Thursday, September 24, 2020
Home ಸುದ್ದಿ ಜಾಲ ನಿಯಮ ಮೀರಿ ರೆಸ್ಟೋರೆಂಟ್ ನಲ್ಲಿ ಡ್ಯಾನ್ಸ್, ಹುಕ್ಕಾ, ಮದ್ಯ: ಮಹಿಳೆಯರು ಸೇರಿ 97 ಮಂದಿ ಅರೆಸ್ಟ್

ಇದೀಗ ಬಂದ ಸುದ್ದಿ

ಕೊರೋನಾ ಸೋಂಕು: ಕಾಂಗ್ರೆಸ್ ಶಾಸಕ ನಾರಾಯಣರಾವ್ ಸ್ಥಿತಿ...

ಬೆಂಗಳೂರು: ಕೊರೋನಾ ಸೋಂಕು ತಗುಲಿರುವ ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾರಾಯಣರಾವ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಕೊರೋನಾ ಸೋಂಕು...

ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹದ ಮೇಲೆ ಅನಿರೀಕ್ಷಿತ...

ವಿಜಯಪುರ: ಜಿಲ್ಲೆ ಪೊಲೀಸರು ಎಎಸ್ ಪಿ ನೇತೃತ್ವದಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಜಿಲ್ಲಾ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿದ್ದು, ಅಕ್ರಮವಾಗಿ ಬಳುಸುತ್ತಿದ್ದ 3 ಮೊಬೈಲ್, ಸಿಗರೇಟ್, ತಂಬಾಕು ವಶಕ್ಕೆ ಪಡೆದಿದ್ದಾರೆ.

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡುವ ಯೋಚನೆ...

 ಬೆಂಗಳೂರು: ಕೋವಿಡ್ -19 ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೂ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡುವ ಯೋಚನೆ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.

ದೇಶದಲ್ಲಿ 57 ಲಕ್ಷ ಗಡಿ ದಾಟಿದ ಕೊರೊನಾ...

ನವದೆಹಲಿ: ಒಂದೆಡೆ ದೇಶದಲ್ಲಿ ಮಳೆಯ ಅಬ್ಬರ ಜೋರಾಗಿದ್ದರೆ ಇನ್ನೊಂದೆಡೆ ಮಹಾಮಾರಿ ಕೊರೊನಾ ಅಟ್ಟಹಾಸವೂ ಹೆಚ್ಚುತ್ತಿದೆ. ದೇಶದಲ್ಲಿ ಕಳೆದ 24 ಗಂಟೆಯಲ್ಲಿ 86,508 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ...

ಸಿಎಎ ವಿರುದ್ಧದ ಹೋರಾಟಕ್ಕೆ ಮಹಿಳೆಯರಿಗೆ ದಿನಗೂಲಿ! ಸಾಕ್ಷ್ಯ...

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಕಳೆದ ಫೆಬ್ರುವರಿಯಲ್ಲಿ ದೆಹಲಿಯ ಶಾಹೀನ್ ಬಾಗ್ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ (ಜೆಎಂಐ) ಸಮೀಪವಿರುವ ಸ್ಥಳಗಳಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಮಹಿಳೆಯರಿಗೆ ಸಕಲ...

ನಿಯಮ ಮೀರಿ ರೆಸ್ಟೋರೆಂಟ್ ನಲ್ಲಿ ಡ್ಯಾನ್ಸ್, ಹುಕ್ಕಾ, ಮದ್ಯ: ಮಹಿಳೆಯರು ಸೇರಿ 97 ಮಂದಿ ಅರೆಸ್ಟ್

ಮುಂಬಯಿ: ಕೋವಿಡ್‌ -19 ಪ್ರೋಟೋಕಾಲ್‌ಗ‌ಳನ್ನು ಉಲ್ಲಂಘಿಸಿ ರೆಸ್ಟೋರೆಂಟ್‌ನಲ್ಲಿ ಅಶ್ಲೀಲ ನ್ಯತ್ಯ ಮತ್ತು ಮದ್ಯಪಾನದಲ್ಲಿ ತೊಡಗಿದ್ದ ಆರೋಪದಡಿ ಮುಂಬಯಿ ಪೊಲೀಸರು ರವಿವಾರ ಮುಂಜಾನೆ 28 ಮಹಿಳೆಯರು ಸೇರಿದಂತೆ 97 ಜನರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಉಪನಗರ ಜೋಗೇಶ್ವರಿಯ ಲಿಂಕ್‌ ರೋಡ್ ನಲ್ಲಿರುವ ‘ಬಾಂಬೆ ಬ್ರೂಟ್ ‘ ರೆಸ್ಟೋರೆಂಟ್‌ ಮೇಲೆ ಪೊಲೀಸರು ಅಕ್ರಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ 97 ಮಂದಿಯನ್ನು ಬಂಧಿಸಿದ್ದಾರೆ.

ಮಹಿಳೆಯರನ್ನು ಅನಂತರ ಬಿಡುಗಡೆ ಮಾಡಲಾಗಿದ್ದು, ರೆಸ್ಟೋರೆಂಟ್‌ನ ಮ್ಯಾನೇಜರ್‌ ಮತ್ತು ಮೂವರು ವೈಟರ್ ಗಳು ಸೇರಿದಂತೆ ಇತರರನ್ನು ಬಂಧಿಸಲಾಗಿದೆ.

ಖಚಿತ ಮಾಹಿತಿಯ ಆಧಾರದ ಮೇಲೆ ರೆಸ್ಟೋರೆಂಟ್‌ ಮೇಲೆ ದಾಳಿ ನಡೆಸಿದಾಗ ಅಲ್ಲಿ ಜನರು ನೃತ್ಯ, ಮದ್ಯ ಸೇವನೆ ಮತ್ತು ಹುಕ್ಕಾ ಧೂಮಪಾನದ ನಶೆಯಲ್ಲಿ ತೇಲುತ್ತಿದ್ದರು. ಬಂಧಿತರಲ್ಲಿ ಹೆಚ್ಚಿನವರು ನಗರದ ಶ್ರೀಮಂತ ಕುಟುಂಬಗಳಿಗೆ ಸೇರಿದವರಾಗಿದ್ಧಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಲಾಕ್ ಡೌನ್‌ ನಿರ್ಬಂಧಗಳ ಸಡಿಲಿಕೆಯ ಅನಂತರ ರೆಸ್ಟೋರೆಂಟ್‌ ಮ್ಯಾನೇಜರ್‌ ಈ ಜನರನ್ನು ಸಂಪರ್ಕಿಸಿ, ತಾವು ರೆಸ್ಟೋರೆಂಟ್‌ ಅನ್ನು ಪುನರಾರಂಭಿಸಿದ್ದೇವೆ ಎಂದು ತಿಳಿಸಿ ಅವರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದ ಎಂದು ಒಶಿವಾರಾ ಪೊಲೀಸ್‌ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್‌ ದಯಾನಂದ್‌ ಬಂಗಾರ್‌ ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 294 (ಸಾರ್ವಜನಿಕವಾಗಿ ಅಶ್ಲೀಲ ಕೃತ್ಯ), 188 (ಸಾರ್ವಜನಿಕ ಸೇವಕರ ಆದೇಶಕ್ಕೆ ಅಸಹಕಾರ), 285 (ಬೆಂಕಿ ಅಥವಾ ದಹನಕಾರಿ ವಿಷಯಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ವರ್ತನೆ) ಹಾಗೂ ಸಾಂಕ್ರಾಮಿಕ ರೋಗಗಳ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಾಲಿಸಲಾಗಿದೆ.

TRENDING