Thursday, September 24, 2020
Home ಜಿಲ್ಲೆ ದಕ್ಷಿಣ ಕನ್ನಡ ದ. ಕನ್ನಡ ಜಿಲ್ಲೆಯಲ್ಲಿ ಒಂದೇ ದಿನ 307 ಕೊರೊನಾ ಪ್ರಕರಣಗಳು ಪತ್ತೆ

ಇದೀಗ ಬಂದ ಸುದ್ದಿ

ತಮಿಳು ನಟನನ್ನು ಟ್ವಿಟರ್‌ನಲ್ಲಿ ಫಾಲೋ ಮಾಡಿದ ಪಾಪ್‌...

ಚೆನ್ನೈ: ಖ್ಯಾತ ಪಾಪ್‌ ಗಾಯಕ ಜಸ್ಟೀನ್‌ ಬೈಬರ್‌ ಅವರು ತಮಿಳಿನ ಸಂಗೀತ ಸಂಯೋಜಕ, ನಟ ಜಿ.ವಿ. ಪ್ರಕಾಶ್‌ ಅವರನ್ನು ಟ್ವಿಟರ್‌ನಲ್ಲಿ ಫಾಲೋ ಮಾಡಿದ್ದಾರೆ. ಜಿ.ವಿ. ಪ್ರಕಾಶ್‌ ಅವರು...

ಲಡಾಖ್‌ ಗಡಿ ಪ್ರದೇಶಕ್ಕೆ ಹೊರಡಲು ಚೀನಾ ಸೈನಿಕರ...

 ತೈಪೆ: ಲಡಾಖ್‌ನ ಎಲ್‌ಎಸಿಯ ದುರ್ಗಮ ವಾತಾವರಣದಲ್ಲಿ ಕರ್ತವ್ಯಕ್ಕಿಳಿಯಲು ಚೀನೀ ಸೈನಿಕರು ಎಷ್ಟು ಭೀತರಾಗುತ್ತಾರೆ ಎನ್ನುವುದಕ್ಕೆ ಸಾಕ್ಷಿಯಾಗಿ ವೀಡಿಯೋವೊಂದು ವೈರಲ್‌ ಆಗಿದೆ.

ಸಚಿವ ಸುರೇಶ್ ಅಂಗಡಿ ನಿಧನಕ್ಕೆ ರಾಜಕೀಯ ನಾಯಕರು...

ನವದೆಹಲಿ : ಕೊರೊನಾದಿಂದ ಕೇಂದ್ರ ಸಚಿವ ಸುರೇಶ್ ಅಂಗಡಿ ಸಾವನಪ್ಪಿದ್ದು, ಅಗಲಿದ ನಾಯಕನಿಗೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ...

ಐಪಿಎಲ್ 2020 : ಕೆಕೆಆರ್ ವಿರುದ್ಧ...

ಬುಧವಾರ ಅಬುದಾಬಿಯಲ್ಲಿ ನಡೆದ ಐಪಿಎಲ್ ನ 5ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

ಗುಜರಾತ್‌ : ತೈಲ, ಅನಿಲ ಸಂಸ್ಕರಣಾ ಘಟಕದಲ್ಲಿ...

ಸೂರತ್‌ (ಗುಜರಾತ್‌): ಸೂರತ್‌ನ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) ಸ್ಥಾವರದಲ್ಲಿ ಗುರುವಾರ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ಟೆಂಡರ್ ಪ್ರಸ್ತುತ ಸ್ಥಳದಲ್ಲಿದೆ.

ದ. ಕನ್ನಡ ಜಿಲ್ಲೆಯಲ್ಲಿ ಒಂದೇ ದಿನ 307 ಕೊರೊನಾ ಪ್ರಕರಣಗಳು ಪತ್ತೆ

ಮಂಗಳೂರು: ಕಳೆದ ಕೆಲ ದಿನಗಳಿಂದ ಇನ್ನೂರ ಗಡಿಯಲ್ಲಿದ್ದ ಕೋವಿಡ್-19 ಸೋಂಕಿತರ ಸಂಖ್ಯೆ ಶುಕ್ರವಾರ ತ್ರಿಶತಕ ದಾಟಿದ್ದು, ಜಿಲ್ಲೆಯಲ್ಲಿ 307 ಜನರಿಗೆ ಸೋಂಕು ದೃಢವಾಗಿದೆ. ಈ ಪೈಕಿ ಮಂಗಳೂರು ತಾಲ್ಲೂಕಿನಲ್ಲಿಯೇ ಗರಿಷ್ಠ 197 ಜನರಲ್ಲಿ ಸೋಂಕು ಖಚಿತವಾಗಿದೆ.

