Monday, September 21, 2020
Home ದೇಶ ದೇಶದಲ್ಲಿ ಕ್ಯಾನ್ಸರ್ ಕಂಟಕ ಹೆಚ್ಚಾಗುತ್ತಿರುವ ಬಗ್ಗೆ ಎಚ್ಚರಿಕೆ

ಇದೀಗ ಬಂದ ಸುದ್ದಿ

ದೆಹಲಿ ಗಲಭೆ ಪ್ರಕರಣ : ಕುಟುಂಬ ಭೇಟಿಗೆ...

ನವದೆಹಲಿ: ದೆಹಲಿ ಗಲಭೆಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿ ಬಂಧಿತರಾಗಿರುವ ಜೆಎನ್‌ಯು ಹ‌ಳೆಯ ವಿದ್ಯಾರ್ಥಿ ‌ಉಮರ್ ಖಾಲಿದ್, ತಮ್ಮ ಕುಟುಂಬ ಭೇಟಿಗಾಗಿ ಅನುಮತಿ...

N L S I U ಬೆಂಗಳೂರಿನ...

 ನವದೆಹಲಿ: ಬೆಂಗಳೂರಿನ ಎನ್‌ಎಲ್‌ಎಸ್‌ಐಯು ನ ಬಿಎ.ಎಲ್‌ಎಲ್ ಬಿ (ಆನರ್ಸ್) ಪ್ರವೇಶಕ್ಕೆ ನಡೆಸಲಾಗುತ್ತಿದ್ದ ಪ್ರತ್ಯೇಕ ಪ್ರವೇಶ ಪರೀಕ್ಷೆ ಎನ್‌ಎಲ್‌ಎಟಿ-2020 ನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಎಲ್ಲಾ 22 ರಾಷ್ಟ್ರೀಯ...

ಡ್ರಗ್ ಪ್ರಕರಣ : ನಶೆ ರಾಣಿಯರ...

ಬೆಂಗಳೂರು,ಸೆ.21: ಡ್ರಗ್ ಜಾಲದಲ್ಲಿ ಭಾಗಿಯಾಗಿ ಬಂಧಿತರಾಗಿ ಜೈಲು ಸೇರಿರುವ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನಗರದ ಎನ್‍ಡಿಪಿಎಸ್ ವಿಶೇಷ ನ್ಯಾಯಾಲಯ ವಿಚಾರಣೆಯನ್ನು...

ಕೇದಾರನಾಥ ದುರಂತ :7 ವರ್ಷಗಳ ಬಳಿಕ ...

2013 ರಲ್ಲಿ ಕೇದಾರನಾಥದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಏರ್ಪಟ್ಟಿತ್ತು. ಈ ವೇಳೆ ಸಾವಿರಾರು ಜನ ಸಾವನ್ನಪ್ಪಿದರೆ ಒಂದಿಷ್ಟು ಜನ ಕಾಣೆಯಾಗಿದ್ದರು. ಏಳು ವರ್ಷದ ಹಿಂದೆ ನಡೆದಿತ್ತು ಈ ಘಟನೆ. ಇದೀಗ...

ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ರೈತರ ಬೃಹತ್ ಪ್ರತಿಭಟನೆ

ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಮುಂದಾಗಿರುವ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತ ಸಂಘ, ಕಾರ್ಮಿಕ ಸಂಘಟನೆಗಳು ಸೇರಿದಂತೆ 30ಕ್ಕೂ ಹೆಚ್ಚು...

ದೇಶದಲ್ಲಿ ಕ್ಯಾನ್ಸರ್ ಕಂಟಕ ಹೆಚ್ಚಾಗುತ್ತಿರುವ ಬಗ್ಗೆ ಎಚ್ಚರಿಕೆ

ನವದೆಹಲಿ, ಆಗಸ್ಟ್.20: ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಜೀವ ಹಿಂಡುತ್ತಿರುವ ಬೆನ್ನಲ್ಲೇ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಮತ್ತೊಂದು ಆಘಾತಕಾರಿ ಅಂಶವನ್ನು ಬಚ್ಚಿಟ್ಟಿದೆ.

