Tuesday, September 22, 2020
Home ಅಂತರ್ ರಾಷ್ಟ್ರೀಯ ‘ಕಮಲಾ ಹ್ಯಾರಿಸ್ ಅವರಿ‌ಗಿಂತ, ನನ್ನ ಜೊತೆ ಹೆಚ್ಚು ಭಾರತೀಯರು ಇದ್ದಾರೆ’: ಡೊನಾಲ್ಡ್‌ ಟ್ರಂಪ್

ಇದೀಗ ಬಂದ ಸುದ್ದಿ

ಪೂರಕ ಪರೀಕ್ಷೆ: 723 ವಿದ್ಯಾರ್ಥಿಗಳು ಗೈರುಹಾಜರು

 ಬೆಳಗಾವಿ: ಜಿಲ್ಲೆಯಾದ್ಯಂತ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಸೋಮವಾರ ಆರಂಭವಾಯಿತು. 'ಮೊದಲ ದಿನ ನಿಗದಿಯಾಗಿದ್ದ ಗಣಿತ ವಿಷಯದ ಪರೀಕ್ಷೆ ಸುಗಮವಾಗಿ ನಡೆಯಿತು. ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ...

ರಾಜ್ಯದಲ್ಲಿಂದು 7339 ಮಂದಿಗೆ ಕೊರೊನಾ ಪಾಸಿಟಿವ್ ಕೇಸ್...

ಬೆಂಗಳೂರು : ರಾಜ್ಯದಲ್ಲಿ ಇಂದು 7339 ಮಂದಿಗೆ ಕೊರೊನಾ ಸೋಂಕು ಧೃಡವಾಗಿದ್ದು, ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5,26,876 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು...

ಡ್ರಗ್ಸ್ ಪ್ರಕರಣ : ವಿಚಾರಣೆ ಎದುರಿಸಿದ ನಟ...

ಬೆಂಗಳೂರು, ಸೆ. 21: ನಿಷೇಧಿತ ಡ್ರಗ್ಸ್ ಸೇವನೆ, ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ವಸ್ತು ನಿಯಂತ್ರಣ ಕಾಯ್ದೆ(NDPS) ಅಡಿಯಲ್ಲಿ ಸಿಸಿಬಿ ತನಿಖೆ ನಡೆಸುತ್ತಿದೆ. ಇನ್ನೊಂದೆಡೆ ಎನ್ ಸಿಬಿ ಡ್ರಗ್ ಪೆಡ್ಲರ್...

ಎಲ್‌ಕೆಜಿ, ಯುಕೆಜಿ : ಅಂಗನವಾಡಿಯಲ್ಲೇ ನಡೆಸಿ

ಚಿತ್ರದುರ್ಗ: ಸರ್ಕಾರಿ ಪಬ್ಲಿಕ್ ಶಾಲೆಗಳಲ್ಲಿ 'ಎಲ್‌ಕೆಜಿ, ಯುಕೆಜಿ ತರಗತಿ' ನಡೆಸುವ ಬದಲು ಅಂಗನವಾಡಿಗಳಲ್ಲೇ ಆರಂಭಿಸಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ಜಿಲ್ಲಾ ಮಂಡಳಿ ಕಾರ್ಯಕರ್ತೆಯರು ಸೋಮವಾರ ಪ್ರತಿಭಟನೆ...

ಶೀಘ್ರದಲ್ಲಿಯೇ ರಫೇಲ್ ಜೆಟ್ ಹಾರಿಸಲಿದ್ದಾರೆ ಮಹಿಳಾ ಪೈಲಟ್

 ನವದೆಹಲಿ, ಸೆ 21: ಅಂಬಾಲಾ ವಾಯುನೆಲೆಯಲ್ಲಿನ ಸಂಪೂರ್ಣ ಪುರುಷ ಪೈಲಟ್‌ಗಳ ರಫೇಲ್ ತಂಡಕ್ಕೆ ಶೀಘ್ರದಲ್ಲಿಯೇ ಮೊದಲ ಮಹಿಳಾ ಪೈಲಟ್ ಸೇರ್ಪಡೆಯಾಗಲಿದ್ದಾರೆ. ಭಾರತೀಯ ವಾಯು ಪಡೆಯಲ್ಲಿ ಸಕ್ರಿಯರಾಗಿರುವ...

