Monday, September 21, 2020
Home ರಾಜ್ಯ ಕರ್ನಾಟಕದಲ್ಲಿ 1 ಲಕ್ಷ ಕೊರೊನಾ ಪರೀಕ್ಷೆ ಮಾಡಿ ದಾಖಲೆ ಬರೆದ ಕಿದ್ವಾಯಿ ಆಸ್ಪತ್ರೆ!

ಇದೀಗ ಬಂದ ಸುದ್ದಿ

ಡ್ರಗ್ ಪ್ರಕರಣ : ನಶೆ ರಾಣಿಯರ...

ಬೆಂಗಳೂರು,ಸೆ.21: ಡ್ರಗ್ ಜಾಲದಲ್ಲಿ ಭಾಗಿಯಾಗಿ ಬಂಧಿತರಾಗಿ ಜೈಲು ಸೇರಿರುವ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನಗರದ ಎನ್‍ಡಿಪಿಎಸ್ ವಿಶೇಷ ನ್ಯಾಯಾಲಯ ವಿಚಾರಣೆಯನ್ನು...

ಕೇದಾರನಾಥ ದುರಂತ :7 ವರ್ಷಗಳ ಬಳಿಕ ...

2013 ರಲ್ಲಿ ಕೇದಾರನಾಥದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಏರ್ಪಟ್ಟಿತ್ತು. ಈ ವೇಳೆ ಸಾವಿರಾರು ಜನ ಸಾವನ್ನಪ್ಪಿದರೆ ಒಂದಿಷ್ಟು ಜನ ಕಾಣೆಯಾಗಿದ್ದರು. ಏಳು ವರ್ಷದ ಹಿಂದೆ ನಡೆದಿತ್ತು ಈ ಘಟನೆ. ಇದೀಗ...

ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ರೈತರ ಬೃಹತ್ ಪ್ರತಿಭಟನೆ

ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಮುಂದಾಗಿರುವ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತ ಸಂಘ, ಕಾರ್ಮಿಕ ಸಂಘಟನೆಗಳು ಸೇರಿದಂತೆ 30ಕ್ಕೂ ಹೆಚ್ಚು...

ಪತ್ರಕರ್ತ ರಾಜೀವ್ ಶರ್ಮಾ ಮತ್ತೆ 7 ದಿನ...

ಚೀನಾದ ಪರ ಬೇಹುಗಾರಿಕೆ ಆರೋಪದಡಿ ಬಂಧಿತರಾಗಲಿರುವ ಫ್ರೀಲ್ಯಾನ್ಸ್ ಪತ್ರಕರ್ತ ರಾಜೀವ್ ಶರ್ಮಾರನ್ನು ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.

ವಾಟ್ಸ್ ಆಪ್ ಬಳಕೆದಾರರಿಗೆ ಸಿಹಿ ಸುದ್ದಿ

ವಾಟ್ಸಾಪ್ ಬಹಳ ಸಮಯದಿಂದ ಬಹು ಸಾಧನಬೆಂಬಲದ ಮೇಲೆ ಕೆಲಸ ಮಾಡುವ ಅವೃತ್ತಿ ಬಗ್ಗೆ ಸಂಶೋಧನೆ ನಡೆಸುತ್ತಿದೆ. ಈ ಫೀಚರ್ ಹಲವು ಡಿವೈಸ್ ಗಳಲ್ಲಿ ಒಂದು ವಾಟ್ಸಾಪ್ ಖಾತೆಯನ್ನು ಬಳಸಲು ಅನುಮತಿಸುತ್ತದೆ....

ಕರ್ನಾಟಕದಲ್ಲಿ 1 ಲಕ್ಷ ಕೊರೊನಾ ಪರೀಕ್ಷೆ ಮಾಡಿ ದಾಖಲೆ ಬರೆದ ಕಿದ್ವಾಯಿ ಆಸ್ಪತ್ರೆ!

 ಬೆಂಗಳೂರುಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿರುವ ಹೊತ್ತಿನಲ್ಲೇ ಬೆಂಗಳೂರಿನ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿರುವ ಕಿದ್ವಾಯಿ ಆಸ್ಪತ್ರೆ ಅಪರೂಪದ ದಾಖಲೆ ಬರೆದಿದೆ.

