Tuesday, September 22, 2020
Home ದೇಶ ದೇಶದಲ್ಲಿ ಒಂದೇ ದಿನ 70 ಸಾವಿರ ಕೊರೋನಾ ಸೋಂಕು ಪ್ರಕರಣಗಳು ಪತ್ತೆ, 978...

ಇದೀಗ ಬಂದ ಸುದ್ದಿ

ಹುಬ್ಬಳ್ಳಿಯಿಂದ ಮಹಾರಾಷ್ಟ್ರಕ್ಕೆ ಸಾರಿಗೆ ಬಸ್ ಸಂಚಾರ...

ಹುಬ್ಬಳ್ಳಿ: ಕೋವಿಡ್-19 ಲಾಕ್ ಡೌನ್ ಕಾರಣದಿಂದ ಕಳೆದ ಆರು ತಿಂಗಳಿಂದ ಸ್ಥಗಿತಗೊಂಡಿದ್ದ ಮಹಾರಾಷ್ಟ್ರ ರಾಜ್ಯಕ್ಕೆ ಹುಬ್ಬಳ್ಳಿಯಿಂದ ತೆರಳುವ ಸಾರಿಗೆ ಬಸ್ ಸಂಚಾರವನ್ನು ಮತ್ತೆ ಪ್ರಾರಂಭಿಸಲಾಗಿದೆ. ಸರ್ಕಾರದ ಮಾರ್ಗದರ್ಶಿ ನಿರ್ದೇಶನಗಳ ಪ್ರಕಾರ...

ತನ್ನ ಮಕ್ಕಳ ಚಿಕಿತ್ಸೆಗಾಗಿ ತಮ್ಮಎಲ್ಲ ಅಂಗಾಂಗ...

 ತಿರುವನಂತಪುರ: ತನ್ನ ಮಕ್ಕಳ ಚಿಕಿತ್ಸೆಗಾಗಿ ಕೇರಳದಲ್ಲಿ ತಾಯಿಯೊಬ್ಬರು ತಮ್ಮ ಎಲ್ಲ ಅಂಗಾಂಗಗಳ ಮಾರಾಟಕ್ಕೆ ಮುಂದಾಗಿದ್ದಾರೆ. ಕೊಚ್ಚಿಯ ವರಪ್ಪುಳದಲ್ಲಿ ವಾಸಿಸುತ್ತಿರುವ ಈ ಮಹಿಳೆ ತನ್ನ ಗುಡಿಸಲ ಮುಂದೆ ಈ...

ಡೆಬಿಟ್ / ಕ್ರೆಡಿಟ್‌ ಕಾರ್ಡ್‌ ಹೊಂದಿರುವವರಿಗೆ ಇಲ್ಲಿದೆ...

 ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತಿರುವವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಕೆಲವೊಂದು ನಿಯಮಗಳನ್ನು ಬದಲಾಯಿಸುತ್ತಿದೆ. ಈ ನಿಯಮಗಳು ಸೆಪ್ಟೆಂಬರ್...

ಗೋಧಿಗೆ ಕನಿಷ್ಠ ಬೆಂಬಲ ಬೆಲೆ ಏರಿಸಿ ಮೋದಿ...

ನೂತನ ಕೃಷಿ ಮಸೂದೆಯನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರ, ಇದಕ್ಕೆ ವಿರೋಧ ವ್ಯಕ್ತಪಡಿಸಿ ದೇಶದಾದ್ಯಂತ ರೈತರು ಪ್ರತಿಭಟಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಬಲ ಬೆಲೆ ಹೆಚ್ಚಿಸುವ ಮೂಲಕ ಸಿಹಿ ಸುದ್ದಿ ನೀಡಿದೆ.

