Saturday, September 19, 2020
Home ದೇಶ ಡೆಡ್ಲಿ ಕೊರೊನಾ ಆರ್ಭಟ : ದೇಶದಲ್ಲಿ ಕಳೆದ 24 ಗಂಟೆಯಲ್ಲಿ 57,981 ಮಂದಿಗೆ ಸೋಂಕು ಪತ್ತೆ,...

ಇದೀಗ ಬಂದ ಸುದ್ದಿ

ಅಕುಲ್ ರೆಸಾರ್ಟ್ ನಲ್ಲಿ ನಡೆಯುತ್ತಿತ್ತಾ ಪಾರ್ಟಿ.?

ನಿರೂಪಕ ಅಕುಲ್ ಬಾಲಾಜಿ ಒಡೆತನದ ಸನ್ ಶೈನ್ ರೆಸಾರ್ಟ್ ನಲ್ಲಿ ಡ್ರಗ್ಸ್ ಪಾರ್ಟಿಗಳನ್ನು ಆಯೋಜನೆ ಮಾಡಲಾಗುತ್ತಿತ್ತು. ಸ್ಟಾರ್ ನಟ-ನಟಿಯರು, ನಟರ ಪತ್ನಿಯರು ಈ ಪಾರ್ಟಿಯಲ್ಲಿ ಭಾಗಿಯಾಗುತ್ತಿದ್ದರು ಎಂಬ ಮಾಹಿತಿ ಸಿಸಿಬಿ...

ಸಂಜನಾ ʼರಹಸ್ಯʼ ಬಹಿರಂಗಪಡಿಸಿದ ಸಂಬರಗಿ

ಡ್ರಗ್ಸ್ ದಂಧೆ ಪ್ರಕರಣದಲ್ಲಿ ಈಗಾಗಲೇ ಜೈಲು ಪಾಲಾಗಿರುವ ಸಂಜನಾ ಗಲ್ರಾನಿಯ ಖಾಸಗಿ ವಿಡಿಯೋ ಒಂದನ್ನು ಬಹಿರಂಗಪಡಿಸಿದ್ದ ಪ್ರಶಾಂತ್ ಸಂಬರಗಿ, ಇದೀಗ ಅವರ ಮದುವೆ ಹಾಗೂ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ...

ಡ್ರಗ್ಸ್ ಸಾಗಿಸುತ್ತಿದ್ದ ಬಾಲಿವುಡ್ ಡ್ಯಾನ್ಸರ್ ಕಿಶೋರ್ ಶೆಟ್ಟಿ...

ಖ್ಯಾತ ಡ್ಯಾನ್ಸರ್, ಬಾಲಿವುಡ್ ಚಿತ್ರದಲ್ಲಿ ನಟಿಸಿದ್ದ ಮಂಗಳೂರಿನ ಕಿಶೋರ್ ಶೆಟ್ಟಿಯನ್ನು ಡ್ರಗ್ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಸಿಸಿಬಿ ಪೊಲೀಸರಿಂದ ಶನಿವಾರ ಬೆಳಿಗ್ಗೆ ಡ್ರಗ್ಸ್ ಸಾಗಿಸುತ್ತಿದ್ದ...

ಮೋದಿ ಭೇಟಿ ಬಳಿಕ ಭಾವುಕರಾಗಿ ಕಣ್ಣೀರಿಟ್ಟ ಯಡಿಯೂರಪ್ಪ

ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಎರಡು ದಿನಗಳಿಂದ ನವದೆಹಲಿಯಲ್ಲಿ ವಾಸ್ತವ್ಯ ಹೂಡಿರುವ ಯಡಿಯೂರಪ್ಪನವರು, ಇಂದು ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.

ಆಹಾರದಿಂದ ‘ಕೊರೊನಾವೈರಸ್’ ಹರಡಬಹುದೇ?

COVID-19 ಆಹಾರದಿಂದ ಹರಡುವ ಬಗ್ಗೆ ಯಾವುದೇ ನಿರ್ಣಾಯಕ ಪುರಾವೆಗಳಿಲ್ಲ, COVID-19 ಪೀಡಿತ ದೇಶಗಳಿಂದ ಭಾರತಕ್ಕೆ ಆಮದು ಮಾಡಿಕೊಳ್ಳುವ ಆಹಾರವು ಮಾನವ ಬಳಕೆಗೆ ಸುರಕ್ಷಿತವಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ...

