Sunday, September 20, 2020
Home ಜಿಲ್ಲೆ ಬದುಕು ಬೆಳಗಿಸಿದ ಕಂಚಿನ ಕಲೆ

ಇದೀಗ ಬಂದ ಸುದ್ದಿ

ಡ್ರಗ್ಸ್ ಪ್ರಕರಣ: ಖ್ಯಾತ ನಟ ಮತ್ತು ಡ್ಯಾನ್ಸರ್...

ಡ್ರಗ್ಸ್ ಮಾರಾಟ ಮಾಡುತ್ತಿದ್ದ ಖ್ಯಾತ ಡ್ಯಾನ್ಸರ್ ಮತ್ತು ನಟ ಕಿಶೋರ್ ಶೆಟ್ಟಿ ಸೇರಿದಂತೆ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಮುಂಬೈಯಿಂದ ಡ್ರಗ್ಸ್ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು...

ಚಾಮರಾನಗರ : ಒಂದೇ ದಿನ 72 ಹೊಸ...

 ಚಾಮರಾಜನಗರ: ಗಡಿ ಜಿಲ್ಲೆಯಲ್ಲಿ ಶನಿವಾರ 72 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. 28 ಮಂದಿ ಗುಣಮುಖರಾಗಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌ ಕಾರಣದಿಂದ ಮೃತಪಟ್ಟವರ ಸಂಖ್ಯೆ 53ಕ್ಕೆ...

ಸ್ಯಾಂಡಲ್ ವುಡ್ ಡ್ರಗ್ಸ್ ಲಿಂಕ್ : ಸಿಸಿಬಿ...

ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್ಸ್​ ಲಿಂಕ್ ಆರೋಪದಲ್ಲಿ ನಿರೂಪಕ ಅಕುಲ್ ಬಾಲಾಜಿ, ಮಾಜಿ ಕಾರ್ಪೊರೇಟರ್​​ ಯುವರಾಜ್ ಹಾಗೂ ನಟ ಸಂತೋಷ್​​ಗೆ ಸಿಸಿಬಿ ನೋಟಿಸ್ ನೀಡಿತ್ತು. ಅದರಂತೆ ಮೂವರು ಇಂದು ಸಿಸಿಬಿ ಅಧಿಕಾರಿಗಳ...

ಅರ್ಕೇಶ್ವರ ದೇವಸ್ಥಾನದ ಮೂವರು ಅರ್ಚಕರ ಹತ್ಯೆ ಪ್ರಕರಣ:...

ಮಂಡ್ಯ: ನಗರದ ಅರ್ಕೇಶ್ವರ ದೇವಸ್ಥಾನದ ಮೂವರು ಅರ್ಚಕರ ಹತ್ಯೆ ಮಾಡಿ ಹುಂಡಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ನಾಲ್ವರು ಆರೋಪಿಗಳನ್ನು ಪೂರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಾಸನ...

ಜೆಡಿಎಸ್‌ನವರು ಆರ್‌ಎಸ್‌ಎಸ್ ಜತೆ ಸೇರಿದ್ರೂ ಸೇರಬಹುದು:...

ಬೆಂಗಳೂರು: ಜೆಡಿಎಸ್ ಅವಕಾಶವಾದಿ ಪಕ್ಷ. ಸ್ವಾರ್ಥ, ಅಧಿಕಾರಕ್ಕೆ ಬಿಜೆಪಿ ಜತೆಯೂ ಹೋಗುತ್ತಾರೆ. ಆರ್‌ಎಸ್‌ಎಸ್ ಜತೆ ಸೇರಿದ್ರೂ ಸೇರಬಹುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು. ಕೆಪಿಸಿಸಿ...

ಬದುಕು ಬೆಳಗಿಸಿದ ಕಂಚಿನ ಕಲೆ

ಕನ್ನಡ ನಾಡು ಕಲೆ-ಕಲಾವಿದರ ತವರೂರು, ವೈವಿಧ್ಯಮಯ ಕಲೆ ಈ ನಾಡಿನಲ್ಲಿ ತುಂಬಿ ತುಳುಕುತ್ತಿದೆ. ಕಂಚಿನ ಮೂರ್ತಿಗಳನ್ನು ತಯಾರಿಸಿ ಬದುಕು ಸಾಗಿಸುವವರ ಕುಟುಂಬಗಳು ನಮ್ಮ ನಾಡಿನ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹನಗಂಡಿ ಎಂಬ ಚಿಕ್ಕ ಗ್ರಾಮದಲ್ಲಿದೆ. ಈ ಗ್ರಾಮ ಚಿಕ್ಕದಾದರೂ ಈ ನಾಡಿಗೆ ಅಷ್ಟೇ ಅಲ್ಲ ಇಡೀ ರಾಷ್ಟ್ರಕ್ಕೂ ಚಿರಪರಿಚಿತವಾಗಿದೆ.

