Tuesday, September 22, 2020
Home ಸುದ್ದಿ ಜಾಲ ಮಿಜೋರಾಂ : ಭೂಕುಸಿತದ ಜಾಗದಲ್ಲಿ ರಾಶಿರಾಶಿ ತಲೆಬುರುಡೆ- ಮೂಳೆ, ಕಿವಿಯೋಲೆ ಪತ್ತೆ!

ಇದೀಗ ಬಂದ ಸುದ್ದಿ

ದೆಹಲಿ ಹಿಂಸಾಚಾರ ಅನುಷ್ಠಾನಕ್ಕಾಗಿ 1.61 ಕೋಟಿ ರೂ....

ನವದೆಹಲಿ: ನಮಸ್ತೆ ಟ್ರಂಪ್ ಕಾರ್ಯಕ್ರಮದ ಸಂದರ್ಭದಲ್ಲೇ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟನೆ ನೆಪದಲ್ಲಿ ಈಶಾನ್ಯ ದೆಹಲಿ ಹಿಂಸಾಚಾರಕ್ಕೆ ಕಿಚ್ಚು ಹಚ್ಚುವುದಕ್ಕಾಗಿ ಐವರ ಬ್ಯಾಂಕ್​ ಖಾತೆಗೆ 1.61 ಕೋಟಿ ರೂಪಾಯಿ...

ಭಾರತದಲ್ಲಿ ಕೊರೊನಾ ಸೋಂಕಿತರ ಚೇತರಿಕೆ ಪ್ರಮಾಣ ಶೇ.80ಕ್ಕೆ...

ನವದೆಹಲಿ: ಭಾರತದಲ್ಲಿ ಕೋವಿಡ್-19 ಚೇತರಿಕೆ ಪ್ರಮಾಣ ಶೇ.80ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಇಲಾಖೆ ಮಾಹಿತಿ ನೀಡಿದೆ. ಭಾರತದಲ್ಲಿ ಸತತ ಮೂರನೇ ದಿನ ಸೋಂಕಿನಿಂದ...

ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ವಿರುದ್ಧ...

ಹೈದರಾಬಾದ್ : ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಹೈದರಾಬಾದ್ ನಲ್ಲಿ ಮನೆಯೊಂದನ್ನು ಖರೀದಿಸಿದ್ದಾರಂತೆ. ಶಂಶಾಬಾದ್ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ಗೊಚ್ಚಿಬೋಲಿ ಏರಿಯಾದಲ್ಲಿ 4 ಬೆಡ್ ರೂಂನ ವಿಶಾಲವಾದ ಮನೆಯನ್ನು...

ಕೊರೊನಾ ಹಿನ್ನೆಲೆ : ಕೊಳ್ಳೇಗಾಲದಲ್ಲಿ ಮಧ್ಯಾಹ್ನದ ನಂತರ...

ಕೊಳ್ಳೇಗಾಲ: ನಗರದಲ್ಲಿ ಪ್ರತಿನಿತ್ಯ ಕೊರೊನಾ ಸೋಂಕು ಹೆಚ್ಚಾಗುತ್ತಿರುವುದರಿಂದ ಜನರಲ್ ಮರ್ಚೆಂಟ್ಸ್ ಅಸೋಸಿಯೇಷನ್ ಅವರು ಸೆ. 21ರಿಂದ ಅ.4 ರವರೆಗೆ ಪ್ರತಿದಿನ ಮಧ್ನಾಹ 2.30ರ ನಂತರ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಬಂದ್...

ನಿರ್ಮಾಪಕ ಮಹೇಶ್ ಭಟ್, ರಿಯಾ ಚಕ್ರವರ್ತಿ ಖಾಸಗಿ...

ಮುಂಬೈ: ರಿಯಾ ಚಕ್ರವರ್ತಿ ಮತ್ತು ಚಲನಚಿತ್ರ ನಿರ್ಮಾಪಕ ಮಹೇಶ್ ಭಟ್ ಅವರ ಹೊಸ ವೀಡಿಯೊ ಈಗ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ವಿಡಿಯೊದಲ್ಲಿ ರಿಯಾ ಮತ್ತು ಮಹೇಶ್ ಭಟ್ ಒಂದು ಕೋಣೆಯಲ್ಲಿ ಒಟ್ಟಿಗೆ...

ಮಿಜೋರಾಂ : ಭೂಕುಸಿತದ ಜಾಗದಲ್ಲಿ ರಾಶಿರಾಶಿ ತಲೆಬುರುಡೆ- ಮೂಳೆ, ಕಿವಿಯೋಲೆ ಪತ್ತೆ!

