Tuesday, September 22, 2020
Home ಸುದ್ದಿ ಜಾಲ ಚಿತ್ತೂರಿನ ಹಾಲಿನ ಘಟಕದಲ್ಲಿ ಅನಿಲ ಸೋರಿಕೆ : 14 ಕಾರ್ಮಿಕರು ತೀವ್ರ ಅಸ್ವಸ್ಥ

ಇದೀಗ ಬಂದ ಸುದ್ದಿ

ಮಹಾಮಾರಿ ʼಕೊರೊನಾʼ ಕುರಿತು ಬಹಿರಂಗವಾಯ್ತು ಮತ್ತೊಂದು ಆತಂಕಕಾರಿ...

ಕೊರೊನಾ ಮಹಾಮಾರಿಯ ಕರಿ ಛಾಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕೊರೊನಾದಿಂದ ಸಾಯುವವರ ಸಂಖ್ಯೆಯಲ್ಲೂ ಕೂಡ ಹೆಚ್ಚಾಗಿದೆ. ಇದರ ಜೊತೆಗೆ ಈ ಕೊರೊನಾ ಯಾವಾಗ ಕೊನೆಯಾಗುತ್ತೆ ಅನ್ನೋದು ಯಾರಿಗೂ ಗೊತ್ತಿಲ್ಲ....

ಸುಶಾಂತ್ ಸಾವಿನ ಪ್ರಕರಣ: ನಟಿ ರಿಯಾಗೆ ಅಕ್ಟೋಬರ್...

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಬಂಧಿಯಾಗಿರುವ ನಟಿ ರಿಯಾ ಚಕ್ರವರ್ತಿಯ ನ್ಯಾಯಾಂಗ ಬಂಧನ ಅವಧಿಯನ್ನು ಅಕ್ಟೋಬರ್ 6 ರವರೆಗೆ ವಿಸ್ತರಿಸಿ ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯವು...

ಬೈಂದೂರಿನ ಸಮುದ್ರ ತೀರದಲ್ಲಿ ಕ್ಷಿಪಣಿ ಮಾದರಿಯ ಉಪಕರಣ...

 ಉಡುಪಿ: ಬೈಂದೂರು ತಾಲ್ಲೂಕಿನ ಶಿರೂರು ಸಮೀಪದ ಕಳಿಹಿತ್ಲು ಸಮುದ್ರ ತೀರದಲ್ಲಿ ಮಂಗಳವಾರ ಕ್ಷಿಪಣಿ ಮಾದರಿಯ ವಸ್ತುವೊಂದು ಪತ್ತೆಯಾಗಿದೆ. ಸುಮಾರು 10 ಅಡಿ ಉದ್ದವಿರುವ ಕೆಂಪು ಬಣ್ಣದ ಉಪಕರಣವನ್ನು...

ಹಿರಿಯ ನಟಿ ಆಶಾಲತಾ ಕೊರೊನಾ ಸೋಂಕಿಗೆ ಬಲಿ

ನವದೆಹಲಿ:ಕೋವಿಡ್ 19 ಸೋಂಕಿಗೆ ಮರಾಠಿ ಚಿತ್ರರಂಗದ ಪ್ರಸಿದ್ಧ ನಟಿ ಆಶಾಲತಾ ವಾಬ್ಗಾಂವ್ ಕರ್ (79ವರ್ಷ) ಸತಾರಾ ಆಸ್ಪತ್ರೆಯಲ್ಲಿ ಮಂಗಳವಾರ ವಿಧಿವಶರಾಗಿರುವುದಾಗಿ ವರದಿ ತಿಳಿಸಿದೆ. ಐಎಎನ್ ಎಸ್...

ಭಾರತದಲ್ಲಿ 55 ಲಕ್ಷದ ಗಡಿ ದಾಟಿದ ಕೊರೊನಾ...

 ನವದೆಹಲಿ : ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನ ಆರ್ಭಟ ಮುಂದುವರಿದಿದ್ದು, ಇದೀಗ ಸೋಂಕಿತರ ಸಂಖ್ಯೆ 55 ಲಕ್ಷದ ಗಡಿ ದಾಟಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ...

