Saturday, September 19, 2020
Home ಜಿಲ್ಲೆ ಕೋಲಾರ ಕೋಲಾರ: ಕೆಜಿಎಫ್ ನಲ್ಲಿ ಹಾಡಹಗಲೇ ಮಹಿಳೆಯ ಮೇಲೆ ಆಯಸಿಡ್ ದಾಳಿ

ಇದೀಗ ಬಂದ ಸುದ್ದಿ

ಆಹಾರದಿಂದ ‘ಕೊರೊನಾವೈರಸ್’ ಹರಡಬಹುದೇ?

COVID-19 ಆಹಾರದಿಂದ ಹರಡುವ ಬಗ್ಗೆ ಯಾವುದೇ ನಿರ್ಣಾಯಕ ಪುರಾವೆಗಳಿಲ್ಲ, COVID-19 ಪೀಡಿತ ದೇಶಗಳಿಂದ ಭಾರತಕ್ಕೆ ಆಮದು ಮಾಡಿಕೊಳ್ಳುವ ಆಹಾರವು ಮಾನವ ಬಳಕೆಗೆ ಸುರಕ್ಷಿತವಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ...

ಕೊಡಗಿನಲ್ಲಿ ರೆಡ್ ಅಲರ್ಟ್ ಘೋಷಣೆ

ಭಾರಿ ಮಳೆಯಿಂದ ತತ್ತರಿಸಿದ್ದ ಕೊಡಗಿಗೆ ಮತ್ತೆ ವರುಣಾಘಾತವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ರೆಡ್​ ಆಲರ್ಟ್​ ಘೋಷಣೆ ಮಾಡಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುತ್ತಿದ್ದು,...

ಕಲಬುರ್ಗಿ ಯಲ್ಲಿ ಕೊರೊನಾಗೆ ಮತ್ತೆ 6 ಜನ...

 ಕಲಬುರ್ಗಿ: ಕೋವಿಡ್-19 ಸೋಂಕಿನಿಂದ ಜಿಲ್ಲೆಯಲ್ಲಿ ಮತ್ತೆ 6 ಜನ ನಿಧನರಾಗಿರುವ ಬಗ್ಗೆ ಶುಕ್ರವಾರ ವರದಿಯಾಗಿದ್ದು, ಇದರಿಂದ ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ 254ಕ್ಕೆ ಏರಿಕೆಯಾಗಿದೆ. ತೀವ್ರ...

ನಾಗಪುರ : ಆರೆಸ್ಸೆಸ್ ಮುಖ್ಯಸ್ಥ ಸೇರಿ 9...

 ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್​ಎಸ್​ಎಸ್​)ದ ಶಕ್ತಿ ಕೇಂದ್ರ ನಾಗಪುರದ ಕೇಂದ್ರ ಕಚೇರಿಯಲ್ಲಿ ಕನಿಷ್ಠ 9 ಹಿರಿಯ ನಾಯಕರಿಗೆ ಕೊರೋನಾ ಸೋಂಕು ತಗುಲಿದೆ. ಕೋವಿಡ್ 19 ಟೆಸ್ಟ್ ಪಾಸಿಟಿವ್ ಬಂದ ಕಾರಣ ಅವರನ್ನು...

ದೇಶದಲ್ಲಿ ಸೈಬರ್ ಕ್ರೈಂ ಶೇ 500ರಷ್ಟು ಹೆಚ್ಚಳ:...

ನವದೆಹಲಿ: ಭಾರತದಲ್ಲಿ ಸೈಬರ್ ಕ್ರೈಂ ಪ್ರಮಾಣ ಶೇಕಡ 500 ಹೆಚ್ಚಳ ಕಂಡಿದೆ. ಇದಕ್ಕೆ ಸೀಮಿತ ಜಾಗೃತಿ ಮತ್ತು ಕಳಪೆ ಸೈಬರ್​ ಹೈಜೀನ್ ಕಾರಣ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್​ಎಸ್​ಎ) ಅಜಿತ್...