ಸೋಂಕಿತರ ಪೈಕಿ 93 ಪುರುಷರು, 52 ಮಹಿಳೆಯರು ಸೇರಿದಂತೆ 145 ಜನರಲ್ಲಿ ರೋಗ ಲಕ್ಷಣವಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. 75 ಪುರುಷರು ಹಾಗೂ 87 ಮಹಿಳೆಯರು ಸೇರಿದಂತೆ 162 ಜನರಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲ. ಇವರನ್ನು ಕೋವಿಡ್ ಕೇರ್ ಸೆಂಟರ್, ಹೋಂ ಐಸೋಲೇಷನ್‌ನಲ್ಲಿ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

ಪುತ್ತೂರು ತಾಲ್ಲೂಕಿನಲ್ಲಿ 14, ಬಂಟ್ವಾಳ ತಾಲ್ಲೂಕಿನಲ್ಲಿ 57, ಸುಳ್ಯ ತಾಲ್ಲೂಕಿನಲ್ಲಿ 17, ಬೆಳ್ತಂಗಡಿ ತಾಲ್ಲೂಕಿನಲ್ಲಿ 14 ಹಾಗೂ ಬೇರೆ ಜಿಲ್ಲೆಗಳ 8 ಜನರು ಸೋಂಕಿತರಲ್ಲಿ ಸೇರಿದ್ದಾರೆ. 130 ಮಂದಿಯಲ್ಲಿ ಐಎಲ್‌ಐ ಲಕ್ಷಣಗಳಿದ್ದರೆ, 124 ಜನರ ಸಂಪರ್ಕದ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. 44 ಜನರಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗಲಿದ್ದು, 9 ಜನರಲ್ಲಿ ತೀವ್ರ ಉಸಿರಾಟದ ಸಮಸ್ಯೆ (ಎಸ್‌ಎಆರ್‌ಐ) ಕಾಣಿಸಿಕೊಂಡಿದೆ.

242 ಮಂದಿ ಗುಣಮುಖಜಿಲ್ಲೆಯಲ್ಲಿ ಶುಕ್ರವಾರ 242 ಮಂದಿ ಗುಣಮುಖರಾಗಿದ್ದು, ಮನೆಗೆ ತೆರಳಿದ್ದಾರೆ. ಈ ಪೈಕಿ 175 ಮಂದಿ ಹೋಂ ಐಸೋಲೇಷನ್‌, 7 ಮಂದಿ ಕೋವಿಡ್ ಕೇರ್‌ ಸೆಂಟರ್‌ ಹಾಗೂ 60 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರ ಗಂಟಲು ದ್ರವದ ಮಾದರಿ ನೆಗೆಟಿವ್‌ ಬಂದಿದ್ದು, ಮನೆಗೆ ಕಳುಹಿಸಲಾಗಿದೆ. ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಏರಿದ್ದು, ಶುಕ್ರವಾರವೂ ಇದು ಮುಂದುವರಿದಿದೆ.

6 ಸಾವು: ಜಿಲ್ಲೆಯಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 6 ಮಂದಿ ಮೃತಪಟ್ಟಿದ್ದು, ಇವರಿಗೆ ಕೋವಿಡ್-19 ಇರುವುದು ಶುಕ್ರವಾರ ದೃಢವಾಗಿದೆ. ಮಂಗಳೂರು ತಾಲ್ಲೂಕಿನ ನಾಲ್ವರು, ಮೂಡುಬಿದಿರೆ ತಾಲ್ಲೂಕಿನ ಒಬ್ಬರು ಹಾಗೂ ಬೇರೆ ಜಿಲ್ಲೆಯ ಒಬ್ಬರು ಮೃತಪಟ್ಟಿದ್ದಾರೆ.

TRENDING