Monday, September 21, 2020
Home ಜಿಲ್ಲೆ ಚಿಕ್ಕಮಗಳೂರು ರಂಭಾಪುರಿ ಪೀಠದ ಶ್ರೀಗಳ ಪಾದಪೂಜೆ ಮಾಡಿದ ಅವಧೂತ ವಿನಯ್ ಗುರೂಜಿ

ಇದೀಗ ಬಂದ ಸುದ್ದಿ

ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ರೈತರ ಬೃಹತ್ ಪ್ರತಿಭಟನೆ

ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಮುಂದಾಗಿರುವ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತ ಸಂಘ, ಕಾರ್ಮಿಕ ಸಂಘಟನೆಗಳು ಸೇರಿದಂತೆ 30ಕ್ಕೂ ಹೆಚ್ಚು...

ಪತ್ರಕರ್ತ ರಾಜೀವ್ ಶರ್ಮಾ ಮತ್ತೆ 7 ದಿನ...

ಚೀನಾದ ಪರ ಬೇಹುಗಾರಿಕೆ ಆರೋಪದಡಿ ಬಂಧಿತರಾಗಲಿರುವ ಫ್ರೀಲ್ಯಾನ್ಸ್ ಪತ್ರಕರ್ತ ರಾಜೀವ್ ಶರ್ಮಾರನ್ನು ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.

ವಾಟ್ಸ್ ಆಪ್ ಬಳಕೆದಾರರಿಗೆ ಸಿಹಿ ಸುದ್ದಿ

ವಾಟ್ಸಾಪ್ ಬಹಳ ಸಮಯದಿಂದ ಬಹು ಸಾಧನಬೆಂಬಲದ ಮೇಲೆ ಕೆಲಸ ಮಾಡುವ ಅವೃತ್ತಿ ಬಗ್ಗೆ ಸಂಶೋಧನೆ ನಡೆಸುತ್ತಿದೆ. ಈ ಫೀಚರ್ ಹಲವು ಡಿವೈಸ್ ಗಳಲ್ಲಿ ಒಂದು ವಾಟ್ಸಾಪ್ ಖಾತೆಯನ್ನು ಬಳಸಲು ಅನುಮತಿಸುತ್ತದೆ....

ವಿಧಾನಸೌಧದಲ್ಲಿ ಆಡಳಿತ ಪಕ್ಷದ ಶಾಸಕ-ಸಚಿವರ ನಡುವೆ ಫೈಟ್

ಇಂದಿನಿಂದ ವಿಧಾನಸಭೆ ಅಧಿವೇಶನ ಆರಂಭವಾಗಿದ್ದು, ಆಡಳಿತ ಪಕ್ಷದ ಶಾಸಕ ಮತ್ತು ಸಚಿವರ ನಡುವೆ ಅನುದಾನದ ವಿಚಾರವಾಗಿ ಗಲಾಟೆ ಮಾಡಿಕೊಂಡಿರುವ ಘಟನೆ ವಿಧಾನಸಭೆ ಸೆಂಟ್ರಲ್ ಹಾಲ್ ಲಾಂಜ್ ನಲ್ಲಿ ನಡೆದಿದೆ.

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್‍ಗೆ ಮುಖಭಂಗ

ಐದು ವರ್ಷಗಳ ಸಮಗ್ರ ಬಿಎ ಎಲ್‍ಎಲ್‍ಬಿ(ಹಾನರ್ಸ್) ಪದವಿಗಾಗಿ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (ಎನ್‍ಎಲ್‍ಎಸ್‍ಐಯು) ನಡೆಸಿದ್ದ ಪ್ರತ್ಯೇಕ ಪ್ರವೇಶ ಪರೀಕ್ಷೆಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಇದರಿಂದಾಗಿ ರಾಷ್ಟ್ರೀಯ...

ರಂಭಾಪುರಿ ಪೀಠದ ಶ್ರೀಗಳ ಪಾದಪೂಜೆ ಮಾಡಿದ ಅವಧೂತ ವಿನಯ್ ಗುರೂಜಿ

ಚಿಕ್ಕಮಗಳೂರು(.14): ನಡೆದಾಡುವ ದೈವ ಎಂದೇ ಖ್ಯಾತಿಯಾಗಿರೋ ವಿನಯ್ ಗುರೂಜಿ ಪಂಚಪೀಠಗಳಲ್ಲಿ ಮೊದಲನೇ ಪೀಠವಾದ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳ ಪಾದಪೂಜೆ ಮಾಡಿದ್ದಾರೆ. ವಿನಯ್ಗುರೂಜಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ಗ್ರಾಮದ ಸ್ವರ್ಣಪೀಠಿಕೇಶ್ವರಿ ದತ್ತಾಶ್ರಮದ ಅವಧೂತ.

