Monday, September 21, 2020
Home ಅಂತರ್ ರಾಷ್ಟ್ರೀಯ ನೆಲಸಮವಾದ ಮಸೀದಿ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿದ ಚೀನಾ ಸರ್ಕಾರ

ಇದೀಗ ಬಂದ ಸುದ್ದಿ

ರಾಜ್ಯದಿಂದ ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಪುನರಾರಂಭ

 ಕೋವಿಡ್-19 ಲಾಕ್‍ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಅಂತರರಾಜ್ಯ ಸಾರಿಗೆ ಸಂಚಾರವನ್ನು ಇದೀಗ ಲಾಕ್‍ಡೌನ್ ಸಡಿಲಗೊಂಡಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆಗನುಗುಣವಾಗಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ...

ಕೋವಿಡ್ ಮುಂಜಾಗ್ರತೆಗಳೊಂದಿಗೆ ತಾಜ್ ಮಹಲ್ ಪ್ರವಾಸಿಗರಿಗೆ ಮುಕ್ತ

ಪ್ರೇಮಸೌಧವೆಂದೇ ಖ್ಯಾತಿಗಳಿಸಿರುವ ತಾಜ್ ಮಹಲ್ ಸತತ 6 ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಪ್ರವಾಸಿಗರ ವೀಕ್ಷಣೆಗೆ ಇಂದಿನಿಂದ ಮುಕ್ತವಾಗಿದೆ. ಕೊರೋನಾ ವೈರಸ್ ಲಾಕ್ ಡೌನ್...

ಪ್ರಥಮ ಬಾರಿಗೆ ಅನ್ ಲೈನ್ ನಲ್ಲಿ ಜೈನ...

ಮಂಗಳೂರು :- ಕರ್ನಾಟಕದಲ್ಲಿ ಜೈನ ಧರ್ಮ ಫೇಸ್ ಬುಕ್ಕಿನ ಪ್ರಾಯೋಜಿತ ವಿಶಿಷ್ಟ ಕಾರ್ಯಕ್ರಮ ಜೈನ ಮಾಧ್ಯಮ ಗೋಷ್ಠಿ 19 - 09 - 2020 ಶನಿವಾರದಂದು ರಾತ್ರಿ ಎಂಟು ಗಂಟೆಗೆ...

ತುಂಗಭದ್ರಾ ನದಿಯಲ್ಲಿ ಕೊಚ್ಚಿಹೊದ ಇಬ್ಬರು ಯುವಕರು

ತುಂಗಭದ್ರಾ ನದಿಯಲ್ಲಿ ಇಬ್ಬರು ಯುವಕರು ಹಾಗೂ ಚಕ್ಕಡಿ ಸಮೇತ ಎರಡು ಎತ್ತುಗಳು ಕೊಚ್ಚಿ ಹೋದ ಘಟನೆ ಸೋಮವಾರ ತಾಲೂಕಿನ ಕೋಣನತಂಬಗಿ ಗ್ರಾಮದಲ್ಲಿ ನಡೆದಿದೆ. ಪ್ರಾಥಮಿಕ ವರದಿಯ...

ಭಾರತದಲ್ಲಿ ಮಾತ್ರ ಚಿನ್ನದ ದರ ಇಳಿಕೆ

ಭಾರತದಲ್ಲಂತೂ ಕೊರೊನಾ ಆತಂಕ ಮುಂದುವರಿದಿದ್ದರೂ ಚಿನ್ನದ ಫಿಸಿಕಲ್ ಬೇಡಿಕೆ ಕಡಿಮೆ ಆಗಿದೆ. ಮುಂಬರುವ ನವರಾತ್ರಿ ಹೊತ್ತಿಗೆ ಮತ್ತೆ ಚಿನ್ನಕ್ಕೆ ಬೇಡಿಕೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಆಭರಣ ವರ್ತಕರಿದ್ದಾರೆ. ಗ್ರಾಹಕರನ್ನು ಸೆಳೆಯಬೇಕು...

ನೆಲಸಮವಾದ ಮಸೀದಿ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿದ ಚೀನಾ ಸರ್ಕಾರ

ಬೀಜಿಂಗ್, ಆಗಸ್ಟ್ 19: ನೆಲಸಮವಾಗಿದ್ದ ಮಸೀದಿ ಸ್ಥಳದಲ್ಲಿ ಶೌಚಾಲಯವನ್ನು ನಿರ್ಮಿಸಿ ಚೀನಾ ಸರ್ಕಾರ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸಿದೆ.