ಚಿತ್ತೂರಿನ ಹಾಲಿನ ಘಟಕದಲ್ಲಿ ಅನಿಲ ಸೋರಿಕೆ : 14 ಕಾರ್ಮಿಕರು ತೀವ್ರ ಅಸ್ವಸ್ಥ

ಹಾಲಿನ ಡೈರಿ ಘಟಕದಲ್ಲಿ ಅಮೋನಿಯಾ ಅನಿಲ ಸೋರಿಕೆ ಸಂಭವಿಸಿದ್ದು, 14 ಮಂದಿ ತೀವ್ರವಾಗಿ ಅಸ್ವಸ್ಥಗೊಂಡಿರುವ ಘಟನೆ ಆಂಧ್ರ ಪ್ರದೇಶ ಪುಟಲಪಟ್ಟು ಮಂಡಲದ ಬಂದಪಲ್ಲಿಯಲ್ಲಿ ನಡೆದಿದೆ.

ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಪುಟಲಪಟ್ಟು ಹಾಲಿನ ಡೈರಿಯಲ್ಲಿ ಅನಿಲ ಸೋರಿಕೆ ಸಂಭವಿಸಿರುವ ಬಗ್ಗೆ ಹ್ಯಾಟ್ಸನ್ ಕಂಪನಿಯಿಂದ ಮಾಹಿತಿ ಬಂದಿತ್ತು. ಸಂಜೆಯ ಶಿಫ್ಟ್ ನಲ್ಲಿ 14 ಮಂದಿ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದು, ಅಸ್ವಸ್ಥಗೊಂಡವರನ್ನು ಚಿತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದ್ದು, ತಿರುಪತಿಯ ಎಸ್ ವಿ ಐಎಂಎಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ಚಿತ್ತೂರ್ ಜಿಲ್ಲಾಧಿಕಾರಿ ಡಾ.ನಾರಾಯಣ್ ಭರತ್ ಗುಪ್ತಾ ಮಾಹಿತಿ ನೀಡಿದ್ದಾರೆ.

ಅನಿಲ ಸೋರಿಕೆಯಲ್ಲಿ ಅಸ್ವಸ್ಥಗೊಂಡರೆಲ್ಲ ಮಹಿಳೆ ಕಾರ್ಮಿಕರು ಎನ್ನಲಾಗಿದೆ. ಇನ್ನು, ಘಟನೆಗೆ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಿರ್ಲಕ್ಷ್ಯದಿಂದ ಈ ಅನಿಲ ಸೋರಿಕೆ ಘಟನೆ ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಅಧಿಕಾರಿಗಳಿಂದ ಪರಿಸ್ಥಿತಿ ಪರಿಶೀಲನೆ:

ಕೈಗಾರಿಕಾ ಇಲಾಖೆಯ ಜನರಲ್ ಮ್ಯಾನೇಜರ್ ಮತ್ತು ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಪುಟಲಪಟ್ಟು ಸಬ್ ಇನ್ಸ್ ಪೆಕ್ಟರ್ ಚಿತ್ತೂರ್ ಜಿಲ್ಲಾಡಳಿತಕ್ಕೆ ಈ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಸಚಿವ ಪೆಡ್ಡಿರೆಡ್ಡಿ ರಾಮಚಂದ್ರ ರೆಡ್ಡಿ ಅವರು ಘಟನೆಯ ಕುರಿತು ಜಿಲ್ಲಾಡಳಿತದ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದ್ದಾರೆ. ಹಾಲಿನ ಡೈರಿಯಲ್ಲಿ ನಡೆದ ಅನಿಲ ಸೋರಿಕೆ ಸಂಬಂಧ ಸೂಕ್ತ ತನಿಖೆ ನಡೆಸಬೇಕು. ಅಸ್ವಸ್ಥಗೊಂಡ ಕಾರ್ಮಿಕರಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡುವಂತೆ ಸಚಿವರು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

TRENDING