ಡೆಡ್ಲಿ ಕೊರೊನಾ ಆರ್ಭಟ : ದೇಶದಲ್ಲಿ ಕಳೆದ 24 ಗಂಟೆಯಲ್ಲಿ 57,981 ಮಂದಿಗೆ ಸೋಂಕು ಪತ್ತೆ, 941 ಸಾವು..!

 ನವದೆಹಲಿ/ಮುಂಬೈ, ಆ.17- ದೇಶದಲ್ಲಿ ಕಳೆದ ಒಂದು ವಾರದಿಂದ ಗಂಡಾಂತರಕಾರಿ ಮಟ್ಟದಲ್ಲಿ ಆರ್ಭಟಿಸಿದ್ದ ಡೆಡ್ಲಿ ಕೊರೊನಾ ಸೋಂಕಿನ ಮಹಾಸೋಟದ ಪ್ರಕೋಪ ಕೊಂಚ ಕಡಿಮೆಯಾಗಿದೆ. 24 ತಾಸುಗಳ ಅವಯಲ್ಲಿ 57,981 ಪಾಸಿಟಿವ್ ಪ್ರಕರಣಗಳು ಮತ್ತು 941 ಸಾವುಗಳು ಸಂಭವಿಸಿದೆ.

ಚೇತರಿಕೆ ಪ್ರಮಾಣದಲ್ಲಿ ಶೇ.72.51ರಷ್ಟು ವೃದ್ಧಿ ಕಂಡುಬಂದಿದ್ದು, ಈವರೆಗೆ ದೇಶದಲ್ಲಿ 3 ಕೋಟಿ ಜನರ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ದೇಶದಲ್ಲೀಗ ಸೋಂಕಿತರ ಸಂಖ್ಯೆ 26.47 ಹಾಗೂ ಸಾವಿನ ಸಂಖ್ಯೆ 51,000 ಸನಿಹದಲ್ಲಿರುವುದು ಆತಂಕದ ವಿದ್ಯಮಾನವಾಗಿದೆ.

ಆ.7ರಿಂದಲೂ ದೇಶದಲ್ಲಿ 60,000+ ರೋಗ ಪ್ರಕರಣಗಳು (ಆ.11ರಂದು 53,609 ಕೇಸ್‍ಗಳನ್ನು ಹೊರತುಪಡಿಸಿ) ವರದಿಯಾಗುತ್ತಿವೆ. ಮೊನ್ನೆಗೆ ಹೋಲಿಸಿದಲ್ಲಿ 2,500ರಷ್ಟು ಪಾಸಿಟಿವ್ ಪ್ರಕರಣಗಳು ಕಡಿಮೆಯಾಗಿವೆ. ನಿನ್ನೆಯಿಂದ ಇಂದು ಬೆಳಗ್ಗೆವರೆಗೆ ಮತ್ತೆ ವೈರಸ್ ಸೋಂಕು ಮತ್ತು ಸಾವಿನ ಪ್ರಮಾಣ ಆತಂಕಕಾರಿ ಮಟ್ಟದಲ್ಲೇ ಮುಂದುವರಿದಿದೆ.

ನಿನ್ನೆ 24 ತಾಸುಗಳ ಅವಯಲ್ಲಿ 58,981 (ಮೊನ್ನೆ 63,500ಕ್ಕೂ ಹೆಚ್ಚು) ಸೋಂಕು ಪ್ರಕರಣಗಳು ದಾಖಲಾಗಿದ್ದು, ಇದೇ ಅವಯಲ್ಲಿ 941 (ಮೊನ್ನೆ 944 ಸಾವು) ರೋಗಿಗಳು ಮೃತಪಟ್ಟಿದ್ದಾರೆ.

ಅಗಸ್ಟ್ ಮೂರು ಮತ್ತು ನಾಲ್ಕನೆ ವಾರದಲ್ಲಿ ಕೋವಿಡ್-19 ವೈರಸ್ ಅಟ್ಟಹಾಸ ಮತ್ತಷ್ಟು ಹೆಚ್ಚಾಗಲಿದೆ ಎಂದು ಈಗಾಗಲೇ ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದು, ಅದಕ್ಕೆ ಮುನ್ಸೂಚನೆಯಂತೆ ಹೆಮ್ಮಾರಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ.