ಮಿಜೋರಾಂ: ಮಿಜೋರಾಂ-ತ್ರಿಪುರ ಗಡಿಯ ಸಮೀಪ ರಸ್ತೆ ನಿರ್ಮಾಣದ ವೇಳೆ ಉಂಟಾಗಿರುವ ಭೂಕುಸಿತದ ಜಾಗದಲ್ಲಿ ರಾಶಿರಾಶಿ ತಲೆಬುರುಡೆಗಳು ಹಾಗೂ ಮೂಳೆಗಳು ಪತ್ತೆಯಾಗಿದ್ದು ಆತಂಕ ಮೂಡಿಸಿದೆ.

ಮಾಮಿತ್ ಜಿಲ್ಲೆಯ ತ್ರಿಪುರ ಗಡಿಯ ಸಮೀಪವಿರುವ ಟುಯಿಡಾಮ್-ಕಾವರ್ಟೆ ರಸ್ತೆ ನಿರ್ಮಾಣ ಹಂತದಲ್ಲಿದೆ. ಈ ಸಂದರ್ಭದಲ್ಲಿ ಬೆಟ್ಟವನ್ನು ಕೆಡವಲಾಗಿದೆ. ಭಾರಿ ಯಂತ್ರಗಳನ್ನು ಇದಕ್ಕೆ ಬಳಸಿದ್ದ ಹಿನ್ನೆಲೆಯಲ್ಲಿ ಬೆಟ್ಟ ಕುಸಿದು, ಭೂಕುಸಿತವೂ ಉಂಟಾಗಿದೆ. ಈ ಸಮಯದಲ್ಲಿ ಆ ಜಾಗದಲ್ಲಿ 12 ತಲೆಬುರುಡೆಗಳು, ಹಲವಾರು ಮೂಳೆಗಳು, ಕಿವಿಯೋಲೆಗಳನ್ನು ಹೋಲುವ ಆಭರಣಗಳು, ಧೂಮಪಾನದ ಪೈಪ್, ಮಣ್ಣಿನ ಮಡಕೆಗಳು ಸಿಕ್ಕಿದ್ದು, ಇದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಯಾವುದೇ ವೈಜ್ಞಾನಿಕ ವಿಶ್ಲೇಷಣೆ ಇಲ್ಲದೆ ಅವು ಎಷ್ಟು ಹಳೆಯವು ಎಂಬುದರ ಕುರಿತು ಪ್ರತಿಕ್ರಿಯಿಸುವುದು ನನಗೆ ಅಕಾಲಿಕವಾಗಿರುತ್ತದೆ. ಇದನ್ನು ಸದ್ಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಇನ್ನಷ್ಟೇ ವರದಿ ಬರಬೇಕಿದೆ ಎಂದು ಮಾಮಿತ್ ಜಿಲ್ಲಾಧಿಕಾರಿ ಡಾ. ಲಾಲ್ರೋಜಾಮ ಹೇಳಿದ್ದಾರೆ.

ಭೂಕುಸಿತದ ಜಾಗದಲ್ಲಿ ಕಾರ್ಮಿಕರು ಈ ಅವಶೇಷಗಳನ್ನು ನೋಡಿದ್ದಾರೆ. ಇದನ್ನು ಸದ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೆಲವು ತಿಂಗಳ ಹಿಂದೆ ಮಿಜೋರಾಂ ಗಡಿಯ ಸಮೀಪವಿರುವ ತ್ರಿಪುರಾದಲ್ಲಿರುವ ಜಂಪೂಯಿ ಬೆಟ್ಟಗಳಲ್ಲಿ ಮತ್ತು ಕಳೆದ ವರ್ಷ ಐಜಾಲ್‌ನಿಂದ 20 ಕಿ.ಮೀ ದೂರದಲ್ಲಿರುವ ಎರಡು ಸ್ಥಳಗಳಲ್ಲಿ ಕೂಡ ಇಂಥದ್ದೇ ಅವಶೇಷಗಳು ಸಿಕ್ಕಿದ್ದು ಅವಿನ್ನೂ ನಿಗೂಢವಾಗಿದೆ.

ಅದರ ಬಗ್ಗೆ ಅಧ್ಯಯನ ನಡೆಯುತ್ತಿದೆ ಎಂದು ಪುರಾತತ್ವಶಾಸ್ತ್ರಜ್ಞ ಉಪ ಅಧೀಕ್ಷಕ ಡಾ. ಸುಜೀತ್ ನಾಯನ್ ಹೇಳಿದ್ದಾರೆ.
ಬಹುಶಃ ಇದು ಕ್ರಿ.ಶ 8 ರಿಂದ 14 ನೇ ಶತಮಾನದಷ್ಟು ಹಿಂದಿನದ್ದು ಇರಬಹುದು. ಮೇಲ್ನೋಟಕ್ಕೆ ಹೀಗೇ ತೋರುತ್ತಿದೆ. ಆದರೆ ಈಗಲೇ ಈ ಕುರಿತು ಖಚಿತವಾಗಿ ಹೇಳಲಾಗದು ಎಂದಿದ್ದಾರೆ ನಾಯನ್‌.

TRENDING