Monday, September 28, 2020
Home ಬೆಂಗಳೂರು ಬೆಂಗಳೂರು ಗಲಭೆ : 145 ಬಂಧಿತರಲ್ಲಿ ಮೂವರಿಗೆ ಕೊರೊನಾ ಪಾಸಿಟಿವ್!

ಇದೀಗ ಬಂದ ಸುದ್ದಿ

ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಗೂ ಕೊರೋನಾ...

ರಾಜ್ಯದಲ್ಲಿ ಕೊರೊನಾ ವೈರಸ್ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಮಾಜಿ ಸಚಿವ, ಕಾಂಗ್ರೆಸ್ ಮುಖಂಡ .ಹೆಚ್.ಕೆ. ಪಾಟೀಲ್ ಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಈ...

ಕಲಬುರಗಿಯಲ್ಲಿ ಪ್ರತಿಭಟನಾ ಮೆರವಣಿಗೆ

ಕೃಷಿ‌ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳ ಸೇರಿ ವಿವಿಧ ತಿದ್ದುಪಡಿ ಕಾಯ್ದೆಗಳ ವಿರೋಧಿಸಿ ಸೋಮವಾರ ನಡೆಯುತ್ತಿರುವ ಕರ್ನಾಟಕ ಬಂದ್ ಗೆ ಕಲಬುರಗಿಯಲ್ಲಿ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸ್ಯಾಂಡಲ್ ವುಡ್​​​ ಡ್ರಗ್ಸ್ ಕೇಸ್: ಇಂದು ನಶೆ...

ಸ್ಯಾಂಡಲ್​​ವುಡ್​​​ ಡ್ರಗ್ಸ್​ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ, ಸಂಜನಾ ಗರ್ಲಾನಿ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಪ್ರಕರಣದ ಕುರಿತು ವಾದ-ಪ್ರತಿವಾದ ಆಲಿಸಲಿರುವ ಎನ್​ಡಿಪಿಎಸ್...

ಕರ್ನಾಟಕ ಬಂದ್; ಏನೇನಿರತ್ತೆ..?ಏನಿರಲ್ಲ ?

 ಬೆಂಗಳೂರು: ಸರ್ಕಾರ ಅಂಗೀಕಾರ ಮಾಡಿರುವ ಭೂ ಸುಧಾರಣಾ ಮತ್ತು ಎಪಿಎಂಸಿ ಕಾಯ್ದೆ ವಿರೋಧಿಸಿ ಇಂದು (ಸೆಪ್ಟೆಂಬರ್​ 28) ರೈತಪರ ಸಂಘಟನೆಗಳು ಬಂದ್​ಗೆ ಕರೆ ನೀಡಿವೆ. ಈ ಕರ್ನಾಟಕ ಬಂದ್​ ನಿಮಿತ್ತ ಇಂದು...

‘ಸುರೇಶ ಅಂಗಡಿ ನಿರ್ಲಕ್ಷ್ಯ ವಹಿಸದಿದ್ದರೆ ಬದುಕುತ್ತಿದ್ದರೇನೋ…’: ಜಗದೀಶ...

   ಬೆಳಗಾವಿ: 'ಸುರೇಶ ಅಂಗಡಿ ಅವರು ಮಾಸ್ಕ್ ಹಾಕುವುದರಲ್ಲಿ ನಿರ್ಲಕ್ಷ್ಯ ವಹಿಸಿದರು. ಯಾವುದೇ ಚಟವಿಲ್ಲದ ನನಗೆ ಏನೂ ಆಗುವುದಿಲ್ಲ ಎಂಬ ಅತಿಯಾದ ಆತ್ಮವಿಶ್ವಾಸ ಅವರಲ್ಲಿತ್ತು....

ಬೆಂಗಳೂರು ಗಲಭೆ : 145 ಬಂಧಿತರಲ್ಲಿ ಮೂವರಿಗೆ ಕೊರೊನಾ ಪಾಸಿಟಿವ್!

ಬೆಂಗಳೂರು, ಆಗಸ್ಟ್.14: ಬೆಂಗಳೂರಿನ ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ಮತ್ತು ದೇವರ ಜೀವನಹಳ್ಳಿ(ಡಿ.ಜೆ.ಹಳ್ಳಿ)ಯಲ್ಲಿ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಆರೋಪಿಗಳಲ್ಲಿ ಮೂವರಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ.

ಕೆ.ಜಿ ಹಳ್ಳಿ ಮತ್ತು ಡಿ.ಜೆ ಹಳ್ಳಿ ದಾಂಧಲೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೂ 145ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದರು. ಎಲ್ಲ ಬಂಧಿತ ಆರೋಪಿಗಳ ರಕ್ತ ಮತ್ತು ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿತ್ತು.

ಬಂಧಿತ ಆರೋಪಿಗಳನ್ನು ಕೊವಿಡ್-19 ಸೋಂಕು ತಪಾಸಣೆಗೆ ಒಳಪಪಡಿಸಲಾಗಿದ್ದು, ಈ ವೇಳೆ ಮೂವರಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ಪತ್ತೆಯಾಗಿದೆ. ಈ ಹಿನ್ನೆಲೆ ಮೂವರು ಸೋಂಕಿತರನ್ನು ಕೊವಿಡ್ ಕೇರ್ ಸೆಂಟರ್ ಗೆ ಶಿಫ್ಟ್ ಮಾಡಲಾಗಿದೆ.

ಆಗಸ್ಟ್.11ರಂದು ನಡೆದ ದಾಂಧಲೆ ಸ್ವರೂಪ:

ಬೆಂಗಳೂರಿನ ಕಾವಲ್ ಬೈರಸಂದ್ರದಲ್ಲಿ ಇರುವ ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಎದುರು ಮೊದಲು ಗಲಾಟೆ ಶುರುವಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಮುಂದಾಗುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಉದ್ರಿಕ್ತರ ಗುಂಪು ಸೇರಿತು. ಪೊಲೀಸರ ಮೇಲೆಯೇ ಕಲ್ಲು ಮತ್ತು ಬಾಟಲಿ ತೂರಾಟ ನಡೆಸಿದರು. ಕೆ.ಜಿ. ಹಳ್ಳಿ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರ ವಾಹನಕ್ಕೆ ಬೆಂಕಿ ಹಚ್ಚಿದರು, ಡಿ.ಜಿ.ಹಳ್ಳಿಯಲ್ಲೂ ಉದ್ರಿಕ್ತರ ಆಕ್ರೋಶಕ್ಕೆ ಬೀದಿ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳೆಲ್ಲ ಹೊತ್ತಿ ಉರಿದವು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು, ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಈ ಹಿನ್ನೆಲೆ ಗಲಾಟೆಗೆ ಸಂಬಂಧಿಸಿದ ಸಿಸಿಕ್ಯಾಮರಾ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದ ಪೊಲೀಸರು ಒಟ್ಟು 145ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದು ವಿಚಾರಣೆಗೆ ಒಳಪಡಿಸಿದ್ದಾರೆ.

TRENDING