ಈ ಗ್ರಾಮ ಲಾಳಕಿ ಮನೆತನದ ಶ್ರೀಕಾಂತ ಲಾಳಕಿ, ಸಲಬಣ್ಣ ಲಾಳಕಿ ಹಾಗೂ ಆನಂದ ಲಾಳಕಿ ಎಂಬುವವರು ಮೂರ್ತಿ ತಯಾರಿಕೆಯನ್ನೇ ಮೂಲ ವೃತ್ತಿಯಾಗಿಸಿಕೊಂಡು ಬಂದಿದ್ದಾರೆ. ಈಗಾಗಲೇ ನಲ್ಕೈದು ತಲೆಮಾರಿನವರು ಆಗಿ ಹೋಗಿದ್ದು, ತಾತ-ಮುತ್ತಾತರ ವೃತ್ತಿಯನ್ನೇ ಮುಂದುವರೆಸಿಕೊಂಡು ಕಂಚು, ತಾಮ್ರ, ಹಿತ್ತಾಳೆ ಪಂಚಲೋಹಗಳಿಂದ ಅತ್ಯಾಕರ್ಷಕ ಮೂರ್ತಿ ತಯಾರಿಸುವ ಇವರನ್ನು ಕಂಚುಗಾರು ಎಂದು ರೂಢಿಯಿಂದ ಕರೆಯುತ್ತಾರೆ. ಇವರು ತಮ್ಮಲ್ಲಿ ಎಲ್ಲ ತರಹದ ವಿಗ್ರಹಗಳನ್ನು, ಪೂಜಾ ಸಾಮಗ್ರಿಗಳನ್ನು, ಕಂಚಿನ ತಾಳ, ಜಾಂಗಟಿ, ಗಂಗಾಳ, ಗೋಪುರದ ಕಳಸ, ತೇರು ಹೀಗೆ ಮುಂತಾದ ಸಾಮಗ್ರಿಗಳನ್ನು ತಯಾರಿಸುತ್ತಾರೆ.

ಮೊದಲು ಮಣ್ಣು ತಂದು ಹದ ಮಾಡಿ ಬೇಕಾದ ಮೂರ್ತಿಯ ಕಚ್ಚಾ ಆಕೃತಿ ತಯಾರಿಸಿ ಅದರ ಮೇಲೆ ತೇಳುವಾದ ಮೇಣದ ಲೇಪನ ಮಾಡಿ ಅದಕ್ಕೆ ಪಟ್ಟಿ ಬಿಗಿದು ತಂತಿ ಹಾಕಿ ಬಿಗಿಯಾಗಿ ಕಟ್ಟಿ ಮತ್ತೆ ಮಣ್ಣು ಬಡಿಯುವರು. ಹೀಗೆ ತಯಾರಿಸಿದ ಕಚ್ಚಾ ಮೂರ್ತಿಯನ್ನು ಬಿಸಿಲಿನಲ್ಲಿ ಒಣಗಿಸುತ್ತಾರೆ. ನಂತರ ಒಂದು ಮೂಸೆಯಲ್ಲಿ ಹಿತ್ತಾಳೆ ಅಥವಾ ತಾಮ್ರವನ್ನು ಕರಗಿಸಿ ಅದನ್ನು ಕಚ್ಚಾ ಮೂರ್ತಿಯಲ್ಲಿ ಹಾಕಿದಾಗ ನಿಜವಾದ ಮೂರ್ತಿ ತಯಾರಾಗುತ್ತದೆ. ಮೇಲಿರುವ ಮಣ್ಣು ತೆಗೆದು ಉಳಿಯಿಂದ ಮೂರ್ತಿ ಕೆತ್ತಿ ಶುಚಿಗೊಳಿಸಿ ಪಾಲಿಸ್ ಮಾಡುತ್ತಾರೆ.  ಹಾಗ ಪಳಪಳ ಹೊಳೆಯುವ ಮೂರ್ತಿ ತಯಾರಾಗುತ್ತದೆ.

ಪ್ರಕಾಶ ಕುಂಬಾರ

ದಿ ನ್ಯೂಸ್ 24 ಕನ್ನಡ, ಬಾಗಲಕೋಟೆ

TRENDING