ದೇಶದಲ್ಲಿ ಈಗ ಸೋಂಕಿತರ ಸಂಖ್ಯೆ 27 ಲಕ್ಷ ಸನಿಹದಲ್ಲಿರುವುದು ಮತ್ತು ಮೃತರ ಸಂಖ್ಯೆ 51,000 ದಾಟಿರುವುದು ಆತಂಕಕಾರಿ ಸಂಗತಿಯಾಗಿದೆ.ಕಳೆದ ಒಂದು ವಾರದಿಂದಲೂ ಭಾರತವು ಪಾಸಿಟಿವ್ ಪ್ರಕರಣದಲ್ಲಿ ವಿಶ್ವದಲ್ಲೇ ನಂ.1 ಮತ್ತು 2ನೆ ಸ್ಥಾನದಲ್ಲಿರುವ ಅಮೆರಿಕ ಮತ್ತು ಬ್ರೆಜಿಲ್‍ಅನ್ನು ಮೀರಿಸಿದೆ.

ಆದರೆ, ಮರಣ ಪ್ರಮಾಣ ಇಳಿಮುಖವಾಗಿರುವುದು ಕೊಂಚ ಸಮಾಧಾನಕರ ಸಂಗತಿಯಾಗಿದೆ. ದೇಶದಲ್ಲಿ ಒಂದೆಡೆ ಚೇತರಿಕೆ ಪ್ರಮಾಣದಲ್ಲಿ ವೃದ್ಧಿ ಕಂಡುಬಂದಿದ್ದರೂ, ಮತ್ತೊಂದೆಡೆ ಸಕ್ರಿಯ ಪ್ರಕರಣಗಳ ಹೆಚ್ಚಳ ಆತಂಕಕ್ಕೆ ಕಾರಣವಾಗಿದೆ.

ಇದರ ನಡುವೆಯೂ 19.19 ಲಕ್ಷಕ್ಕೂ ಹೆಚ್ಚು ಮಂದಿ ಹೆಮ್ಮಾರಿಯ ಬಿಗಿಹಿಡಿತದಿಂದ ಪಾರಾಗಿದ್ದು, ಚೇತರಿಕೆ ಪ್ರಮಾಣದಲ್ಲಿ ಶೇ.72.51ರಷ್ಟು ಏರಿಕೆ ಕಂಡುಬಂದಿದೆ. 24 ತಾಸುಗಳಲ್ಲಿ ಸುಮಾರು 950 ಮಂದಿ ಮೃತಪಟ್ಟಿದ್ದು, ಒಟ್ಟಾರೆ ಸಾವಿನ ಸಂಖ್ಯೆ 50,921ಕ್ಕೇರಿದೆ.

ಈವರೆಗೆ ಭಾರತದಲ್ಲಿ ರೋಗ ಪೀಡಿತರ ಪ್ರಮಾಣ 26,47,663 ದಾಟಿದೆ. ದೇಶದಲ್ಲಿ ಈಗ 6,76,900ಕ್ಕೂ ಅಕ ಆಕ್ಟಿವ್ ಕೇಸ್‍ಗಳಿದ್ದು, 18,62,258ಕ್ಕೂ ಅಕ ರೋಗಿಗಳು ಚೇತರಿಸಿಕೊಂಡು, ಗುಣಮುಖರಾಗಿದ್ದಾರೆ.

ಚೇತರಿಕೆ ಪ್ರಮಾಣ ಶೇ.72,51ರಷ್ಟು ಏರಿಕೆ ಮತ್ತು ಸಾವಿನ ಪ್ರಮಾಣ ಶೇ.1.92ರಷ್ಟು ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ.

ದೇಶದ ವಿವಿಧ ರಾಜ್ಯಗಳಲ್ಲಿ ನಿನ್ನೆ ಒಂದೇ ದಿನ 7,36,697 ಜನರ ಸ್ಯಾಂಪಲ್‍ಗಳನ್ನು ಪರೀಕ್ಷಿಸಲಾಗಿದ್ದು, ಈವರೆಗೆ 3 ಕೋಟಿಗೂ ಹೆಚ್ಚು ಜನರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ.

TRENDING