ಇದೇ ಮೊದಲ ಬಾರಿಗೆ ವಿನಯ್​ ಗುರೂಜಿ ಪಂಚಪೀಠಗಳಲ್ಲಿ ಮೊದಲನೇ ಪೀಠವಾದ ರಂಭಾಪುರಿ ಪೀಠಕ್ಕೆ ಗುರುವಾರ ಭೇಟಿ ನೀಡಿದ್ದರು. ಇದೇ ವೇಳೆ, ರಂಭಾಪುರಿ ಶ್ರೀಗಳಾದ ಶ್ರೀ ಪ್ರಸನ್ನ ವೀರಸೋಮೇಶ್ವರ ಶಿವಚಾರ್ಯ ಜಗದ್ಗುರುಗಳ ಪಾದಪೂಜೆ ಮಾಡಿ ಪುಷ್ಪಾರ್ಚನೆ ಗೈದಿದ್ದಾರೆ. ಅವಧೂತ ವಿನಯ್ ಗುರೂಜಿ ಇತ್ತೀಚಿಗೆ ಕಾಶಿಗೆ ಹೋಗಿ ಬಂದಿದ್ದರು. ಆಗ ಅಲ್ಲಿಂದ ಶ್ರೀಚಕ್ರ ತಂದಿದ್ದರು. ಅದನ್ನ ರಂಭಾಪುರಿ ಪೀಠಕ್ಕೆ ನೀಡಬೇಕೆಂದು ವಿನಯ್ ಗುರೂಜಿಗೆ ಅವರ ಗುರುಗಳ ಆಜ್ಞೆಯಾಗಿತ್ತಂತೆ. ಆ ಹಿನ್ನೆಲೆ ಇಂದು ರಂಭಾಪುರಿ ಪೀಠಕ್ಕೆ ಬಂದ ವಿನಯ್ ಗುರೂಜಿ ರಂಭಾಪುರಿ ಶ್ರೀಗಳಿಗೆ ಪಾದಪೂಜೆ ಮಾಡಿ, ಪುಷ್ಪಾರ್ಚನೆ ಮಾಡಿದ್ದಾರೆ.

ಪ್ರತಿಮೆ ಕೆಳಗೆ ಶ್ರೀಚಕ್ರ ಇಡುವಂತೆ ಮನವಿ :

ಇತ್ತೀಚೆಗೆ ಕಾಶಿಗೆ ಹೋಗಿದ್ದ ವಿನಯ್ ಗುರೂಜಿ ಎರಡು ಶ್ರೀಚಕ್ರಗಳನ್ನ ತಂದಿದ್ದರು. ಅದರಲ್ಲಿ ಒಂದನ್ನ ರಂಭಾಪುರಿ ಪೀಠಕ್ಕೆ ನೀಡಿದ್ದು, ಶೀಘ್ರದಲ್ಲೇ ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ರೇಣುಕಾಚಾರ್ಯರ 61 ಅಡಿ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಲಿದೆ. ಆ ಪ್ರತಿಮೆ ಕೆಳಗೆ ಶ್ರೀಚಕ್ರ ಇಡುವಂತೆ ವಿನಯ್ ಗುರೂಜಿ ರಂಭಾಪುರಿ ಶ್ರೀಗಳಿಗೆ ಮನವಿ ಮಾಡಿದ್ದಾರೆ.
ಇನ್ನು ಗುರುವಾರ ಬೆಳಗ್ಗೆ ರಂಭಾಪುರಿ ಪೀಠಕ್ಕೆ ಬಂದ ವಿನಯ್ ಗುರೂಜಿ, ಕ್ಷೇತ್ರನಾಥ ವೀರಭದ್ರ ಸ್ವಾಮಿಗೆ ತಾವೇ ಪೂಜೆ ಮಾಡಿ ದರ್ಶನ ಪಡೆದಿದ್ದಾರೆ. ಮಠದ ಆವರಣದಲ್ಲಿ ಸುಮಾರು ಎರಡು ಗಂಟೆಗೂ ಹೆಚ್ಚು ಹೊತ್ತು ಇದ್ದು, ರಂಭಾಪುರಿ ಶ್ರೀಗಳ ಜೊತೆಯೂ ದೀರ್ಘ ಸಮಾಲೋಚನೆ ನಡೆಸಿದ್ದಾರೆ.

TRENDING