ದೇಶದಲ್ಲಿ ಮುಂದಿನ ಐದು ವರ್ಷಗಳಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆಯು ಶೇ.12ರಷ್ಟು ಹೆಚ್ಚಳವಾಗಲಿದೆ ಎಂದು ಐಸಿಎಂಆರ್ ತಿಳಿಸಿದೆ. ಪ್ರಸ್ತುತ 2020ರಲ್ಲಿ 1.39 ಮಿಲಿಯನ್ ನಷ್ಟು ಜನರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಈ ಸಂಖ್ಯೆಯು 2025ರ ವೇಳೆಗೆ 1.5 ಮಿಲಿಯನ್ ಗೆ ಏರಿಕೆಯಾಗಲಿದೆ ಎಂದು ತಿಳಿಸಿದೆ.

2020ರ ಅಂಕಿ-ಅಂಶಗಳ ಪ್ರಕಾರ 6,79,421 ಪುರುಷರು, 7,63,575 ಮಹಿಳೆಯರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದಾರೆ. 2025ರಲ್ಲಿ ಈ ಅಂಕಿ-ಸಂಖ್ಯೆಗಳು ಹೆಚ್ಚಾಗಲಿದ್ದು, 7,12,758 ಪುರುಷರು ಮತ್ತು 8,06,218 ಮಹಿಳೆಯರಿಗೆ ಕ್ಯಾನ್ಸರ್ ತಗಲಿರುವ ಸಾಧ್ಯತೆಯಿದೆ.

ಮಹಿಳೆಯರಿಗೆ ಹೆಚ್ಚಿನ ಕ್ಯಾನ್ಸರ್ ಆತಂಕ:

ಕ್ಯಾನ್ಸರ್ ರೋಗಕ್ಕೆ ತುತ್ತಾಗುವ ಆತಂಕ ಮಹಿಳೆಯರಿಗೆ ಹೆಚ್ಚಾಗಿ ಕಾಡುತ್ತಿದೆ. ಈ ಪೈಕಿ ಶೇ.14.8ರಷ್ಟು ರೋಗಿಗಳು ಸ್ತನ ಕ್ಯಾನ್ಸರ್ ನಿಂದ ಬಳಲುವ ಸಾಧ್ಯತೆಯಿದೆ. ಶೇ.5.4ರಷ್ಟು ಮಹಿಳೆಯರು ಗರ್ಭಕೋಶದ ಕ್ಯಾನ್ಸರ್, ಶೇ.19.7ರಷ್ಟು ಜನರು ಜೀರ್ಣಾಂಗ ವ್ಯೂಹದ ಕ್ಯಾನ್ಸರ್ ನಿಂದ ಬಳಲಲಿದ್ದಾರೆ ಎಂದು ಐಸಿಎಂಆರ್ ಎಚ್ಚರಿಕೆ ನೀಡಿದೆ.

ಈ ವರ್ಷ ಐಸಿಎಂಆರ್ ನೀಡಿರುವ ವರದಿಯ ಪ್ರಕಾರ, ತಂಬಾಕು ಸೇವನೆಯಿಂದ ಕ್ಯಾನ್ಸರ್ ಗೆ ತುತ್ತಾಗಿರುವವರ ಸಂಖ್ಯೆಯೇ ಹೆಚ್ಚಾಗಿದೆ. ಶೇ.27.1ರಷ್ಟು ಪುರುಷರಲ್ಲಿ ಬಾಯಿ, ಶ್ವಾಸಕೋಶ, ಹೊಟ್ಟೆಯ ಕ್ಯಾನ್ಸರ್ ಕಾಣಿಸಿಕೊಂಡಿದೆ. ಮಹಿಳೆಯರಲ್ಲಿ ಗರ್ಭಕೋಶ ಮತ್ತು ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಸರ್ಜರಿ, ಕಿಮೋಥೆರಪಿ ಮತ್ತು ರೇಡಿಯೇಷನ್ ಥೆರಪಿಗಳ ಮೂಲಕ ಕ್ಯಾನ್ಸರ್ ನ್ನು ಗುಣಪಡಿಸಬಹುದು ಎಂದು ಐಸಿಎಂಆರ್ ತಿಳಿಸಿದೆ.

TRENDING