‘ಕಮಲಾ ಹ್ಯಾರಿಸ್ ಅವರಿ‌ಗಿಂತ, ನನ್ನ ಜೊತೆ ಹೆಚ್ಚು ಭಾರತೀಯರು ಇದ್ದಾರೆ’: ಡೊನಾಲ್ಡ್‌ ಟ್ರಂಪ್

 ವಾಷಿಂಗ್ಟನ್‌: ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕಾಗಿ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ಅವರು ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸಿರುವ ಜೋ ಬಿಡನ್‌ಗಿಂತಲೂ ಕೆಟ್ಟವರು ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆರೋಪಿಸಿದ್ದಾರೆ.

ಕಮಲಾ ಹ್ಯಾರಿಸ್‌ ಅವರ ವಿರುದ್ಧ ಕಿಡಿಕಾರಿರುವ ಟ್ರಂಪ್‌, ಆಕೆಯ ಜೊತೆಗಿರುವವರಿಗಿಂತಲೂ ಹೆಚ್ಚು ಭಾರತೀಯರು ನನ್ನ ಜೊತೆ ಇದ್ದಾರೆ ಎಂದು ಹೇಳಿಕೊಂಡಿದ್ದಾರೆ.

ನ್ಯೂಯಾರ್ಕ್‌ನ ಪೊಲೀಸ್ ಬೆನೆವೊಲೆಂಟ್ ಅಸೋಸಿಯೇಷನ್ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಟ್ರಂಪ್‌, ‘ಒಂದು ವೇಳೆ ಜೋ ಬಿಡೆನ್‌ ಅಧ್ಯಕ್ಷರಾಗಿ ಆಯ್ಕೆಯಾದರೆ, ಅಮೆರಿಕದಾದ್ಯಂತ ಇರುವ ಪ್ರತಿಯೊಂದು ಪೊಲೀಸ್‌ ಠಾಣೆಯನ್ನೂ ಮುಚ್ಚುವುದಕ್ಕೆ ಅನುಮತಿ ನೀಡುವ ಶಾಸನವನ್ನು ಜಾರಿಗೊಳಿಸಲಿದ್ದಾರೆ. ಬಹುಶಃ ಆಕೆ (ಕಮಲಾ ಹ್ಯಾರಿಸ್‌) ಬಿಡೆನ್‌ಗಿಂತಲೂ ಕೆಟ್ಟವರು. ಅವರು (ನಾನು) ಭಾರತೀಯ ಮೂಲದ ಸದಸ್ಯರು. ಆದರೂ, ಅವರಿಗಿಂತ ಹೆಚ್ಚು ಭಾರತೀಯರು ನನ್ನ ಜೊತೆ ಇದ್ದಾರೆ’ ಎಂದು ಹೇಳಿದ್ದಾರೆ.

ಜಮೈಕಾ ಮೂಲದ ತಂದೆ, ಭಾರತ ಮೂಲದ ತಾಯಿ ದಂಪತಿಗೆ ಜನಿಸಿರುವ, ಕಮಲಾ ಹ್ಯಾರಿಸ್ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷದ ಅಭ್ಯರ್ಥಿಯಾಗಿ, ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಜೋ ಬಿಡನ್ ಅವರು ಆಯ್ಕೆ ಮಾಡಿದ್ದರು. 55 ವಯಸ್ಸಿನ ಕಮಲಾ, ಕ್ಯಾಲಿಫೋರ್ನಿಯಾದಿಂದ ಸೆನೆಟರ್‌ ಆಗಿದ್ದಾರೆ.

ಕಮಲಾ ಅವರು ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗಿ ನಾಮ ನಿರ್ದೇಶನಗೊಂಡಾಗಿನಿಂದಲೂ ಅವರ ವಿರುದ್ಧ ಟ್ರಂಪ್‌ ವಾಗ್ದಾಳಿ ನಡೆಸುತ್ತಿದ್ದಾರೆ.

‘ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕಾಗಿ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ಅವರು, ನನಗೆ ಕೇಳಿಬಂದ ಮಾಹಿತಿ ಪ್ರಕಾರ ಶ್ವೇತಭವನದಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಅರ್ಹತೆಗಳನ್ನು ಹೊಂದಿಲ್ಲ’ ಎಂದು ಇದಕ್ಕೂ ಮೊದಲು ಕಿಡಿಕಾರಿದ್ದರು.

TRENDING