Friday, September 25, 2020
Home ಅಂತರ್ ರಾಷ್ಟ್ರೀಯ ಚೀನಾಗೆ ಬಂದ ಬ್ರೆಜಿಲ್‌ನ ಕೋಳಿ ಮಾಂಸದಲ್ಲಿ ಕೊರೊನಾ ವೈರಾಣು ಪತ್ತೆ

ಇದೀಗ ಬಂದ ಸುದ್ದಿ

ದೆಹಲಿ ಡಿಸಿಎಂ ಸಿಸೋಡಿಯಾರಿಗೆ ಕೊರೊನಾ ಜೊತೆ ಡೆಂಗ್ಯೂ...

ಕೊರೊನಾವೈರಸ್ ಸೋಂಕು ತಗುಲಿರುವ ಹಿನ್ನೆಲೆ ನವದೆಹಲಿಯ ಲೋಕ ನಾಯಕ ಜಯಪ್ರಕಾಶ್ ಆಸ್ಪತ್ರೆಗೆ ದಾಖಲಾಗಿರುವ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಡೆಂಗ್ಯೂ ಸೋಂಕು ಕೂಡಾ ತಗುಲಿರುವ ಬಗ್ಗೆ ತಿಳಿದು ಬಂದಿದೆ.

ರಾಜ್ಯ ಪೊಲೀಸ್‌ ಇಲಾಖೆಯಲ್ಲಿ 20,203 ಹುದ್ದೆ ಖಾಲಿ:...

 ಬೆಂಗಳೂರು: ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ವಿವಿಧ ಶ್ರೇಣಿಯ 20,203 ಹುದ್ದೆಗಳು ಖಾಲಿ ಇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ವಿಧಾನ ಪರಿಷತ್‌ನಲ್ಲಿ ಗುರುವಾರ ಜೆಡಿಎಸ್‌...

ಬ್ಯಾಂಕ್ ಖಾತೆಯಲ್ಲಿ ವಂಚನೆಯಾದ್ರೆ ತಕ್ಷಣ ಏನು ಮಾಡಬೇಕು.?...

 ಕೊರೊನಾ ಮಧ್ಯೆ ವಂಚನೆ ಪ್ರಕರಣಗಳು ಹೆಚ್ಚಾಗ್ತಿವೆ. ಇದನ್ನು ತಪ್ಪಿಸಲು ಆರ್‌ಬಿಐ ಸಾಮಾನ್ಯ ಜನರಿಗೆ ನಿರಂತರವಾಗಿ ಮಾಹಿತಿ ನೀಡುತ್ತಿದೆ. ಇದರ ಹೊರತಾಗಿಯೂ ಖಾತೆಯಲ್ಲಿರುವ ಹಣ ಕಳ್ಳತನವಾದ್ರೆ ಏನು ಮಾಡಬೇಕು ಎಂಬ ಬಗ್ಗೆ...

ಕೋವಿಡ್ 19 ಪರಿಹಾರ ಧನ : ಚಾಲಕರಿಗೆ...

ಬೆಂಗಳೂರು: ಲಾಕ್‌ಡೌನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರಿಗೆ ಘೋಷಿಸಿರುವ 5,000 ರೂ. ನೆರವು ಪಡೆಯಲು ಮತ್ತೂಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ಭರವಸೆಯನ್ನು ಸರಕಾರ ನೀಡಿದೆ.

ಡ್ರಗ್ಸ್ ಪ್ರಕರಣ : ನಟಿ ಸಂಜನಾ ಗಲ್ರಾನಿ...

ಬೆಂಗಳೂರು: ಡ್ರಗ್ಸ್ ಜಾಲ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಸೇರಿರುವ ನಟಿ ಸಂಜನಾ ಗಲ್ರಾನಿ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸೆ. 28ಕ್ಕೆ ಮುಂದೂಡಲಾಗಿದೆ. ಸಂಜನಾ ಪರ ವಕೀಲರು...

ಚೀನಾಗೆ ಬಂದ ಬ್ರೆಜಿಲ್‌ನ ಕೋಳಿ ಮಾಂಸದಲ್ಲಿ ಕೊರೊನಾ ವೈರಾಣು ಪತ್ತೆ

 ಬೀಜಿಂಗ್: ಬ್ರೆಜಿಲ್‌ನಿಂದ ಆಮದು ಮಾಡಿಕೊಂಡ ಕೋಳಿ ಮಾಂಸದಲ್ಲಿ ಕೊರೊನಾ ವೈರಾಣುಗಳು ಪತ್ತೆಯಾಗಿವೆ ಎಂದು ಚೀನಾದ ಶೆನ್‌ಜಾನ್‌ ನಗರದ ಸ್ಥಳೀಯ ಆಡಳಿತ ಗುರುವಾರ ಹೇಳಿದೆ.

