗರ: ಜಮ್ಮುಮತ್ತು ಕಾಶ್ಮೀರದ ರೇಸಿ ಜಿಲ್ಲೆಯ ತ್ರಿಕೂಟ ಬೆಟ್ಟದಲ್ಲಿರುವ ಮಾತಾ ವೈಷ್ಣೋದೇವಿ ಭಕ್ತರಿಗೆ ಒಂದು ಸಿಹಿ ಸುದ್ದಿ. ಶೀಘ್ರವೇ ಭಕ್ತರು ಮೊಬೈಲ್ ಆಯಪ್ ಮೂಲಕ ದೇವಿಯ ನೇರ ದರ್ಶನವನ್ನು ಪಡೆಯಬಹುದು. ಇದಕ್ಕಾಗಿ...

ಡ್ರಗ್ಸ್ ಪ್ರಕರಣ : ಕಿರುತೆರೆ ನಟ-ನಟಿ ವಿಚಾರಣೆ

 ಬೆಂಗಳೂರು: ಡ್ರಗ್ಸ್ ಜಾಲದ ತನಿಖೆ ಆರಂಭಿಸಿರುವ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಪೊಲೀಸರು, ಕಿರುತೆರೆ ನಟ ಅಭಿಷೇಕ್ ಹಾಗೂ ನಟಿ ಗೀತಾ ಭಾರತಿ ಭಟ್ ಅವರನ್ನು ಮಂಗಳವಾರ ವಿಚಾರಣೆಗೆ ಒಳಪಡಿಸಿದರು.

ಐಪಿಎಲ್ 2020 : ಚೆನ್ನೈ ಸೂಪರ್...

ಮಂಗಳವಾರ ನಡೆದ ಐಪಿಎಲ್ ನ ನಾಲ್ಕನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

ದ.ಕ. ಜಿಲ್ಲೆಯ ಹಿರಿಯ ಉದ್ಯಮಿ, ಸಾಮಾಜಿಕ, ಧಾರ್ಮಿಕ...

ಪುತ್ತೂರು : ದ.ಕ. ಜಿಲ್ಲೆಯ ಹೆಸರಾಂತ ಹಿರಿಯ ಉದ್ಯಮಿ, ಸಾಮಾಜಿಕ, ಧಾರ್ಮಿಕ ಧುರೀಣ ಕಮ್ಮಾಡಿ ಇಬ್ರಾಹಿಂ ಹಾಜಿ (72) ಅವರು ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನ ಹೊಂದಿದರು.

ಮಹಾರಾಷ್ಟ್ರಕಟ್ಟಡ ಕುಸಿತ; 33ಕ್ಕೇರಿದ ಸಾವಿನ ಸಂಖ್ಯೆ

 ಮುಂಬೈ (ಸೆ. 23): ನೆರೆಯ ರಾಜ್ಯವಾದ ಮಹಾರಾಷ್ಟ್ರದ ಭಿವಾಂಡಿಯಲ್ಲಿ ಸೋಮವಾರ ನಸುಕಿನ ಜಾವ 3 ಅಂತಸ್ತಿನ ಕಟ್ಟಡವೊಂದು ಕುಸಿದುಬಿದ್ದಿತ್ತು. ಇದರಿಂದ ಕಟ್ಟಡದೊಳಗಿದ್ದ 10 ಜನರು ಸ್ಥಳದಲ್ಲೇ ಸಾವನ್ನಪ್ಪಿ, ಸಾಕಷ್ಟು ಜನರು...

ದೇಶದಲ್ಲಿ 29 ಲಕ್ಷಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ

 ನವದೆಹಲಿ, ಆಗಸ್ಟ್ 22: ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 29 ಲಕ್ಷದ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 68,898 ಹೊಸ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಅಭಿವೃದ್ಧಿ ಸಚಿವಾಲಯ ಶುಕ್ರವಾರ ತಿಳಿಸಿದೆ.

ದೇಶದಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 29,05,824ಕ್ಕೆ ತಲುಪಿದೆ. ಇದರಲ್ಲಿ 6,92,028 ಮಂದಿ ಕೊರೊನಾ ವೈರಸ್ ಸಕ್ರಿಯ ಸೋಂಕಿತರಾಗಿದ್ದು, 21,58,947 ರೋಗಿಗಳು ವೈರಸ್‌ನಿಂದ ಚೇತರಿಸಿಕೊಂಡಿದ್ದಾರೆ.

ಕಳೆದ 24 ಗಂಟೆಯಲ್ಲಿ ದೇಶದಲ್ಲಿ 983 ಹೊಸ ಸಾವಿನ ಪ್ರಕರಣಗಳು ವರದಿಯಾಗಿದ್ದು, ಕೊರೊನಾ ವೈರಸ್‌ಗೆ ಬಲಿಯಾದವರ ಒಟ್ಟು ಸಂಖ್ಯೆ 54,849ಕ್ಕೆ ಏರಿಕೆಯಾಗಿದೆ. ಶುಕ್ರವಾರ 62,282 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿರುವುದು ಸಮಾಧಾನದ ಸಂಗತಿ. ಇದು ಈವರೆಗೆ ಒಂದು ದಿನದಲ್ಲಿ ದಾಖಲಾದ ಅತಿ ಹೆಚ್ಚಿನ ಬಿಡುಗಡೆಯಾದವರ ಪ್ರಮಾಣವಾಗಿದೆ.

ಅತ್ಯಧಿಕ ಕೋವಿಡ್ 19 ಪ್ರಕರಣಗಳಿರುವ ರಾಜ್ಯದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿಯೇ ಮುಂದುವರಿದಿದೆ. ಶುಕ್ರವಾರ 14,161 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 11,749 ಮಂದಿ ಗುಣಮುಖರಾಗಿದ್ದಾರೆ. 339 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಒಟ್ಟುಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 6,57,450ಕ್ಕೆ ತಲುಪಿದೆ. ಇವರಲ್ಲಿ 4,70,873 ಮಂದಿ ಗುಣಮುಖರಾಗಿದ್ದಾರೆ. 21,698 ಮಂದಿ ಜೀವ ಕಳೆದುಕೊಂಡಿದ್ದಾರೆ.

ಆಂಧ್ರಪ್ರದೇಶದಲ್ಲಿ 9,544 ಹೊಸ ಪ್ರಕರಣಗಳು ದಾಖಲಾಗಿವೆ. 8,827 ಮಂದಿ ಚೇತರಿಸಿಕೊಂಡಿದ್ದು, ಕಳೆದ 24ಗಂಟೆಗಳಲ್ಲಿ 91 ಮಂದಿ ಮೃತಪಟ್ಟಿದ್ದಾರೆ.

ಕರ್ನಾಟಕದಲ್ಲಿ ಶುಕ್ರವಾರದ ವೇಳೆಗೆ 7,571 ಹೊಸ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ 2,948 ಪ್ರಕರಣಗಳು ಬೆಂಗಳೂರಿನಲ್ಲಿಯೇ ಕಂಡುಬಂದಿದೆ. 6,561 ಮಂದಿ ಬಿಡುಗಡೆಯಾಗಿದ್ದು, 93 ಸಾವುಗಳು ವರದಿಯಾಗಿವೆ. ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 2,64,546ಕ್ಕೆಯಾಗಿದೆ. ಅವರಲ್ಲಿ 1,76,942 ಮಂದಿ ಬಿಡುಗಡೆಯಾಗಿದ್ದು, 4,522 ಮಂದಿ ಮೃತಪಟ್ಟಿದ್ದಾರೆ.

TRENDING