ಹೌದು.. ಕೊರೋನಾ ವೈರಸ್ ಸೋಂಕಿನ ಪರೀಕ್ಷೆಯಲ್ಲಿ ಕಿದ್ವಾಯಿ ಆಸ್ಪತ್ರೆ ದಾಖಲೆ ನಿರ್ಮಿಸಿದ್ದು, ಈ ವರೆಗೂ 1 ಲಕ್ಷ ಕೋವಿಡ್ ಪರೀಕ್ಷೆ ಮಾಡಿದೆ. ಆ ಮೂಲಕ ರಾಜ್ಯದಲ್ಲಿ 1 ಲಕ್ಷ ಕೋವಿಡ್ ಪರೀಕ್ಷೆ ನಡೆಸಿದ ಮೊದಲ ಆಸ್ಪತ್ರೆ ಎಂಬ ಹೆಸರಿಗೆ ಕಿದ್ವಾಯಿ ಪಾತ್ರವಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕಿದ್ವಾಯಿ ಆಸ್ಪತ್ರೆಯಯಲ್ಲಿ ನೋಡಲ್ ಅಧಿಕಾರಿಯಾಗಿರುವ ಡಾ.ಸಿ ರಾಮಚಂದ್ರ ಅವರು, ಮೂರುವರೆ ತಿಂಗಳ ಹಿಂದೆ ನಮ್ಮ ಆಸ್ಪತ್ರೆಯಲ್ಲಿ ಕೋವಿಡ್-19 ಲ್ಯಾಬ್ ಆರಂಭಿಸಲಾಗಿತ್ತು. ಅಂದಿನಿಂದ ಇಂದಿನವರೆಗೂ 1 ಲಕ್ಷ ಕೊರೋನಾ ಪರೀಕ್ಷೆ ಮಾಡಲಾಗಿದೆ. ಇಷ್ಟು ಪ್ರಮಾಣದ ಪರೀಕ್ಷೆ ನಡೆಸಿದ ರಾಜ್ಯದ ಮೊದಲ ಲ್ಯಾಬ್ ಆಗಿದೆ ಎಂದು ಹೇಳಿದ್ದಾರೆ.

ನಿತ್ಯ ನಮ್ಮ ಲ್ಯಾಬ್ ನಲ್ಲಿ ಸರಾಸರಿ 3 ಸಾವಿರ ಮಾದರಿಗಳ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಈ ಪ್ರಮಾಣವನ್ನು ಮುಂದಿನ ದಿನಗಳಲ್ಲಿ 6 ರಿಂದ 7 ಸಾವಿರಕ್ಕೆ ಏರಿಕೆ ಮಾಡುವ ಕುರಿತು ಚಿಂತನೆ ಮಾಡಲಾಗುತ್ತಿದೆ. ಇದಕ್ಕಾಗಿ ನಮಗೆ ಡಾಟಾ ಎಂಟ್ರಿ ಆಪರೇಟರ್ ಗಳು, ಲ್ಯಾಬ್ ಟೆಕ್ನೀಷಿಯನ್ ಗಳ ಅಗತ್ಯವಿದೆ. ಅಲ್ಲದೆ ಕಂಪ್ಯೂಟರ್ ಗಳನ್ನು ಮತ್ತು ಇತರೆ ವಸ್ತುಗಳನ್ನು ಖರೀದಿ ಮಾಡಬೇಕು. ಬಿಬಿಎಂಪಿ ಅಧಿಕಾರಿಗಳು ಲ್ಯಾಬ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲ್ಯಾಬ್ ನ ಪರೀಕ್ಷಾ ಸಾಮಾರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಚರ್ಚೆ ನಡೆಸಿದ್ದಾರೆ. ಮಾನವ ಸಂಪನ್ಮೂಲ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕುರಿತು ಭರವಸೆ ನೀಡಿದ್ದಾರೆ ಎಂದು ಡಾ.ಸಿ ರಾಮಚಂದ್ರ ಹೇಳಿದ್ದಾರೆ.

ಲ್ಯಾಬ್ ನಲ್ಲಿ ಆರ್ ಟಿ-ಪಿಸಿಆರ್ ಟೆಸ್ಟ್ ಗೆ ಸರ್ಕಾರಿ ದರವನ್ನೇ ನಿಗದಿ ಮಾಡಲಾಗಿದೆ. ಬೇರೆ ಖಾಸಗಿ ಲ್ಯಾಬ್ ಗಳಲ್ಲಿ ಇದಕ್ಕೆ 2 ಸಾವಿರ ರೂ ನಿಗದಿ ಮಾಡಿದ್ದರೆ, ಕಿದ್ವಾಯಿ ಲ್ಯಾಬ್ ನಲ್ಲಿ ಇದೇ ಟೆಸ್ಟ್ ಗೆ 1,550 ರೂ ನಿಗದಿ ಮಾಡಲಾಗಿದೆ. ಒಂದು ಆರ್ ಟಿ-ಪಿಸಿಆರ್ ಮಷಿನ್ 384 ಸ್ಯಾಂಪಲ್ ಗಳನ್ನು ಪರೀಕ್ಷೆ ಮಾಡುತ್ತದೆ. ಇತರೆ ಮೂರು ಯಂತ್ರಗಳು 94 ಸ್ಯಾಂಪಲ್ ಗಳನ್ನು ಪರೀಕ್ಷೆ ಮಾಡುತ್ತವೆ.

TRENDING