ಪೂರಕ ಪರೀಕ್ಷೆ: 723 ವಿದ್ಯಾರ್ಥಿಗಳು ಗೈರುಹಾಜರು

 ಬೆಳಗಾವಿ: ಜಿಲ್ಲೆಯಾದ್ಯಂತ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಸೋಮವಾರ ಆರಂಭವಾಯಿತು. 'ಮೊದಲ ದಿನ ನಿಗದಿಯಾಗಿದ್ದ ಗಣಿತ ವಿಷಯದ ಪರೀಕ್ಷೆ ಸುಗಮವಾಗಿ ನಡೆಯಿತು. ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ...

ದೇಶದಲ್ಲಿ ಒಂದೇ ದಿನ 70 ಸಾವಿರ ಕೊರೋನಾ ಸೋಂಕು ಪ್ರಕರಣಗಳು ಪತ್ತೆ, 978 ಮಂದಿ ಬಲಿ

 ಹೊಸದಿಲ್ಲಿ: ದೇಶದಲ್ಲಿ ಬುಧವಾರ ಒಂದೇ ದಿನ 70 ಸಾವಿರಕ್ಕೂ ಅಧಿಕ ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದು ಸರ್ವಕಾಲೀನ ದಾಖಲೆಯಾಗಿದೆ.

ಮಹಾರಾಷ್ಟ್ರದಲ್ಲೇ 13,165 ಪ್ರಕರಣಗಳು ಕಾಣಿಸಿಕೊಂಡಿದ್ದು, ದೇಶದಲ್ಲಿ ಬುಧವಾರ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ 70,101. ಇದರೊಂದಿಗೆ ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 28,33,015ಕ್ಕೇರಿದೆ. 978 ಮಂದಿ ಬುಧವಾರ ಮೃತಪಟ್ಟಿದ್ದು, ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 53,929ಕ್ಕೇರಿದೆ.

ದೇಶದಲ್ಲಿ 20,90,924 ಸೋಂಕಿತರು ಚೇತರಿಸಿಕೊಂಡಿದ್ದು, 6,88,162 ಸಕ್ರಿಯ ಪ್ರಕರಣಗಳಿವೆ. ದೇಶದಲ್ಲಿ ಗುಣಮುಖರಾದವರ ಪ್ರಮಾಣ ಶೇಕಡ 73.8ಕ್ಕೇರಿದೆ.

ಆಗಸ್ಟ್ ಮೊದಲ 19 ದಿನಗಳಲ್ಲಿ ಮಹಾರಾಷ್ಟ್ರದಲ್ಲೇ 2.07 ಲಕ್ಷ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಮುಂಬೈ ಮಹಾನಗರದ ಪಾಲು ಶೇಕಡ 9.3 (19,331). ಜುಲೈನಲ್ಲಿ ಮೊದಲ 26 ದಿನಗಳಲ್ಲಿ 2 ಲಕ್ಷ ಪ್ರಕರಣಗಳು ವರದಿಯಾಗಿದ್ದವು. ಮಹಾರಾಷ್ಟ್ರದಲ್ಲಿ 346 ಮಂದಿ ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 21,033ಕ್ಕೇರಿದೆ.

ಮಹಾರಾಷ್ಟ್ರವನ್ನು ಹೊರತುಪಡಿಸಿದರೆ ಕರ್ನಾಟಕದಲ್ಲಿ ಗರಿಷ್ಠ (126) ಸೋಂಕಿತರು ಮೃತಪಟ್ಟಿದ್ದಾರೆ. ತಮಿಳುನಾಡಿನಲ್ಲಿ 116 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಕೇರಳ (2,333), ಉತ್ತರ ಪ್ರದೇಶ (5,156), ಜಾರ್ಖಂಡ್ (1,266), ಪಂಜಾಬ್ (1,693), ಹರ್ಯಾಣ (994), ಛತ್ತೀಸ್‌ಗಢ (759) ಹಾಗೂ ಜಮ್ಮು ಮತ್ತು ಕಾಶ್ಮೀರ (708) ಪ್ರಕರಣಗಳನ್ನು ದಾಖಲಿಸಿವೆ.

TRENDING