ವಾಯುವ್ಯ ಚೀನಾದ ಕ್ಸಿನ್‌ಜಿಯಾಂಗ್ ಉಯಿಘರ್ ಪ್ರಾಂತ್ಯದ ಅತುಶ್ ಎಂಬ ನಗರದಲ್ಲಿ ನೆಲಸಮವಾದ ಮಸೀದಿಯ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲಾಗಿದೆ. ಆದರೆ, ಚೀನಾದಲ್ಲಿ ಮುಸ್ಲಿಂಮರ ಮೇಲೆ, ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿದ್ದರೂ ಪಾಕಿಸ್ತಾನ ಏನೂ ಹೇಳದೆ ತನ್ನ ಅಸಹಾಯಕತೆಯನ್ನು ಪ್ರದರ್ಶಿಸಿದೆ.

ಈ ಮೂಲಕ ಮುಮಸ್ಲಿಮರ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನವನ್ನು ಚೀನಾದ ಕಮ್ಯುನಿಸ್ಟ್‌ ಸರ್ಕಾರ ಮಾಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಪಾಕಿಸ್ತಾನ ಮಾತ್ರ ತನಗೇನೂ ಗೊತ್ತಿಲ್ಲ ಎಂಬಂತೆ ಸುಮ್ಮನಿದೆ.

ಇದೀಗ ಕೆಲವೇ ದಿನಗಳಲ್ಲಿ ಚೀನಾ ತನ್ನ ಕೊರೊನಾ ಲಸಿಕೆಯ ಮೂರನೇ ಹಂತದ ಪ್ರಯೋಗವನ್ನು ಪಾಕಿಸ್ತಾನದಲ್ಲಿ ನಡೆಸಲು ಒಪ್ಪಂದ ಮಾಡಿಕೊಂಡಿದೆ.

2019ರಲ್ಲಿ ಚೀನಾ ಆಝ್ನಾ ಮಸೀದಿಯನ್ನು ಕೆಡವಿ ಇದೀಗ ಆ ಪ್ರದೇಶದಲ್ಲಿ ಮದ್ಯವನ್ನು ಮಾರಾಟ ಮಾಡುತ್ತಿದೆ. ಚೀನಾದಲ್ಲಿ ಸುಮಾರು 11 ಮಿಲಿಯನ್ ಉಯಿಘರ್‌ಗಳು ಸೇರಿ 22 ದಶಲಕ್ಷಕ್ಕೂ ಹೆಚ್ಚು ಮುಸ್ಲಿಮರು ನೆಲೆಸಿದ್ದಾರೆ.

ಚೀನಾದ 1966-76ರ ಸಾಂಸ್ಕೃತಿಕ ಕ್ರಾಂತಿಯ ಸಮಯದಲ್ಲಿ ಕ್ಸಿನ್‌ಜಿಯಾಂಗ್‌ನಲ್ಲಿನ ಮಸೀದಿಗಳು ಮತ್ತು ಇತರ ಧಾರ್ಮಿಕ ಸ್ಥಳಗಳು ಹಾನಿಗೊಳಗಾಗಿದ್ದವು. ಇನ್ನು, 2016ರಲ್ಲಿ ಆರಂಭವಾದ ಮಸೀದಿ ತಿದ್ದುಪಡಿ ಅಭಿಯಾನದ ಭಾಗವಾಗಿ ಮುಸ್ಲಿಂ ಪ್ರಾರ್ಥನಾ ಸ್ಥಳಗಳನ್ನು ಸಾಮೂಹಿಕವಾಗಿ ನಾಶಮಾಡುವ ನಿರ್ದೇಶನ ಹೊರಡಿಸಲಾಗಿದೆ ಎಂದು ವರದಿಗಳು ಹೇಳುತ್ತಿವೆ.

ಮಸೀದಿಯ ಸ್ಥಳದಲ್ಲಿ ಮನರಂಜನಾ ಕೇಂದ್ರ ತೆರೆಯುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಶೌಚಾಲಯದ ಕಾಮಗಾರಿ ಪೂರ್ಣಗೊಂಡಿದ್ದರೂ, ಸಾರ್ವಜನಿಕರ ಬಳಕೆಗೆ ಮಾತ್ರ ಅವಕಾಶ ನೀಡಿಲ್ಲ.

ಪಾಕಿಸ್ತಾನದ ಮೌನವನ್ನು ಖಂಡಿಸಿರುವ ಅಧಿಕಾರಿಯೊಬ್ಬರು, ಪಾಕಿಸ್ತಾನ ತನ್ನ ವಿದೇಶಾಂಗ ನೀತಿಯಲ್ಲಿ ವಿರೋಧಾಭಾಸವನ್ನು ಹೊಂದಿದೆ. ತನ್ನನ್ನು ಜಾಗತಿಕ ಇಸ್ಲಾಂ ಧರ್ಮದ ರಕ್ಷಕ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ, ಚೀನಾದಲ್ಲಿ ಮುಸ್ಲಿಮರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಕುರಿತು ಏನೂ ಮಾತನಾಡುತ್ತಿಲ್ಲ.

TRENDING