ಕೋಲಾರ: ಕೆಜಿಎಫ್ ನಲ್ಲಿ ಹಾಡಹಗಲೇ ಮಹಿಳೆಯ ಮೇಲೆ ಆಯಸಿಡ್ ದಾಳಿ

ಕೋಲಾರ (.18): ಕ್ಷುಲ್ಲಕ ಕಾರಣಕ್ಕೆ ಮನಸ್ಸಿನಲ್ಲಿ ಏರ್ಪಡುವ ದುಡುಕಿನ ನಿರ್ಧಾರದಿಂದ, ಎಷ್ಟು ದೊಡ್ಡ ಅಮಾನವೀಯ ಕೃತ್ಯಕ್ಕಾದರೂ ಮನುಷ್ಯ ಕೈ ಹಾಕಬಹುದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಹೌದು, ಹಣಕಾಸಿನ ವಿಚಾರದ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಮಹಿಳೆಯಮೇಲೆ ಆಯಸಿಡ್ ಎರಚಿ ಹತ್ಯೆ ಮಾಡಲು ಯತ್ನಿಸಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಮಾರಿಕುಪ್ಪಂನ .ಬಿ.ಬ್ಲಾಕ್ಬಡಾವಣೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ಸುಧಾ ಎನ್ನುವವರು ಮನೆಯಲ್ಲಿ ಅಡುಗೆಗೆ ಸಿದ್ದಪಡಿಸಿಕೊಳ್ಳುತ್ತಿದ್ದ ವೇಳೆ ಮುಖ ಮುಚ್ಚಿಕೊಂಡಿದ್ದ ಅಪರಿಚಿತ ವ್ಯಕ್ತಿಯೊಬ್ಬ ಮನೆಗೆ ನುಗ್ಗಿ ಏಕಾಏಕಿ ಆಯಸಿಡ್‌ ಎರಚಿ ಬೈಕ್ ನಲ್ಲಿ ಪರಾರಿಯಾಗಿದ್ದಾನೆ. ಅದೃಷ್ಟವಶಾತ್ ಆಯಸಿಡ್ ಮಹಿಳೆಯ ಬೆನ್ನಿನ ಭಾಗಕ್ಕೆ ಮಾತ್ರ ಸ್ವಲ್ಪ ತಗುಲಿದೆ. ಇನ್ನು ಸುಧಾ ಅವರು ತಪ್ಪಿಸಿಕೊಳ್ಳುವ ಭರದಲ್ಲಿ ಕೈ ಹಾಗೂ ತಲೆಗೂ ಸ್ವಲ್ಪ ಗಾಯಗಳಾಗಿದೆ. ಅಪಾಯದಿಂದ ಪಾರಾದ ಸುಧಾ ತನ್ನ ಗಂಡ ಆನಂದ್​ಗೆ ಫೋನ್ ಮಾಡಿ ಸಹಾಯ ಪಡೆದುಕೊಂಡು, ಕೆಜಿಎಫ್​ನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಡಹಗಲೇ ನಡೆದಿರುವ ಈ ದಾಳಿಯಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.

ಮಹಿಳೆಯ ಮೇಲೆ ಆಯಸಿಡ್ ದಾಳಿ ನಡೆಸಲು ಆರ್ಥಿಕ ವ್ಯವಹಾರವೇ ಕಾರಣ ಎನ್ನಲಾಗಿದೆ. ಡಿಸಿಸಿ ಬ್ಯಾಂಕ್ ಸಹಕಾರದಲ್ಲಿ ಪಡೆದ ಸಾಲವನ್ನು ಹಿಂದಿರುಗಿಸುವ ವಿಚಾರವಾಗಿ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಈ ಬಡಾವಣೆಯಲ್ಲಿ ಒಂದು ಸ್ತ್ರೀ ಶಕ್ತಿ ಗುಂಪು ಸ್ಥಾಪಿಸಿಕೊಂಡಿರುವ ಸುಧಾ ಹಾಗೂ ಇತರೆ ಸದಸ್ಯರು ಸಾಲ ವಸೂಲಾತಿಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಆದರೆ ಇತ್ತೀಚೆಗೆ ಸಂಘದ ಸದಸ್ಯರೆಲ್ಲರೂ ಪಡೆದಿರುವ ಸಾಲವನ್ನು ನೀವೊಬ್ಬರೇ ವಸೂಲಿ ಮಾಡಿ ಎಂದು ಸದಸ್ಯರೊಬ್ಬರು ತಿಳಸಿದ್ದಾರೆ. ಇದಕ್ಕೆ ಒಪ್ಪದ ಸುಧಾ, ನಾನು ಜವಾಬ್ದಾರಿ ಹೊತ್ತಿರುವ ಸದಸ್ಯರ ಬಳಿ ಮಾತ್ರ ನಾನು ವಸೂಲಿ ಮಾಡುತ್ತೇನೆ ಎಂದು ಹೇಳಿದ್ದರು.

ತಮ್ಮ ಪತ್ನಿಗೆ ಆವಾಜ್ ಹಾಕಿದ್ದಕ್ಕೆ ಕೋಪದಿಂದ, ‌ಏನಾದರೂ ಮಾಡಬೇಕೆನ್ನುವ ಉದ್ದೇಶದಿಂದ ವೆಂಕಟೇಶ್ ಎನ್ನುವವರು ಈ ಆಯಸಿಡ್ ದಾಳಿ ಮಾಡಿದ್ದಾರೆಂದು ಸುಧಾ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಮಗೆ ರಕ್ಷಣೆ ನೀಡಿ ಎಂದು ಸುಧಾ ಹಾಗೂ ಪತಿ ಆನಂದ್ ಮನವಿ ಮಾಡಿದ್ದಾರೆ.  

TRENDING