ಚೀನಾದ ವುಹು ನಗರದಲ್ಲಿ ಈಕ್ವೆಡಾರ್‌ನಿಂದ ಆಮದು ಮಾಡಿಕೊಂಡಿದ್ದ ಶೀತಲೀಕೃತ ಸಿಗಡಿಗಳ ಪ್ಯಾಕೇಜ್‌ಗಳ ಮೇಲೆ ಕೊರೊನಾ ವೈರಾಣುಗಳು ಬುಧವಾರವಷ್ಟೇ ಪತ್ತೆಯಾಗಿದ್ದವು.

ಎರಡೂ ಉತ್ಪನ್ನಗಳೊಂದಿಗೆ ಸಂಪರ್ಕಕ್ಕೆ ಬಂದಿದ್ದ ಹಲವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಯಾರಲ್ಲಿಯೂ ಕೊರೊನಾ ವೈರಸ್ ಪಾಸಿಟಿವ್ ಬರಲಿಲ್ಲ ಎಂದು ಸರ್ಕಾರಿ ಸ್ವಾಮ್ಯದ ಟಿವಿ ವಾಹಿನಿ ವರದಿ ಮಾಡಿದೆ.

ಬೀಜಿಂಗ್‌ನಲ್ಲಿ ವರದಿಯಾದ ಸೋಂಕು ಪ್ರಕರಣಗಳಿಗೆ ಸಾಗರ ಉತ್ಪನ್ನಗಳ ಮಾರುಕಟ್ಟೆಯ ನಂಟು ಇರುವುದು ದೃಢಪಟ್ಟ ನಂತರ ಎಲ್ಲ ರೀತಿಯ ಮಾಂಸದ ಮೇಲ್ಪದರದ ನಮೂನೆಗಳನ್ನು ಸಂಗ್ರಹಿಸಿ ತಪಾಸಣೆಗೆ ಒಳಪಡಿಸುವ ನಿಯಮವನ್ನು ಚೀನಾ ಜಾರಿಮಾಡಿದೆ. ಅದರಂತೆ ನಡೆದ ತಪಾಸಣೆಗಳಲ್ಲಿ ವೈರಾಣುಗಳು ಇರುವುದು ಪತ್ತೆಯಾಗಿದೆ.

ಬ್ರೆಜಿಲ್‌ನಿಂದ ಬಂದಿದ್ದ ಕೋಳಿ ಮಾಂಸದಲ್ಲಿ ವೈರಾಣುಗಳು ಪತ್ತೆಯಾದ ವಿಚಾರದ ಬಗ್ಗೆ ಬ್ರೆಜಿಲ್ ಸರ್ಕಾರವಾಗಲಿ ಅಥವಾ ಚೀನಾದಲ್ಲಿರುವ ಬ್ರೆಜಿಲ್ ರಾಯಭಾರಿಯಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

‘ವಿದೇಶಗಳಿಂದ ಆಮದು ಮಾಡಿಕೊಂಡ ಮಾಂಸದ ಉತ್ಪನ್ನಗಳನ್ನು ಬಳಸುವಾಗ ಎಚ್ಚರಿಕೆಯಿಂದ ಇರಬೇಕು. ಸೋಂಕಿನ ಸಾಧ್ಯತೆ ಕಡಿಮೆ ಮಾಡಲು ಎಲ್ಲ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು’ ಎಂದು ಶೆನ್‌ಜೆನ್ ನಗರಾಡಳಿತ ಜನರಲ್ಲಿ ಮನವಿ ಮಾಡಿದೆ.

ಆಹಾರ ಉತ್ಪನ್ನಗಳು ಅಥವಾ ಪ್ಯಾಕ್‌ ಮಾಡಲು ಬಳಸುವ ಉತ್ಪನ್ನಗಳ ಮೇಲೆ ಕೊರೊನಾ ವೈರಾಣುಗಳು ಸೇರಬಲ್ಲವು. ಆದರೆ ಸಂತಾನಾಭಿವೃದ್ಧಿ ಸಾಧ್ಯತೆ ಕಡಿಮೆ. ಸಾಮಾನ್ಯ ವಾತಾವರಣದಲ್ಲಿ ಈ ವೈರಾಣುಗಳು ಹೆಚ್ಚು ಕಾಲ ಬದುಕುವುದಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

ಕೋಲ್ಡ್‌ ಸ್ಟೋರೇಜ್‌ನಲ್ಲಿ ಸಂಗ್ರಹಿಸಿದ ಆಹಾರವು ಮುಂದೊಂದು ದಿನ ಕೊರೊನಾ ಸೋಂಕು ಹರಡುವ ಅಪಾಯವನ್ನು ತಳ್ಳಿಹಾಕಲು ಆಗುವುದಿಲ್ಲ ಎಂದು ಚೀನಾದ ಆಹಾರ ಸುರಕ್ಷತಾ ಪ್ರಯೋಗಾಲಯದ ಮುಖ್ಯಸ್ಥ ಲಿ ಫೆಂಗ್ವಿನ್ ಎಚ್ಚರಿಸಿದ್ದಾರೆ.

TRENDING